Do you have any queries?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ನೀವು ತಿಳಿದಿರಬೇಕಾದ ಪಪ್ಪಾಯಿ ಎಲೆಯ ಜ್ಯೂಸ್ ನ 7 ಅತ್ಯುತ್ತಮ ಪ್ರಯೋಜನಗಳು

Last Updated On: Nov 27 2025

ಆರೋಗ್ಯವೇ ಭಾಗ್ಯ. ಹಾಗಾಗಿ ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಲೋಚಿಸುತ್ತಿದ್ದರೆ ನೀವೂ ಪಪ್ಪಾಯಿ ಎಲೆಗಳ ಕುರಿತು ತಿಳಿದುಕೊಳ್ಳುವುದು ಉತ್ತಮ. ಯಾಕೆಂದರೆ ಪಪ್ಪಾಯಿ ಎಲೆಯ ರಸವು ಸಾಕಷ್ಟು ಪೋಷಕಾಂಶಗಳಿಂದ ತುಂಬಿದೆ ಮತ್ತು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿಯೇ ಪಪ್ಪಾಯಿ ಎಲೆಯ ಜ್ಯೂಸ್ ಕುರಿತು ಗಮನ ಹರಿಸಬಹುದಾಗಿದೆ.

ಅದರಲ್ಲಿಯೂ ನೀವು ನಿಮ್ಮ ಕುರಿತು ಅಥವಾ ನಿಮ್ಮ ಹತ್ತಿರದವರ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದರೆ ಪಪ್ಪಾಯಿ ಎಲೆಯ ಜ್ಯೂಸ್ ನ ಪ್ರಯೋಜನಗಳನ್ನು ತಿಳಿದುಕೊಳ್ಳುವುದರಿಂದ ಮಾನಸಿಕ ಶಾಂತಿ ಹೊಂದಬಹುದು. ಹಾಗಂತ ಇದು ಚಿಕಿತ್ಸೆಯಲ್ಲ, ಆದರೆ ಇದು ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ನೆರವಾಗಬಹುದು. ಪಪ್ಪಾಯಿ ಎಲೆಯ ಜ್ಯೂಸ್ ಮತ್ತು ಅದರ ಸಂಭಾವ್ಯ ಪ್ರಯೋಜನಗಳ ಕುರಿತು ಈ ಲೇಖನದಲ್ಲಿ ತಿಳಿಯೋಣ.

ಪಪ್ಪಾಯಿ ಎಲೆಯಲ್ಲಿರುವ ಪೌಷ್ಟಿಕಾಂಶ ಪ್ರಮಾಣ

ಪಪ್ಪಾಯಿ ಎಲೆಗಳಲ್ಲಿ ಸಾಕಷ್ಟು ಅಗತ್ಯ ಪೋಷಕಾಂಶಗಳಿವೆ. ಈ ಪೋಷಕಾಂಶಗಳು ಒತ್ತಡ ಅಥವಾ ಕಾಯಿಲೆ ಇಂಟಾದ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸಬಹುದಾಗಿದೆ. ಈ ಹಸಿರು, ಕಹಿ ಎಲೆಗಳು ಶಕ್ತಿಶಾಲಿ ಕಿಣ್ವಗಳು ಮತ್ತು ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿದ್ದು, ಅದರಿಂದಾಗಿ ಇದನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. 

ಕೋಷ್ಟಕದ ಅಂಕೆಗಳು ವಿವಿಧ ಅಧ್ಯಯನಗಳಾದರೋ ಹವಾಮಾನ, ಬೆಳೆತ ಸ್ಥಳ ಮತ್ತು ಎಲೆಗಳ ವಯಸ್ಸಿನ ಮೇಲೆ ಅವಲಂಬಿಸಿ ಬದಲಾಗುತ್ತವೆ. ಸಾಮಾನ್ಯವಾಗಿ ಹಸಿರು ಪಪ್ಪಾಯಿ ಎಲೆಗಳು ವಿಟಮಿನ್ C, β-ಕೆರೋಟಿನ್ (ವಿಟಮಿನ್ A ಪೂರ್ವೋತ್ಪನ್ನ), ಕ್ಯಾಲ್ಸಿಯಂ, ಮೆಗ್ನೀಶಿಯಂ, ಲೋಹ ಮತ್ತು ಪ್ರೋಟೀನ್ ಅತ್ಯಲ್ಪದಿಂದ ಮಧ್ಯಮ ಮಟ್ಟದಲ್ಲಿ ಹೊಂದಿವೆ. (ಉದಾಹರಣೆಗೆ:

ಪೋಷಕಾಂಶಗಳು

ಪ್ರಮಾಣ (ಸರಿಸುಮಾರು) 100 ಗ್ರಾಂಗೆ

ವಿಟಮಿನ್ ಸಿ

85 ಮಿಲಿ ಗ್ರಾಂ

ವಿಟಮಿನ್ ಎ (ಬೀಟಾ-ಕೆರೋಟಿನ್)

950 ಮೈಕ್ರೋ ಗ್ರಾಂ

ವಿಟಮಿನ್ ಇ

17 ಮಿಲಿ ಗ್ರಾಂ

ಕ್ಯಾಲ್ಸಿಯಂ

50 ಮಿಲಿ ಗ್ರಾಂ

ಮೆಗ್ನೀಸಿಯಂ

45 ಮಿಲಿ ಗ್ರಾಂ

ಕಬ್ಬಿಣ ಅಂಶ

0.5 ಮಿಲಿ ಗ್ರಾಂ

ಪಪೇನ್ & ಚೈಮೋಪಪೇನ್

ಕಿಣ್ವದ ಕಾರ್ಯಕ್ಷಮತೆ

ಫ್ಲೇವನಾಯ್ಡ್‌ಗಳು & ಆಲ್ಕಲಾಯ್ಡ್‌ಗಳು

ಹೊಂದಿವೆ

ಈ ಪೋಷಕಾಂಶಗಳು ಕೆಳಗೆ ಚರ್ಚಿಸಲಾದ ಪಪ್ಪಾಯಿ ಎಲೆಯ ಜ್ಯೂಸ್ ನಿಂದ ಉಂಟಾಗುವ ವಿವಿಧ ಪ್ರಯೋಜನಗಳಿಗೆ ಕಾರಣವಾಗುತ್ತವೆ.

ಪಪ್ಪಾಯಿ ಎಲೆಯ ಜ್ಯೂಸ್ ನ 7 ಪ್ರಯೋಜನಗಳು

ಪಪ್ಪಾಯಿ ಎಲೆ ಜ್ಯೂಸ್ ರೋಗದಿಂದ ಚೇತರಿಕೆಗೆ ಸಹಾಯ ಮಾಡುವ ಕಥೆಗಳನ್ನು ನೀವು ಕೇಳಿರಬಹುದು. ಪಪ್ಪಾಯಿ ಎಲೆ ಜ್ಯೂಸ್ ಸೇವನೆ ಚಿಕಿತ್ಸೆಯಲ್ಲದಿದ್ದರೂ, ಇದು ಹಲವು ಉತ್ತಮ ಗುಣಗಳನ್ನು ಹೊಂದಿದೆ. ಪಪ್ಪಾಯಿ ಎಲೆ ಜ್ಯೂಸ್ ಹೇಗೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ ಎಂಬ ವಿವರ ಈ ಕೆಳಗಿದೆ.

ಪ್ಲೇಟ್ಲೆಟ್ ಉತ್ಪಾದನೆ ಹೆಚ್ಚಿಸುತ್ತದೆ

ಪಪ್ಪಾಯಿ ಎಲೆ ಜ್ಯೂಸ್ ನ ಅತ್ಯಂತ ಪ್ರಸಿದ್ಧ ಪ್ರಯೋಜನವೆಂದರೆ ಡೆಂಗ್ಯೂನಂತಹ ರೋಗಗಳ ಸಂದರ್ಭದಲ್ಲಿ ಪ್ಲೇಟ್‌ಲೆಟ್ ಕೌಂಟ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿರುವುದು. ಈ ಕುರಿತು ಅಧ್ಯಯನಗಳು ಪಪ್ಪಾಯಿ ರಸವನ್ನು ಸೇವಿಸಿದ ನಂತರ ಪ್ಲೇಟ್‌ಲೆಟ್ ಎಣಿಕೆಯಲ್ಲಿ ಸುಧಾರಣೆ ಆಗಿರುವುದನ್ನು ತೋರಿಸಿವೆ, ಈ ಮೂಲಕ ಇದು ರೋಗಿಗಳಿಗೆ ಮತ್ತು ಕುಟುಂಬಕ್ಕೆ ಹೆಚ್ಚಿನ ಭರವಸೆಯನ್ನು ನೀಡುತ್ತದೆ.

ಆಂಟಿ ಆಕ್ಸಿಡೆಂಟ್ ಗಳ ಸಮೃದ್ಧತೆ

ಪಪ್ಪಾಯಿ ಎಲೆಯಲ್ಲಿರುವ ಫ್ಲೇವನಾಯ್ಡ್‌ ಗಳು, ಫಿನಾಲಿಕ್ ಸಂಯುಕ್ತಗಳು ಮತ್ತು ವಿಟಮಿನ್‌ ಗಳು ಹಾನಿಕಾರಕ ಮುಕ್ತ ರಾಡಿಕಲ್‌ ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತವೆ. ಈ ಆಂಟಿ ಆಕ್ಸಿಡೆಂಟ್ ಅಂಶಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ನೆರವಾಗಬಹುದು.

ಜೀರ್ಣಕ್ರಿಯೆಗೆ ಸಹಾಯ

ಪಪ್ಪಾಯಿ ಎಲೆಗಳು ಪಪೇನ್ ಮತ್ತು ಚೈಮೋಪಪೇನ್ ಎಂಬ ಕಿಣ್ವಗಳನ್ನು ಹೊಂದಿವೆ, ಇವು ಪ್ರೋಟೀನ್‌ ಗಳನ್ನು ಒಡೆಯಲು ಸಹಾಯ ಮಾಡುತ್ತವೆ. ನೀವು ಜೀರ್ಣಕ್ರಿಯೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಈ ರಸವು ಜೀರ್ಣ ಪ್ರಕ್ರಿಯೆ ಸುಗಮಗೊಳಿಸಲು ಸಹಾಯ ಮಾಡಬಹುದು.

ಉರಿಯೂತವನ್ನು ಕಡಿಮೆ ಮಾಡಬಹುದು

ಪಪ್ಪಾಯಿ ಎಲೆಯಲ್ಲಿರುವ ಕೆಲವು ಸಹಜ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಕಾಯಿಲೆ ಸಮಯದಲ್ಲಿ ಕೀಲು ಅಥವಾ ಸ್ನಾಯು ನೋವನ್ನು ಅನುಭವಿಸುತ್ತಿರುವವರಿಗೆ ಇದು ನೆರವನ್ನು ಒದಗಿಸಬಹುದು.

ಲಿವರ್ ಆರೋಗ್ಯ ಕಾಪಾಡಲು ನೆರವು

ಕೆಲವು ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳಲ್ಲಿ ಯಕೃತ್ತಿನ ಅಥವಾ ಲಿವರ್ ನ ಕಾರ್ಯ ನಿರ್ವಹಣೆ ಕಾಪಾಡಲು ಮತ್ತು ವಿಷಕಾರಕ ಅಂಶ ನಿವಾರಣೆಗೆ ಪಪ್ಪಾಯಿ ಎಲೆ ಜ್ಯೂಸ್ ಅನ್ನು ಬಳಸಲಾಗುತ್ತದೆ. ವೈಜ್ಞಾನಿಕ ಚಿಕಿತ್ಸೆ ವೇಗವಾಗಿ ಬೆಳೆಯುತ್ತಿದ್ದರೂ, ಕೆಲವು ಆರಂಭಿಕ ಅಧ್ಯಯನಗಳು ಇದು ಯಕೃತ್ತನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಬಹುದು ಎಂದು ಸೂಚಿಸಿವೆ.

ರೋಗನಿರೋಧಕ ಶಕ್ತಿಯ ಹೆಚ್ಚಳ

ಪಪ್ಪಾಯಿ ಎಲೆಗಳ ಔಷಧೀಯ ಬಳಕೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿವೆ. ಎಲೆಗಳಲ್ಲಿರುವ ಆಲ್ಕಲಾಯ್ಡ್‌ ಗಳು ರೋಗನಿರೋಧಕ ಕೋಶಗಳ ಚಟುವಟಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು.

ಡೆಂಗ್ಯೂನಿಂದ ಚೇತರಿಸಲು ಸಹಾಯ

ಕ್ಲಿನಿಕಲ್ ಅಧ್ಯಯನಗಳು ಡೆಂಗ್ಯೂ ರೋಗಿಗಳು ಪಪ್ಪಾಯಿ ಎಲೆ ರಸವನ್ನು ಸೇವಿಸಿದ ನಂತರ ಅವರ ಪ್ಲೇಟ್‌ಲೆಟ್ ಕೌಂಟ್, ಬಿಳಿ ರಕ್ತ ಕಣಗಳ ಕೌಂಟ್ ಮತ್ತು ನ್ಯೂಟ್ರೋಫಿಲ್‌ಗಳಲ್ಲಿ ಗಮನಾರ್ಹ ಹೆಚ್ಚಳವಾಗಿರುವುದನ್ನು ತೋರಿಸಿವೆ. ಇದಕ್ಕಾಗಿಯೇ ಡೆಂಗ್ಯೂ ಪ್ರತಾಪ ತೋರಿಸುತ್ತಿರುವ ಸಮಯದಲ್ಲಿ ಪಪ್ಪಾಯಿ ಎಲೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ಈ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಈ ಎಲ್ಲಾ ಪ್ರಯೋಜನಗಳು ಪಪ್ಪಾಯಿ ಎಲೆ ರಸವು ಆರೈಕೆ ವಿಚಾರದಲ್ಲಿ ವೃತ್ತಿಪರ ಮಾರ್ಗದರ್ಶನದ ಅಡಿಯಲ್ಲಿ ಉತ್ತಮ ಪಾತ್ರ ವಹಿಸಬಹುದು ಎಂದು ಸೂಚಿಸುತ್ತವೆ.

ಇದನ್ನೂ ಓದಿ: ಪಪ್ಪಾಯದ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶ ಪ್ರಮಾಣ

ಪಪ್ಪಾಯಿ ಎಲೆಯ ಜ್ಯೂಸ್: ಪ್ರಮಾಣ

ಪಪ್ಪಾಯಿ ಎಲೆ ಜ್ಯೂಸ್ ಅನ್ನು ಬಳಸಲು ಯೋಚಿಸುತ್ತಿದ್ದರೆ, ಸರಿಯಾದ ಪ್ರಮಾಣವನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಏನಾದರೂ ಆರೋಗ್ಯ ಸಮಸ್ಯೆಗಳಿದ್ದರೆ, ಯಾವಾಗಲೂ ಆರೋಗ್ಯ ಸೇವಾ ಪೂರೈಕೆದಾರರನ್ನು ಸಂಪರ್ಕಿಸುವುದು ಒಳ್ಳೆಯದು.

ಕೆಲವು ಸಾಮಾನ್ಯ ಬಳಕೆಯ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ:

1.    ಫ್ರೆಶ್ ಜ್ಯೂಶ್ ಡೋಸೇಜ್: ಡೆಂಗ್ಯೂ ಸಮಯದಲ್ಲಿ ಸಾಮಾನ್ಯವಾಗಿ 25- 30 ಎಂಎಲ್ (ಸುಮಾರು 2 ಚಮಚ) ನಂತೆ ದಿನಕ್ಕೆ ಎರಡು ಬಾರಿ 5 ದಿನಗಳವರೆಗೆ ಬಳಸಲಾಗುತ್ತದೆ.

2.    ಬಳಕೆಯ ಸ್ವರೂಪ: ತಾಜಾ, ಕೋಮಲ ಮತ್ತು ಹಸಿರು ಎಲೆಗಳನ್ನು ಬಳಸಿ. ಕಾಂಡವನ್ನು ತೆಗೆದುಹಾಕಿ ಮತ್ತು ಕೇವಲ ಎಲೆಯ ಭಾಗವನ್ನು ಮಾತ್ರ ಬಳಸಿ.

3.    ತಯಾರಿ: ಪಪ್ಪಾಯಿ ಎಲೆಗಳನ್ನು ಸಂಪೂರ್ಣವಾಗಿ ತೊಳೆದು ಸ್ವಲ್ಪ ನೀರಿನೊಂದಿಗೆ ಸೇರಿಸಿ. ಕಿಣ್ವದ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಬಹುದಾದ ಕಾರಣ ಕುದಿಸದಿರಿ.

4.    ಮಕ್ಕಳಿಗೆ: ಮಕ್ಕಳಿಗೆ ವೈದ್ಯಕೀಯ ಸಲಹೆಯೊಂದಿಗೆ ಡೋಸೇಜ್ ನಿರ್ಧರಿಸಬೇಕು.

ಯಾವಾಗಲೂ ಜ್ಯೂಸ್ ಅನ್ನು ತಾಜಾ ಆಗಿ ಸೇವಿಸಿ ಮತ್ತು ವೈದ್ಯಕೀಯ ಸೇವಾ ಪೂರೈಕೆದಾರರು ಶಿಫಾರಸು ಮಾಡದಿದ್ದರೆ ಇನ್ನಿತರ ಗಿಡಮೂಲಿಕೆಗಳೊಂದಿಗೆ ಮಿಶ್ರಣ ಮಾಡಬೇಡಿ.

ಪಪ್ಪಾಯಿ ಎಲೆಗಳ ದುಷ್ಪರಿಣಾಮಗಳು

ಪಪ್ಪಾಯಿ ಎಲೆ ಜ್ಯೂಸ್ ಅನ್ನು ಬಳಸಿಕೊಂಡರೂ, ಅದರ ಸಂಭಾವ್ಯ ದುಷ್ಪರಿಣಾಮಗಳ ಬಗ್ಗೆ ಕೂಡ ಗಮನವಿರಲಿ. ಈ ಪರಿಣಾಮಗಳು ಡೋಸ್, ಸ್ವರೂಪ ಮತ್ತು ವೈಯಕ್ತಿಕ ಆರೋಗ್ಯ ಪರಿಸ್ಥಿತಿಗಳನ್ನು ಅವಲಂಬಿಸಿ ಬದಲಾಗುತ್ತವೆ:

  •  ಜೀರ್ಣಕೋಶದ ಸಮಸ್ಯೆ

ಕೆಲವರಿಗೆ ಕಹಿ ರುಚಿಯಿಂದಾಗಿ ಅಥವಾ ಕಿಣ್ವದ ಕಾರ್ಯದಿಂದಾಗಿ ವಾಕರಿಕೆ, ಉಬ್ಬಸ ಅಥವಾ ವಾಂತಿಯಾಗಬಹುದು.

  •  ಅಲರ್ಜಿ ಸಮಸ್ಯೆಗಳು

ಪಪೇನ್ ಅಥವಾ ಲ್ಯಾಟೆಕ್ಸ್‌ ಅಲರ್ಜಿ ಇರುವವರಲ್ಲಿ ದದ್ದು, ತುರಿಕೆ ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಬಹುದು.

  • ರಕ್ತ ತೆಳುವಾಗಿಸುವ ಔಷಧಿಗಳೊಂದಿಗೆ ಬಳಸದಿರಿ

ಪಪ್ಪಾಯಿ ರಸ ಪ್ಲೇಟ್‌ಲೆಟ್ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದಾದ್ದರಿಂದ, ರಕ್ತ ತೆಳುವಾಗಿಸುವ ಔಷಧಿಗಳೊಂದಿಗೆ ಸಂಯೋಜಿಸಿದರೆ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು.

  • ಗರ್ಭಾವಸ್ಥೆಯಲ್ಲಿ ಗಮನವಿರಲಿ

ಪಪ್ಪಾಯಿ ಸೇವನೆ ಮತ್ತು ಅದರ ಸಾರದ ಹೆಚ್ಚಿನ ಡೋಸ್‌ ಗಳ ಬಳಕೆಯಿಂದ ಗರ್ಭಾಶಯದ ಸಂಕೋಚನ ಉಂಟಾಗಬಹುದು. ಹಣ್ಣು ಸಾಮಾನ್ಯವಾಗಿ ಸುರಕ್ಷಿತವಾದರೂ, ಗರ್ಭಾವಸ್ಥೆಯಲ್ಲಿ ಪಪ್ಪಾಯಿ ಎಲೆಯ ಬಳಕೆಗೆ ವೈದ್ಯಕೀಯ ಮಾರ್ಗದರ್ಶನದ ಅಗತ್ಯವಿದೆ.

  • ಕಿಣ್ವದ ಹೆಚ್ಚಳ

ಪಪೇನ್ ಅಥವಾ ಚೈಮೋಪಪೇನ್‌ನ ದೊಡ್ಡ ಪ್ರಮಾಣವು ಜೀರ್ಣಕ್ರಿಯಾ ಕಿಣ್ವಗಳ ಸಮತೋಲನದ ಮೇಲೆ ಪರಿಣಾಮ ಬೀರಬಹುದು ಮತ್ತು ಹೊಟ್ಟೆಯ ಒಳಪದರವನ್ನು ಕಿರಿಕಿರಿಗೊಳಿಸಬಹುದು.

  • ಸಕ್ಕರೆ ಸೇರ್ಪಡೆ

ಕೆಲವರು ಕಹಿಯನ್ನು ಕಡಿಮೆ ಮಾಡಲು ರಸವನ್ನು ಸಕ್ಕರೆ ಅಥವಾ ಜೇನುತುಪ್ಪದೊಂದಿಗೆ ಮಿಶ್ರಣ ಮಾಡುತ್ತಾರೆ. ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುವವರು ಇದನ್ನು ಎಚ್ಚರಿಕೆಯಿಂದ ಗಣನೆಗೆ ತೆಗೆದುಕೊಳ್ಳಿ.

·       ಯಕೃತ್ತಿನ ಕಿಣ್ವ ಬದಲಾವಣೆಗಳ ಸಾಧ್ಯತೆ

ಯಕೃತ್ತಿನ ಆರೋಗ್ಯಕ್ಕೆ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದರೂ, ಕೆಲವು ಸೂಕ್ಷ್ಮ ವ್ಯಕ್ತಿಗಳಲ್ಲಿ ಯಕೃತ್ತಿನ ಕಿಣ್ವಗಳಲ್ಲಿ ಬದಲಾವಣೆಗಳು ಉಂಟಾಗಿರುವುದು ಗಮನಕ್ಕೆ ಬಂದಿದೆ. ಇದು ಇನ್ನೂ ಅಧ್ಯಯನದ ಹಂತದಲ್ಲಿದೆ.

ಪಪ್ಪಾಯಿ ಎಲೆ ಜ್ಯೂಸ್ ನ ದುಷ್ಪರಿಣಾಮಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ ಮತ್ತು ತಾತ್ಕಾಲಿಕವಾಗಿರುತ್ತವೆ. ಆದರೆ ಎಚ್ಚರಿಕೆಯಿಂದ ಬಳಸುವುದರಿಂದ ಸುರಕ್ಷಿತವಾಗಿರಬಹುದಾಗಿದೆ. ವಿಶೇಷವಾಗಿ ಡೆಂಗ್ಯೂ ಚೇತರಿಕೆ ಅಥವಾ ಪಪ್ಪಾಯಿ ಎಲೆಗಳ ಇತರ ಔಷಧೀಯ ಬಳಕೆಯ ವಿಚಾರದಲ್ಲಿ ಎಚ್ಚರಿಕೆಯಿಂದಿರಬೇಕು.

ಪಪ್ಪಾಯಿ ಎಲೆಗಳನ್ನು ಹೇಗೆ ಬಳಸುವುದು?

ನಿಮ್ಮ ದೈನಂದಿನ ದಿನಚರಿಯಲ್ಲಿ ಪಪ್ಪಾಯಿ ಎಲೆಯನ್ನು ಸೇರಿಸಲು ಹಲವು ಮಾರ್ಗಗಳಿವೆ. ಸುರಕ್ಷಿತ ಮತ್ತು ಸಾಮಾನ್ಯವಾಗಿ ಬಳಸಲಾಗುವ ವಿಧಾನಗಳು ಇಲ್ಲಿವೆ:


1. ಜ್ಯೂಸ್ ಸೇವನೆ ವಿಧಾನ
• ತಾಜಾ ಬಳಕೆ: 2–3 ತಾಜಾ ಪಪ್ಪಾಯಿ ಎಲೆಗಳನ್ನು ತೊಳೆದು ರಸವನ್ನು ಹಿಂಡಿಕೊಳ್ಳಿ.
• ಡೋಸೇಜ್: ದಿನಕ್ಕೆ ಎರಡು ಬಾರಿ 25–30 ಎಂಎಲ್, ಆದರೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ.
• ಟೇಸ್ಟ್ ಟಿಪ್: ಇದು ಕಹಿಯಾಗಿರುತ್ತದೆ, ಸ್ವಲ್ಪ ಹಣ್ಣಿನ ರಸ ಅಥವಾ ತೆಂಗಿನ ನೀರಿನೊಂದಿಗೆ ಮಿಶ್ರಣ ಮಾಡಿದರೆ ಕುಡಿಯಲು ಸುಲಭವಾಗುತ್ತದೆ.


2. ಟೀ/ ಕುದಿಸಿ ಸೇವಿಸಿ
• ಶುದ್ಧವಾದ ಪಪ್ಪಾಯಿ ಎಲೆಗಳನ್ನು 10–15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.
• ತಣ್ಣಗಾಗಲು ಬಿಟ್ಟು, ಸೋಸಿ.
• ದಿನಕ್ಕೆ ಒಂದು ಅಥವಾ ಎರಡು ಬಾರಿ 1 ಕಪ್ ಕುಡಿಯಿರಿ.
• ಈ ವಿಧಾನವು ಹೊಟ್ಟೆಗೆ ಸೌಮ್ಯವಾಗಿದೆ ಆದರೆ ಕಿಣ್ವದ ಅಂಶ ಕಡಿಮೆ ಇರಬಹುದು.


3. ಪುಡಿ ರೂಪ
• ಒಣಗಿಸಿದ ಪಪ್ಪಾಯಿ ಎಲೆಯ ಕ್ಯಾಪ್ಸೂಲ್‌ಗಳು ಅಥವಾ ಪುಡಿ ಲಭ್ಯವಿದೆ.
• ಪ್ಯಾಕೇಜ್ ಸೂಚನೆಗಳನ್ನು ಅನುಸರಿಸಿ ಅಥವಾ ವೃತ್ತಿಪರರಿಂದ ಡೋಸೇಜ್‌ ಸಲಹೆ ಪಡೆಯಿರಿ.


4. ಸಾಂಪ್ರದಾಯಿಕ ಬಳಕೆ
• ಚರ್ಮದ ಉರಿಯೂತ ಅಥವಾ ಕೀಟ ಕಡಿತಕ್ಕೆ ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ.
• ಜಜ್ಜಿದ ಎಲೆಗಳನ್ನು ಎಚ್ಚರಿಕೆಯಿಂದ ತೊಂದರೆ ಎದುರಿಸುತ್ತಿರುವ ಪ್ರದೇಶಗಳಿಗೆ ಲೇಪಿಸಬಹುದು. 


5. ಈ ರೀತಿಯ ಬಳಕೆಯನ್ನು ತಪ್ಪಿಸಿ
• ಪಪ್ಪಾಯಿ ಎಲೆಯ ರಸವನ್ನು ತುಂಬಾ ದೊಡ್ಡ ಪ್ರಮಾಣದಲ್ಲಿ ಸೇವಿಸಬೇಡಿ.
• ಸೂಕ್ತ ಮಾರ್ಗದರ್ಶನವಿಲ್ಲದೆ ಇತರ ಗಿಡಮೂಲಿಕೆಗಳೊಂದಿಗೆ ಮಿಶ್ರಣ ಮಾಡಬೇಡಿ.


6.ಸ್ಟೋರೇಜ್ ಸಲಹೆ
• ತಾಜಾ ರಸವನ್ನು ತಕ್ಷಣವೇ ಸೇವಿಸಬೇಕು.
• ಒಣಗಿಸಿದ ಪಪ್ಪಾಯಿ ಎಲೆಗಳನ್ನು ಗಾಳಿಯಾಡದ ಕಂಟೇನರ್ ಗಳಲ್ಲಿ ಸಂಗ್ರಹಿಸಿ. ತೇವಾಂಶದಿಂದ ದೂರವಿಡಿ.

ಸರಿಯಾಗಿ ಮತ್ತು ಕೆಲವು ದಿನಗಳವರೆಗೆ ಸ್ಥಿರವಾಗಿ ಸೂಕ್ತ ಮಾರ್ಗದರ್ಶನ ಪಡೆದು ಬಳಸಿದರೆ ಪಪ್ಪಾಯಿ ಎಲೆ ರಸದ ಪ್ರಯೋಜನಗಳು ಉತ್ತಮವಾಗಿ ದೊರೆಯಬಹುದು.

ಇತರ ಔಷಧಗಳ ಜೊತೆ ಸಂಯೋಜನೆ

ನೀವು ಈಗಾಗಲೇ ಇತರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಪಪ್ಪಾಯಿ ಎಲೆ ರಸವು ಅದರೊಂದಿಗೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಎಚ್ಚರಿಕೆಯಿಂದಿರುವುದು ಮುಖ್ಯ. ಪಪ್ಪಾಯಿ ಎಲೆ ಸಹಜ ಪರಿಹಾರವಾದರೂ, ಇದರಲ್ಲಿರುವ ಕೆಲವು ಸಕ್ರಿಯ ಸಂಯುಕ್ತಗಳು ಕೆಲವು ಔಷಧಿಗಳೊಂದಿಗೆ ಸೇರಿದರೆ ಬೇರೆ ರೀತಿಯ ಪರಿಣಾಮ ಉಂಟು ಮಾಡಬಹುದು. ಆ ಕುರಿತು ಇಲ್ಲಿ ತಿಳಿಯೋಣ:

·       ರಕ್ತ ತೆಳುವಾಗಿಸುವ ಔಷಧಿಗಳು: ಆಸ್ಪಿರಿನ್, ವಾರ್ಫರಿನ್ ಅಥವಾ ಕ್ಲೋಪಿಡೊಗ್ರೆಲ್‌ನಂತಹ ಔಷಧಿಗಳೊಂದಿಗೆ ಇದನ್ನು ತೆಗೆದುಕೊಂಡರು ರಕ್ತಸ್ರಾವದ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

·       ಮಧುಮೇಹ ವಿರೋಧಿ ಔಷಧಿಗಳು: ಪಪ್ಪಾಯಿ ಎಲೆಯ ಕೆಲವು ಸಂಯುಕ್ತಗಳು ಮಧುಮೇಹ ಔಷಧಿಗಳೊಂದಿಗೆ ಹಸ್ತಕ್ಷೇಪ ಮಾಡಿ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು, ಅದರಿಂದ ಹೈಪೊಗ್ಲೈಸೀಮಿಯಾಕ್ಕೆ ಕಾರಣವಾಗಬಹುದು.

·       ಯಕೃತ್ತಿನ ಮೇಲೆ ಪರಿಣಾಮ ಬೀರುವ ಔಷಧಿಗಳು: ಪಪ್ಪಾಯಿ ಎಲೆಗಳು ಯಕೃತ್ತಿನ ಕಿಣ್ವಗಳ ಮೇಲೆ ಪರಿಣಾಮ ಬೀರಬಹುದಾದ್ದರಿಂದ, ಯಕೃತ್ತಿನ ಮೂಲಕ ಸಂಸ್ಕರಿಸಲಾಗುವ ಹೆಪಟೊಟಾಕ್ಸಿಕ್ ಔಷಧಿಗಳೊಂದಿಗೆ ಎಚ್ಚರಿಕೆಯಿಂದ ಬಳಸಬೇಕು.

·       ಉರಿಯೂತ ವಿರೋಧಿ ಅಥವಾ ಎನ್ಎಸ್ಎಐಡಿಗಳು: ಪಪ್ಪಾಯಿ ಎಲೆಗಳು ಕಿಣ್ವ ಚಟುವಟಿಕೆಯನ್ನು ಹೊಂದಿರುವುದರಿಂದ, ಉರಿಯೂತ ವಿರೋಧಿ ಔಷಧಿಗಳೊಂದಿಗೆ ಬಳಸಿದರೆ ಅವುಗಳ ಪರಿಣಾಮವನ್ನು ಹೆಚ್ಚಿಸಬಹುದು ಅಥವಾ ಹಸ್ತಕ್ಷೇಪ ಮಾಡಬಹುದು.

·       ಆಂಟಿಬಯೋಟಿಕ್ಸ್ ಅಥವಾ ಆಂಟಿವೈರಲ್‌ಗಳು: ಸಂಘರ್ಷ ಉಂಟಾಗಬಹುದು ಎಂಬುದಕ್ಕೆ ಯಾವುದೇ ಬಲವಾದ ಸಾಕ್ಷ್ಯವಿಲ್ಲದಿದ್ದರೂ, ಜ್ಯೂಸ್ ನ ಆಂಟಿ ಆಕ್ಸಿಡೆಂಟ್ ಅಂಶಗಳು ಈ ಔಷಧಿಗಳು ಚಯಾಪಚಯಗೊಳ್ಳುವ ರೀತಿಯನ್ನು ಬದಲಾಯಿಸಬಹುದು ಎಂದು ಕೆಲವರು ಹೇಳುತ್ತಾರೆ.

·       ಕೀಮೋಥೆರಪಿ ಔಷಧಿಗಳು: ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಪಪ್ಪಾಯಿ ಎಲೆ ರಸವನ್ನು ಬಳಸುವ ಮೊದಲು ತಮ್ಮ ಆಂಕಾಲಾಜಿಸ್ಟ್‌ ರನ್ನು ಕೇಳುವುದು ಮುಖ್ಯ, ಏಕೆಂದರೆ ಅದರ ರೋಗನಿರೋಧಕ ಗುಣವು ಚಿಕಿತ್ಸಾ ಯೋಜನೆಗೆ ಸಹಾಯ ಮಾಡಬಹುದು ಅಥವಾ ಅಡ್ಡಿಪಡಿಸಬಹುದು.

ನೀವು ಈಗಾಗಲೇ ಒಂದು ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವಿಶೇಷವಾಗಿ ಡೆಂಗ್ಯೂ ಅಥವಾ ಇತರ ಗಂಭೀರ ರೋಗ ಕಾಡುತ್ತಿರುವ ಸಮಯದಲ್ಲಿ, ನಿಮ್ಮ ವೈದ್ಯರ ಜೊತೆ ಮಾತನಾಡಿ. ಪಪ್ಪಾಯಿ ಎಲೆ ರಸದ ಪ್ರಯೋಜನಗಳು ಗಮನಾರ್ಹವಾಗಿದ್ದರೂ ಎರಡೂ ಜೊತೆ ಸೇರಿದಾಗ ನಿಮ್ಮ ಔಷಧಿಗಳ ಕಾರ್ಯವಿಧಾನವನ್ನು ಬದಲಾಯಿಸಬಹುದಾಗಿದೆ.

ಕೊನೆಯ ಮಾತು

ನಿಮ್ಮ ದಿನಚರಿಯಲ್ಲಿ ಪಪ್ಪಾಯಿ ಎಲೆಯ ಜ್ಯೂಸ್ ಅನ್ನು ಸೇರಿಸಿಕೊಂಡರೆ ಜೀರ್ಣಕ್ರಿಯೆ ಸುಧಾರಿಸುವುದು, ರೋಗನಿರೋಧಕತೆ ಹೆಚ್ಚುವುದು ಮತ್ತು ಡೆಂಗ್ಯೂ ಚೇತರಿಕೆಯಲ್ಲಿ ಪ್ಲೇಟ್‌ ಲೆಟ್ ಕೌಂಟ್ ಅನ್ನು ಹೆಚ್ಚಿಸುವ ಮೂಲಕ ಸಹಾಯ ಮಾಡಬಹುದು. ಹೀಗೆ ಹಲವಾರು ಪ್ರಯೋಜನಗಳನ್ನು ನೀಡಬಹುದು. ಪಪ್ಪಾಯಿಯ ಪ್ರಯೋಜನಗಳು ಬಹಳ ಹೊಂದಿವೆ. ಆದರೆ ಬಳಕೆಗೆ ಮೊದಲು ವೈದ್ಯರ ಜೊತೆ ಸಮಾಲೋಚಿಸುವುದು ಯಾವಾಗಲೂ ಬುದ್ಧಿವಂತಿಕೆಯಾಗಿದೆ.

ನೀವು ಆರೋಗ್ಯ ಕುರಿತಾದ ನಿಖರವಾದ ಒಳನೋಟಗಳನ್ನು ಬಯಸುತ್ತಿದ್ದರೆ, ಮೆಟ್ರೋಪೊಲಿಸ್ ಹೆಲ್ತ್‌ ಕೇರ್ ಅನ್ನು ಸಂಪರ್ತಿಸಿ. ಈ ಸಂಸ್ಥೆಯು ವಿಶ್ವಾಸಾರ್ಹ ಡಯಾಗ್ನಾಸ್ಟಿಕ್ ಸೇವೆಗಳು ಮತ್ತು ಆರೋಗ್ಯ ತಪಾಸಣೆಗಳನ್ನು ಒದಗಿಸುತ್ತದೆ. ನಿಮ್ಮ ಆರೋಗ್ಯದ ಕುರಿತು ತಪಾಸಣೆ ನಡೆಸಲು ಮತ್ತು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪಪ್ಪಾಯಿ ಎಲೆಯ ಜ್ಯೂಸ್ ಪ್ಲೇಟ್ಲೆಟ್ಗಳನ್ನು ಹೆಚ್ಚಿಸುತ್ತದೆಯೇ?

ಹೌದು, ಪಪ್ಪಾಯಿ ಎಲೆಯ ಜ್ಯೂಸ್ ವಿಶೇಷವಾಗಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಜನರಲ್ಲಿ ಪ್ಲೇಟ್‌ ಲೆಟ್ ಕೌಂಟ್ ಅನ್ನು ಹೆಚ್ಚಿಸಲು ಸಹಾಯ ಮಾಡುವುದು ತಿಳಿದುಬಂದಿದೆ. ಜ್ಯೂಸ್ ಪ್ಲೇಟ್‌ಲೆಟ್ ಉತ್ಪಾದನೆ ಮತ್ತು ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುವ ಸಂಯುಕ್ತಗಳನ್ನು ಹೊಂದಿದೆ.

ಪಪ್ಪಾಯಿ ಎಲೆಯ ಜ್ಯೂಸ್ ಕೆಲಸ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಪಪ್ಪಾಯಿ ಎಲೆಯ ರಸದ ಪರಿಣಾಮಗಳು ವ್ಯಕ್ತಿಯ ಆರೋಗ್ಯವನ್ನು ಅವಲಂಬಿಸಿ ಬದಲಾಗಬಹುದು. ಆದರೆ ಡೆಂಗ್ಯೂ ರೋಗಿಗಳಲ್ಲಿ ಸಾಮಾನ್ಯವಾಗಿ 3 ರಿಂದ 5 ದಿನಗಳವರೆಗೆ ನಿಯಮಿತ ಸೇವನೆಯಿಂದ ಪ್ಲೇಟ್‌ಲೆಟ್ ಕೌಂಟ್ ನಲ್ಲಿ ಗಮನಾರ್ಹ ಸುಧಾರಣೆ ಕಂಡುಬರಬಹುದು.

ಪಪ್ಪಾಯಿ ಎಲೆಗಳು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಬಹುದೇ?

ಪಪ್ಪಾಯಿ ಎಲೆಗಳಲ್ಲಿ ಕಬ್ಬಿಣ, ವಿಟಮಿನ್‌ಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಕಾಲಾನಂತರ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಬಹುದು. ನಿಯಮಿತ ಸೇವನೆಯು ಒಟ್ಟಾರೆ ರಕ್ತದ ಆರೋಗ್ಯವನ್ನು ಹೆಚ್ಚಿಸಬಹುದು ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಬಹುದು.

ನಾವು ಪಪ್ಪಾಯಿ ಎಲೆ ರಸವನ್ನು ಪ್ರತೀ ದಿನ ಕುಡಿಯಬಹುದೇ?

ಮಿತವಾದ ಪ್ರಮಾಣದಲ್ಲಿ ಪಪ್ಪಾಯಿ ಎಲೆ ರಸವನ್ನು ಪ್ರತೀದಿನ ಕುಡಿಯುವುದು ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಆದರೆ ಈಗಾಗಲೇ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಸಂಭಾವ್ಯ ಸಮಸ್ಯೆಗಳನ್ನು ತಪ್ಪಿಸಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಪಪ್ಪಾಯಿ ಎಲೆಗಳು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತವೆಯೇ?

ಸಾಮಾನ್ಯವಾಗಿ ಪಪ್ಪಾಯಿ ಎಲೆಗಳನ್ನು ಅದರ ವಿಷಕಾರಕ ನಿವಾರಣ ಗುಣಗಳಿಂದಾಗಿ ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿಯೆಂದು ಪರಿಗಣಿಸಲಾಗುತ್ತದೆ. ಅವು ಯಕೃತ್ತನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡಬಹುದು. ಆದರೆ ವೈದ್ಯರ ಸಲಹೆ ಸೂಚನೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಸೇವಿಸಬಾರದು.

ಪಪ್ಪಾಯಿ ಎಲೆಗಳಿಂದ ಚರ್ಮಕ್ಕೆ ಪ್ರಯೋಜನಗಳಿವೆಯೇ?

ಹೌದು, ಮೊಡವೆ ಮತ್ತು ಉರಿಯೂತದಂತಹ ಚರ್ಮದ ಸಮಸ್ಯೆಗಳಿಗೆ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಪಪ್ಪಾಯಿ ಎಲೆಗಳನ್ನು ಬಳಸಲಾಗುತ್ತದೆ. ಎಲೆಗಳಲ್ಲಿರುವ ಕಿಣ್ವಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಸ್ಪಷ್ಟವಾದ, ಆರೋಗ್ಯಕರ ಚರ್ಮವನ್ನು ಹೊಂದಲು ಸಹಾಯ ಮಾಡಬಹುದು.

ಪಪ್ಪಾಯಿ ಎಲೆಗಳು ಫರ್ಟಿಲಿಟಿಗೆ ಒಳ್ಳೆಯದೇ?

ಪಪ್ಪಾಯಿ ಎಲೆಯನ್ನು ಕೆಲವೊಮ್ಮೆ ಜನಪದ ಔಷಧದಲ್ಲಿ ಹಾರ್ಮೋನ್‌ ಗಳ ಸಮತೋಲನಕ್ಕಾಗಿ ಫರ್ಟಿಲಿಟಿಯನ್ನು ಸುಧಾರಿಸಲು ಬಳಸಲಾಗುತ್ತದೆ. ಆದರೆ ಇದಕ್ಕೆ ವೈಜ್ಞಾನಿಕ ಸಾಕ್ಷ್ಯ ಇಲ್ಲ. ಆದ್ದರಿಂದ ಫರ್ಟಿಲಿಟಿ ಕಾರಣಕ್ಕೆ ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More