Do you have any queries ?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ಆಂಟೀರಿಯರ್ ವರ್ಸಸ್ ಪೋಸ್ಟೀರಿಯರ್ ಪ್ಲೆಸೆಂಟಾ: ಈ ಎರಡೂ ಒಂದೆಯೇ ಅಥವಾ ಬೇರೆ ಬೇರೆಯೇ?

Last Updated On: Feb 13 2026

ಗರ್ಭಿಣಿಯಾದ ಹೊತ್ತಿನಲ್ಲಿ ಮಾಡುವ ಪ್ರತೀ ಸ್ಕ್ಯಾನ್ ಮತ್ತು ವರದಿ ಕೂಡ ಸ್ವಲ್ಪ ಗೊಂದಲ ಉಂಟುಮಾಡಬಲ್ಲದು. ಅದರಲ್ಲೂ ಸಾಮಾನ್ಯವಾಗಿ ನಿಮ್ಮ ವೈದ್ಯರು ಗರ್ಭಾವಸ್ಥೆಯಲ್ಲಿ ಪ್ಲೆಸೆಂಟಾದ ಸ್ಥಾನ ತಿಳಿಸಲು ಒಂದು ಪದ ಬಳಸುತ್ತಾರೆ. ಅದೇನೆಂದರೆ ಆಂಟೀರಿಯರ್ ಪ್ಲೆಸೆಂಟಾ ಅಥವಾ ಪೋಸ್ಟೀರಿಯರ್ ಪ್ಲೆಸೆಂಟಾ ಎಂಬುದು. ಇದರ ಅರ್ಥವೇನು ಮತ್ತು ಇದು ಗರ್ಭಾವಸ್ಥೆಗೆ ಹೇಗೆ ಪರಿಣಾಮ ಬೀರುತ್ತದೆ ಎಂದು ಬಹಳ ಮಂದಿ ಪ್ರಶ್ನೆ ಮಾಡುತ್ತಾರೆ. ಆ ಕುರಿತು ಇಲ್ಲಿ ತಿಳಿಯೋಣ.

ಪ್ಲೆಸೆಂಟಾ ಎಂದರೆ ಗರ್ಭಾವಸ್ಥೆಯಲ್ಲಿ ಗರ್ಭಾಶಯದಲ್ಲಿ ರೂಪುಗೊಳ್ಳುವ ಒಂದು ಅಂಗ, ಇದನ್ನು ಗರ್ಭಕೋಶ ಎಂದೂ ಕರೆಯುತ್ತಾರೆ. ಪ್ಲೆಸೆಂಟಾ ಅಥವಾ ಗರ್ಭಾಕೋಶವು ನಿಮ್ಮ ಮಗುವಿಗೆ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ಒದಗಿಸುವಲ್ಲಿ ಮತ್ತು ಕಸವನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುತ್ತದೆ. ಆದರೆ ಅದರ ಸ್ಥಾನವು ಬದಲಾಗಬಹುದು. ಕೆಲವು ಮಹಿಳೆಯರಿಗೆ ಆಂಟೀರಿಯರ್ ಪ್ಲೆಸೆಂಟಾ ಇದ್ದರೆ, ಇತರರಿಗೆ ಪೋಸ್ಟೀರಿಯರ್ ಪ್ಲೆಸೆಂಟಾವಿರುತ್ತದೆ. ಈ ಎರಡೂ ಸಂಪೂರ್ಣವಾಗಿ ಸಾಮಾನ್ಯವಾಗಿದೆ, ಆದರೆ ಕೆಲವು ವ್ಯತ್ಯಾಸಗಳನ್ನು ಹೊಂದಿರುತ್ತವೆ.

ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಪ್ಲೆಸೆಂಟಾದ ನಡುವಿನ ವ್ಯತ್ಯಾಸ, ಅವುಗಳ ಸ್ಥಾನವು ನಿಮ್ಮ ಗರ್ಭಾವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಇದಕ್ಕೆ ಸಂಬಂಧಿಸಿದ ಸಂಭಾವ್ಯ ಅಪಾಯಗಳು ಮತ್ತು ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಆಂಟೀರಿಯರ್ ಪ್ಲೆಸೆಂಟಾ ಎಂದರೇನು?

ಆಂಟೀರಿಯರ್ ಪ್ಲೆಸೆಂಟಾ ಎಂದರೆ ಗರ್ಭಕೋಶವು ಗರ್ಭಾಶಯದ ಮುಂಭಾಗದ ಗೋಡೆಗೆ, ಹೊಟ್ಟೆಯ ಕಡೆಗೆ ಅಂಟಿಕೊಂಡಿರುವುದು. ಗರ್ಭಾಣು ಗರ್ಭಾಶಯದ ಮುಂಭಾಗದಲ್ಲಿ ಇದ್ದಾಗ ಆಂಟೀರಿಯರ್ ಪ್ಲೆಸೆಂಟಾ ಉಂಟಾಗುತ್ತದೆ. ಗರ್ಭಕೋಶವು ನಿಮ್ಮ ಮಗುವಿನ ಮತ್ತು ಹೊಟ್ಟೆಯ ಗೋಡೆಯ ನಡುವೆ ಇರುವುದರಿಂದ, ಇದು ಒಂದು ಕುಶನ್‌ ನಂತೆ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಆರಂಭಿಕ ಹಂತದಲ್ಲಿ ಮಗುವಿನ ಚಲನೆಗಳನ್ನು ಗ್ರಹಿಸಲು ಕಷ್ಟವಾಗಬಹುದು.

ಈ ರೀತಿಯ ಗರ್ಭಕೋಶವು ಸಂಪೂರ್ಣವಾಗಿ ಸಾಮಾನ್ಯವಾಗಿದ್ದು, ಯಾವುದೇ ತೊಡಕುಗಳನ್ನು ಉಂಟುಮಾಡುವುದಿಲ್ಲ. ಆದರೆ, ಕೆಲವೊಮ್ಮೆ ಇದರಿಂದ ಆರೋಗ್ಯ ತಪಾಸಣೆಯ ಸಮಯದಲ್ಲಿ ಮಗುವಿನ ಹೃದಯ ಬಡಿತವನ್ನು ಕಂಡುಹಿಡಿಯಲು ಕಷ್ಟವಾಗಬಹುದು. ಏಕೆಂದರೆ ಗರ್ಭಕೋಶವು ಮಗುವಿನ ಮುಂಭಾಗದಲ್ಲಿರುತ್ತದೆ.

ಆಂಟೀರಿಯರ್ ಪ್ಲೆಸೆಂಟಾ ಇರುವ ಮಹಿಳೆಯರು ಈ ಕೆಳಗಿನವುಗಳನ್ನು ಅನುಭವಿಸಬಹುದು:

  • ಚಲನವಲನ ಗ್ರಹಿಕೆಗೆ ತಡ: ಗರ್ಭಕೋಶವು ಮಗುವಿನ ಚಲನೆಗಳನ್ನು ಹೊರಗೆ ತಿಳಿಯದಂತೆ ಮಾಡುವುದರಿಂದ, ಪೋಸ್ಟೀರಿಯರ್ ಪ್ಲೆಸೆಂಟಾ ಇರುವವರಿಗೆ ಹೋಲಿಸಿದರೆ ಮಗುವಿನ ಚಲನೆಗಳನ್ನು ಆರಂಭದಲ್ಲಿ ಗ್ರಹಿಸಲು ಕಷ್ಟವಾಗಬಹುದು.
  • ಅಲ್ಟ್ರಾಸೌಂಡ್ ಚಿತ್ರಣದಲ್ಲಿ ಸವಾಲುಗಳು: ಆಂಟೀರಿಯರ್ ಪ್ಲೆಸೆಂಟಾ ಇದ್ದಾಗ ಸೋನೋಗ್ರಾಫರ್ ಗಳಿಗೆ ಮಗುವಿನ ಸ್ಪಷ್ಟ ಚಿತ್ರವನ್ನು ಪಡೆಯಲು ಸ್ವಲ್ಪ ಕಷ್ಟವಾಗಬಹುದು.
  • ಸಂಭಾವ್ಯ ಅಪಾಯಗಳು: ಕೆಲವು ಸಂದರ್ಭಗಳಲ್ಲಿ, ಆಂಟೀರಿಯರ್ ಪ್ಲೆಸೆಂಟಾವು ಪ್ಲೆಸೆಂಟಾ ಪ್ರಿವಿಯಾ ಅಪಾಯವನ್ನು ಉಂಟುಮಾಡಬಹುದು. ಈ ಸ್ಥಿತಿಯಲ್ಲು ಗರ್ಭಕೋಶವು ಗರ್ಭಾಶಯದ ಮುಖವನ್ನು ಆವರಿಸಿರುತ್ತದೆ. ಈ ಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕು.

ಈ ಸಣ್ಣ ವ್ಯತ್ಯಾಸಗಳ ಹೊರತಾಗಿಯೂ, ಆಂಟೀರಿಯರ್ ಪ್ಲೆಸೆಂಟಾವು ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಾವಸ್ಥೆಯ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ.

ಪೋಸ್ಟೀರಿಯರ್ ಪ್ಲೆಸೆಂಟಾ ಎಂದರೇನು?

ಪೋಸ್ಟೀರಿಯರ್ ಪ್ಲೆಸೆಂಟಾ ಎಂದರೆ ಗರ್ಭಕೋಶವು ಗರ್ಭಾಶಯದ ಹಿಂಭಾಗದ ಗೋಡೆಗೆ, ಬೆನ್ನುಮೂಳೆಯ ಕಡೆಗೆ ಅಂಟಿಕೊಂಡಿರುವುದು. ಇದೂ ಸಹ ಬಹಳ ಸಾಮಾನ್ಯವಾದ ಗರ್ಭಕೋಶ ಸ್ಥಾನವಾಗಿದೆ.

ಪೋಸ್ಟೀರಿಯರ್ ಪ್ಲೆಸೆಂಟಾವಿರುವ ಮಹಿಳೆಯರು ಈ ಕೆಳಗಿನವುಗಳನ್ನು ಅನುಭವಿಸಬಹುದು:

·       ಆರಂಭಿಕ ಮಗುವಿನ ಚಲನೆ ಪತ್ತೆ: ಗರ್ಭಕೋಶವು ಮಗುವಿನ ಹಿಂದೆ ಇರುವುದರಿಂದ, ಮಗುವಿನ ಚಲನವಲನ ತಿಳಿಯಲು ಯಾವುದೇ ಅಡಚಣೆ ಇರುವುದಿಲ್ಲ, ಚಲನೆಗಳನ್ನು ಸುಲಭವಾಗಿ ಗ್ರಹಿಸಬಹುದು.

·       ಸ್ಪಷ್ಟ ಅಲ್ಟ್ರಾಸೌಂಡ್ ಚಿತ್ರಣ: ಸ್ಕ್ಯಾನ್‌ನಲ್ಲಿ ಮಗುವಿನ ಮುಖ ಮತ್ತು ದೇಹವು ಹೆಚ್ಚು ಗೋಚರವಾಗಿರುತ್ತದೆ, ಇದರಿಂದ ಸ್ಪಷ್ಟ ಚಿತ್ರಗಳು ಲಭ್ಯವಾಗುತ್ತವೆ.

·       ಡಾಪ್ಲರ್ ರೀಡಿಂಗ್ಸ್ ಪಡೆಯುವುದು ಸುಲಭ: ಗರ್ಭಕೋಶವು ಮಗುವಿನ ಚಲನವಲನಕ್ಕೆ ಅಡ್ಡ ಬರದಿರುವುದರಿಂದ ಡಾಪ್ಲರ್‌ ಮೂಲಕ ಮಗುವಿನ ಹೃದಯ ಬಡಿತವನ್ನು ಕಂಡುಹಿಡಿಯಲು ಸುಲಭವಾಗಿರುತ್ತದೆ.

ಪೋಸ್ಟೀರಿಯರ್ ಪ್ಲೆಸೆಂಟಾ ಇದ್ದಾಗ ಭ್ರೂಣದ ಚಲನೆಗಳನ್ನು ಗಮನಿಸಲು ಸುಲಭವಾಗುವುದರಿಂದ, ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ.

ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಪ್ಲೆಸೆಂಟಾ ನಡುವಿನ ಪ್ರಮುಖ ವ್ಯತ್ಯಾಸಗಳು
 ಎರಡೂ ಗರ್ಭಕೋಶದ ಸ್ಥಾನಗಳು ಸಾಮಾನ್ಯವಾದರೂ, ಇಲ್ಲಿ ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಪ್ಲೆಸೆಂಟಾದ ನಡುವೆ ಕೆಲವು ಸಣ್ಣ ವ್ಯತ್ಯಾಸಗಳಿವೆ. ಅವುಗಳನ್ನು ಇಲ್ಲಿ ನೋಡೋಣ:

ಆಂಟೀರಿಯರ್ ವರ್ಸಸ್ ಪೋಸ್ಟೀರಿಯರ್ ಪ್ಲೆಸೆಂಟಾ

ಗುಣಲಕ್ಷಣ

ಆಂಟೀರಿಯರ್ ಪ್ಲೆಸೆಂಟಾ

ಪೋಸ್ಟೀರಿಯರ್ ಪ್ಲೆಸೆಂಟಾ

ಸ್ಥಳ

ಗರ್ಭಾಶಯದ ಮುಂಭಾಗದ ಗೋಡೆ (ಹೊಟ್ಟೆಯ ಕಡೆಗೆ)

ಗರ್ಭಾಶಯದ ಹಿಂಭಾಗದ ಗೋಡೆ (ಬೆನ್ನುಮೂಳೆಯ ಕಡೆಗೆ)

ಮಗುವಿನ ಚಲನವಲನ

ಕುಶನ್ ನಂತಹ ರಕ್ಷಣೆಯಿಂದ ಮಗುವಿನ ಚಲನೆಗಳು ತಡವಾಗಿ ಗೊತ್ತಾಗಬಹುದು

ಚಲನೆಗಳು ಮೊದಲೇ ಮತ್ತು ತೀವ್ರವಾಗಿ ತಿಳಿಯುತ್ತವೆ

ಅಲ್ಟ್ರಾ ಸೌಂಡ್ ಗೋಚರತೆ

ಕೆಲವೊಮ್ಮೆ ಮಗುವನ್ನು ಸ್ಪಷ್ಟವಾಗಿ ನೋಡುವುದು ಕಷ್ಟವಾಗಬಹುದು

ಸ್ಕ್ಯಾನ್‌ ಗಳಲ್ಲಿ ಮಗು ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ

ಡಾಪ್ಲರ್ ಹೃದಯ ಬಡಿತ ಪತ್ತೆ

ಪ್ಲೆಸೆಂಟಾದಿಂದ ಸಂಕೇತಗಳು ಸ್ಪಷ್ಟವಾಗಿ ಸಿಗದಿರುವುದರಿಂದ ಹೃದಯ ಬಡಿತವನ್ನು ಕಂಡುಹಿಡಿಯಲು ಹೆಚ್ಚು ಸಮಯ ಹಿಡಿಯಬಹುದು

ಹೃದಯ ಬಡಿತವನ್ನು ಪತ್ತೆಹಿಡಿಯಲು ಸುಲಭ

ಪ್ರಸವ ಮತ್ತು ಮಗು ಜನನ

ಪ್ಲೆಸೆಂಟಾ ಪ್ರೀವಿಯಾದಂತಹ ತೊಡಕುಗಳು ಉಂಟಾಗದಿದ್ದರೆ ಯಾವುದೇ ಗಮನಾರ್ಹ ಪರಿಣಾಮವಿರುವುದಿಲ್ಲ

ಪ್ರಸವದ ಸಂದರ್ಭದಲ್ಲಿ ಯಾವುದೇ ಗಮನಾರ್ಹ ಪರಿಣಾಮವಿರುವುದಿಲ್ಲ

 

ಈ ಎರಡೂ ಗರ್ಭಕೋಶ ಸ್ಥಾನಗಳು ಸಾಮಾನ್ಯವಾಗಿದ್ದು, ವಿಶೇಷ ತೊಡಕುಗಳು ಉಂಟಾಗದಿದ್ದರೆ ಯಾವುದೇ ಆಂತಕ ಇರುವುದಿಲ್ಲ.

ಗರ್ಭಕೋಶದ ಸ್ಥಾನವು ಗರ್ಭಾವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
 ನಿಮ್ಮ ಗರ್ಭಕೋಶದ ಸ್ಥಾನವು ಗರ್ಭಾವಸ್ಥೆಯ ಕೆಲವು ಅಂಶಗಳ ಮೇಲೆ ಪರಿಣಾಮ ಬೀರಬಹುದು. ಆದರೆ ಒಟ್ಟಾರೆ ಗರ್ಭಾವಸ್ಥೆಯ ಯಶಸ್ಸನ್ನು ನಿರ್ಧರಿಸುವುದಿಲ್ಲ.

1.    ಮಗುವಿನ ಚಲನವಲನಗಳು: ಆಂಟೀರಿಯರ್ ಪ್ಲೆಸೆಂಟಾ ಮೂಲಕ ನೀವು ಮಗುವಿನ ಚಲನೆಗಳನ್ನು ಗ್ರಹಿಸುವಾಗ ಸ್ವಲ್ಪ ತಡವಾಗಬಹುದು. ಆದರೆ ಪೋಸ್ಟೀರಿಯರ್ ಪ್ಲೆಸೆಂಟಾ ಇದ್ದರೆ ಚಲನವಲನಗಳನ್ನು ಆರಂಭದಲ್ಲಿಯೇ ತಿಳಿಯಬಹುದು.

2.    ಅಲ್ಟ್ರಾಸೌಂಡ್ ಸ್ಪಷ್ಟತೆ: ಆಂಟೀರಿಯರ್ ಪ್ಲೆಸೆಂಟಾ ಅಲ್ಟ್ರಾಸೌಂಡ್‌ಗಳನ್ನು ಸ್ವಲ್ಪ ಕಷ್ಟಕರವಾಗಿಸಬಹುದು, ಆದರೆ ಇದು ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

3.    ಪ್ರಸವ ಮತ್ತು ಜನನ: ಆಂಟೀರಿಯರ್ ಅಥವಾ ಪೋಸ್ಟೀರಿಯರ್ ಪ್ಲೆಸೆಂಟಾದ ಸ್ಥಾನವು ಪ್ಲೆಸೆಂಟಾ ಪ್ರಿವಿಯಾದಂತಹ ತೊಡಕುಗಳಿಲ್ಲದಿದ್ದರೆ ಪ್ರಸವದ ಮೇಲೆ ಯಾವುದೇ ಗಮನಾರ್ಹ ಪರಿಣಾಮ ಬೀರುವುದಿಲ್ಲ.

ಹೆಚ್ಚಿನ ಮಹಿಳೆಯರು ಎರಡೂ ರೀತಿಯ ಗರ್ಭಕೋಶದ ಸ್ಥಾನಗಳನ್ನು ಹೊಂದಿರುತ್ತಾರೆ ಮತ್ತು ಸಂಪೂರ್ಣವಾಗಿ ಸಾಮಾನ್ಯ ಗರ್ಭಾವಸ್ಥೆ ಹೊಂದಿರುತ್ತಾರೆ ಹಾಗೂ ಆರೋಗ್ಯಕರವಾಗಿ ಜನನ ನೀಡುತ್ತಾರೆ.

ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಪ್ಲೆಸೆಂಟಾದ ಅಪಾಯಗಳು ಮತ್ತು ಪ್ರಯೋಜನಗಳು
 ಎರಡೂ ಗರ್ಭಕೋಶದ ಸ್ಥಾನಗಳು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಇಲ್ಲಿ ಅವುಗಳ ಅಪಾಯಗಳು ಮತ್ತು ಪ್ರಯೋಜನಗಳನ್ನು ನೋಡೋಣ:

ಆಂಟೀರಿಯರ್ ಪ್ಲೆಸೆಂಟಾದ ಅಪಾಯಗಳು

·       ತಡವಾಗಿ ಮಗುವಿನ ಚಲನೆ ಗ್ರಹಿಕೆ: ಗರ್ಭಾವಸ್ಥೆಯ ಬಹಳ ದಿನಗಳವರೆಗೆ ಮಗುವಿನ ಚಲನವಲನವನ್ನು ಗ್ರಹಿಸಲಾಗದಿರಬಹುದು.

·       ಅಲ್ಟ್ರಾಸೌಂಡ್ ಮತ್ತು ಡಾಪ್ಲರ್ ಸವಾಲುಗಳು: ಮಗುವಿನ ಹೃದಯ ಬಡಿತವನ್ನು ಪತ್ತೆಹಚ್ಚಲು ಕಷ್ಟವಾಗಬಹುದು.

·       ಪ್ಲೆಸೆಂಟಾ ಪ್ರಿವಿಯಾ ಅಪಾಯ ಹೆಚ್ಚು: ಕೆಲವು ಸಂದರ್ಭಗಳಲ್ಲಿ, ಆಂಟೀರಿಯರ್ ಪ್ಲೆಸೆಂಟಾವು ಕೆಳಗೆ ಇದ್ದರೆ, ಪ್ಲೆಸೆಂಟಾ ಪ್ರಿವಿಯಾ ಉಂಟಾಗುವ ಅಪಾಯ ಇರುತ್ತದೆ.

ಪೋಸ್ಟೀರಿಯರ್ ಪ್ಲೆಸೆಂಟಾದ ಪ್ರಯೋಜನಗಳು

·       ಆರಂಭಿಕ ಹಂತದಲ್ಲಿಯೇ ಮಗುವಿನ ಚಲನವಲನ ಪತ್ತೆ: ಒದ್ದಾಟವನ್ನು ಬೇಗನೆ ಮತ್ತು ಸ್ಪಷ್ಟವಾಗಿ ಗ್ರಹಿಸಬಹುದು.

·       ಉತ್ತಮ ಅಲ್ಟ್ರಾಸೌಂಡ್ ಗೋಚರತೆ: ಮಗುವಿನ ಮುಖ ಮತ್ತು ದೇಹವನ್ನು ಅಲ್ಟ್ರಾ ಸೌಂಡ್ ಮೂಲಕ ಸುಲಭವಾಗಿ ನೋಡಬಹುದು.

·       ಸುಲಭವಾದ ಪ್ರಸವ ಮೇಲ್ವಿಚಾರಣೆ: ಮಗುವಿನ ಹೃದಯ ಬಡಿತವನ್ನು ಸುಲಭವಾಗಿ ಪತ್ತೆಹಚ್ಚಬಹುದು.

ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಪ್ಲೆಸೆಂಟಾದ ಒಳಿತು ಮತ್ತು ತೊಡಕುಗಳು

ಆಂಟೀರಿಯರ್ ಪ್ಲೆಸೆಂಟಾದ ಪ್ರಯೋಜನ

ü  ಬಲವಾದ ಚಲನವಲನದಿಂದ, ಮಗುವಿನ ಒದೆಯಿಂದ ಗರ್ಭಾವಸ್ಥೆಯ ಕಿರಿಕಿರಿಯನ್ನು ಕಡಿಮೆ ಮಾಡಲು ಕುಶನ್‌ ನಂತೆ ಕಾರ್ಯನಿರ್ವಹಿಸುತ್ತದೆ.

ü  ಸಂಪೂರ್ಣವಾಗಿ ಸಾಮಾನ್ಯವಾಗಿದ್ದು, ಆತಂಕ ಇರುವುದಿಲ್ಲ.

ü  ಹೆಚ್ಚಿನ ಸಂದರ್ಭಗಳಲ್ಲಿ ಪ್ರಸವ ಅಥವಾ ಜನನದ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ.

ಆಂಟೀರಿಯರ್ ಪ್ಲೆಸೆಂಟಾದ ಕೊರತೆಗಳು

ü  ಮಗುವಿನ ಚಲನೆಗಳನ್ನು ಗ್ರಹಿಸಲು ವಿಳಂಬವಾಗಬಹುದು.

ü  ಡಾಪ್ಲರ್ ರೀಡಿಂಗ್ಸ್ ಮತ್ತು ಅಲ್ಟ್ರಾಸೌಂಡ್‌ ಗಳನ್ನು ಸ್ವಲ್ಪ ಕಷ್ಟಕರವಾಗಿಸಬಹುದು.

ü  ಪ್ಲೆಸೆಂಟಾ ಪ್ರಿವಿಯಾದ ಅಪಾಯ ಸ್ವಲ್ಪ ಹೆಚ್ಚು ಹೊಂದಿರಬಹುದು.

ಪೋಸ್ಟೀರಿಯರ್ ಪ್ಲೆಸೆಂಟಾದ ಒಳಿತು

ü  ಭ್ರೂಣ ಚಲನೆಗಳನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ, ಇದು ಧೈರ್ಯ ಒದಗಿಸುತ್ತದೆ.

ü  ಉತ್ತಮ ಅಲ್ಟ್ರಾಸೌಂಡ್ ಚಿತ್ರಣ, ಸ್ಪಷ್ಟ ಸ್ಕ್ಯಾನ್‌ ಗಳಿಗೆ ಕಾರಣವಾಗುತ್ತದೆ.

ü  ಡಾಪ್ಲರ್ ಮೂಲಕ ಹೃದಯ ಬಡಿತವನ್ನು ಸುಲಭವಾಗಿ ಪತ್ತೆಹಚ್ಚಬಹುದು.

ಪೋಸ್ಟೀರಿಯರ್ ಪ್ಲೆಸೆಂಟಾದ ಕೊರತೆಗಳು

ü  ಕುಶನಿಂಗ್ ಎಫೆಕ್ಟ್ ಇಲ್ಲದಿರುವುದರಿಂದ ಕೆಲವು ಒದೆಗಳು ಬಲವಾಗಿ ಬೀಳಬಹುದು ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು.

ü  ಮಗುವಿನ ಸ್ಥಾನವು ಬೆನ್ನು ನೋವನ್ನು ಹೆಚ್ಚಿಸಬಹುದಾದ ಕಾರಣ, ಪ್ರಸವದ ಸಂದರ್ಭ ಸ್ವಲ್ಪ ಸಂಕೀರ್ಣ ಎದುರಿಸಬೇಕಾಗಬಹುದು.

ಕೊನೆಯ ಮಾತು
 ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಪ್ಲೆಸೆಂಟಾ ಎರಡೂ ಸಾಮಾನ್ಯ ಗರ್ಭಕೋಶ ಸ್ಥಾನಗಳಾಗಿದ್ದು, ಪ್ರತಿಯೊಂದಕ್ಕೂ ತನ್ನದೇ ಆದ ಗುಣಲಕ್ಷಣಗಳಿವೆ. ಆಂಟೀರಿಯರ್ ಪ್ಲೆಸೆಂಟಾವು ಕುಶನ್ ನಂತೆ ಕಾರ್ಯ ನಿರ್ವಹಿಸಿ ಭ್ರೂಣ ಚಲನೆಗಳನ್ನು ಆರಂಭದಲ್ಲಿ ತಿಳಿಯದಂತೆ ಮಾಡುತ್ತದೆ ಮತ್ತು ಅವುಗಳ ಗ್ರಹಿಕೆಯನ್ನು ಸ್ವಲ್ಪ ತಡ ಮಾಡಸಬಹುದು. ಪೋಸ್ಟೀರಿಯರ್ ಪ್ಲೆಸೆಂಟಾವು ಆರಂಭಿಕ ಹಂತದಲ್ಲಿಯೇ ಮತ್ತು ಬಲವಾದ ಚಲನವಲನ ಅರಿಯುವಂತೆ ಮಾಡುತ್ತದೆ.

ಎರಡೂ ಸ್ಥಿತಿಗಳು ಗರ್ಭಾವಸ್ಥೆಯ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ. ಆದರೆ ಪ್ಲೆಸೆಂಟಾ ಪ್ರಿವಿಯಾದಂತಹ ಸ್ಥಿತಿ ಇದ್ದರೆ ಹೆಚ್ಚು ಮೇಲ್ವಿಚಾರಣೆಯ ಅಗತ್ಯ ಬೀಳಬಹುದು. ಗರ್ಭಾವಸ್ಥೆಯಲ್ಲಿ ಗರ್ಭಕೋಶದ ಸ್ಥಾನವನ್ನು ಅರ್ಥಮಾಡಿಕೊಳ್ಳುವುದರಿಂದ ಹೆಚ್ಚು ಭರವಸೆ ಇರುತ್ತದೆ ಮತ್ತು ಮಗುವಿನ ಆರೋಗ್ಯವನ್ನು ಗಮನಿಸಲು ಸಹಾಯ ಮಾಡುತ್ತದೆ.

ಗರ್ಭಾವಸ್ಥೆಗೆ ಸಂಬಂಧಿಸಿದ ನಿಖರವಾದ ರೋಗನಿರ್ಣಯಕ್ಕಾಗಿ, ಮೆಟ್ರೋಪೊಲಿಸ್ ಹೆಲ್ತ್‌ ಕೇರ್ ಅತ್ಯಂತ ವಿಶ್ವಾಸಾರ್ಹ ಪರೀಕ್ಷಾ ವಿಧಾನಗಳನ್ನು ಹೊಂದಿದೆ. ಈ ಸಂಸ್ಥೆಯು ತಜ್ಞರ ರೋಗನಿರ್ಣಯ ಸೇವೆ ಹೊಂದಿದೆ ಮತ್ತು ಗರ್ಭಿಣಿಯರಿಗೆ ಗುಣಮಟ್ಟದ ಆರೈಕೆ ನೀಡುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸಹಜ ಪ್ರಸವಕ್ಕೆ ಯಾವ ಗರ್ಭಕೋಶ ಸ್ಥಾನವು ಉತ್ತಮವಾಗಿದೆ?
 ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಪ್ಲೆಸೆಂಟಾ ಎರಡೂ ಸಾಮಾನ್ಯವಾಗಿದ್ದು, ಸಾಮಾನ್ಯವಾಗಿ ಯೋನಿ ಮಾರ್ಗದ ಜನನದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಪೋಸ್ಟೀರಿಯರ್ ಪ್ಲೆಸೆಂಟಾ ಇದ್ದರೆ ಜನನ ಸಂದರ್ಭದಲ್ಲಿ ಮಗು ಉತ್ತಮ ಸ್ಥಾನದಲ್ಲಿ ಇರಬಹುದು. ಗರ್ಭಕೋಶವು ತುಂಬಾ ಕೆಳಗಿರುವುದರಿಂದ ಪ್ಲೆಸೆಂಟಾ ಪ್ರೀವಿಯಾ ಉಂಟಾದರೆ, ವೈದ್ಯಕೀಯ ತಜ್ಞರು ಹೆಚ್ಚು ಗಮನ ಹರಿಸುವ ಅಗತ್ಯವಿರುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಕೋಶದ ಸ್ಥಾನವು ಬದಲಾಗಬಹುದೇ?
 ಹೌದು, ಗರ್ಭಾಶಯವು ವಿಸ್ತರಿಸುವಾಗ ಗರ್ಭಕೋಶವು ಸ್ಥಾನ ಬದಲಾಯಿಸಬಹುದು. ಆರಂಭದಲ್ಲಿ ಕೆಳಗಿರುವ ಗರ್ಭಕೋಶವು ಮೂರನೇ ತ್ರೈಮಾಸಿಕದ ವೇಳೆಗೆ ಮೇಲಕ್ಕೆ ಚಲಿಸಬಹುದು. ಆದರೆ, ಇದು ತುಂಬಾ ಕೆಳಗಿದ್ದರೆ (ಪ್ಲೆಸೆಂಟಾ ಪ್ರಿವಿಯಾ) ಜನನದ ಸಮಯದಲ್ಲಿ ತೊಡಕುಗಳನ್ನು ತಡೆಯಲು ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಾಗಿರುತ್ತದೆ. ನಿಯಮಿತವಾಗಿ ಅಲ್ಟ್ರಾಸೌಂಡ್‌ ಮಾಡಿದರೆ ಗರ್ಭಕೋಶದ ಚಲನೆಯನ್ನು ಗಮನಿಸಲು ಸಹಾಯ ಮಾಡುತ್ತವೆ.

ಆಂಟೀರಿಯರ್ ಪ್ಲೆಸೆಂಟಾಗೆ ಸಂಬಂಧಿಸಿದ ಅಪಾಯಗಳು ಇವೆಯೇ?
 ಹೌದು, ಸಾಮಾನ್ಯವಾಗಿ ಹಾನಿಕಾರಕವಲ್ಲದಿದ್ದರೂ, ಆಂಟೀರಿಯರ್ ಪ್ಲೆಸೆಂಟಾದಲ್ಲಿ ಆರಂಭಿಕ ಭ್ರೂಣ ಚಲನೆಗಳನ್ನು ಗ್ರಹಿಸಲು ಕಷ್ಟವಾಗಬಹುದು. ಇದು ಅಲ್ಟ್ರಾಸೌಂಡ್ ಮತ್ತು ಡಾಪ್ಲರ್ ಓದುವಿಕೆಗಳನ್ನು ಸ್ವಲ್ಪ ಜಟಿಲಗೊಳಿಸಬಹುದು. ಕೆಲವು ಸಂದರ್ಭಗಳಲ್ಲಿ, ಪ್ಲೆಸೆಂಟಾ ಪ್ರಿವಿಯಾ ಅಪಾಯವನ್ನು ಹೆಚ್ಚಿಸಬಹುದು, ಇದಕ್ಕೆ ಪ್ರಸವ ಮತ್ತು ಜನನದ ಸಮಯದಲ್ಲಿ ತೊಡಕುಗಳನ್ನು ತಡೆಯಲು ಮೇಲ್ವಿಚಾರಣೆ ಅಗತ್ಯವಾಗಿರುತ್ತದೆ.

ನಾನು ಆಂಟೀರಿಯರ್ ಅಥವಾ ಪೋಸ್ಟೀರಿಯರ್ ಪ್ಲೆಸೆಂಟಾವನ್ನು ಹೊಂದಿದ್ದೇನೆಯೇ ಎಂದು ಹೇಗೆ ತಿಳಿಯುವುದು?
 ನಿಮ್ಮ ವೈದ್ಯರು ಸಾಮಾನ್ಯವಾಗಿ 18-20 ವಾರಗಳ ಸುಮಾರಿಗೆ ಅಲ್ಟ್ರಾಸೌಂಡ್‌ನ ಸಮಯದಲ್ಲಿ ಗರ್ಭಕೋಶದ ಸ್ಥಾನವನ್ನು ನಿರ್ಧರಿಸುತ್ತಾರೆ. ಗರ್ಭಕೋಶವು ಗರ್ಭಾಶಯದ ಮುಂಭಾಗದಲ್ಲಿದ್ದರೆ, ಅದು ಆಂಟೀರಿಯರ್; ಹಿಂಭಾಗದಲ್ಲಿದ್ದರೆ, ಪೋಸ್ಟೀರಿಯರ್. ಈ ಮಾಹಿತಿಯು ಭ್ರೂಣದ ಚಲನೆಯ ಮಾದರಿಗಳನ್ನು ಮತ್ತು ಗರ್ಭಾವಸ್ಥೆಯ ಮೇಲ್ವಿಚಾರಣೆಯ ಅಗತ್ಯವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಪ್ಲೆಸೆಂಟಾ ಒಟ್ಟಿಗೆ ಇರಬಹುದೇ (ಪ್ಲೆಸೆಂಟಾ ಬೈಲೋಬಾಟಾ)?
 ಹೌದು, ಗರ್ಭಕೋಶವು ಎರಡು ಲೋಬ್‌ ಗಳಾಗಿ ಬೆಳೆದಾಗ ಪ್ಲೆಸೆಂಟಾ ಬೈಲೋಬಾಟಾ ಉಂಟಾಗುತ್ತದೆ. ಅಂದರೆ ಇಲ್ಲಿ ಆಂಟೀರಿಯರ್ ಮತ್ತು ಪೋಸ್ಟೀರಿಯರ್ ಆಗಿ ಗರ್ಭಕೋಶದ ಸ್ಥಾನ ಇರಬಹುದು. ಇದು ಸಾಮಾನ್ಯವಾಗಿ ಹಾನಿಕಾರಕವಲ್ಲದಿದ್ದರೂ, ರಿಟೇನ್ಡ್ ಪ್ಲೆಸೆಂಟಾ ಅಥವಾ ವಾಸಾ ಪ್ರಿವಿಯಾನಂತಹ ತೊಡಕುಗಳುಂಟಾಗುವ ಅಪಾಯವನ್ನು ಹೆಚ್ಚಿಸಬಹುದು. ವೈದ್ಯರು ಈ ಸ್ಥಿತಿಯನ್ನು ಅಲ್ಟ್ರಾಸೌಂಡ್‌ ಗಳ ಮೂಲಕ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಾರೆ.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More