Language
ವಿಟಮಿನ್ ಇಯ ಪ್ರಯೋಜನಗಳು: ಈ ಆ್ಯಂಟಿ ಆಕ್ಸಿಡೆಂಟ್ ನಿಮ್ಮ ಆರೋಗ್ಯಕ್ಕೆ ಯಾಕೆ ಅವಶ್ಯ?
Table of Contents
- ವಿಟಮಿನ್ ಇ ಎಂದರೇನು?
- ದಿನಕ್ಕೆ ಎಷ್ಟು ವಿಟಮಿನ್ ಇ ಅಗತ್ಯ?
- ವಿಟಮಿನ್ ಇಯ ಉನ್ನತ ಆರೋಗ್ಯ ಪ್ರಯೋಜನಗಳು
- ವಿಟಮಿನ್ ಇ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ?
- ವಿಟಮಿನ್ ಇ ಪೂರಕಗಳನ್ನು ತೆಗೆದುಕೊಳ್ಳಬೇಕೇ?
- ವಿಟಮಿನ್ ಇ ಪೂರಕಗಳು ಯಾವ ಔಷಧಿಗಳೊಂದಿಗೆ ಅಡ್ಡಪರಿಣಾಮ ಬೀರಬಹುದು?
- ವಿಟಮಿನ್ ಇ ಪೂರಕಗಳ ಅಡ್ಡರಿಣಾಮಗಳು ಮತ್ತು ಅತಿಯಾದ ಡೋಸ್
- ವಿಟಮಿನ್ ಇಯ ಪ್ರಯೋಜನಗಳು ಮತ್ತು ಉಪಯೋಗಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ವಿಟಮಿನ್ ಇ ಎಂದರೇನು?
ವಿಟಮಿನ್ ಇ ಒಂದು ಕೊಬ್ಬಿನಲ್ಲಿ ಕರಗುವ ಪೋಷಕಾಂಶವಾಗಿದ್ದು, ದೇಹದಲ್ಲಿ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಒಟ್ಟು ಎಂಟು ಸಂಯುಕ್ತಗಳ ಗುಂಪಾಗಿದ್ದು, ಅದರಲ್ಲಿ ಆಲ್ಫಾ-ಟೊಕೊಫೆರಾಲ್ ಮನುಷ್ಯರಲ್ಲಿ ಅತ್ಯಂತ ಸಕ್ರಿಯವಾದ ರೂಪವಾಗಿದೆ. ವಿಟಮಿನ್ ಇಯ ಮುಖ್ಯ ಕಾರ್ಯವೆಂದರೆ ಕೋಶ ಪೊರೆಗಳನ್ನು ಫ್ರೀ ರ‍್ಯಾಡಿಕಲ್‌ಗಳಿಂದ ಉಂಟಾಗುವ ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುವುದು. ಫ್ರೀ ರ‍್ಯಾಡಿಕಲ್‌ಗಳು ಸಾಮಾನ್ಯ ಚಯಾಪಚಯ ಮತ್ತು ಮಾಲಿನ್ಯ, ಯುವಿ ಕಿರಣಗಳಂತಹ ಅಂಶಗಳಿಂದ ಉತ್ಪತ್ತಿಯಾಗುವ ಅಸ್ಥಿರ ಅಣುಗಳಾಗಿವೆ. ಈ ಹಾನಿಕಾರಕ ಅಣುಗಳನ್ನು ತಟಸ್ಥಗೊಳಿಸುವ ಮೂಲಕ, ವಿಟಮಿನ್ ಇ ಕೋಶಗಳ ಸಮಗ್ರತೆಯನ್ನು ಕಾಪಾಡುತ್ತದೆ ಮತ್ತು ರೋಗನಿರೋಧಕ ಶಕ್ತಿ, ಚರ್ಮದ ಆರೋಗ್ಯ ಮತ್ತು ಸರಿಯಾದ ರಕ್ತ ಹೆಪ್ಪುಗಟ್ಟುವಿಕೆಯಂತಹ ವಿವಿಧ ದೇಹ ಕಾರ್ಯಗಳಿಗೆ ಬೆಂಬಲ ನೀಡುತ್ತದೆ.
ದಿನಕ್ಕೆ ಎಷ್ಟು ವಿಟಮಿನ್ ಇ ಅಗತ್ಯ?
ವಿಟಮಿನ್ ಇಯ ಶಿಫಾರಸು ಮಾಡಲಾದ ದೈನಂದಿನ ಪ್ರಮಾಣ (ಆರ್ ಡಿ ಎ) ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಬದಲಾಗುತ್ತದೆ:
|
ವಯಸ್ಸಿನ ಗುಂಪು |
ವಿಟಮಿನ್ ಇಯ ಆರ್ ಡಿ ಎ (ಮಿಗ್ರಾಂ/ ದಿನ) |
|
ಜನನದಿಂದ 6 ತಿಂಗಳವರೆಗೆ |
4 ಮಿಗ್ರಾಂ |
|
7 ರಿಂದ 12 ತಿಂಗಳ ಶಿಶುಗಳು |
5 ಮಿಗ್ರಾಂ |
|
1 ರಿಂದ 3 ವರ್ಷದ ಮಕ್ಕಳು |
5 ಮಿಗ್ರಾಂ |
|
4 ರಿಂದ 8 ವರ್ಷದ ಮಕ್ಕಳು |
7 ಮಿಗ್ರಾಂ |
|
9 ರಿಂದ 13 ವರ್ಷದ ಮಕ್ಕಳು |
11 ಮಿಗ್ರಾಂ |
|
14+ ವರ್ಷದವರು |
15 ಮಿಗ್ರಾಂ |
|
ಗರ್ಭಿಣಿಯರಿಗೆ |
15 ಮಿಗ್ರಾಂ |
|
ಸ್ತನ್ಯಪಾನ ಮಾಡುವವರಿಗೆ |
19 ಮಿಗ್ರಾಂ |
ವಿಟಮಿನ್ ಇ ಕೊರತೆಯು ಅಪರೂಪವಾದರೂ, ಕೊಬ್ಬು ಹೀರಿಕೊಳ್ಳುವಿಕೆಯಲ್ಲಿ ತೊಂದರೆ ಇರುವವರಿಗೆ ಅಥವಾ ಕಡಿಮೆ ಕೊಬ್ಬಿನ ಆಹಾರ ಸೇವಿಸುವವರಿಗೆ ಕೊರತೆಯ ಅಪಾಯವಿರುತ್ತದೆ ಮತ್ತು ವೈದ್ಯರ ಮಾರ್ಗದರ್ಶನದಲ್ಲಿ ಪೂರಕಗಳು ಅಗತ್ಯ ಬೀಳಬಹುದು.
ವಿಟಮಿನ್ ಇಯ ಉನ್ನತ ಆರೋಗ್ಯ ಪ್ರಯೋಜನಗಳು
ವಿಟಮಿನ್ ಇಯ ಆರೋಗ್ಯ ಪ್ರಯೋಜನಗಳು ಅದರ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಗುಣಗಳಿಂದ ಬರುತ್ತವೆ, ಇದು ಈ ಕೆಳಗಿನವುಗಳಿಗೆ ಸಹಾಯ ಮಾಡುತ್ತದೆ:
· ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ವಿಟಮಿನ್ ಇ, ವಿಶೇಷವಾಗಿ ವಯಸ್ಸಾದವರಲ್ಲಿ, ಆ್ಯಂಟಿಬಾಡಿಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಮತ್ತು ಕೋಶ-ಮಧ್ಯಸ್ಥಿಕೆಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುತ್ತದೆ.
· ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ: ಆ್ಯಂಟಿಆಕ್ಸಿಡೆಂಟ್ ಆಗಿ, ವಿಟಮಿನ್ ಇ ಚರ್ಮದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ, ಇದು ವಯಸ್ಸಾದ ಲಕ್ಷಣ ಮೂಡಿಸಬಹುದು ಮತ್ತು ಚರ್ಮದ ಹಾನಿಗೆ ಕಾರಣವಾಗಬಹುದು.
· ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ: ವಿಟಮಿನ್ ಇ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡೀಜನರೇಶನ್ (ಎಎಂಡಿ) ಮತ್ತು ಕಣ್ಣಿನ ಪೊರೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
· ಹೃದಯ ಆರೋಗ್ಯವನ್ನು ಕಾಪಾಡುತ್ತದೆ: ಕೆಲವು ಅಧ್ಯಯನಗಳ ಪ್ರಕಾರ, ವಿಟಮಿನ್ ಇ ಎಲ್ ಡಿ ಎಲ್ ಕೊಲೆಸ್ಟ್ರಾಲ್ ಆಕ್ಸಿಡೀಕರಣವನ್ನು ತಡೆಯುವ ಮೂಲಕ ಮತ್ತು ಆರೋಗ್ಯಕರ ರಕ್ತನಾಳಗಳನ್ನು ಬೆಂಬಲಿಸುವ ಮೂಲಕ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
· ಉರಿಯೂತವನ್ನು ಕಡಿಮೆ ಮಾಡುತ್ತದೆ: ವಿಟಮಿನ್ ಇಯ ಉರಿಯೂತ-ವಿರೋಧಿ ಗುಣಗಳು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ವಿಟಮಿನ್ ಇ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ?
ವಿಟಮಿನ್ ಇ ಆರೋಗ್ಯವನ್ನು ಕಾಪಾಡಲು ಹಲವಾರು ರೀತಿಯಲ್ಲಿ ಕೆಲಸ ಮಾಡುತ್ತದೆ:
· ಫ್ರೀ ರ‍್ಯಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತದೆ: ವಿಟಮಿನ್ ಇ ಎಲೆಕ್ಟ್ರಾನ್‌ಗಳನ್ನು ದಾನ ಮಾಡಿ ಹಾನಿಕಾರಕ ಫ್ರೀ ರ‍್ಯಾಡಿಕಲ್‌ಗಳನ್ನು ಸ್ಥಿರಗೊಳಿಸುತ್ತದೆ, ಇದರಿಂದ ಕೋಶದ ಹಾನಿಯನ್ನು ತಡೆಯುತ್ತದೆ.
· ಕೋಶ ಪೊರೆಗಳನ್ನು ಸ್ಥಿರಗೊಳಿಸುತ್ತದೆ: ವಿಟಮಿನ್ ಇ ಕೋಶ ಪೊರೆಗಳ ಸಮಗ್ರತೆಯನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.
· ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುತ್ತದೆ: ವಿಟಮಿನ್ ಇ ವಿಶೇಷವಾಗಿ ವಯಸ್ಸಾದವರಲ್ಲಿ ಆ್ಯಂಟಿಬಾಡಿಗಳ ಉತ್ಪಾದನೆ ಮತ್ತು ಕೋಶ-ಮಧ್ಯಸ್ಥಿಕೆಯ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಬೆಂಬಲಿಸುತ್ತದೆ.
· ಜೀನ್ ಕಾರ್ಯವನ್ನು ನಿಯಂತ್ರಿಸುತ್ತದೆ: ವಿಟಮಿನ್ ಇ ರೋಗನಿರೋಧಕ ಕಾರ್ಯ, ಉರಿಯೂತ ಮತ್ತು ಇತರ ಚಯಾಪಚಯ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಜೀನ್‌ಗಳ ಕಾರ್ಯವನ್ನು ಪ್ರಭಾವಿಸಬಹುದು.
ವಿಟಮಿನ್ ಇ ಪೂರಕಗಳನ್ನು ತೆಗೆದುಕೊಳ್ಳಬೇಕೇ?
ಆರೋಗ್ಯವಂತ ವ್ಯಕ್ತಿಗಳು ಬೀಜಗಳು, ಬೀಜಕೋಶಗಳು ಮತ್ತು ತರಕಾರಿ ಎಣ್ಣೆಗಳಂತಹ ವಿಟಮಿನ್ ಇಯ ಶ್ರೀಮಂತ ಆಹಾರವನ್ನು ಸೇವಿಸಿದರೆ ಪೂರಕಗಳ ಅಗತ್ಯವಿಲ್ಲ. ಆದರೆ, ಸಿಸ್ಟಿಕ್ ಫೈಬ್ರೋಸಿಸ್ ಅಥವಾ ಕ್ರೋನ್‌ಸ್ ಡಿಸೀಸ್ ನಂತಹ ಕೊಬ್ಬು ಹೀರಿಕೊಳ್ಳುವಿಕೆಯಲ್ಲಿ ತೊಂದರೆ ಇರುವ ಆರೋಗ್ಯ ಸಮಸ್ಯೆ ಉಳ್ಳವರಿಗೆ ಪೂರಕಗಳು ಶಿಫಾರಸು ಮಾಡಬಹುದು. ಯಾವುದೇ ಪೂರಕವನ್ನು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ, ಏಕೆಂದರೆ ಹೆಚ್ಚಿನ ಡೋಸ್ ನ ವಿಟಮಿನ್ ಇ ಪೂರಕಗಳು ಔಷಧಿಗಳೊಂದಿಗೆ ಬೇರೆ ಪರಿಣಾಮ ಬೀರಬಹುದು ಮತ್ತು ಸಂಭಾವ್ಯ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು.
ವಿಟಮಿನ್ ಇ ಪೂರಕಗಳು ಯಾವ ಔಷಧಿಗಳೊಂದಿಗೆ ಅಡ್ಡಪರಿಣಾಮ ಬೀರಬಹುದು?
ವಿಟಮಿನ್ ಇ ಪೂರಕಗಳು ಹಲವಾರು ಔಷಧಿಗಳೊಂದಿಗೆ ಅಡ್ಡಪರಿಣಾಮ ಬೀರಬಹುದು, ಉದಾಹರಣೆಗೆ:
· ಆ್ಯಂಟಿಕೊಆಗುಲಂಟ್‌ಗಳು ಮತ್ತು ಆ್ಯಂಟಿಪ್ಲೇಟ್‌ಲೆಟ್ ಔಷಧಿಗಳು (ಉದಾ. ವಾರ್ಫರಿನ್): ಹೆಚ್ಚಿನ ಡೋಸ್‌ನ ವಿಟಮಿನ್ ಇ ಈ ಔಷಧಿಗಳೊಂದಿಗೆ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು.
· ಸ್ಟ್ಯಾಟಿನ್‌ಗಳು ಮತ್ತು ನಿಯಾಸಿನ್: ವಿಟಮಿನ್ ಇ ಪೂರಕಗಳು ಈ ಔಷಧಿಗಳ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಪರಿಣಾಮವನ್ನು ಕಡಿಮೆ ಮಾಡಬಹುದು.
· ಕೀಮೋಥೆರಪಿ ಮತ್ತು ರೇಡಿಯೊಥೆರಪಿ: ವಿಟಮಿನ್ ಇ ಕೆಲವು ಕ್ಯಾನ್ಸರ್ ಚಿಕಿತ್ಸೆಗಳ ಪರಿಣಾಮಕಾರಿತ್ವಕ್ಕೆ ತೊಂದರೆ ಉಂಟು ಮಾಡಬಹುದು.
· ಸೈಕ್ಲೋಸ್ಪೊರಿನ್: ವಿಟಮಿನ್ ಇ ಈ ರೋಗನಿರೋಧಕ ಔಷಧಿಯ ಹೀರಿಕೊಳ್ಳುವಿಕೆ ಮತ್ತು ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರಬಹುದು.
ಸಂಭಾವ್ಯ ಸಂವಾದಗಳನ್ನು ತಪ್ಪಿಸಲು ನೀವು ತೆಗೆದುಕೊಳ್ಳುವ ಯಾವುದೇ ಪೂರಕಗಳ ಬಗ್ಗೆ ಯಾವಾಗಲೂ ನಿಮ್ಮ ವೈದ್ಯರಿಗೆ ತಿಳಿಸಿ.
ವಿಟಮಿನ್ ಇ ಪೂರಕಗಳ ಅಡ್ಡರಿಣಾಮಗಳು ಮತ್ತು ಅತಿಯಾದ ಡೋಸ್
ಆಹಾರದ ಮೂಲಕ ಪಡೆಯುವ ವಿಟಮಿನ್ ಇ ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಹೆಚ್ಚಿನ ಡೋಸ್ ನ ಪೂರಕಗಳು ಈ ಕೆಳಗಿನ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು:
· ವಾಕರಿಕೆ, ಭೇದಿ, ಮತ್ತು ಹೊಟ್ಟೆಯ ಸೆಳೆತ
· ಆಯಾಸ ಮತ್ತು ತಲೆನೋವು
· ದೃಷ್ಟಿ ತೊಂದರೆಗಳು (ಉದಾಹರಣೆಗೆ, ಮಸುಕಾದ ದೃಷ್ಟಿ)
· ಚರ್ಮದ ದದ್ದು
ಅತಿಯಾದ ವಿಟಮಿನ್ ಇ ಸೇವನೆ (>1,000 ಮಿಗ್ರಾಂ/ ದಿನ) ಪೂರಕಗಳಿಂದ ರಕ್ತಸ್ರಾವದ ಅಪಾಯ ಹೆಚ್ಚಬಹುದು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿ ತೊಂದರೆಯಾಗಬಹುದು. ಅಪರೂಪ ಪ್ರಕರಣಗಳಲ್ಲಿ, ದೀರ್ಘಕಾಲಿಕವಾಗಿ ಹೆಚ್ಚಿನ ಡೋಸ್ ಗಳು ನೀಡುವುದರಿಂದ ಹೆಮಾರಾಜಿತ್ ಸ್ಟ್ರೋಕ್ ಮತ್ತು ಇತರ ಕಾರಣಗಳಿಂದ ಸಾವಿನ ಅಪಾಯವನ್ನು ಹೆಚ್ಚಿಸಬಹುದು. ಶಿಫಾರಸು ಮಾಡಲಾದ ವಿಟಮಿನ್ ಇ ದೈನಂದಿನ ಸೇವನೆಯನ್ನು ಅನುಸರಿಸುವುದು ಮತ್ತು ಪೂರಕಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ.
ನಿಮ್ಮ ಚರ್ಮಕ್ಕೆ ವಿಟಮಿನ್ ಇ ಬಗ್ಗೆ ಆತಂಕಗಳಿದ್ದರೆ ಅಥವಾ ನಿಮ್ಮ ಪೌಷ್ಟಿಕ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಬಯಸಿದರೆ, ಮೆಟ್ರೋಪೊಲಿಸ್ ಹೆಲ್ತ್ ಕೇರ್‌ನ ಸಮಗ್ರ ರೋಗನಿರ್ಣಯ ಸೇವೆಗಳನ್ನು ಪಡೆಯಬಹುದು. ಅನುಭವಿ ಫ್ಲೆಬೊಟೊಮಿಸ್ಟ್ ಗಳ ತಂಡ ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳನ್ನು ಹೊಂದಿರುವ ಮೆಟ್ರೋಪೊಲಿಸ್ ಹೆಲ್ತ್ ಕೇರ್ ಮನೆಯಲ್ಲಿಯೇ ರಕ್ತದ ಮಾದರಿ ಸಂಗ್ರಹಣೆ ಸೌಲಭ್ಯ ಮತ್ತು ವಿಶ್ವಾಸಾರ್ಹ ಪರೀಕ್ಷೆಯನ್ನು ಒದಗಿಸುತ್ತದೆ, ಇದರಿಂದ ನೀವು ನಿಮ್ಮ ಆರೋಗ್ಯವನ್ನು ನಿರ್ವಹಿಸಬಹುದು.
ವಿಟಮಿನ್ ಇಯ ಪ್ರಯೋಜನಗಳು ಮತ್ತು ಉಪಯೋಗಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ವಿಟಮಿನ್ ಇಯ ಉತ್ತಮ ಮೂಲಗಳು ಯಾವುವು?
ಬಾದಾಮಿ, ಹೆಝೆಲ್‌ನಟ್‌ಗಳಂತಹ ಬೀಜಗಳು, ಸೂರ್ಯಕಾಂತಿ ಬೀಜಗಳಂತಹ ಬೀಜಕೋಶಗಳು, ಸೂರ್ಯಕಾಂತಿ ಮತ್ತು ಸನ್ ಫ್ಲವರ್ ಎಣ್ಣೆಗಳಂತಹ ಎಣ್ಣೆಗಳು, ಸೊಪ್ಪು, ಮತ್ತು ಫೋರ್ಟಿಫೈಡ್ ಸಿರಿಯಲ್ ಗಳು.
ವಿಟಮಿನ್ ಇ ಯಾವ ರೂಪಗಳಲ್ಲಿ ಲಭ್ಯವಿದೆ?
ವಿಟಮಿನ್ ಇ ನೈಸರ್ಗಿಕ (ಡಿ-ಆಲ್ಫಾ-ಟೊಕೊಫೆರಾಲ್) ಮತ್ತು ಕೃತಕ (ಡಿಎಲ್-ಆಲ್ಫಾ-ಟೊಕೊಫೆರಾಲ್) ರೂಪಗಳಲ್ಲಿ, ಹಾಗೆಯೇ ಟೊಕೊಟ್ರಿನಾಲ್ ಗಳ ರೂಪದಲ್ಲಿ ಲಭ್ಯವಿದೆ. ಇವು ವಿಟಮಿನ್ ಇ-ಶ್ರೀಮಂತ ಆಹಾರಗಳು ಮತ್ತು ಪೂರಕಗಳಲ್ಲಿ ಕಂಡುಬರುತ್ತವೆ.
ದಿನನಿತ್ಯ ವಿಟಮಿನ್ ಇ ತೆಗೆದುಕೊಂಡರೆ ಏನಾಗುತ್ತದೆ?
ಶಿಫಾರಸು ಮಾಡಲಾದ ದೈನಂದಿನ ವಿಟಮಿನ್ ಇ ಸೇವನೆಯು ರೋಗನಿರೋಧಕ ಕಾರ್ಯವನ್ನು ಬೆಂಬಲಿಸುತ್ತದೆ, ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ, ಮತ್ತು ಚರ್ಮ ಮತ್ತು ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ವಿಟಮಿನ್ ಇ ಅನ್ನು ತುಂಬಾ ತೆಗೆದುಕೊಳ್ಳಬಹುದೇ?
ಹೌದು, ಪೂರಕಗಳಿಂದ ಅತಿಯಾದ ವಿಟಮಿನ್ ಇ ಸೇವನೆಯು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು ಮತ್ತು ಇತರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಆದರೆ, ಆಹಾರದ ಮೂಲಗಳಿಂದ ವಿಟಮಿನ್ ಇ ಟಾಕ್ಸಿಕಿಟಿ ಅತ್ಯಂತ ಅಪರೂಪ.
ವಿಟಮಿನ್ ಇ ಯಾವುದಕ್ಕೆ ಒಳ್ಳೆಯದು?
ವಿಟಮಿನ್ ಇ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು, ಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಮತ್ತು ಆರೋಗ್ಯಕರ ಚರ್ಮ ಮತ್ತು ಕಣ್ಣುಗಳನ್ನು ಉತ್ತೇಜಿಸಲು ಅಗತ್ಯವಾಗಿದೆ.
ಯಾವ ಆಹಾರದಲ್ಲಿ ವಿಟಮಿನ್ ಇ ಅತಿ ಹೆಚ್ಚು?
ಸೂರ್ಯಕಾಂತಿ ಬೀಜಗಳು ಮತ್ತು ಅವುಗಳ ಎಣ್ಣೆ ವಿಟಮಿನ್ ಇಯ ಶ್ರೀಮಂತ ಆಹಾರ ಮೂಲಗಳಲ್ಲಿ ಒಂದಾಗಿದೆ.
ವಿಟಮಿನ್ ಇ ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದೇ?
ವಿಟಮಿನ್ ಇ ಚರ್ಮದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ ಮತ್ತು ಗಾಯದ ಗುಣಪಡಿಸುವಿಕೆಯನ್ನು ಹೆಚ್ಚಿಸಬಹುದು. ಚರ್ಮದ ಆರೋಗ್ಯಕ್ಕಾಗಿ ಅನ್ವಯ ಮಾಡುವುದು ಜನಪ್ರಿಯವಾಗಿದ್ದರೂ, ಕೂದಲಿನ ಪ್ರಯೋಜನಗಳಿಗೆ ವಿಟಮಿನ್ ಇಯ ಉಪಯೋಗಗಳಿಗೆ ಸೀಮಿತ ಪುರಾವೆಗಳು ಮಾತ್ರ ಲಭ್ಯವಿವೆ.
ವಿಟಮಿನ್ ಇ ಕೊರತೆಯಿದೆಯೇ ಎಂದು ಹೇಗೆ ತಿಳಿಯುವುದು?
ವಿಟಮಿನ್ ಇ ಕೊರತೆಯ ಲಕ್ಷಣಗಳು ಸ್ನಾಯು ದೌರ್ಬಲ್ಯ, ದೃಷ್ಟಿ ಸಮಸ್ಯೆಗಳು, ದುರ್ಬಲ ರೋಗನಿರೋಧಕ ಶಕ್ತಿ, ಮತ್ತು ನಡೆಯಲು ತೊಂದರೆ ಇತ್ಯಾದಿ ಒಳಗೊಂಡಿರಬಹುದು. ಕೊರತೆಯು ಅಪರೂಪವಾಗಿದ್ದು, ಕೊಬ್ಬು ಹೀರಿಕೊಳ್ಳುವಿಕೆಯ ತೊಂದರೆಯಿರುವವರಲ್ಲಿ ಮುಖ್ಯವಾಗಿ ಕಂಡುಬರುತ್ತದೆ.
ವಿಟಮಿನ್ ಇ ಯಾವ ರೀತಿಯ ಜನರಿಗೆ ಅಗತ್ಯ?
ಎಲ್ಲರಿಗೂ ಆರೋಗ್ಯಕ್ಕಾಗಿ ವಿಟಮಿನ್ ಇ ಅಗತ್ಯವಾಗಿದೆ, ಆದರೆ ಕೊಬ್ಬು ಹೀರಿಕೊಳ್ಳುವಿಕೆಯ ತೊಂದರೆ ಅಥವಾ ಅಪರೂಪದ ಆನುವಂಶಿಕ ಸಮಸ್ಯೆಗಳಿರುವವರಿಗೆ ಕೊರತೆಯ ಅಪಾಯವು ಅತಿ ಹೆಚ್ಚು.
ವಿಟಮಿನ್ ಇ ಯನ್ನು ಉತ್ತಮ ಹೀರಿಕೊಳ್ಳುವಿಕೆಗಾಗಿ ಯಾವಾಗ ತೆಗೆದುಕೊಳ್ಳಬೇಕು?
ವಿಟಮಿನ್ ಇ ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿರುವುದರಿಂದ, ಕೊಬ್ಬು ಒಳಗೊಂಡಿರುವ ಊಟದೊಂದಿಗೆ ತೆಗೆದುಕೊಳ್ಳುವುದು ಉತ್ತಮ.









