Do you have any queries ?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ಮೋನೊಸೈಟ್‌ಗಳು ಎಂದರೇನು, ಅವುಗಳ ಹೈಲೆವೆಲ್ ಮತ್ತು ಲೋಲೆವೆಲ್ ಏನನ್ನು ಸೂಚಿಸುತ್ತವೆ

Last Updated On: Feb 13 2026

ಮೋನೊಸೈಟ್ಗಳು ಎಂದರೇನು

ಮೋನೊಸೈಟ್‌ಗಳು ಬಿಳಿ ರಕ್ತ ಕಣಗಳಾಗಿದ್ದು, ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು, ಪ್ರೊಟೊಜೋವಾ ಮುಂತಾದ ಕೀಟಾಣುಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಿ ಅವುಗಳನ್ನು ನಾಶಪಡಿಸುವುದು ಇವುಗಳ ಪ್ರಾಥಮಿಕ ಕೆಲಸವಾಗಿದೆ. ಮೋನೊಸೈಟ್‌ಗಳು ಗಾಯವನ್ನು ಗುಣಪಡಿಸಲು ಮತ್ತು ಸೋಂಕನ್ನು ತಡೆಯಲು ಇತರ ಬಿಳಿ ರಕ್ತ ಕಣಗಳನ್ನು ಕರೆಯುತ್ತವೆ. ಆದ್ದರಿಂದ, ನಮ್ಮನ್ನು ಆರೋಗ್ಯವಾಗಿಡುವಲ್ಲಿ ಮೋನೊಸೈಟ್‌ಗಳ ಪಾತ್ರ ಮಹತ್ವದ್ದಾಗಿದೆ.

ಮೋನೊಸೈಟ್ಗಳು ಏನು ಮಾಡುತ್ತವೆ?

ಮೋನೊಸೈಟ್‌ಗಳಂತಹ ಬಿಳಿ ರಕ್ತ ಕಣಗಳು ರೋಗನಿರೋಧಕ ವ್ಯವಸ್ಥೆಗೆ ಅತ್ಯಗತ್ಯವಾಗಿದ್ದು, ಇವು ದೇಹವನ್ನು ರೋಗಗಳು ಮತ್ತು ಇತರ ಅನಗತ್ಯ ಸೋಂಕುಗಳಿಂದ ರಕ್ಷಿಸುತ್ತವೆ. ಮೋನೊಸೈಟ್‌ಗಳು ಸೈಟೊಕೈನ್‌ಗಳೆಂಬ ರಾಸಾಯನಿಕಗಳನ್ನು ಉತ್ಪಾದಿಸುವ ಮೂಲಕ ರಕ್ಷಣಾ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಡುತ್ತವೆ. ಈ ಸೈಟೊಕೈನ್‌ಗಳು ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಇವು ಇತರ ರೋಗನಿರೋಧಕ ಕಣಗಳ ಚಟುವಟಿಕೆಯ ಮೇಲೆ ಪರಿಣಾಮ ಬೀರಿ, ಉರಿಯೂತ ಮತ್ತು ರೋಗನಿರೋಧಕ ರಕ್ಷಣೆಯ ಒಟ್ಟಾರೆ ಸಮತೋಲನವನ್ನು ಕಾಪಾಡುತ್ತವೆ.

ಮೋನೊಸೈಟ್‌ಗಳ ಜೀವನ ಚಕ್ರವು ಮೂಳೆ ಮಜ್ಜೆಯಲ್ಲಿ ಆರಂಭವಾಗುತ್ತದೆ. ಅವು ಅಲ್ಲಿ ಬೆಳೆಯುತ್ತವೆ ಮತ್ತು ನಮ್ಮ ದೇಹವನ್ನು ರಕ್ಷಿಸಲು ತರಬೇತಿಯನ್ನು ಪಡೆಯುತ್ತವೆ. ಸಾಕಷ್ಟು ಪಕ್ವವಾದ ನಂತರ, ಅವು ರಕ್ತಪ್ರವಾಹ ಮತ್ತು ಅಂಗಾಂಶಗಳಿಗೆ ಪ್ರವೇಶಿಸಿ ಕೀಟಾಣುಗಳ ವಿರುದ್ಧ ಹೋರಾಡುತ್ತವೆ.

ಡೆಂಡ್ರಿಟಿಕ್ ಕಣಗಳು ಏನು ಮಾಡುತ್ತವೆ?

ಡೆಂಡ್ರಿಟಿಕ್ ಕಣಗಳು ಆಂಟಿಜೆನ್-ಪ್ರಸ್ತುತಪಡಿಸುವ ಕಣಗಳಾಗಿವೆ. ಈ ಕಣಗಳು ಸೋಂಕಿನ ವಿರುದ್ಧ ಹೋರಾಡಲು ಇತರ ದೇಹದ ಕಣಗಳಿಗೆ ಎಚ್ಚರಿಕೆಯ ಸಂಕೇತಗಳನ್ನು ಕಳುಹಿಸುತ್ತವೆ. ಡೆಂಡ್ರಿಟಿಕ್ ಕಣಗಳು ಚರ್ಮದ ಕೆಳಗಿನ ಮೇಲ್ಮೈ ಅಂಗಾಂಶಗಳಲ್ಲಿ ಮತ್ತು ಶ್ವಾಸಕೋಶ, ಮೂಗು, ಹೊಟ್ಟೆ ಮತ್ತು ಕರುಳಿನ ಒಳಪದರದ ಕೆಳಗೆ ಇರುತ್ತವೆ. ಕೀಟಾಣುಗಳ ದಾಳಿಯ ಸಮಯದಲ್ಲಿ, ಡೆಂಡ್ರಿಟಿಕ್ ಕಣಗಳು ದಾಳಿಮಾಡುವ ಕೀಟಾಣುಗಳ ಆಂಟಿಜೆನ್‌ಗಳನ್ನು ಸಂಗ್ರಹಿಸುತ್ತವೆ ಮತ್ತು ಸೈಟೊಕೈನ್‌ಗಳೆಂಬ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತವೆ. ಈ ಪ್ರಕ್ರಿಯೆಯು ಇತರ ಬಿಳಿ ರಕ್ತ ಕಣಗಳಿಗೆ ಸೋಂಕಿನ ಸ್ಥಳಕ್ಕೆ ತಲುಪಿ ಆಕ್ರಮಣಕಾರಿಯನ್ನು ನಾಶಪಡಿಸಲು ಸಂಕೇತಗಳನ್ನು ಕಳುಹಿಸುತ್ತದೆ.

ಆದ್ದರಿಂದ, ಡೆಂಡ್ರಿಟಿಕ್ ಕಣಗಳನ್ನು ನಮ್ಮ ದೇಹದ ಅಗ್ನಿಶಾಮಕ ದಳದ ಕರೆ ಕೇಂದ್ರವೆಂದು ಕರೆಯಬಹುದು.

ಮ್ಯಾಕ್ರೋಫೇಜ್ಗಳು ಏನು ಮಾಡುತ್ತವೆ?

ಮ್ಯಾಕ್ರೋಫೇಜ್‌ಗಳು ನಮ್ಮ ದೇಹದಲ್ಲಿನ ಅಗ್ನಿ ದಳ ಮುಂಚೂಣಿಯಲ್ಲಿರುತ್ತವೆ. ಇವು ವೈರಸ್‌ಗಳು, ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ಪ್ರೊಟೊಜೋವಾದಂತಹ ಕೀಟಾಣುಗಳಿಂದ ದೇಹವನ್ನು ರಕ್ಷಿಸುತ್ತವೆ. ಮ್ಯಾಕ್ರೋಫೇಜ್‌ಗಳು ಕೀಟಾಣುಗಳನ್ನು ಸುತ್ತುವರಿಯುತ್ತವೆ ಮತ್ತು ಕಣದೊಳಗಿನ ವಿಷಕಾರಿ ಕಿಣ್ವಗಳಿಂದ ಅವುಗಳನ್ನು ಕೊಲ್ಲುತ್ತವೆ.

ಮೋನೊಸೈಟ್ಗಳು ಹೇಗೆ ಕಾಣುತ್ತವೆ?

ಮೋನೊಸೈಟ್‌ಗಳು ಬಿಳಿ ರಕ್ತ ಕಣಗಳಲ್ಲಿ ಅತ್ಯಂತ ದೊಡ್ಡದಾಗಿದ್ದು, ಇವು ಕೆಂಪು ರಕ್ತ ಕಣಗಳಿಗಿಂತ ಸುಮಾರು ಎರಡು ಪಟ್ಟು ದೊಡ್ಡದಾಗಿರುತ್ತವೆ. ಇವುಗಳ ದೊಡ್ಡ ಗಾತ್ರದಿಂದಾಗಿ, ಇವುಗಳನ್ನು ಮೈಕ್ರೋಸ್ಕೋಪ್‌ನಡಿಯಲ್ಲಿ ಸುಲಭವಾಗಿ ಗುರುತಿಸಬಹುದು. ಮೋನೊಸೈಟ್‌ಗಳು ಎರಡು-ದೇಹದ ನ್ಯೂಕ್ಲಿಯಸ್‌ ಅನ್ನು ಹೊಂದಿದ್ದು, ಇದು ಸೈಟೋಪ್ಲಾಸಂ ಎಂಬ ದ್ರವದಲ್ಲಿ ತೇಲಾಡುತ್ತಿರುತ್ತದೆ.

ಮೈಕ್ರೋಸ್ಕೋಪ್‌ನಡಿಯಲ್ಲಿ ಮೋನೊಸೈಟ್‌ಗಳನ್ನು ಗಮನಿಸುವಾಗ, ಲ್ಯಾಬ್ ತಂತ್ರಜ್ಞರು ಉತ್ತಮ ಗೋಚರತೆಗಾಗಿ ಬಣ್ಣವನ್ನು ಸೇರಿಸುತ್ತಾರೆ. ಬಣ್ಣವನ್ನು ಸೇರಿಸುವುದರಿಂದ ಕಣಗಳ ಬಣ್ಣವು ತಿಳಿಯಿಂದ ಗಾಢ ನೀಲಿ ಮತ್ತು ನೇರಳೆ ಬಣ್ಣಕ್ಕೆ ಬದಲಾಗುತ್ತದೆ. ಸೈಟೋಪ್ಲಾಸಂನ ಒಳಗೆ, ತಿಳಿ ನೇರಳೆ ಬಣ್ಣದ ಸಣ್ಣ ಗ್ರಾನ್ಯೂಲ್‌ಗಳಿರುತ್ತವೆ. ಕಣಗಳು ದೇಹದಾದ್ಯಂತ ಚಲಿಸುವಾಗ ನ್ಯೂಕ್ಲಿಯಸ್‌ನ ಆಕಾರವು ಬದಲಾಗುತ್ತದೆ. ಮೋನೊಸೈಟ್‌ನ ನ್ಯೂಕ್ಲಿಯಸ್ ಕಣದ ಕೇಂದ್ರದಲ್ಲಿ ಗಾಢ ನೇರಳೆ ಬಣ್ಣದಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಕೆಳಗೆ ತಿಳಿಸಿದ ಆಕಾರಗಳಲ್ಲಿ ಕಾಣಿಸಿಕೊಳ್ಳಬಹುದು:

• ಕುದುರೆ ಗೊರಸಿನ ಆಕಾರ
 • ಕಿಡ್ನಿ ಬೀಜದ ಗುಂಡಿಯಂತೆ
 • ಒಂದು ಬದಿಗೆ ಒರಗಿದ ವೃತ್ತದಂತೆ
 • ಅರ್ಧ ವೃತ್ತಾಕಾರ

ಮೋನೊಸೈಟ್ಗಳು ಎಲ್ಲಿ ಕಂಡುಬರುತ್ತವೆ?

ಮೋನೊಸೈಟ್‌ಗಳು ನಮ್ಮ ಮೂಳೆ ಮಜ್ಜೆಯಲ್ಲಿ ರೂಪುಗೊಳ್ಳುತ್ತವೆ. ಒಮ್ಮೆ ಅವು ಪಕ್ವವಾದ ನಂತರ, ಅವು ಇತರ ರೋಗನಿರೋಧಕ ವ್ಯವಸ್ಥೆಯ ಕಣಗಳೊಂದಿಗೆ ದೇಹದ ಸೋಂಕಿನ ವಿರುದ್ಧ ಹೋರಾಡಲು ಅಂಗಾಂಶಗಳಿಗೆ ಪ್ರಯಾಣಿಸುತ್ತವೆ.

ಮೋನೊಸೈಟ್ಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ರೋಗಗಳು ಯಾವುವು?

ನಮ್ಮ ದೇಹದಲ್ಲಿ ಇರುವ ಮೋನೊಸೈಟ್‌ ಮಟ್ಟದ ಆಧಾರದ ಮೇಲೆ ಪರಿಣಾಮ ತಿಳಿಯಬಹುದು. ಕೆಲವೊಮ್ಮೆ ಮೋನೊಸೈಟ್ ಮಟ್ಟವು ತುಂಬಾ ಹೆಚ್ಚಾಗಿರಬಹುದು ಅಥವಾ ಕಡಿಮೆಯಾಗಿರಬಹುದು, ಏಕೆಂದರೆ ನಮ್ಮ ದೇಹವು ಸೋಂಕು ಅಥವಾ ರೋಗದ ವಿರುದ್ಧ ಹೋರಾಡುತ್ತಿರುತ್ತದೆ.

 ಮೋನೊಸೈಟೊಸಿಸ್

ಇದು ಮೋನೊಸೈಟ್‌ಗಳ ಉನ್ನತ ಮಟ್ಟದಿಂದಾಗಿ ಉಂಟಾಗುತ್ತದೆ. ನಿಮ್ಮ ದೇಹವು ದೀರ್ಘಕಾಲಿಕ ಸೋಂಕು ಅಥವಾ ರೋಗವನ್ನು ಎದುರಿಸುವಾಗ ಮೋನೊಸೈಟ್‌ಗಳು ಹೆಚ್ಚಾಗುತ್ತವೆ. ಮೋನೊಸೈಟೊಸಿಸ್‌ಗೆ ಈ ಕೆಳಗಿನವು ಪ್ರಾಥಮಿಕ ಕಾರಣಗಳಾಗಿವೆ:

 • ರಕ್ತದ ಕಾಯಿಲೆಗಳು
 • ಆಟೋಇಮ್ಯೂನ್ ರೋಗ
 • ಉರಿಯೂತ ಕಾಯಿಲೆ
 • ಹೃದಯ ರೋಗ ಇತ್ಯಾದಿ

ಮೋನೊಸೈಟೊಪೀನಿಯಾ

ಮಾನೊಸೈಟೊಪೀನಿಯಾ ಎಂಬುದು ಮಾನೊಸೈಟ್ ಮಟ್ಟ ಕಡಿಮೆಯಾಗಿರುವ ಸ್ಥಿತಿಯಾಗಿದೆ. ಇದು ಬಿಳಿ ರಕ್ತ ಕಣಗಳ ಸಂಖ್ಯೆಯ ಕಡಿತದಿಂದಾಗಿ ಉಂಟಾಗುತ್ತದೆ. ಮಾನೊಸೈಟೊಪೀನಿಯಾಕ್ಕೆ ಪ್ರಾಥಮಿಕ ಕಾರಣಗಳು ಹೀಗಿವೆ:

 • ರಕ್ತದ ಸೋಂಕು
 • ಸುಟ್ಟ ಗಾಯಗಳು
 • ಎಚ್ಐವಿ
 • ಕೀಮೋಥೆರಪಿ ರಿಯಾಕ್ಷನ್

ಮಾನೊಸೈಟ್ ಮಟ್ಟದ ಸಾಮಾನ್ಯ ಶ್ರೇಣಿ ಎಷ್ಟು?

ಆರೋಗ್ಯಕರ ಮೋನೊಸೈಟ್ ಮಟ್ಟದ ಸಾಮಾನ್ಯ ಶ್ರೇಣಿಯು ನಿಮ್ಮ ಬಿಳಿ ರಕ್ತ ಕಣ ಗಣನೆಯ ಶೇ.2 ರಿಂದ ಶೇ.8ರ ನಡುವೆ ಇರುತ್ತದೆ. ಇದು ಆರೋಗ್ಯವಂತ ವಯಸ್ಕರಲ್ಲಿ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 200 ರಿಂದ 800 ಮೋನೊಸೈಟ್‌ಗಳಿಗೆ ಸಮನಾಗಿರುತ್ತದೆ. ನಿಮ್ಮ ಮೋನೊಸೈಟ್ ಮಟ್ಟವು ಈ ಶ್ರೇಣಿಯಿಂದ ಹೊರಗಿರುವುದಾದರೆ, ಮೋನೊಸೈಟ್‌ಗೆ ಸಂಬಂಧಿಸಿದ ಸಮಸ್ಯೆಗಳಾದ ಹೈ ಮೋನೊಸೈಟ್ಸ್ ಮತ್ತು ಲೋ ಮೋನೋಸೈಟ್ಸ್ ಅಪಾಯಕ್ಕೆ ಒಳಗಾಗುತ್ತೀರಿ.

ಮೋನೊಸೈಟ್ಗಳ ಆರೋಗ್ಯವನ್ನು ಪರಿಶೀಲಿಸಲು ಸಾಮಾನ್ಯ ಪರೀಕ್ಷೆಗಳು ಯಾವುವು?

ರಕ್ತ ಪರೀಕ್ಷೆಗಳ ಮೂಲಕ ನೀವು ನಿಮ್ಮ ಮೋನೊಸೈಟ್‌ಗಳ ಆರೋಗ್ಯವನ್ನು ತಿಳಿಯಬಹುದು. ನಿಮ್ಮ ದೇಹದಲ್ಲಿ ಮಾನೊಸೈಟ್ ಕಣಗಳ ಮಟ್ಟವನ್ನು ಪತ್ತೆ ಹಚ್ಚಲು ಎರಡು ಪರೀಕ್ಷೆಗಳಿವೆ.

ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ): ಈ ಪರೀಕ್ಷೆಯಲ್ಲಿ, ಸಂಬಂಧಿಸಿದ ವೈದ್ಯಕೀಯ ಸಿಬ್ಬಂದಿಗಳು ನಿಮ್ಮ ರಕ್ತನಾಳದಿಂದ ರಕ್ತದ ಮಾದರಿಯನ್ನು ತೆಗೆದುಕೊಂಡು, ರಕ್ತ ಕಣಗಳನ್ನು ಎಣಿಕೆ ಮಾಡುವ ಮೂಲಕ ವಿವಿಧ ಸಮಸ್ಯೆಗಳು ಮತ್ತು ಸೋಂಕುಗಳನ್ನು ಗುರುತಿಸುತ್ತಾರೆ. ಮೋನೊಸೈಟ್‌ಗಳು ಬಿಳಿ ರಕ್ತ ಕಣಗಳಾಗಿರುವುದರಿಂದ, ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಮಾಡುವುದರಿಂದ ಹೆಚ್ಚು ತಿಳಿಯಲು ಸಹಾಯ ಆಗುತ್ತದೆ. ಈ ಪರೀಕ್ಷೆಯು ನಿಮ್ಮ ರಕ್ತದಲ್ಲಿ ಐದು ರೀತಿಯ ಬಿಳಿ ರಕ್ತ ಕಣಗಳನ್ನು ಎಣಿಕೆ ಮಾಡುತ್ತದೆ ಮತ್ತು ಮೋನೊಸೈಟ್‌ಗಳ ಸಾಮಾನ್ಯ ಶ್ರೇಣಿಯನ್ನು, ತುಂಬಾ ಕಡಿಮೆ ಅಥವಾ ತುಂಬಾ ಉನ್ನತ (ಅಂದರೆ ಉನ್ನತ-ಮಟ್ಟದ ಮೋನೊಸೈಟ್‌ಗಳು) ಶ್ರೇಣಿ ಇರುವುದನ್ನು ತಿಳಿಸುತ್ತದೆ.

ಸಂಪೂರ್ಣ ಮೋನೊಸೈಟ್ ಕೌಂಟ್ ಮಾಡುವ ಮೂಲಕ ನಿಮ್ಮ ರಕ್ತದ ಮಾದರಿಯಲ್ಲಿ ಎಷ್ಟು ಮೋನೊಸೈಟ್‌ಗಳಿವೆ ಎಂಬುದನ್ನು ನಿರ್ಧರಿಸಬಹುದು. ಕಂಪ್ಲೀಟ್ ಬ್ಲಡ್ ಕೌಂಟ್ ನಲ್ಲಿ ಕಂಡುಬರುವ ಮೋನೊಸೈಟ್‌ಗಳ ಶೇಕಡಾವಾರು ಪ್ರಮಾಣವನ್ನು ಅದೇ ಮಾದರಿಯಲ್ಲಿ ಒಟ್ಟು ಬಿಳಿ ರಕ್ತ ಕಣಗಳ ಗಣನೆಯಿಂದ ಗುಣಿಸುವ ಮೂಲಕ ಸಂಪೂರ್ಣ ಮೋನೊಸೈಟ್ ಕೌಂಟ್ ಅನ್ನು ನಿರ್ಧರಿಸಲಾಗುತ್ತದೆ. ಫಲಿತಾಂಶವು ಮತ್ತೆ ಸಾಮಾನ್ಯ, ಹೈ ಅಥವಾ ಲೋ ಮೋನೊಸೈಟ್‌ ಇರುವುದನ್ನು ನಿರ್ಧರಿಸುತ್ತದೆ.

ಮೋನೊಸೈಟ್ ಸಮಸ್ಯೆಗಳ ಸಾಮಾನ್ಯ ಲಕ್ಷಣಗಳು ಯಾವುವು?

ಹೈ ಮೋನೊಸೈಟ್‌ ಅಥವಾ ಲೋ ಮೋನೊಸೈಟ್‌ ಇದ್ದ ಸಂದರ್ಭದಲ್ಲಿ, ಕೌಂಟ್ ಮಾಡುವಾಗ ಯಾವುದೇ ಹೈ ಅಥವಾ ಲೋ ಮೋನೋಸೈಟ್ಸ್ ಇರುವ ಲಕ್ಷಣಗಳು ಕಾಣುವುದಿಲ್ಲ. ಯಾಕೆಂದರೆ ನೀವು ಅನುಭವಿಸಬಹುದಾದ ಲಕ್ಷಣಗಳು ಅನುಭವಿಸುತ್ತಿರುವ ಸೋಂಕಿನ

ದುಷ್ಪರಿಣಾಮಗಳಾಗಿರುತ್ತವೆ, ಇದು ನಿಮ್ಮ ಮೋನೊಸೈಟ್ ಕೌಂಟ್ ಅನ್ನು ಅಸಹಜಗೊಳಿಸುತ್ತದೆ. ಕೌಂಟ್ ಅನ್ನು ತಪ್ಪಾಗಿ ತೋರಿಸುವ ಸೋಂಕುಗಳು ಹೀಗಿವೆ:

• ಊತ
 • ಹೊಟ್ಟೆಯ ನೋವು

ಮೋನೊಸೈಟ್ ಸಮಸ್ಯೆಗಳಿಗೆ ಸಾಮಾನ್ಯ ಚಿಕಿತ್ಸೆಗಳು ಯಾವುವು?

ಚಿಕಿತ್ಸೆಯು ನಿಮ್ಮ ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಇದು ನಿಮ್ಮ ಆಹಾರ ಯೋಜನೆಯನ್ನು ಬದಲಾಯಿಸುವಷ್ಟು ಸರಳವಾಗಿರಬಹುದು ಅಥವಾ ಕೀಮೋಥೆರಪಿಯ ಮೂಲಕ ಸಮಸ್ಯೆಯನ್ನು ಗುಣಪಡಿಸುವಷ್ಟು ಸಂಕೀರ್ಣವಾಗಿರಬಹುದು. ನಿಮ್ಮ ರೋಗನಿರ್ಣಯ ಮತ್ತು ತೀವ್ರತೆಯ ಮಟ್ಟವನ್ನು ಆಧರಿಸಿ, ನಿಮ್ಮ ವೈದ್ಯಕೀಯ ಸೇವೆ ಒದಗಿಸುವವರು ಚಿಕಿತ್ಸೆಯ ಆಯ್ಕೆಗಳನ್ನು ಸೂಚಿಸುತ್ತಾರೆ.

ನನ್ನ ಹೈ ಮೋನೊಸೈಟ್ ಮಟ್ಟವನ್ನು ಹೇಗೆ ಕಡಿಮೆ ಮಾಡುವುದು?

ಕೆಳಗೆ ತಿಳಿಸಿದ ಚಿಕಿತ್ಸೆಯು ನಿಮ್ಮ ಮೋನೊಸೈಟ್ ಕೌಂಟ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ:

 • ಕೆಂಪು ಮಾಂಸ, ಸಂಸ್ಕರಿತ ಕಾರ್ಬೋಹೈಡ್ರೇಟ್‌ಗಳು ಅಥವಾ ಫ್ರೈ ಮಾಡಿದ ತಿನಿಸುಗಳಂತಹ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಇಂತಹ ಆಹಾರಗಳು ಉರಿಯೂತವನ್ನು ಉಂಟುಮಾಡುತ್ತವೆ, ಇದು ನಿಮ್ಮ ಮೋನೊಸೈಟ್ ಕೌಂಟ್ ಮೇಲೆ ಪರಿಣಾಮ ಬೀರಬಹುದು.
 • ನಿಯಮಿತವಾಗಿ ವ್ಯಾಯಾಮ ಮಾಡಿ.
 • ಮದ್ಯಪಾನವನ್ನು ಮಿತಗೊಳಿಸಿ.

ನನ್ನ ಲೋ ಮೋನೊಸೈಟ್ ಮಟ್ಟವನ್ನು ಹೇಗೆ ಹೆಚ್ಚಿಸುವುದು?

ಕೆಳಗಿನ ವಿಧಾನಗಳು ನಿಮ್ಮ ಕಡಿಮೆ ಮೋನೊಸೈಟ್ ಕೌಂಟ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ:

 • ಬಿ12, ಸಿ ಮತ್ತು ಡಿಯಂತಹ ವಿಟಮಿನ್ ಪೂರಕಗಳ ಮೂಲಕ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ.
 • ಕಾರಣವಾಗಿರುವ ಸೋಂಕಿಗೆ ಚಿಕಿತ್ಸೆ ಮಾಡಿ.
 • ನಿಮ್ಮ ಆರೋಗ್ಯ ಪಾಲಕರೊಂದಿಗೆ ಚರ್ಚಿಸಿ ಮತ್ತು ಮೋನೊಸೈಟ್ ಕೌಂಟ್ ಅನ್ನು ಕಡಿಮೆ ಮಾಡಿರಬಹುದಾದ ಔಷಧಿಗಳ ಡೋಸ್ ಅಥವಾ ಸಮಯವನ್ನು ಬದಲಾಯಿಸಿ

ನನ್ನ ಮೋನೊಸೈಟ್ಗಳನ್ನು ಹೇಗೆ ಆರೋಗ್ಯವಾಗಿಡುವುದು?

ನೀವು ನಿಮ್ಮ ಮೋನೊಸೈಟ್ ಕೌಂಟ್ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಬಹುದು:

 • ಸಮತೋಲಿತ ಡಯಟ್ ಆಹಾರ ತಿನ್ನುವುದರೊಂದಿಗೆ ನಿಯಮಿತ ವ್ಯಾಯಾಮ ಮಾಡುವುದು.
 • ಒತ್ತಡವನ್ನು ಕಡಿಮೆ ಮಾಡುವುದು.
 • ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಉತ್ತಮ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು.

ಕೊನೆಯ ಮಾತು

ಮೋನೊಸೈಟ್‌ಗಳು ನಿಮ್ಮ ದೇಹದ ಅಗ್ನಿಶಾಮಕ ದಳದಂತೆ, ದೇಹದಲ್ಲಿ ಕೀಟಾಣುಗಳ ಹರಡುವಿಕೆಯನ್ನು ತಡೆಯುತ್ತವೆ. ಹಾಗಾಗಿ ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಮೋನೊಸೈಟ್‌ಗಳನ್ನು ಆರೋಗ್ಯವಾಗಿಡಿ. ನಿಮ್ಮ ಮೋನೊಸೈಟ್ ಕೌಂಟ್ ಅನ್ನು ತಿಳಿಯಲು ಮೆಟ್ರೋಪೊಲಿಸ್‌ ನಲ್ಲಿ ರಕ್ತ ಪರೀಕ್ಷೆಗೆ ಸಮಯವನ್ನು ಬುಕ್ ಮಾಡಿ. ಈ ಲ್ಯಾಬ್ ತನ್ನ ನಿಖರವಾದ ಫಲಿತಾಂಶಗಳಿಗೆ ಹೆಸರುವಾಸಿಯಾಗಿದೆ, ಇಲ್ಲಿ ನೀವು ನಿಮ್ಮ ಮನೆಯಿಂದಲೇ ರಕ್ತದ ಮಾದರಿಗಳನ್ನು ಒದಗಿಸುವ ಸೌಲಭ್ಯವನ್ನು ಪಡೆಯಬಹುದು. ಈ ಪರೀಕ್ಷೆಯು ಹೈ ಅಥವಾ ಲೋ ಮೋನೊಸೈಟ್‌ಗಳ ಬಗ್ಗೆ ನಿಖರವಾಗಿ ತಿಳಿಸುತ್ತದೆ.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More