Do you have any queries?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

12 ರೀತಿಯ ಸಾಮಾನ್ಯ ಜ್ವರದ ವಿಧಗಳು - ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಗಳು

Last Updated On: Nov 27 2025

ಜ್ವರ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಕೆಲವೊಮ್ಮೆ ಜ್ವರ ಆತಂಕಕಾರಿಯಾಗಿ ಕಾಣಬಹುದು. ವಿಶೇಷವಾಗಿ ಅದರ ಕಾರಣ ಅಥವಾ ತೀವ್ರತೆಯ ಬಗ್ಗೆ ಖಚಿತತೆ ಇಲ್ಲದಿರುವಾಗ ಹೆಚ್ಚು ಆತಂಕ ಉಂಟಾಗಬಹುದು. ಎಲ್ಲಾ ರೀತಿಯ ಜ್ವರಗಳು ಒಂದೇ ರೀತಿಯವುಗಳಲ್ಲ. ಕೆಲವು ಸೌಮ್ಯವಾಗಿರುತ್ತವೆ ಮತ್ತು ಶೀಘ್ರವಾಗಿ ಕಡಿಮೆಯಾಗುತ್ತವೆ. ಇನ್ನು ಕೆಲವು ಜ್ವರಗಳಿಗೆ ವೈದ್ಯಕೀಯ ಗಮನ ಬೇಕಾಗಬಹುದು. ಜ್ವರದ ವಿವಿಧ ವಿಧಗಳು, ಅವುಗಳ ಲಕ್ಷಣಗಳು ಮತ್ತು ಅವುಗಳನ್ನು ನಿರ್ವಹಿಸುವ ವಿಧಾನವನ್ನು ತಿಳಿದಿರುವುದರಿಂದ ಜ್ವರವನ್ನು ಉತ್ತಮವಾಗಿ ನಿಭಾಯಿಸಬಹುದಾಗಿದೆ.

ಈ ಬರಹವು ನಿಮಗೆ 12 ರೀತಿಯ ಸಾಮಾನ್ಯ ಜ್ವರದ ವಿಧಗಳು, ಗಮನಿಸಬೇಕಾದ ಚಿಹ್ನೆಗಳು ಮತ್ತು ಸುರಕ್ಷಿತವಾಗಿರಲು ಮತ್ತು ಆರೋಗ್ಯವಾಗಿರಲು ತೆಗೆದುಕೊಳ್ಳಬಹುದಾದ ಸರಳ ಕ್ರಮಗಳನ್ನು ವಿವರಿಸುತ್ತದೆ.

ಜ್ವರ ಎಂದರೇನು?

ಜ್ವರವು ಸೋಂಕು ಅಥವಾ ರೋಗಕ್ಕೆ ನಿಮ್ಮ ದೇಹವು ನೀಡುವ ಸಹಜ ಪ್ರತಿಕ್ರಿಯೆಯಾಗಿದೆ. ನಿಮ್ಮ ಒಳಗಿನ ತಾಪಮಾನವು ಸಾಮಾನ್ಯ ಶ್ರೇಣಿಯನ್ನು ಮೀರಿ ಜಾಸ್ತಿಯಾದಾಗ ಜ್ವರ ಸಂಭವಿಸುತ್ತದೆ. ಸಾಮಾನ್ಯವಾಗಿ ನಿಮ್ಮ ರೋಗನಿರೋಧಕ ವ್ಯವಸ್ಥೆಯು ಸಮಸ್ಯೆಯೊಂದಿಗೆ ಹೋರಾಡುವಾಗ ಜ್ವರ ಉಂಟಾಗುತ್ತದೆ. ಸೌಮ್ಯ ಜ್ವರವು ಸಾಮಾನ್ಯವಾಗಿ ವಿಶ್ರಾಂತಿ ಮತ್ತು ಕಾಳಜಿ ಮಾಡಿದರೆ ಕಡಿಮೆಯಾಗುತ್ತದೆ. ಹಾಗಾಗಿ ಜ್ವರದ ಕಾರಣವನ್ನು ತಿಳಿಯುವುದು ಮುಖ್ಯ.

ವಿವಿಧ ಜ್ವರದ ಪ್ರಕಾರಗಳನ್ನು ತಿಳಿದುಕೊಳ್ಳುವುದರಿಂದ ಏನಾಗುತ್ತಿದೆ ಎಂಬುದನ್ನು ತಿಳಿಯಲು ಮತ್ತು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಆಗುತ್ತದೆ. ಜ್ವರ ಎಲ್ಲಾ ಸಮಯದಲ್ಲಿಯೂ ಗಂಭೀರವಾಗಿರುವುದಿಲ್ಲ, ಆದರೆ ಅದರ ಲಕ್ಷಣಗಳಿಗೆ ಗಮನ ಕೊಡುವುದು ಸುರಕ್ಷಿತವಾಗಿರಲು ಮತ್ತು ಆರೋಗ್ಯವಾಗಿರಲು ನೆರವಾಗುತ್ತದೆ.

12 ಸಾಮಾನ್ಯ ರೀತಿಯ ಜ್ವರದ ವಿಧಗಳು

ಅನೇಕ ರೀತಿಯ ಜ್ವರದ ವಿಧಗಳಿವೆ ಮತ್ತು ಅವೆಲ್ಲವೂ ಗಂಭೀರವಾಗಿರುವುದಿಲ್ಲ. ಪ್ರತಿಯೊಂದಕ್ಕೂ ತನ್ನದೇ ಆದ ಕಾರಣಗಳು, ಮಾದರಿಗಳು ಮತ್ತು ಚಿಹ್ನೆಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಜ್ವರವನ್ನು ಸೂಕ್ತವಾಗಿ ನಿರ್ವಹಿಸಲು ಮತ್ತು ಯಾವಾಗ ವೈದ್ಯಕೀಯ ಸಹಾಯ ಪಡೆಯಬೇಕೆಂದು ನಿರ್ಧರಿಸಲು ನೆರವಾಗುತ್ತದೆ.

ತೀವ್ರ ಜ್ವರ (ಅಕ್ಯೂಟ್ ಫೀವರ್)

ತೀವ್ರ ಜ್ವರವು ಇದ್ದಕ್ಕಿದ್ದಂತೆ ಆರಂಭವಾಗುತ್ತದೆ ಮತ್ತು ಕೆಲವು ದಿನಗಳವರೆಗೆ ಇರುತ್ತದೆ.

  • ಸಾಮಾನ್ಯವಾಗಿ ಫ್ಲೂ ಅಥವಾ ಶೀತದಂತಹ ವೈರಲ್ ಅಥವಾ ಬ್ಯಾಕ್ಟೀರಿಯಾ ಸೋಂಕುಗಳಿಂದ ಉಂಟಾಗುತ್ತದೆ.
  • ದೇಹದ ತಾಪಮಾನ ಸಾಮಾನ್ಯವಾಗಿ 100.4°ಎಫ್ (38°ಸೆಂ) ಮೀರಿರುತ್ತದೆ.
  • ಶೀತ, ಆಯಾಸ ಅಥವಾ ಸ್ನಾಯು ನೋವು ಕಾಣಿಸಬಹುದು.
  • ಇದು ಅತ್ಯಂತ ಸಾಮಾನ್ಯ ಜ್ವರದ ಪ್ರಕಾರಗಳಲ್ಲಿ ಒಂದಾಗಿದ್ದು, ವಿಶ್ರಾಂತಿ, ದ್ರವಾಹಾರ ಮತ್ತು ಸರಳ ಕಾಳಜಿಯಿಂದ ಚೇತರಿಸಿಕೊಳ್ಳಬಹುದು.

ಸ್ವಲ್ಪ ತೀವ್ರ ಜ್ವರ (ಸಬ್ ಅಕ್ಯೂಟ್ ಫೀವರ್)

ಸ್ವಲ್ಪ ತೀವ್ರ ಜ್ವರವು ತೀವ್ರ ಜ್ವರಕ್ಕಿಂತ ಹೆಚ್ಚು ಕಾಲ ಇರುತ್ತದೆ. ಸಾಮಾನ್ಯವಾಗಿ 1 ರಿಂದ 3 ವಾರಗಳವರೆಗೆ ಇದ್ದು, ಕೊನೆಗೆ ಕಡಿಮೆಯಾಗುತ್ತದೆ.

  • ತಾಪಮಾನ ನಿಧಾನವಾಗಿ ಏರಿಕೆಯಾಗಬಹುದು ಮತ್ತು 1- 4 ವಾರಗಳವರೆಗೆ ಇರಬಹುದು.
  • ಸೌಮ್ಯವಾಗಿರುತ್ತದೆ ಮತ್ತು ಇದು ಸಂಪೂರ್ಣವಾಗಿ ಕಡಿಮೆಯಾಗದಂತೆ, ನಿರಂತರ ಜ್ವರದಂತೆ ಕಾಣಬಹುದು.
  • ಸಾಮಾನ್ಯವಾಗಿ ಮೈಲ್ಡ್ ಇನ್ ಫೆಕ್ಷನ್ ಗಳು, ಸ್ವಯಂ ನಿರೋಧಕ ಕಾಯಿಲೆಗಳು ಅಥವಾ ಇತರ ರೋಗಗಳ ಆರಂಭಿಕ ಚಿಹ್ನೆಗಳಿಗೆ ಸಂಬಂಧಿಸಿದ ಜ್ವರವಾಗಿದೆ.
  • ಇದು ಕಡಿಮೆ ತೀವ್ರವಾದ ಜ್ವರದ ಪ್ರಕಾರವಾದರೂ, ಗಮನಿಸಬೇಕಾದ ಜ್ವರವಾಗಿದೆ.

ಪುನರಾವರ್ತಿತ ಜ್ವರ (ರಿಕರೆಂಟ್ ಫೀವರ್)

ಪುನರಾವರ್ತಿತ ಜ್ವರವು ಎಪಿಸೋಡ್ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ, ಇದು ಬರುತ್ತದೆ ಹೋಗುತ್ತದೆ.

  • ಎಪಿಸೋಡ್ ಗಳ ನಡುವೆ ನೀವು ಆರೋಗ್ಯವಾಗಿರಬಹುದು, ಆದರೆ ಜ್ವರ ಮತ್ತೆ ಮರಳುತ್ತದೆ.
  • ಇದು ವಾರಗಳಿಂದ ತಿಂಗಳುಗಳವರೆಗೆ ಕಾಣಿಸಿಕೊಳ್ಳಬಹುದು.
  •  ಸೋಂಕುಗಳು, ರೋಗನಿರೋಧಕ ಕಾಯಿಲೆಗಳು ಅಥವಾ ಕ್ಷಯರೋಗದಂತಹ ರೋಗಗಳು ಇದಕ್ಕೆ ಕಾರಣವಾಗಬಹುದಾಗಿವೆ.
  • ಈ ಜ್ವರದ ಪ್ರಕಾರವನ್ನು ಹೆಚ್ಚು ಗಮನಿಸಬೇಕು ಮತ್ತು ಲ್ಯಾಬ್ ಪರೀಕ್ಷೆಗಳು ಬೇಕಾಗಬಹುದು.

ದೀರ್ಘಕಾಲೀನ ಜ್ವರ (ಕ್ರೋನಿಕ್ ಫೀವರ್)

ದೀರ್ಘಕಾಲೀನ ಜ್ವರವು ಮೂರು ವಾರಗಳಿಗಿಂತ ಹೆಚ್ಚು ಕಾಲ ಇರುತ್ತದೆ ಮತ್ತು ಹೆಚ್ಚು ಸಮಸ್ಯೆಯನ್ನು ಸೂಚಿಸಬಹುದು.

  • ಸೌಮ್ಯವಾಗಿರಬಹುದು ಅಥವಾ ತೀವ್ರವಾಗಿರಬಹುದು, ಆದರೆ ಸಂಪೂರ್ಣ ಚೇತರಿಕೆಯಾಗದೆ ಮುಂದುವರಿಯುತ್ತಿರುತ್ತದೆ.
  • ದೀರ್ಘಕಾಲೀನ ಇನ್ ಫೆಕ್ಷನ್ ಗಳು, ಸ್ವಯಂನಿರೋಧಕ ಕಾಯಿಲೆಗಳು ಅಥವಾ ಕ್ಯಾನ್ಸರ್‌ಗೆ ಸಂಬಂಧಿಸಬಹುದಾಗಿದೆ.
  • ತೂಕ ಕಡಿಮೆಯಾಗುವಿಕೆ ಅಥವಾ ಆಯಾಸ ಇರಬಹುದು.
  • ಈ ಜ್ವರದ ಪ್ರಕಾರವನ್ನು ರೋಗನಿರ್ಣಯಕ್ಕಾಗಿ ವೈದ್ಯರ ಬಳಿ ಪರೀಕ್ಷಿಸಬೇಕು.

ಮಧ್ಯಂತರ ಜ್ವರ (ಇನ್ ಟರ್ಮಿಟೆಂಟ್ ಫೀವರ್)

ಮಧ್ಯಂತರ ಜ್ವರವು ಸ್ಪಷ್ಟ ಪ್ಯಾಟರ್ನ್ ಹೊಂದಿರುತ್ತದೆ. ಒಂದು ದಿನ ಜ್ವರ ಇದ್ದರೆ, ಮರು ದಿನ ಸಾಮಾನ್ಯವಾಗಿರುತ್ತದೆ.

  • ತಾಪಮಾನ ಏರಿಳಿತಗೊಳ್ಳುತ್ತದೆ, ಕೆಲವೊಮ್ಮೆ ಗಂಟೆಗಳು ಅಥವಾ ದಿನಗಳ ಕಾಲ ಏರಿಳಿತ ಇರಬಹುದು.
  • ಮಲೇರಿಯಾ ಅಥವಾ ರಿಕೆಟ್ಸಿಯಲ್ ಇನ್ ಫೆಕ್ಷನ್ ಗಳಂತಹ ರೋಗಗಳಲ್ಲಿ ಕಂಡುಬರುತ್ತದೆ.
  • ಜ್ವರದ ಏರಿಕೆಯ ಸಮಯದಲ್ಲಿ ಬೆವರು, ಶೀತ ಮತ್ತು ಆಯಾಸ ಕಾಣಿಸಬಹುದು.
  • ಈ ಜ್ವರದ ಪ್ರಕಾರವು ಗೊಂದಲಕ್ಕೆ ಕಾರಣವಾಗಬಹುದು. ಆದ್ದರಿಂದ ತಾಪಮಾನವನ್ನು ಗಮನಿಸುವುದು ಒಳ್ಳೆಯದು.

ಏರಿಳಿತ ಜ್ವರ (ರೆಮಿಟ್ಟಂಟ್ ಫೀವರ್)

ರಿಮಿಟೆಂಟ್ ಜ್ವರವು ಏರಿಳಿತಗಳನ್ನು ಒಳಗೊಂಡಿರುತ್ತದೆ. ಆದರೆ ಜ್ವರ ಸಂಪೂರ್ಣವಾಗಿ ಕಡಿಮೆಯಾಗುವುದಿಲ್ಲ.

  •  ದಿನದಲ್ಲಿ ತಾಪಮಾನ ಬದಲಾಗುತ್ತದೆ ಆದರೆ ಸಾಮಾನ್ಯಕ್ಕಿಂತ ಮೇಲೆ ಇರುತ್ತದೆ.
  • ಬ್ಯಾಕ್ಟೀರಿಯಾ ಸೋಂಕುಗಳು ಅಥವಾ ಸ್ವಯಂನಿರೋಧಕ ಕಾಯಿಲೆ ಸಂದರ್ಭಗಳಲ್ಲಿ ಕಂಡುಬರುತ್ತದೆ.
  •  ಸಾಮಾನ್ಯ ಲಕ್ಷಣಗಳೆಂದರೆ ಆಯಾಸ, ಶೀತ ಮತ್ತು ದೌರ್ಬಲ್ಯ.
  •  ಈ ಏರಿಳಿತದ ಜ್ವರದ ಪ್ರಕಾರದಲ್ಲಿ ಆರಂಭಿಕ ವೈದ್ಯಕೀಯ ಪರೀಕ್ಷೆ ಒಳ್ಳೆಯದು.

ಹೈಪರ್‌ಪೈರೆಕ್ಸಿಯಾ

ಹೈಪರ್‌ಪೈರೆಕ್ಸಿಯಾವು ತುಂಬಾ ತೀವ್ರವಾದ ಮತ್ತು ತುರ್ತು ಜ್ವರದ ಪ್ರಕಾರವಾಗಿದೆ.

  •  ದೇಹದ ತಾಪಮಾನ 106°ಎಫ್ (41.1°ಸೆಂ) ಮೀರಿರುತ್ತದೆ.
  • ಹೀಟ್ ಸ್ಟೋಕ್ ಅಥವಾ ಗಂಭೀರ ಸೋಂಕುಗಳಿಂದ ಉಂಟಾಗಬಹುದು.
  • ಗೊಂದಲ, ತ್ವರಿತ ಹೃದಯ ಬಡಿತ ಅಥವಾ ಮೂರ್ಛೆ ಹೋಗಲು ಕಾರಣವಾಗಬಹುದು.
  •  ತಕ್ಷಣದ ವೈದ್ಯಕೀಯ ಆರೈಕೆ ಬೇಕಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಜ್ವರದ ಪ್ರಕಾರಗಳಲ್ಲಿ ಒಂದಾಗಿದೆ.

ಲೋ ಗ್ರೇಡ್ ಫೀವರ್

ಲೋ ಗ್ರೇಡ್ ಜ್ವರವು ಸೌಮ್ಯವಾಗಿದೆ, ಆದರೆ ಇಲ್ಲಿ ನಿರಂತರ ತಾಪಮಾನ ಏರಿಕೆಯಾಗುತ್ತದೆ.

  •  ಸಾಮಾನ್ಯವಾಗಿ ತಾಪಮಾನ 100.4°ಎಫ್ ಮತ್ತು 102°ಎಫ್ ನಡುವೆ ಇರುತ್ತದೆ.
  •  ಶೀತ, ಆರಂಭಿಕ ಸೋಂಕುಗಳು ಅಥವಾ ಲಸಿಕೆಗಳ ನಂತರ ಸಾಮಾನ್ಯ.
  •  ತಲೆನೋವು, ಆಯಾಸ ಅಥವಾ ದೇಹದ ನೋವುಗಳೊಂದಿಗೆ ಕಾಣಿಸಬಹುದು.
  • ಇದು ಸೌಮ್ಯ ಜ್ವರದ ಪ್ರಕಾರವಾದರೂ, ಏನೋ ಆರಂಭವಾಗುತ್ತಿದೆ ಎಂಬ ಸಂಕೇತವಾಗಿರಬಹುದು.

ಪುನರಾವರ್ತಿಸುವ ಜ್ವರ (ರಿಲ್ಯಾಪ್ಸಿಂಗ್ ಫೀವರ್)

ಪುನರಾವರ್ತಿಸುವ ಜ್ವರವು ಆರೋಗ್ಯವಾಗಿರುವ ಅವಧಿಯ ನಂತರ ಮತ್ತೆ ಮರಳುತ್ತದೆ.

  •  ಕೆಲವು ದಿನಗಳವರೆಗೆ ತರಂಗಗಳ ರೂಪದಲ್ಲಿ ಬರುತ್ತದೆ.
  •  ಟಿಕ್ ಅಥವಾ ಉಣ್ಣಿ ಕಡಿತದಿಂದ ಬೊರೆಲಿಯಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಡೆಂಗ್ಯೂನಂತಹ ವೈರಲ್ ರೋಗಗಳಿಂದ ಭಿನ್ನವಾಗಿದೆ, ಆದರೂ ಇವೆರಡೂ ಪುನರಾವರ್ತಿಸುವ ಜ್ವರದ ಮಾದರಿಯನ್ನು ಹೊಂದಿರಬಹುದು.
  • ತಲೆನೋವು, ಸ್ನಾಯು ನೋವು ಮತ್ತು ಕೆಲವೊಮ್ಮೆ ಚರ್ಮದ ದದ್ದು ಕಾಣಿಸಬಹುದು.
  • ಈ ಜ್ವರದ ಪ್ರಕಾರಕ್ಕೆ ಆಂಟಿಬಯೋಟಿಕ್ಸ್ ಮತ್ತು ವೈದ್ಯಕೀಯ ಬೆಂಬಲ ಬೇಕಾಗುತ್ತದೆ.

ಸೆಪ್ಟಿಕ್ ಜ್ವರ

ಸೆಪ್ಟಿಕ್ ಜ್ವರವು ರಕ್ತಪ್ರವಾಹದಲ್ಲಿನ ಗಂಭೀರ ಸೋಂಕಿನಿಂದ (ಸೆಪ್ಸಿಸ್) ಉಂಟಾಗುತ್ತದೆ.

  • ತೀವ್ರ ಜ್ವರ, ಶೀತ ಮತ್ತು ತ್ವರಿತ ಉಸಿರಾಟ ಇರುತ್ತದೆ.
  • ಗೊಂದಲ, ಕಡಿಮೆ ರಕ್ತದೊತ್ತಡ ಅಥವಾ ನಡುಕವೂ ಕಾಣಿಸಬಹುದು.
  • ತಕ್ಷಣದ ವೈದ್ಯಕೀಯ ಆರೈಕೆ ಮತ್ತು ಆಂಟಿಬಯೋಟಿಕ್ಸ್ ಬೇಕಾಗುತ್ತದೆ.
  • ದುರ್ಬಲ ರೋಗನಿರೋಧಕ ಶಕ್ತಿಯ ಜನರಿಗೆ ಇದು ಅತ್ಯಂತ ಗಂಭೀರ ಜ್ವರದ ಪ್ರಕಾರಗಳಲ್ಲಿ ಒಂದಾಗಿದೆ.

ಔಷಧ ಪ್ರೇರಿತ ಜ್ವರ (ಡ್ರಗ್ ಇಂಡ್ಯೂಸ್ಡ್ ಫೀವರ್)

ಔಷಧ ಪ್ರೇರಿತ ಜ್ವರವು ಕೆಲವು ಔಷಧಿಗಳಿಗೆ ಪ್ರತಿಕ್ರಿಯೆಯಾಗಿ ಸಂಭವಿಸುತ್ತದೆ.

  • ಸಾಮಾನ್ಯವಾಗಿ ಆಂಟಿಬಯೋಟಿಕ್ಸ್ ಅಥವಾ ನೋವುನಿವಾರಕಗಳಂತಹ ಹೊಸ ಔಷಧವನ್ನು ಪ್ರಾರಂಭಿಸಿದ ನಂತರ ಆರಂಭವಾಗುತ್ತದೆ.
  •  ಬೆವರು, ಶೀತ ಮತ್ತು ಸ್ನಾಯು ನೋವು ಕಾಣಿಸಬಹುದು. ಸೋಂಕಿನ ಚಿಹ್ನೆ ಇಲ್ಲದೆಯೂ.
  • ಔಷಧವನ್ನು ನಿಲ್ಲಿಸಿದರೆ ಜ್ವರವು ಕಡಿಮೆಯಾಗುತ್ತದೆ.
  •  ಇದು ಸಾಮಾನ್ಯವಲ್ಲದ ಜ್ವರದ ಪ್ರಕಾರವಾದರೂ, ಹೊಸತಾಗಿ ಔಷಧ ಬದಲಾಯಿಸಿದವರು ಗಮನಿಸಬೇಕು.

ಅಜ್ಞಾತ ಜ್ವರ (ಇಡಿಯೋಪಥಿಕ್ ಫೀವರ್)

ಅಜ್ಞಾತ ಜ್ವರಕ್ಕೆ ಪರೀಕ್ಷೆಗಳ ನಂತರವೂ ಸ್ಪಷ್ಟ ಕಾರಣ ಕಂಡುಬರುವುದಿಲ್ಲ.

  • “ಅಪರಿಚಿತ ಮೂಲದ ಜ್ವರ” ಎಂದು ಕರೆಯಲಾಗುತ್ತದೆ.
  • ದಿನಗಳಿಂದ ವಾರಗಳವರೆಗೆ ಇರಬಹುದು. ಆಗಾಗ್ಗೆ ಸೌಮ್ಯವಾಗಿರುತ್ತದೆ ಮತ್ತು ಸ್ವಯಂ-ನಿಯಂತ್ರಿತವಾಗಿರುತ್ತದೆ.
  • ವೈದ್ಯರು ಸಾಮಾನ್ಯವಾಗಿ ಗಮನಿಸುತ್ತಾರೆ ಮತ್ತು ಗುಪ್ತ ಸಮಸ್ಯೆಗಳನ್ನು ಕಂಡುಹಿಡಿಯಲು ಹಲವಾರು ಪರೀಕ್ಷೆಗಳನ್ನು ನಡೆಸುತ್ತಾರೆ.
  • ಇದು ರಹಸ್ಯಮಯ ಜ್ವರದ ಪ್ರಕಾರವಾದರೂ, ಯಾವಾಗಲೂ ಅಪಾಯಕಾರಿಯಲ್ಲ.

ಜ್ವರದ ಸಾಮಾನ್ಯ ಲಕ್ಷಣಗಳು

ಹೆಚ್ಚಿನ ಜ್ವರದ ಪ್ರಕಾರಗಳು ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಲು ಸಹಾಯ ಮಾಡುವ ಚಿಹ್ನೆಗಳನ್ನು ತೋರಿಸುತ್ತವೆ.

  • ಶೀತ ಮತ್ತು ನಡುಕ: ಬೆಚ್ಚಗಿರುವಾಗಲೂ ಚಳಿಯ ಭಾವನೆ.
  • ತಲೆನೋವು: ಸೌಮ್ಯ ರೀತಿಯಿಂದ ಹಿಡಿದು ತೀವ್ರವಾದ ನೋವು, ಆಗಾಗ್ಗೆ ಒತ್ತಡದಂತೆ ಭಾಸವಾಗುತ್ತದೆ.
  • ದೇಹದ ನೋವು: ಸ್ನಾಯು ಅಥವಾ ಕೀಲು ನೋವು ಇದ್ದಕ್ಕಿದ್ದಂತೆ ಕಾಣಿಸಬಹುದು.
  • ಆಯಾಸ: ಅಸಾಮಾನ್ಯ ದಣಿವು ಅಥವಾ ನಿದ್ದೆಯ ಭಾವನೆ.
  • ಹಸಿವಿನ ಕೊರತೆ: ಆಹಾರವು ಆಕರ್ಷಕವಾಗಿ ಕಾಣದಿರಬಹುದು.
  • ಬೆವರು: ವಿಶೇಷವಾಗಿ ಜ್ವರದ ಏರಿಕೆಯ ಸಮಯದಲ್ಲಿ ಅಥವಾ ನಂತರ.
  •  ಚರ್ಮದ ದದ್ದು: ಕೆಲವೊಮ್ಮೆ ವೈರಲ್ ಅಥವಾ ಡೆಂಗ್ಯೂ ಜ್ವರದ ಸೋಂಕುಗಳಿಗೆ ಸಂಬಂಧಿಸಿದೆ.

ಜ್ವರದ ಸಾಮಾನ್ಯ ಕಾರಣಗಳು

ವಿವಿಧ ಜ್ವರದ ಪ್ರಕಾರಗಳು ವಿವಿಧ ಕಾರಣಗಳಿಂದ ಉಂಟಾಗಬಹುದು.

  •  ಸೋಂಕುಗಳು: ಬ್ಯಾಕ್ಟೀರಿಯಾ, ವೈರಲ್ (ಡೆಂಗ್ಯೂ ಜ್ವರದಂತಹ) ಅಥವಾ ಶಿಲೀಂಧ್ರ ಸೋಂಕುಗಳು ಪ್ರಮುಖ ಕಾರಣಗಳಾಗಿವೆ.
  • ರೋಗನಿರೋಧಕ ಪ್ರತಿಕ್ರಿಯೆಗಳು: ದೇಹವು ತನ್ನದೇ ಆದ ಅಂಗಾಂಶಗಳಿಗೆ ಪ್ರತಿಕ್ರಿಯಿಸಬಹುದು (ಸ್ವಯಂನಿರೋಧಕ ಕಾಯಿಲೆಗಳು).
  •  ಔಷಧಿಗಳು: ಕೆಲವು ಔಷಧಿಗಳು ತಾಪಮಾನವನ್ನು ಏರಿಕೆಗೊಳಿಸುತ್ತವೆ.
  • ಪರಿಸರದ ಅಂಶಗಳು: ಶಾಖದ ಆಘಾತ ಅಥವಾ ನಿರ್ಜಲೀಕರಣವು ತೀವ್ರ ಜ್ವರಕ್ಕೆ ಕಾರಣವಾಗಬಹುದು.
  • ಲಸಿಕೆಗಳು: ರೋಗನಿರೋಧಕ ಲಸಿಕೆಗಳ ನಂತರ ಸೌಮ್ಯ ಜ್ವರ ಕಾಣಿಸಬಹುದು.
  • ದೀರ್ಘಕಾಲೀನ ರೋಗಗಳು: ದೀರ್ಘಕಾಲೀನ ಸ್ಥಿತಿಗಳು ತಾಪಮಾನವನ್ನು ಸ್ವಲ್ಪ ಜಾಸ್ತಿಯಾಗಿಡಬಹುದು.
  • ಅಜ್ಞಾತ ಕಾರಣಗಳು: ಕೆಲವೊಮ್ಮೆ, ಅಜ್ಞಾತ ಜ್ವರದಂತೆ, ಸ್ಪಷ್ಟ ಕಾರಣ ಕಂಡುಬರುವುದಿಲ್ಲ.

ಜ್ವರದ ಮುನ್ನೆಚ್ಚರಿಕೆಗಳು

ಯಾವುದೇ ಜ್ವರದ ಪ್ರಕಾರವಾದರೂ, ಕೆಲವು ಸರಳ ಕ್ರಮಗಳು ನಿಮಗೆ ಆರೋಗ್ಯವಾಗಿರಲು ಮತ್ತು ಸೋಂಕು ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತವೆ.

  • ಹೈಡ್ರೇಟೆಡ್ ಆಗಿರಿ: ನೀರು, ಸೂಪ್‌ ಗಳು ಅಥವಾ ರೀಹೈಡ್ರೇಷನ್ ದ್ರವಗಳನ್ನು ಕುಡಿಯಿರಿ.
  •  ಸರಿಯಾಗಿ ವಿಶ್ರಾಂತಿ ಪಡೆಯಿರಿ: ನಿಮ್ಮ ದೇಹಕ್ಕೆ ಸಂಪೂರ್ಣ ಚೇತರಿಕೆಗೆ ಸಮಯ ಕೊಡಿ.
  • ಜಾಸ್ತಿ ಇರುವ ಅಥವಾ ಧೂಳು ಇರುವ ಸ್ಥಳಗಳನ್ನು ತಪ್ಪಿಸಿ: ವಿಶೇಷವಾಗಿ ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾದಾಗ.
  •  ನಿಮ್ಮ ತಾಪಮಾನವನ್ನು ಗಮನಿಸಿ: ಜ್ವರದ ಮಾದರಿಗಳು ಬದಲಾದರೆ ದಾಖಲೆ ಇಡಿ.
  •  ಹಗುರವಾದ ಬಟ್ಟೆಗಳನ್ನು ಬಳಸಿ: ಅತಿಯಾಗಿ ಬಿಸಿಯಾಗದಂತೆ ತಂಪಾಗಿರಿ ಆದರೆ ಆರಾಮದಾಯಕವಾಗಿರಿ.
  •  ಕೈ ತೊಳೆಯಿರಿ: ಸೋಂಕು ಇತರರಿಗೆ ಹರಡದಂತೆ ತಡೆಯಿರಿ.
  •   ಸಮತೋಲಿತ ಆಹಾರವನ್ನು ಸೇವಿಸಿ: ಪೌಷ್ಟಿಕ ಆಹಾರವು ಶೀಘ್ರ ಚೇತರಿಕೆಗೆ ನೆರವು ನೀಡುತ್ತದೆ.
  •  ಬೇಕಾದರೆ ವೈದ್ಯರನ್ನು ಸಂಪರ್ಕಿಸಿ: ವಿಶೇಷವಾಗಿ ಜ್ವರವು ಮೂರು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ಅಥವಾ ತೀವ್ರವಾದರೆ.

ಕೊನೆಯ ಮಾತು

ವಿವಿಧ ಜ್ವರದ ವಿಧಗಳನ್ನು ಅರ್ಥಮಾಡಿಕೊಂಡರೆ ಶಾಂತವಾಗಿರಲು, ಮುಖ್ಯ ಲಕ್ಷಣಗಳನ್ನು ಗುರುತಿಸಲು ಮತ್ತು ಅಗತ್ಯವಾದಾಗ ಸೂಕ್ತ ಕ್ರಮ ತೆಗೆದುಕೊಳ್ಳಲು ಸುಲಭವಾಗುತ್ತದೆ. ಹಾಗಂತ ಊಹಿಸಬೇಕಾದ ಅಗತ್ಯವಿಲ್ಲ, ಒಂದು ಪರೀಕ್ಷೆ ಮಾಡುವುದರ ಮೂಲಕ ಸ್ಪಷ್ಟ ಉತ್ತರಗಳನ್ನು ಕಂಡುಹಿಡಿಯಬಹುದಾಗಿದೆ.

ಮೆಟ್ರೋಪೊಲೀಸ್ ಹೆಲ್ತ್‌ ಕೇರ್‌ ಸಂಸ್ಥೆಯು ಜ್ವರ ಸಂಬಂಧಿತ ರೋಗನಿರ್ಣಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಮನೆಯಿಂದಲೇ ಪರೀಕ್ಷೆಗೆ ಒಳಗಾಗಲು ಅನುವು ಮಾಡಿಕೊಡುತ್ತದೆ. ಜೊತೆಗೆ ಸರಳವಾಗಿ ಶೀಘ್ರವಾಗಿ, ನಿಖರವಾದ ಫಲಿತಾಂಶಗಳನ್ನು ಪಡೆಯಬಹುದಾಗಿದ್ದು, ನಿಮ್ಮ ಆರೋಗ್ಯ ಪಾಲನೆಗಾಗಿ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More