Do you have any queries ?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ತೂಕ ಇಳಿಸಲು ಜೀರಿಗೆ ನೀರು ಕುಡಿಯಿರಿ: ಜೀರಿಗೆ ನೀರಿನ ಆರೋಗ್ಯ ಲಾಭಗಳನ್ನು ತಿಳಿಯೋಣ

Last Updated On: Feb 13 2026

ಆರೋಗ್ಯ ಮತ್ತು ಯೋಗಕ್ಷೇಮದ ಅರಿವಿನ ಜಗತ್ತಿಗೆ ಸ್ವಾಗತ! ಈ ಬರಹದಲ್ಲಿ ನಾವು ಜೀರಿಗೆ ನೀರಿನ ಸಾರದ ಕುಳಿತು ತಿಳಿಯೋಣ. ಜೀರಿಗೆ ಕೇವಲ ಮಸಾಲೆ ಪದಾರ್ಥ ಮಾತ್ರವಲ್ಲ, ಇದೊಂದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಶಕ್ತಿಶಾಲಿ ವಸ್ತು. ಜೀರಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುವುದು, ತೂಕ ಇಳಿಕೆ, ಆಸಿಡಿಟಿಯನ್ನು ಕಡಿಮೆ ಮಾಡುವುದು ಮುಂತಾದ ಹಲವಾರು ಆರೋಗ್ಯ ಕಾಪಾಡುವ ಗುಣಗಳನ್ನು ಹೊಂದಿದೆ ಎಂದು ಈಗಾಗಲೇ ಸಂಶೋಧಕರು ದೃಢಪಡಿಸಿದ್ದಾರೆ.

ಈ ಬರಹದಲ್ಲಿ ಜೀರಿಗೆ ನೀರಿನ ಹಲವಾರು ಸಾಬೀತಾದ ಆರೋಗ್ಯ ಪ್ರಯೋಜನಗಳನ್ನು ನಾವು ತಿಳಿಸಲಿದ್ದೇವೆ. ಜೊತೆಗೆ ಜೀರಿಗೆ ಹೇಗೆ ನೈಸರ್ಗಿಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ತಿಳಿಸಲಿದ್ದೇವೆ.

ಜೀರಿಗೆ ನೀರಿನ 11 ಪ್ರಯೋಜನಗಳು (ಕ್ಯುಮಿನ್ ಬೀಜಗಳ ನೀರು)

ಭಾರತೀಯ ಸಾಂಬಾರುಗಳಿಗೆ ಜೀರಿಗೆಯು ಸುವಾಸನೆಯನ್ನು ಒದಗಿಸುವುದರ ಜೊತೆಗೆ ಜೀರಿಗೆ ನೀರು ದಯಪಾಲಿಸುವ ಆರೋಗ್ಯ ಪ್ರಯೋಜನಗಳ ಪಟ್ಟಿಯು ಇಲ್ಲಿದೆ:

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜೀರಿಗೆ ನೀರಿನ ಪ್ರಯೋಜನಗಳ ಪಟ್ಟಿಯಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಸಾಮರ್ಥ್ಯವು ಮೊದಲ ಸ್ಥಾನದಲ್ಲಿದೆ. ಜೀರಿಗೆ ಬೀಜಗಳಲ್ಲಿ ಥೈಮಾಲ್ ಮತ್ತು ಇತರ ಅಗತ್ಯ ತೈಲಗಳಂತಹ ಸಂಯುಕ್ತಗಳಿರುದ್ದು, ಅ ಜೀರ್ಣಕಾರಕ ಕಿಣ್ವಗಳ ಸ್ರವಿಕೆಯನ್ನು ಉಂಟುಮಾಡುತ್ತದೆ. ಜೀರಿಗೆ ನೀರು ಯಕೃತ್ತಿನಿಂದ ಬೈಲ್‌ ಅನ್ನು ಹೆಚ್ಚು ಬಿಡುಗಡೆಯಾಗುವಂತೆ ಮಾಡುತ್ತದೆ, ಇದು ಕೊಬ್ಬು ಮತ್ತು ಕರುಳಿನಲ್ಲಿರುವ ಇತರ ಪೌಷ್ಟಿಕಾಂಶಗಳ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದ ದೇಹವು ಅಜೀರ್ಣ ಮತ್ತು ಹೊಟ್ಟೆಉಬ್ಬರ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುತ್ತದೆ.

ತೂಕ ಇಳಿಕೆಗೆ ಉತ್ತಮ

ತೂಕ ಇಳಿಕೆ ಮಾಡಬೇಕು ಎಂದುಕೊಳ್ಳುವವರು ಜೀರಿಗೆ ನೀರನ್ನು ಕುಡಿಯುವುದು ಒಳ್ಳೆಯ ಅಭ್ಯಾಸ. ಜೀರಿಗೆ ನೀರು, ಫ್ರೀ ರಾಡಿಕಲ್‌ ಗೆ ಎಲೆಕ್ಟ್ರಾನ್‌ ಅನ್ನು ನೀಡಿ ಅದನ್ನು ಸ್ಥಿರಗೊಳಿಸುತ್ತದೆ, ಇದರಿಂದ ಪಕ್ಕದಲ್ಲಿರುವ ಆರೋಗ್ಯಕರ ಕಣಗಳಿಗೆ ಹಾನಿಯಾಗದಂತೆ ತಡೆಯುತ್ತದೆ ಮತ್ತು ದೀರ್ಘಕಾಲಿಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಆರೋಗ್ಯಕರ ಚರ್ಮ ಮತ್ತು ಕೂದಲು

ಜೀರಿಗೆ ನೀರಿನ ಪ್ರಯೋಜನಗಳಲ್ಲಿ ಸೌಂದರ್ಯವನ್ನು ಹೆಚ್ಚಿಸುವ ಒಂದು ಪ್ರಯೋಜನವೂ ಸೇರಿದೆ. ಚರ್ಮಕ್ಕೆ ಜೀರಿಗೆ ನೀರಿನ ಪ್ರಯೋಜನಗಳು ಅತ್ಯದ್ಭುತವಾಗಿವೆ, ಏಕೆಂದರೆ ಇದು ಒಂದು ಉತ್ತಮ ನೈಸರ್ಗಿಕ ಡಿಟಾಕ್ಸಿಫೈಯರ್ ಆಗಿದ್ದು, ದೇಹದಿಂದ ವಿಷಕಾರಕಗಳನ್ನು ಹೊರಹಾಕುತ್ತದೆ. ಜೀರಿಗೆ ನೀರು ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮ್ಯಾಂಗನೀಸ್ ಮತ್ತು ಸೆಲೆನಿಯಂನಂತಹ ಖನಿಜಗಳಿಂದ ಸಮೃದ್ಧವಾಗಿದ್ದು, ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ.

ಜೊತೆಗೆ, ಇದರ ಆಂಟಿಆಕ್ಸಿಡೆಂಟ್ ಗುಣಗಳಿಗೆ ಧನ್ಯವಾದ ಹೇಳಬೇಕು. ಯಾಕೆಂದರೆ ಜೀರಿಗೆ ನೀರು ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಜೀರಿಗೆ ನೀರು ಕೂದಲಿನ ಕಿರುಕೋಶಗಳನ್ನು ಬಲಪಡಿಸುತ್ತದೆ, ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಕೂದಲು ಹೊಳೆಯುವಂತೆ ಮಾಡುತ್ತದೆ.

ಹೃದಯ ಆರೋಗ್ಯಕ್ಕೆ ಒಳ್ಳೆಯದು

ನಿಮ್ಮ ಧಮನಿಗಳಲ್ಲಿ ಫ್ಯಾಟಿ ಆಸಿಡ್ ಗಳ (ಕೊಬ್ಬು) ಆಕ್ಸಿಡೀಕರಣವು ಧಮನಿಗಳನ್ನು ಅಡ್ಡಗಟ್ಟಬಹುದು ಮತ್ತು ಹೃದಯ ರೋಗಕ್ಕೆ ಕಾರಣವಾಗಬಹುದು. ಜೀರಿಗೆ ನೀರಿನ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ, ರಕ್ತದೊತ್ತಡವನ್ನು ಕಡಿಮೆ ಮಾಡುವ ಮತ್ತು ರಕ್ತ ಹೆಪ್ಪುಗಟ್ಟುವಿತಯನ್ನು ತಡೆಯುವ ಮೂಲಕ ಹೃದಯ ಆರೋಗ್ಯ ಕಾಪಾಡಲು ನೆರವಾಗುತ್ತದೆ.

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಜೀರಿಗೆ ನೀರು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುವ ಮೂಲಕ ಮತ್ತು ರಕ್ತದ ಗ್ಲೂಕೋಸ್ ಮಟ್ಟದಲ್ಲಿ ಇದ್ದಕ್ಕಿದ್ದಂತೆ ಏರಿಳಿತ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವ ಮೂಲಕ ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುವುದರಿಂದ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ನೆರವು ನೀಡುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಡಿಎನ್‌ಎಯ ಆಕ್ಸಿಡೀಕರಣವು ಕ್ಯಾನ್ಸರ್‌ಗೆ ಕಾರಣವಾಗಬಹುದು. ಜೀರಿಗೆ ನೀರಿನಲ್ಲಿ ಇರುವ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್-ವಿರೋಧಿ ಗುಣಗಳನ್ನು ಹೊಂದಿವೆ, ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುತ್ತವೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.

ಆಸಿಡಿಟಿ ಅನ್ನು ಶಮನಗೊಳಿಸುತ್ತದೆ

ಜೀರಿಗೆ ನೀರು ನೈಸರ್ಗಿಕ ಆಂಟಾಸಿಡ್ ಆಗಿ ಕಾರ್ಯನಿರ್ವಹಿಸುತ್ತದೆ. ಹೊಟ್ಟೆಯ ಒಳಪದರವನ್ನು ಶಾಂತಗೊಳಿಸುತ್ತದೆ ಮತ್ತು ಆಸಿಡಿಟಿ, ಎದೆಯ ಉರಿ ಮತ್ತು ಆಸಿಡ್ ರಿಫ್ಲಕ್ಸ್‌ ನಿಂದ ರಕ್ಷಣೆಯನ್ನು ಒದಗಿಸುತ್ತದೆ.

ರಕ್ತಹೀನತೆ ಎದುರಿಸಲು ಸಹಾಯಕ

ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ಜೀರಿಗೆ ನೀರಿನ ಪ್ರಯೋಜನಗಳು ಉಪಯುಕ್ತವಾಗಿವೆ, ಏಕೆಂದರೆ ಜೀರಿಗೆ ನೀರು ಕಬ್ಬಿಣ ಅಂಶದ ಶ್ರೀಮಂತ ಮೂಲವಾಗಿದೆ. ಜೀರಿಗೆ ನೀರಿನ ನಿಯಮಿತ ಸೇವನೆಯು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ಆಯಾಸ ಮತ್ತು ದೌರ್ಬಲ್ಯದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಋತುಸ್ರಾವ ಮತ್ತು ಸ್ತನ್ಯಪಾನದ ಸಮಯದಲ್ಲಿ ಪರಿಣಾಮಕಾರಿ

ಜೀರಿಗೆ ನೀರನ್ನು ಕುಡಿಯುವುದರಿಂದ ಮಹಿಳೆಯರಿಗೆ ಋತುಸ್ರಾವ ಮತ್ತು ಸ್ತನ್ಯಪಾನದ ಸಮಯದಲ್ಲಿ ಪ್ರಯೋಜನಗಳಿವೆ. ಋತುಸ್ರಾವದ ಸಮಯದಲ್ಲಿ, ಜೀರಿಗೆ ನೀರಿನ ಉರಿಯೂತ-ವಿರೋಧಿ ಗುಣಗಳು ಋತುಕಾಲದ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಅಸ್ವಸ್ಥತೆ ಮತ್ತು ನೋವಿನಿಂದ ರಕ್ಷಣೆಯನ್ನು ಒದಗಿಸುತ್ತವೆ. ಜೊತೆಗೆ, ಜೀರಿಗೆ ನೀರು ಗರ್ಭಾಶಯದ ಸಂಕೋಚನವನ್ನು ಉಂಟುಮಾಡುತ್ತದೆ ಮತ್ತು ಸಿಲುಕಿಕೊಂಡಿರುವ ರಕ್ತವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ಹೆಚ್ಚುವರಿಯಾಗಿ, ಜೀರಿಗೆ ನೀರು ಸ್ತನ್ಯಪಾನದ ತಾಯಂದಿರಿಗೆ ಪ್ರಯೋಜನವನ್ನು ನೀಡುತ್ತದೆ, ಏಕೆಂದರೆ ಇದು ಕಬ್ಬಿಣ ಅಂಶದಿಂದ ಸಮೃದ್ಧವಾಗಿದೆ. ಜೀರಿಗೆ ನೀರು ಹಾಲು ಉತ್ಪಾದನೆಯನ್ನು ಉತ್ತೇಜಿಸುತ್ತದೆ, ತಾಯಿ ಮತ್ತು ಮಗುವಿಗೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುತ್ತದೆ.

ರೋಗನಿರೋಧಕ ವ್ಯವಸ್ಥೆಗೆ ಬೆಂಬಲ

ಜೀರಿಗೆ ನೀರು ಪೊಟ್ಯಾಸಿಯಂ ಮತ್ತು ಕಬ್ಬಿಣ ಅಂಶದ ಒಳ್ಳೆಯ ಮೂಲವಾಗಿದ್ದು, ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೀರಿಗೆ ನೀರಿನ ಹೆಚ್ಚಿನ ವಿಟಮಿನ್ ಸಿ ಅಂಶ, ಒಂದು ಆಂಟಿಆಕ್ಸಿಡೆಂಟ್ ಆಗಿದ್ದು, ಗಾಯಗಳನ್ನು ಗುಣಪಡಿಸುತ್ತದೆ. ಜೀರಿಗೆ ನೀರು ಒಂದು ಉತ್ತಮ ಆಂಟಿ-ಬ್ಯಾಕ್ಟೀರಿಯಲ್ ಏಜೆಂಟ್ ಆಗಿದ್ದು, ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಉರಿಯೂತ-ವಿರೋಧಿ ಗುಣಗಳು

ಜೀರಿಗೆ ನೀರಿನಲ್ಲಿ ಕ್ಯೂಮಿನಾಲ್ಡಿಹೈಡ್ ಮತ್ತು ಥೈಮೋಕ್ವಿನೋನ್‌ನಂತಹ ಸಂಯುಕ್ತಗಳ ಉಪಸ್ಥಿತಿಯಿಂದಾಗಿ ಉತ್ಕೃಷ್ಟ ಉರಿಯೂತ ವಿರೋಧಿ ಗುಣಗಳಿವೆ, ಇವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸಂಧಿವಾತ ಮತ್ತು ಕೀಲು ನೋವಿನಂತಹ ಸ್ಥಿತಿಗಳಲ್ಲಿ ಜೀರಿಗೆ ನೀರು ಉರಿಯೂತ ಮತ್ತು ಊತವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.

ಜೀರಿಗೆ ನೀರನ್ನು ಹೇಗೆ ತಯಾರಿಸುವುದು

ಈ ಸುಲಭವಾಗಿ ತಯಾರಿಸಬಹುದಾದ ಜೀರಿಗೆ ನೀರಿನ ರೆಸಿಪಿಯು ಹಲವಾರು ಜೀರಿಗೆ ನೀರಿನ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ:

ವಿಧಾನ 1:

ಪದಾರ್ಥಗಳು:

• 1 ಟೇಬಲ್‌ ಸ್ಪೂನ್ ಜೀರಿಗೆ ಬೀಜಗಳು
• 1 ಗ್ಲಾಸ್ ನೀರು

ವಿಧಾನ:

• ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ.
• ಕುದಿಯುವ ನೀರಿಗೆ ಜೀರಿಗೆ ಬೀಜಗಳನ್ನು ಸೇರಿಸಿ.
• 5-10 ನಿಮಿಷಗಳ ಕಾಲ ಕುದಿಸಲು ಬಿಡಿ.
• ಮಿಶ್ರಣವನ್ನು ತಣ್ಣಗಾಗಲು ಬಿಡಿ.
• ನಿಮ್ಮ ಜೀರಿಗೆ ನೀರು ಕುಡಿಯಲು ಸಿದ್ಧವಾಗಿದೆ.

ವಿಧಾನ 2:

• ಒಂದು ಗ್ಲಾಸ್ ಅಥವಾ ಪಾತ್ರೆಯಲ್ಲಿ 1 ಟೇಬಲ್‌ ಸ್ಪೂನ್ ಜೀರಿಗೆ ಬೀಜಗಳನ್ನು ಇರಿಸಿ.
• ಜೀರಿಗೆ ಬೀಜಗಳ ಮೇಲೆ 1 ಕಪ್ ನೀರನ್ನು ಸುರಿಯಿರಿ.
• ಗ್ಲಾಸ್ ಅಥವಾ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ.
• ಜೀರಿಗೆ ಬೀಜಗಳನ್ನು ಕನಿಷ್ಠ 8 ಗಂಟೆಗಳ ಕಾಲ, ರಾತ್ರಿಯಿಡೀ ನೀರಿನಲ್ಲಿ ನೆನೆಯಲು ಬಿಡಿ.
• ಬೆಳಿಗ್ಗೆ, ಜೀರಿಗೆ ಬೀಜಗಳನ್ನು ತೆಗೆಯಲು ನೆನೆಸಿದ ಜೀರಿಗೆ ನೀರನ್ನು ಕಪ್‌ಗೆ ಸುರಿಯಿರಿ.
• ನಿಮ್ಮ ಜೀರಿಗೆ ನೀರು ಕುಡಿಯಲು ಸಿದ್ಧವಾಗಿದೆ!
• ಇದನ್ನು ಹಾಗೇ ಕುಡಿಯಬಹುದು ಅಥವಾ ಒಂದಿಷ್ಟು ರುಚಿಗಾಗಿ ನಿಂಬೆ ರಸ

ಅಥವಾ ಜೇನುತುಪ್ಪವನ್ನು ಸೇರಿಸಬಹುದು.

ತಾಜಾತನದಿಂದ ದಿನವನ್ನು ಆರಂಭಿಸಲು ಮತ್ತು ಪೌಷ್ಟಿಕ ಗುಣ ಹೊಂದಲು ಜೀರಿಗೆ ನೀರನ್ನು ಸೇವಿಸಿ! ಈ ರೆಸಿಪಿಗಳು ಮನೆಯಲ್ಲಿ ಜೀರಿಗೆ ನೀರನ್ನು ತಯಾರಿಸಲು ಎರಡು ಸರಳ ವಿಧಾನಗಳನ್ನು ಒದಗಿಸಿವೆ. ನಿಮ್ಮ ರುಚಿಯ ಆದ್ಯತೆಗೆ ತಕ್ಕಂತೆ ಜೀರಿಗೆ ಬೀಜಗಳು ಮತ್ತು ನೀರಿನ ಪ್ರಮಾಣವನ್ನು ಸರಿಹೊಂದಿಸಿಕೊಳ್ಳಿ.

ಜೀರಿಗೆ ನೀರನ್ನು ಕುಡಿಯಲು ಉತ್ತಮ ಸಮಯ

ಅತ್ಯುತ್ತಮ ಫಲಿತಾಂಶ ಹೊಂದಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ 30 ನಿಮಿಷಗಳ ಮೊದಲು ಜೀರಿಗೆ ನೀರನ್ನು ಕುಡಿಯಲು ಶಿಫಾರಸು ಮಾಡಲಾಗುತ್ತದೆ. ಇದು ಪೌಷ್ಟಿಕಾಂಶಗಳ ಉತ್ತಮ ಹೀರಿಕೊಳ್ಳುವಿಕೆಗೆ ಅನುವು ಮಾಡಿಕೊಡುತ್ತದೆ ಮತ್ತು ಇದರ ಜೀರ್ಣಕಾರಕ ಪ್ರಯೋಜನಗಳನ್ನು ಹೆಚ್ಚಿಸುತ್ತದೆ.

ಜೀರಿಗೆ ನೀರಿನ ದುಷ್ಪರಿಣಾಮಗಳು

ಜೀರಿಗೆ ನೀರು ಸಾಮಾನ್ಯವಾಗಿ ಸೇವನೆಗೆ ಸುರಕ್ಷಿತವಾಗಿದ್ದರೂ, ಕೆಲವು ವ್ಯಕ್ತಿಗಳಲ್ಲಿ ಇದು ಸೌಮ್ಯವಾದ ದುಷ್ಪರಿಣಾಮಗಳನ್ನು ಉಂಟುಮಾಡಬಹುದು. ಜೀರಿಗೆ ನೀರಿನ ದುಷ್ಪರಿಣಾಮಗಳು ಈ ರೀತಿಯಾಗಿವೆ:

1.    ಅಲರ್ಜಿಕ್ ರಿಯಾಕ್ಷನ್: ನೀವು ಜೀರಿಗೆ ಅಥವಾ ಅದಕ್ಕೆ ಸಂಬಂಧಿತ ಸಸ್ಯಗಳ ಅಲರ್ಜಿಯನ್ನು ಹೊಂದಿದ್ದರೆ, ತುರಿಕೆ, ಊತ ಅಥವಾ ಉಸಿರಾಟದ ತೊಂದರೆಯಂತಹ ಅಲರ್ಜಿಕ್ ಲಕ್ಷಣಗಳನ್ನು ಅನುಭವಿಸಬಹುದು.

2.    ಜೀರ್ಣಕಾರಕ ಸಮಸ್ಯೆಗಳು: ಜೀರಿಗೆ ನೀರಿನ ಅತಿಯಾದ ಸೇವನೆಯು ಉಬ್ಬರ, ಗ್ಯಾಸ್ ಅಥವಾ ಭೇದಿಯಂತಹ ಜೀರ್ಣಕಾರಕ ಅಸ್ವಸ್ಥತೆಗೆ ಕಾರಣವಾಗಬಹುದು.

3.    ಗರ್ಭಾವಸ್ಥೆ ಮತ್ತು ಸ್ತನ್ಯಪಾನ: ಗರ್ಭಾವಸ್ಥೆ ಮತ್ತು ಸ್ತನ್ಯಪಾನದ ಸಮಯದಲ್ಲಿ ಜೀರಿಗೆ ನೀರಿನ ಅತಿಯಾದ ಸೇವನೆಯು ರಕ್ತದ ಸಕ್ಕರೆ ಮಟ್ಟವನ್ನು ತೀವ್ರವಾಗಿ ಕಡಿಮೆ ಮಾಡಬಹುದು ಮತ್ತು ಸ್ತನದ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಬಹುದು. ಈ ಜೀರಿಗೆ ನೀರಿನ ದುಷ್ಪರಿಣಾಮಗಳನ್ನು ತಪ್ಪಿಸಲು, ಗರ್ಭಾವಸ್ಥೆ ಮತ್ತು ಸ್ತನ್ಯಪಾನದ ಸಮಯದಲ್ಲಿ ಜೀರಿಗೆ ನೀರನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಕೊನೆಯ ಮಾತು

ಜೀರಿಗೆ ನೀರು ಒಂದು ನೈಸರ್ಗಿಕ ಔಷಧಿಯಾಗಿದ್ದು, ಜೀರ್ಣಕ್ರಿಯೆ ಸುಧಾರಿಸುವುದರಿಂದ ಹಿಡಿದು ರೋಗನಿರೋಧಕ ಶಕ್ತಿ ಹೆಚ್ಚಿಸುವವರೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಸರಳ ಆದರೆ ಶಕ್ತಿಶಾಲಿ ಔಷಧಿಯನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳುವ ಮೂಲಕ, ನೀವು ಉತ್ತಮ ಆರೋಗ್ಯ ಹೊಂದುವ ಪಯಣವನ್ನು ಆರಂಭಿಸಬಹುದು.

ಮೆಟ್ರೋಪೊಲಿಸ್ ಲ್ಯಾಬ್ಸ್‌ ನಲ್ಲಿ ಈಗಲೇ ನಿಮ್ಮ ಮನೆ-ಭೇಟಿಯನ್ನು ಬುಕ್ ಮಾಡಿ, ಈ ಆರೋಗ್ಯದ ಪಯಣವನ್ನು ಇನ್ನಷ್ಟು ಸುಗಮವಾಗಿಸಿ. ಮೆಟ್ರೋಪೊಲಿಸ್ ಲ್ಯಾಬ್ಸ್‌ ವಿಶಾಲ ಶ್ರೇಣಿಯ ಡಯಾಗ್ನಾಸ್ಟಿಕ್ ಸೇವೆಗಳನ್ನು ಒದಗಿಸುತ್ತಿದ್ದು, ನೀವು ಆರೋಗ್ಯದ ಕಡೆಗೆ ಆದ್ಯತೆಯನ್ನು ನೀಡುವಂತೆ ನೋಡಿಕೊಳ್ಳುತ್ತದೆ. ಉತ್ತಮ ಆರೋಗ್ಯ ಹೊಂದಲು ಸೂಕ್ತ ಒಳನೋಟಗಳು ಮತ್ತು ವೈಯಕ್ತೀಕರಿಸಿದ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸೇವೆಗಳನ್ನು ಬಳಸಿಕೊಳ್ಳಿ.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More