Do you have any queries ?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ಪಿಸಿವಿ ರಕ್ತ ಪರೀಕ್ಷೆ: ರಕ್ತ ಪರೀಕ್ಷೆಯಲ್ಲಿ ಪ್ಯಾಕ್ಡ್ ಸೆಲ್ ವಾಲ್ಯೂಮ್‌ನ ಮಹತ್ವ

Last Updated On: Feb 13 2026

ಪ್ಯಾಕ್ಡ್ ಸೆಲ್ ವಾಲ್ಯೂಮ್ (ಪಿಸಿವಿ) ಎಂದರೇನು?

ಪ್ಯಾಕ್ಡ್ ಸೆಲ್ ವಾಲ್ಯೂಮ್ (ಪಿಸಿವಿ) ಪರೀಕ್ಷೆಯು ಒಂದು ಸಾಮಾನ್ಯ ರಕ್ತ ಪರೀಕ್ಷೆಯಾಗಿದ್ದು, ಇದು ನಿಮ್ಮ ರಕ್ತದ ಮಾದರಿಯಲ್ಲಿ ಕೆಂಪು ರಕ್ತ ಕಣಗಳ ಪ್ರಮಾಣವನ್ನು ಅಳೆಯುತ್ತದೆ. ಈ ಪ್ರಮುಖ ನಿಯತಾಂಕವನ್ನು ವಿಶ್ಲೇಷಿಸುವ ಮೂಲಕ, ವೈದ್ಯಕೀಯ ಸಿಬ್ಬಂದಿಗಳು ನಿಮ್ಮ ರಕ್ತದ ಆಮ್ಲಜನಕ ವಾಹಕ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಬಹುದು. ಅದರಿಂದ ಯಾವುದೋ ಆರೋಗ್ಯ ಸಮಸ್ಯೆ ಅಥವಾ ದೇಹದಲ್ಲಿನ ಅಸಮತೋಲನ ಸೇರಿದಂತೆ ದೇಹದಲ್ಲಿನ ಯಾವುದೇ ಸಂಭಾವ್ಯ ಅಸಹಜತೆಗಳನ್ನು ಕಂಡುಹಿಡಿಯಲು ಸಹಾಯವಾಗುತ್ತದೆ. ಈ ಪರೀಕ್ಷೆಯನ್ನು ಹೆಮಾಟೊಕ್ರಿಟ್ ಪರೀಕ್ಷೆ ಎಂದೂ ಕರೆಯಲಾಗುತ್ತದೆ, ಮತ್ತು ಇದನ್ನು ಡಿಹೈಡ್ರೇಷನ್, ಅನೀಮಿಯಾ, ಅಥವಾ ಪಾಲಿಸಿಥಿಮಿಯಾದಂತಹ ಸಮಸ್ಯೆಗಳನ್ನು ಗುರುತಿಸಲು ಬಳಸಲಾಗುತ್ತದೆ.

ಡಿಹೈಡ್ರೇಷನ್: ದೇಹದಲ್ಲಿ ಕಡಿಮೆ ದ್ರವ ಸೇವನೆ ಅಥವಾ ಅತಿಯಾದ ದ್ರವ ನಷ್ಟವಾದಾಗ ಸಂಭವಿಸುತ್ತದೆ.

ಅನೀಮಿಯಾ: ಕೆಂಪು ರಕ್ತ ಕಣಗಳ ಸಂಖ್ಯೆ ಅಥವಾ ಗಾತ್ರ ಕಡಿಮೆಯಾಗಿರುವುದು ಅಥವಾ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗಿರುವುದು.

·       ಪಾಲಿಸಿಥಿಮಿಯಾ: ಮೂಳೆಮಜ್ಜೆಯಿಂದ ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಅಸಹಜ ಏರಿಕೆಯಾದಾಗ ಸಂಭವಿಸುತ್ತದೆ.

ಆದ್ದರಿಂದ, ಪಿಸಿವಿ ಪರೀಕ್ಷೆಯು ಒಂದು ಸರಳ ಆದರೆ ಶಕ್ತಿಶಾಲಿ ಸಾಧನವಾಗಿದ್ದು, ಇದು ವಿವಿಧ ರಕ್ತ-ಸಂಬಂಧಿತ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಲು ಮತ್ತು ಅದರ ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ, ಅಗತ್ಯವಿರುವಾಗ ಸಕಾಲಿಕ ವೈದ್ಯಕೀಯ ನೆರವು ದೊರಕುವಂತೆ ಮಾಡುತ್ತದೆ.

ಪಿಸಿವಿ ರಕ್ತ ಪರೀಕ್ಷೆಯನ್ನು ಯಾವುದಕ್ಕಾಗಿ ಬಳಸಲಾಗುತ್ತದೆ?

ಪಿಸಿವಿ ರಕ್ತ ಪರೀಕ್ಷೆಯಲ್ಲಿ ರಕ್ತದ ಮಾದರಿಯಲ್ಲಿ ಕೆಂಪು ರಕ್ತ ಕಣಗಳ ಮಟ್ಟವನ್ನು ಅಳೆಯಲಾಗುತ್ತದೆ. ರೋಗಿಯು ಅನೀಮಿಯಾದಿಂದ ಬಳಲುತ್ತಿದ್ದರೆ, ಪಿಸಿವಿ ಮಟ್ಟ ಕಡಿಮೆಯಾಗಿರುತ್ತದೆ, ಇದು ಕೆಂಪು ರಕ್ತ ಕಣಗಳ (ಆರ್ ಬಿ ಸಿ) ಶೇಕಡಾವಾರು ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಆದರೆ, ಪಾಲಿಸಿಥಿಮಿಯಾದ ಸಂದರ್ಭದಲ್ಲಿ, ಪ್ಯಾಕ್ಡ್ ಸೆಲ್ ವಾಲ್ಯೂಮ್ ಹೆಚ್ಚಾಗಿರುತ್ತದೆ. ಈ ಹೆಮಾಟೊಕ್ರಿಟ್ ಪರೀಕ್ಷೆಯು ನಿಮ್ಮ ಆರೋಗ್ಯ ಸಿಬ್ಬಂದಿಗಳಿಗೆ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಯಲು ಅಥವಾ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ವೈದ್ಯಕೀಯ ವೃತ್ತಿಪರರು ಈ ಪರೀಕ್ಷೆಯನ್ನು ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಘಟಕವಾಗಿ ನಡೆಸುತ್ತಾರೆ.

ಪಿಸಿವಿ ರಕ್ತ ಪರೀಕ್ಷೆಯ ಸಮಯದಲ್ಲಿ ಏನಾಗುತ್ತದೆ?

ಪಿಸಿವಿ ಪರೀಕ್ಷೆಯ ವಿಧಾನವು ಸಾಮಾನ್ಯ ರಕ್ತ ಪರೀಕ್ಷೆಯಂತೆಯೇ ಇರುತ್ತದೆ. ಇದಕ್ಕೆ ಉಪವಾಸ ಅಥವಾ ಯಾವುದೇ ಇತರ ತಯಾರಿಯ ಅಗತ್ಯವಿರುವುದಿಲ್ಲ. ಸಾಮಾನ್ಯವಾಗಿ, ವೈದ್ಯಕೀಯ ಸಹಾಯಕರು ನಿಮ್ಮ ತೋಳಿನ ರಕ್ತನಾಳದಿಂದ ರಕ್ತದ ಮಾದರಿಯನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ, ನೀವು ಆ ಪ್ರದೇಶದಲ್ಲಿ ಸ್ವಲ್ಪ ನೋವನ್ನು ಅನುಭವಿಸಬಹುದು. ಆದರೆ, ಪಿಸಿವಿ ಪರೀಕ್ಷೆಗೆ ಯಾವುದೇ ಗಂಭೀರ ಅಪಾಯಗಳಿಲ್ಲ.

ಪ್ರಯೋಗಾಲಯವು ರಕ್ತದ ಮಾದರಿಯ ಮೇಲೆ ನಿರ್ದಿಷ್ಟ ವಿಧಾನಗಳನ್ನು ಬಳಸಿಕೊಂಡು, ಪ್ಲಾಸ್ಮಾ ಮತ್ತು ರಕ್ತ ಕಣಗಳನ್ನು ಬೇರ್ಪಡಿಸುತ್ತದೆ, ತದನಂತರ ನಿಮ್ಮ ರಕ್ತದಲ್ಲಿ ಕೆಂಪು ರಕ್ತ ಕಣಗಳ ಶೇಕಡಾವಾರು ಪ್ರಮಾಣವನ್ನು ನಿರ್ಧರಿಸಲು ಅಳೆಯುತ್ತದೆ.

ಪಿಸಿವಿ ರಕ್ತ ಪರೀಕ್ಷೆಯ ಸಾಮಾನ್ಯ ಶ್ರೇಣಿ ಎಷ್ಟು?

ಪುರುಷರಿಗೆ ಪಿಸಿವಿ ಸಾಮಾನ್ಯ ಶ್ರೇಣಿಯು ಸಾಮಾನ್ಯವಾಗಿ ಶೇ.38.3 ರಿಂದ ಶೇ.48.6 ರವರೆಗೆ ಇರುತ್ತದೆ, ಆದರೆ ಮಹಿಳೆಯರಲ್ಲಿ ಪಿಸಿವಿ ಸಾಮಾನ್ಯ ಶ್ರೇಣಿಯು ಶೇ.35.5 ರಿಂದ ಶೇ.44.9 ರವರೆಗೆ ಇರುತ್ತದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಒಪ್ಪಬಹುದಾದ ಪಿಸಿವಿ ಶ್ರೇಣಿಯು ಶೇ.30 ರಿಂದ ಶೇ.44 ರವರೆಗೆ ಇರಬಹುದು. ಆದರೆ, ವಯಸ್ಸು, ಜನಾಂಗ ಮತ್ತು ಲಿಂಗದಂತಹ ಹಲವಾರು ಅಂಶಗಳು ಪಿಸಿವಿ ರಕ್ತ ಪರೀಕ್ಷೆಯ ಈ ನಿರೀಕ್ಷಿತ ಶ್ರೇಣಿಯ ಮೇಲೆ ಪರಿಣಾಮ ಬೀರಬಹುದು.

ಇದಲ್ಲದೆ, ಕೆಂಪು ರಕ್ತ ಕಣಗಳ ಸಾಮಾನ್ಯ ಶೇಕಡಾವಾರು ವಿವರಣೆಯು ವಿವಿಧ ವೈದ್ಯಕೀಯ ಪದ್ಧತಿಗಳಲ್ಲಿ ಸ್ವಲ್ಪ ಭಿನ್ನವಾಗಿರಬಹುದು. ಏಕೆಂದರೆ, ಪ್ರಯೋಗಾಲಯಗಳು ತಮ್ಮ ನಿರ್ದಿಷ್ಟ ಪ್ರದೇಶದ ಜನಸಂಖ್ಯೆಯ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ಆರೋಗ್ಯಕರ ಶ್ರೇಣಿಯನ್ನು ನಿಗದಿಪಡಿಸುತ್ತವೆ.

ನನಗೆ ಪಿಸಿವಿ ರಕ್ತ ಪರೀಕ್ಷೆ ಏಕೆ ಬೇಕು?

ಪಿಸಿವಿ (ಪ್ಯಾಕ್ಡ್ ಸೆಲ್ ವಾಲ್ಯೂಮ್) ಪರೀಕ್ಷೆಯು ಹಲವಾರು ಕಾರಣಗಳಿಗಾಗಿ ಅತ್ಯಗತ್ಯವಾಗಿದೆ, ಈ ಕಾರಣಗಳಲ್ಲಿ ಈ ಕೆಳಗಿನವು ಸೇರಿವೆ:

·       ಕೆಂಪು ರಕ್ತ ಕಣಗಳ ಪರಿಮಾಣವನ್ನು ಅಳೆಯುವ ಮೂಲಕ ಅನೀಮಿಯಾ, ಪಾಲಿಸಿಥಿಮಿಯಾ, ಅಥವಾ ಡಿಹೈಡ್ರೇಷನ್‌ನಂತಹ ಸಮಸ್ಯೆಗಳನ್ನು ಗುರುತಿಸುವುದು.

·       ಕೆಂಪು ರಕ್ತ ಕಣಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಿಗಿನ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು.

·       ರಕ್ತದ ಚಲನೆ ಸೇರಿದಂತೆ ಇತರ ಪರಿಸ್ಥಿತಿಗಳಲ್ಲಿ ದೇಹದ ಪ್ರತಿಕ್ರಿಯೆಯನ್ನು ಮೌಲ್ಯಮಾಪನ ಮಾಡುವುದು.

·       ಒಟ್ಟಾರೆ ಆರೋಗ್ಯದ ಬಗ್ಗೆ ಒಳನೋಟವನ್ನು ಪಡೆಯುವುದು ಮತ್ತು ಕೆಲವು ವೈದ್ಯಕೀಯ ಸಮಸ್ಯೆಗಳು ಉಂಟಾಗುವ ಸಂಭಾವ್ಯ ಅಪಾಯವನ್ನು ತಿಳಿಯುವುದು.

ಮಹಿಳೆಯರಲ್ಲಿ ಪಿಸಿವಿ ಕಡಿಮೆ ಇರುವುದಕ್ಕೆ ಕಾರಣವೇನು?

ಹದಿಹರೆಯದ ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ರಕ್ತ ಕಣಗಳಲ್ಲಿ ಕಡಿಮೆ ಸರಾಸರಿ ಹಿಮೋಗ್ಲೋಬಿನ್ ಸಾಂದ್ರತೆಯನ್ನು ಹೊಂದಿರುತ್ತಾರೆ. ಇದು ಮಹಿಳೆಯರು ಪಿಸಿವಿ ರಕ್ತ ಪರೀಕ್ಷೆಯಲ್ಲಿ ಕಡಿಮೆ ಮಟ್ಟವನ್ನು ಹೊಂದಲು ಪ್ರಮುಖ ಕಾರಣವಾಗಿದೆ. ಇದಲ್ಲದೆ, ಗರ್ಭಾವಸ್ಥೆಯು ಸಾಮಾನ್ಯವಾಗಿ ರಕ್ತದಲ್ಲಿ ಹೆಚ್ಚುವರಿ ದ್ರವದಿಂದಾಗಿ ಪಿಸಿವಿಯನ್ನು ಸ್ವಲ್ಪ ಕಡಿಮೆಗೊಳಿಸುತ್ತದೆ.

ರಕ್ತ ಪರೀಕ್ಷೆಯಲ್ಲಿ ಕಡಿಮೆ ಪಿಸಿವಿ ಇರುವುದಕ್ಕೆ ಕಾರಣ ಏನು?

ಕಡಿಮೆ ಪಿಸಿವಿ ಮಟ್ಟಗಳನ್ನು ವೈದ್ಯಕೀಯ ಸಿಬ್ಬಂದಿಗಳು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧ ಕಲ್ಪಿಸುತ್ತಾರೆ. ಇದರಲ್ಲಿ ಮೂಳೆಮಜ್ಜೆಯ ಕಾಯಿಲೆಗಳು, ಕ್ಯಾನ್ಸರ್, ಕಿಡ್ನಿ ವೈಫಲ್ಯ, ಥಲಸೀಮಿಯಾ, ಸಿಕಲ್ ಸೆಲ್ ಅನೀಮಿಯಾ, ಮತ್ತು ಆಟೋಇಮ್ಯೂನ್ ಕಾಯಿಲೆಗಳು ಸೇರಿವೆ. ಕಡಿಮೆ ಪಿಸಿವಿ ಹೊಂದಿರುವ ಕೆಲವು ಲಕ್ಷಣಗಳೆಂದರೆ - ಬಿಳಿಚಿಕೊಂಡ ಚರ್ಮದ ಬಣ್ಣ, ದುರ್ಬಲತೆ, ನಿರಂತರ ಆಯಾಸ, ಕಡಿಮೆ ಎನರ್ಜಿ ಲೆವೆಲ್, ಉಸಿರಾಟದ ತೊಂದರೆ, ಅನಿಯಮಿತ ಉಸಿರಾಟದ ಮಾದರಿಗಳು, ಮತ್ತು ಕಾಲು ಅಥವಾ ಕೈಗಳು ಕೋಲ್ಡ್ ಆಗುವುದು. ಇವು ವ್ಯಕ್ತಿಯು ಸಾಮಾನ್ಯಕ್ಕಿಂತ ಕಡಿಮೆ ಪಿಸಿವಿ ಶ್ರೇಣಿಯನ್ನು ಹೊಂದಿರಬಹುದು ಎಂಬುದನ್ನು ಸೂಚಿಸಬಹುದು.

ಪಿಸಿವಿ ರಕ್ತ ಪರೀಕ್ಷೆಯಲ್ಲಿ ಪಿಸಿವಿ ಅನ್ನು ಹೇಗೆ ಹೆಚ್ಚಿಸುವುದು?

ವಿವಿಧ ಜೀವನಶೈಲಿಗಳು ಮತ್ತು ಪ್ರದೇಶವಾರು ಅಂಶಗಳು ವ್ಯಕ್ತಿಯ ಹೆಮಾಟೊಕ್ರಿಟ್ ಮಟ್ಟಕ್ಕೆ ಕೊಡುಗೆ ನೀಡುತ್ತವೆ. ನಿಮ್ಮ ಪಿಸಿವಿ ಪರೀಕ್ಷೆಯ ಮಟ್ಟಗಳು ಕಡಿಮೆ ಶ್ರೇಣಿಯಲ್ಲಿದ್ದರೆ, ಪಿಸಿವಿ ರಕ್ತ ಪರೀಕ್ಷೆಯಲ್ಲಿ ಪಿಸಿವಿ ಅನ್ನು ಹೆಚ್ಚಿಸಲು ಕೆಲವು ವಿಧಾನಗಳು ಇಲ್ಲಿವೆ:

·       ಕಬ್ಬಿಣ, ವಿಟಮಿನ್ ಬಿ-12, ಮತ್ತು ಫೋಲಿಕ್ ಆಸಿಡ್‌ನಂತಹ ಪೂರಕಗಳನ್ನು ಸೇವಿಸುವುದು.

·       ರಕ್ತದ ಕೊಡುವುದು, ಬೋನ್ ಟ್ರಾನ್ಸ್ ಪ್ಲಾಂಟೇಷನ್, ಆಕ್ಸಿಜನ್ ಥೆರಪಿ ಚಿಕಿತ್ಸೆಗಳು ಮತ್ತು ನೋವು ನಿವಾರಕ ಔಷಧಿಗಳ ಬಳಕೆ.

·       ಕಬ್ಬಿಣ, ವಿಟಮಿನ್ ಎ, ವಿಟಮಿನ್ ಬಿ12 ಮತ್ತು ಫೋಲಿಕ್ ಆಸಿಡ್‌ ಸಮೃದ್ಧವಾಗಿರುವ ಆಹಾರ ಉತ್ಪನ್ನಗಳನ್ನು ಸೇರಿಸಿಕೊಳ್ಳಿ. ಡೈರಿ ಉತ್ಪನ್ನಗಳು, ಹಸಿರು ಎಲೆಯ ತರಕಾರಿಗಳು, ಬೀಜಗಳು, ಚಾಕೊಲೇಟ್‌ಗಳು, ಧಾನ್ಯಗಳು ಇತ್ಯಾದಿಗಳನ್ನು ತಿನ್ನಿರಿ.

·       ಸಾಕಷ್ಟು ಹೈಡ್ರೇಟೆಡ್ ಆಗಿರಿ, ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳಿ ಮತ್ತು ಮದ್ಯ ಸೇವನೆಯನ್ನು ಕಡಿಮೆ ಮಾಡಿ.

ಕೊನೆಯ ಮಾತು

ಕಡಿಮೆ ಪ್ಯಾಕ್ಡ್ ಸೆಲ್ ವಾಲ್ಯೂಮ್ (ಪಿಸಿವಿ) ಸಮಸ್ಯೆ ಪರಿಹಾರಕ್ಕೆ ಪೂರಕಗಳ ಬಳಕೆಯಿಂದ ಹಿಡಿದು ಹೆಚ್ಚು ತೀವ್ರವಾದ ಚಿಕಿತ್ಸೆಗಳನ್ನು ಪರಿಗಣಿಸುವವರೆಗೆ ಹಲವಾರು ವಿಧಾನವನ್ನು ಒಳಗೊಂಡಿರುತ್ತದೆ. ಈ ಕ್ರಮಗಳು ರಕ್ತದ ಆರೋಗ್ಯವನ್ನು ಪುನಃಸ್ಥಾಪಿಸಲು ಮತ್ತು ಕಾಪಾಡಿಕೊಳ್ಳಲು ಮಹತ್ವದ್ದಾಗಿವೆ. ನಿಮ್ಮ ಪಿಸಿವಿ ಪರೀಕ್ಷೆಗಳನ್ನು ಮಾಡಲು ವಿಶ್ವಾಸಾರ್ಹ ಮೂಲವನ್ನು ಹುಡುಕುತ್ತಿದ್ದರೆ, ಮೆಟ್ರೊಪೊಲಿಸ್ ಹೆಲ್ತ್‌ ಕೇರ್‌ ಅನ್ನು ಬಳಸಿ. ಇಲ್ಲಿ ಹೆಚ್ಚಿನ ಸೌಕರ್ಯಕ್ಕಾಗಿ ತಜ್ಞ ತಂತ್ರಜ್ಞರನ್ನು ನಿಮ್ಮ ಮನೆಗೆ ಕರೆಯಬಹುದು. ಬಳಕೆದಾರ ಸ್ನೇಹಿ ಮೆಟ್ರೊಪೊಲಿಸ್ ಟ್ರೂಹೆಲ್ತ್ ಆಪ್‌ ನೊಂದಿಗೆ ನಿಮ್ಮ ವರದಿಗಳನ್ನು ಸುಲಭವಾಗಿ ಪಡೆಯಬಹುದು ಮತ್ತು ನಿಮ್ಮ ಆರೋಗ್ಯದ ಒಳನೋಟಗಳನ್ನು ತ್ವರಿತವಾಗಿ ತಿಳಿಯಬಹುದು.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More