Language
ಒಂದು ರೋಟಿಯಲ್ಲಿ ಎಷ್ಟು ಕ್ಯಾಲರಿಗಳಿವೆ? ರೋಟಿಯ ಪೌಷ್ಟಿಕಾಂಶಗಳು ಮತ್ತು ಪ್ರಯೋಜನಗಳು
Table of Contents
- ರೋಟಿ ಎಂದರೇನು?
- ಸಾಮಾನ್ಯವಾದ ಗೋಧಿ ರೋಟಿಯಲ್ಲಿ ಇರುವ ಕ್ಯಾಲರಿಗಳು (ಗೋಧಿ ರೋಟಿ)
- ರೋಟಿಯ ಪೌಷ್ಟಿಕಾಂಶ ಮಾಹಿತಿಗಳು: ಕಾರ್ಬ್ಸ್, ಪ್ರೋಟೀನ್, ಫೈಬರ್ ಮತ್ತು ಕೊಬ್ಬು
- ದಿನಕ್ಕೆ ಎಷ್ಟು ರೋಟಿಗಳನ್ನು ತಿನ್ನಬಹುದು?
- ರೋಟಿಯನ್ನು ತಿನ್ನುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳು
- ಒಂದು ರೋಟಿಯಿಂದ (40 ಗ್ರಾಂ) ಬರುವ 120 ಕ್ಯಾಲರಿಗಳನ್ನು ಹೇಗೆ ಬರ್ನ್ ಮಾಡುವುದು?
- ಕೊನೆಯ ಮಾತು
- ರೋಟಿಯ ಕ್ಯಾಲರಿಗಳು ಮತ್ತು ಪೌಷ್ಟಿಕತೆಯ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ರೋಟಿ ಎಂದರೇನು?
ರೋಟಿ ಕುರಿತು ಬಹಳಷ್ಟು ಜನರಿಗೆ ಗೊತ್ತಿರುತ್ತದೆ. ಇದು ಒಂದು ರೀತಿಯ ಭಾರತೀಯ ಫ್ಲಾಟ್ ಬ್ರೆಡ್ ಆಗಿದ್ದು, ಇದನ್ನು ಸಂಪೂರ್ಣವಾಗಿ ಗೋಧಿಯ ಹಿಟ್ಟು, ನೀರು ಮತ್ತು ಕೆಲವೊಮ್ಮೆ ಸ್ವಲ್ಪ ಎಣ್ಣೆ ಅಥವಾ ತುಪ್ಪದಿಂದ ತಯಾರಿಸಲಾಗುತ್ತದೆ. ಹಿಟ್ಟನ್ನು ಕಾದಿ, ಸಣ್ಣ ಗುಂಡುಗಳಾಗಿ ವಿಂಗಡಿಸಿ, ತೆಳುವಾಗಿ ವೃತ್ತಾಕಾರದ ಉಂಡೆ ಮಾಡಿ, ನಂತರ ಬಿಸಿ ತವಾ ಮೇಲೆ ಎರಡೂ ಬದಿಗಳಲ್ಲಿ ತಿಳಿ ಕಂದು ಚುಕ್ಕೆಗಳು ಕಾಣಿಸಿಕೊಳ್ಳುವವರೆಗೆ ಬೇಯಿಸಲಾಗುತ್ತದೆ. ರೋಟಿಗಳು ಭಾರತೀಯ ಉಪಖಂಡದಾದ್ಯಂತ ಬಹಳ ಮುಖ್ಯ ಆಹಾರವಾಗಿದ್ದು, ಇವುಗಳನ್ನು ಸಾಮಾನ್ಯವಾಗಿ ಕರಿ, ದಾಲ್ (ತೊಗರಿಬೇಳೆ), ಮತ್ತು ಸಬ್ಜಿಗಳು ಅಥವಾ ಸಾಗು (ತರಕಾರಿ ಖಾದ್ಯಗಳು) ಜೊತೆಗೆ ಬಡಿಸಲಾಗುತ್ತದೆ.
ಸಂಪೂರ್ಣವಾಗಿ ಗೋಧಿಯ ಹಿಟ್ಟಿನಿಂದ ತಯಾರಾದ ರೋಟಿಗಳು ಕಾರ್ಬೋಹೈಡ್ರೇಟ್‌ಗಳು, ಫೈಬರ್, ಪ್ರೋಟೀನ್ ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳ ಒಳ್ಳೆಯ ಮೂಲವಾಗಿವೆ. ಸಮತೋಲಿತ ಆಹಾರದ ಭಾಗವಾಗಿ ಮಿತವಾಗಿ ಸೇವಿಸಿದರೆ ಇದನ್ನು ಸಾಮಾನ್ಯವಾಗಿ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ.
ಸಾಮಾನ್ಯವಾದ ಗೋಧಿ ರೋಟಿಯಲ್ಲಿ ಇರುವ ಕ್ಯಾಲರಿಗಳು (ಗೋಧಿ ರೋಟಿ)
ಹಾಗಾದರೆ 1 ರೋಟಿಯಲ್ಲಿ ಎಷ್ಟು ಕ್ಯಾಲರಿಗಳಿರುತ್ತವೆ? ಒಂದು ಸಾಮಾನ್ಯ ಮಧ್ಯಮ ಗಾತ್ರದ ಸಂಪೂರ್ಣ ಗೋಧಿಯ ರೋಟಿ (ಸುಮಾರು 40 ಗ್ರಾಂ ತೂಕ) ಸುಮಾರು 120 ಕ್ಯಾಲರಿಗಳನ್ನು ಹೊಂದಿರುತ್ತದೆ. ಆದರೆ, ನಿಖರವಾದ ಕ್ಯಾಲರಿ ಸಂಖ್ಯೆಯು ರೋಟಿಯ ಗಾತ್ರವನ್ನು ಅವಲಂಬಿಸಿ ಬದಲಾಗಬಹುದು:
· ಅರ್ಧ ಮಧ್ಯಮ ಗಾತ್ರದ ರೋಟಿ (20 ಗ್ರಾಂ): 60 ಕ್ಯಾಲರಿಗಳು
· ಸಣ್ಣ ರೋಟಿ (32 ಗ್ರಾಂ): 96 ಕ್ಯಾಲರಿಗಳು
· ಮಧ್ಯಮ ಗಾತ್ರದ ರೋಟಿ (40 ಗ್ರಾಂ): 120 ಕ್ಯಾಲರಿಗಳು
· ದೊಡ್ಡ ರೋಟಿ (52 ಗ್ರಾಂ): 156 ಕ್ಯಾಲರಿಗಳು
· ಎರಡು ಮಧ್ಯಮ ಗಾತ್ರದ ರೋಟಿಗಳು (80 ಗ್ರಾಂ): 240 ಕ್ಯಾಲರಿಗಳು
· ಮೂರು ಮಧ್ಯಮ ಗಾತ್ರದ ರೋಟಿಗಳು (120 ಗ್ರಾಂ): 360 ಕ್ಯಾಲರಿಗಳು
ಪ್ರತೀ 100 ಗ್ರಾಂಗೆ, ರೋಟಿಯು ಸುಮಾರು 300 ಕ್ಯಾಲರಿಗಳನ್ನು ಒದಗಿಸುತ್ತದೆ. ತೂಕ ನಿರ್ವಹಣೆಗಾಗಿ ಕ್ಯಾಲರಿ ಸೇವನೆಯನ್ನು ಟ್ರ್ಯಾಕ್ ಮಾಡುತ್ತಿದ್ದರೆ ನೀವು ಈ ಸಂಖ್ಯೆಗಳನ್ನು ಮನಸ್ಸಿನಲ್ಲಿಡುವುದು ಮುಖ್ಯ.
ರೋಟಿಯ ಪೌಷ್ಟಿಕಾಂಶ ಮಾಹಿತಿಗಳು: ಕಾರ್ಬ್ಸ್, ಪ್ರೋಟೀನ್, ಫೈಬರ್ ಮತ್ತು ಕೊಬ್ಬು
ಕ್ಯಾಲರಿಗಳ ಜೊತೆಗೆ, ರೋಟಿಗಳ ಮ್ಯಾಕ್ರೋನ್ಯೂಟ್ರಿಯೆಂಟ್ ವಿಂಗಡಣೆಯನ್ನು ತಿಳಿಯುವುದು ಕೂಡ ಉಪಯುಕ್ತವಾಗಿದೆ. ಪ್ರತೀ 100 ಗ್ರಾಂ ಗೋಧಿಯ ರೋಟಿಯಲ್ಲಿ ನೀವು ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು:
|
ಪೋಷಕಾಂಶ |
ಪ್ರಮಾಣ (ಪ್ರತಿ 100 ಗ್ರಾಂಗೆ) |
|
ಕ್ಯಾಲರಿಗಳು |
300 ಕಿಲೋಕ್ಯಾಲರಿ |
|
ಕಾರ್ಬೋಹೈಡ್ರೇಟ್‌ಗಳು |
46.13 ಗ್ರಾಂ |
|
ಪ್ರೋಟೀನ್‌ಗಳು |
7.85 ಗ್ರಾಂ |
|
ಕೊಬ್ಬು |
9.2 ಗ್ರಾಂ |
|
ವಿಟಮಿನ್ ಬಿ1 |
0.36 ಮಿಗ್ರಾಂ |
|
ವಿಟಮಿನ್ ಬಿ2 |
0.18 ಮಿಗ್ರಾಂ |
|
ವಿಟಮಿನ್ ಬಿ3 |
4.61 ಮಿಗ್ರಾಂ |
|
ವಿಟಮಿನ್ ಬಿ6 |
0.28 ಮಿಗ್ರಾಂ |
|
ವಿಟಮಿನ್ ಬಿ9 |
0.038 ಮೈಕ್ರೋಗ್ರಾಂ |
|
ವಿಟಮಿನ್ ಇ |
0.55 ಮಿಗ್ರಾಂ |
|
ವಿಟಮಿನ್ ಕೆ |
0.003 ಮಿಗ್ರಾಂ |
|
ಪೊಟಾಸಿಯಮ್ |
196 ಮಿಗ್ರಾಂ |
|
ಮೆಗ್ನೀಸಿಯಮ್ |
56 ಮಿಗ್ರಾಂ |
|
ಕ್ಯಾಲ್ಸಿಯಮ್ |
36 ಮಿಗ್ರಾಂ |
|
ಸೋಡಿಯಮ್ |
298 ಮಿಗ್ರಾಂ |
|
ಕಬ್ಬಿಣ |
2.2 ಮಿಗ್ರಾಂ |
ಈ ಮೇಲಿನ ವಿವರ ಪ್ರಕಾರ ರೋಟಿಗಳು ಕಾರ್ಬ್ ಗಳು, ಫೈಬರ್, ಪ್ರೋಟೀನ್ ಮತ್ತು ಪ್ರಮುಖ ವಿಟಮಿನ್‌ಗಳು ಮತ್ತು ಖನಿಜಗಳ ಮಿಶ್ರಣವನ್ನು ಒದಗಿಸುತ್ತವೆ. ಹಾಗಾಗಿಯೇ ರೋಟಿ ಪೌಷ್ಟಿಕ ಆಯ್ಕೆಯನ್ನಾಗಿ ಮೂಡಿಬಂದಿದೆ. ಆದರೆ, ವಿಶೇಷವಾಗಿ ನೀವು ರೋಟಿಯ ಕ್ಯಾಲರಿಗಳ ಕುರಿತು ಯೋಚಿಸುತ್ತಿದ್ದರೆ ಅವುಗಳ ಗಾತ್ರ ಪರಿಗಣಿಸುವುದು ಮುಖ್ಯವಾಗಿದೆ.
ದಿನಕ್ಕೆ ಎಷ್ಟು ರೋಟಿಗಳನ್ನು ತಿನ್ನಬಹುದು?
ಒಂದು ಸಾಮಾನ್ಯ ಪ್ರಶ್ನೆಯೆಂದರೆ, "ದಿನಕ್ಕೆ ಎಷ್ಟು ರೋಟಿಗಳನ್ನು ತಿನ್ನಬೇಕು?" ಎಂಬುದು. ನಿಮ್ಮ ವೈಯಕ್ತಿಕ ಕ್ಯಾಲರಿ ಅಗತ್ಯಗಳನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ರೋಟಿ ತಿನ್ನಬಹುದು ಎಂಬುದೇ ಈ ಪ್ರಶ್ನೆಗೆ ಉತ್ತರವಾಗಿರುತ್ತದೆ. ವೈಯಕ್ತಿಕ ಕ್ಯಾಲರಿ ಅಗತ್ಯವು ನಿಮ್ಮ ವಯಸ್ಸು, ಲಿಂಗ, ಎತ್ತರ, ತೂಕ, ಚಟುವಟಿಕೆಯ ಮಟ್ಟ ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯಂತಹ ಅಂಶಗಳಿಂದ ನಿರ್ಧರಿತವಾಗುತ್ತದೆ.
ಸಾಮಾನ್ಯ ಮಾರ್ಗದರ್ಶಿ ಪ್ರಕಾರ ಆರೋಗ್ಯಕರ ವಯಸ್ಕರು ಸಾಮಾನ್ಯವಾಗಿ ಸಮತೋಲಿತ ಆಹಾರದ ಭಾಗವಾಗಿ ಪ್ರತೀ ಊಟಕ್ಕೆ (ಬೆಳಗಿನ ಉಪಾಹಾರ, ಊಟ ಅಥವಾ ರಾತ್ರಿಯ ಊಟ) 2-4 ಮಧ್ಯಮ ಗಾತ್ರದ ರೋಟಿಗಳನ್ನು ಸೇರಿಸಿಕೊಳ್ಳಬಹುದು. ಇದರರ್ಥ, ವೈಯಕ್ತಿಕ ಅಗತ್ಯಗಳನ್ನು ಅವಲಂಬಿಸಿ ದಿನಕ್ಕೆ 6-12 ರೋಟಿಗಳನ್ನು ತಿನ್ನಬಹುದು. ಆದರೆ, ರೋಟಿಗಳನ್ನು ಸಾಕಷ್ಟು ತರಕಾರಿಗಳು, ಸೊಂಪಾದ ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬಿನ ಆಹಾರಗಳ ಜೊತೆ ಸೇರಿಸಿ ಸಮತೋಲಿತ ಊಟವನ್ನು ಸೃಷ್ಟಿಸುವುದು ಮುಖ್ಯ.
ರೋಟಿಯನ್ನು ತಿನ್ನುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳು
ಪೌಷ್ಟಿಕ ಆಹಾರದ ಭಾಗವಾಗಿ ಸೇವಿಸಿದಾಗ, ರೋಟಿಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡಬಹುದು:
· ನಿರಂತರ ಎನರ್ಜಿ: ರೋಟಿಗಳಲ್ಲಿರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ಗಳು ಸ್ಥಿರವಾಗಿ ಎನರ್ಜಿ ಬಿಡುಗಡೆ ಮಾಡುತ್ತವೆ, ಈ ಮೂಲಕ ನಿಮ್ಮನ್ನು ದೀರ್ಘಕಾಲ ಶಕ್ತಿಯುತವಾಗಿರುವಂತೆ ಮಾಡುತ್ತವೆ.
· ಉತ್ತಮ ಜೀರ್ಣಕ್ರಿಯೆ: ಗೋಧಿಯ ರೋಟಿಗಳು ಆಹಾರದ ಫೈಬರ್ ನ ಒಳ್ಳೆಯ ಮೂಲವಾಗಿದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ, ನಿಯಮಿತವಾಗಿ ಕರುಳಿನ ಕಾರ್ಯಕ್ಕೆ ಉತ್ತೇಜಿಸುತ್ತವೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತವೆ.
· ದುರಸ್ತಿ ಮತ್ತು ನಿರ್ವಹಣೆಗೆ ಪ್ರೋಟೀನ್: ರೋಟಿಗಳಲ್ಲಿರುವ ಸಸ್ಯ ಆಧಾರಿತ ಪ್ರೋಟೀನ್ ಸ್ನಾಯುವಿನ ಬೆಳವಣಿಗೆಗೆ, ಅಂಗಾಂಶ ದುರಸ್ತಿಗೆ ಮತ್ತು ರೋಗನಿರೋಧಕ ಕಾರ್ಯಕ್ಕೆ ಕೊಡುಗೆ ನೀಡುತ್ತದೆ.
· ಹೃದಯ ಆರೋಗ್ಯ: ಗೋಧಿ ಹಿಟ್ಟಿನ ರೋಟಿಗಳಲ್ಲಿರುವ ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
· ರಕ್ತದ ಸಕ್ಕರೆ ನಿರ್ವಹಣೆ: ರೋಟಿಗಳಲ್ಲಿರುವ ಫೈಬರ್ ಮತ್ತು ಕಾಂಪ್ಲೆಕ್ಸ್ ಕಾರ್ಬ್ ಗಳು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತವೆ, ಇದು ಡಯಾಬಿಟಿಸ್ ಇರುವವರಿಗೆ ಒಳ್ಳೆಯ ಆಯ್ಕೆಯಾಗಿದೆ.
ಆದರೆ, ಈ ಪ್ರಯೋಜನಗಳನ್ನು ಪಡೆಯಲು ರೋಟಿಯ ಪ್ರಮಾಣವನ್ನು ನಿಯಂತ್ರಣ ಮಾಡುವುದನ್ನು ಅಭ್ಯಾಸ ಮಾಡುವುದು, ಸಂಸ್ಕರಿತ ಹಿಟ್ಟಿನ ರೋಟಿಗಳಿಗಿಂತ ಸಂಪೂರ್ಣ ಗೋಧಿಯ ರೋಟಿಗಳನ್ನು ಆಯ್ಕೆ ಮಾಡುವುದು, ಮತ್ತು ತುಪ್ಪ ಅಥವಾ ಬೆಣ್ಣೆಯಂತಹ ಸೇರಿಸಿದ ಕೊಬ್ಬಿನಂಶಗಳನ್ನು ಮಿತಿಗೊಳಿಸುವುದು ಮುಖ್ಯ.
ಒಂದು ರೋಟಿಯಿಂದ (40 ಗ್ರಾಂ) ಬರುವ 120 ಕ್ಯಾಲರಿಗಳನ್ನು ಹೇಗೆ ಬರ್ನ್ ಮಾಡುವುದು?
1 ರೋಟಿಯ ಕ್ಯಾಲರಿಗಳನ್ನು ಬರ್ನ್ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ನಿಮಗಾಗಿ ಒಂದು ಮಧ್ಯಮ ಗಾತ್ರದ ರೋಟಿಯಲ್ಲಿ ಕಂಡುಬರುವ 120 ಕ್ಯಾಲರಿಗಳನ್ನು ಖರ್ಚು ಮಾಡಲು ಸಹಾಯ ಮಾಡುವ ಕೆಲವು ಚಟುವಟಿಕೆಗಳನ್ನು ಈ ಕೆಳಗೆ ನೀಡಿದ್ದೇವೆ:
· ವೇಗವಾಗಿ ನಡೆಯುವುದು (4 ಗಂಟೆಗೆ 4 ಮೈಲಿ), 25-30 ನಿಮಿಷಗಳ ಕಾಲ
· ಜಾಗಿಂಗ್ 12-15 ನಿಮಿಷಗಳ ಕಾಲ
· ಮಧ್ಯಮ ವೇಗದಲ್ಲಿ ಸೈಕ್ಲಿಂಗ್ 20-25 ನಿಮಿಷಗಳ ಕಾಲ
· ಲ್ಯಾಪ್ ಗಳಲ್ಲಿ ಈಜುವುದು 15-20 ನಿಮಿಷಗಳ ಕಾಲ
· ಸ್ಟ್ರೆಂಥ್ ಟ್ರೇನಿಂಗ್ (ಉದಾಹರಣೆಗೆ, ಭಾರ ಎತ್ತುವಿಕೆ) 20-25 ನಿಮಿಷಗಳ ಕಾಲ
120 ಕ್ಯಾಲರಿಗಳನ್ನು ಬರ್ನ್ ಮಾಡಲು ಬೇಕಾದ ನಿಖರವಾದ ಅವಧಿಯು ನಿಮ್ಮ ದೇಹದ ತೂಕ, ಚಟುವಟಿಕೆಯ ತೀವ್ರತೆ ಮತ್ತು ವೈಯಕ್ತಿಕ ಚಯಾಪಚಯ ಕ್ರಿಯೆಯನ್ನು ಅವಲಂಬಿಸಿ ಬದಲಾಗುತ್ತದೆ. ಆದರೆ, ರೋಟಿಯ ಸೇವನೆಯನ್ನು ಲೆಕ್ಕಿಸದೆ, ಒಟ್ಟಾರೆ ಆರೋಗ್ಯ ಮತ್ತು ತೂಕ ನಿರ್ವಹಣೆಗೆ ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಮುಖ್ಯ.
ಕೊನೆಯ ಮಾತು
ಮೆಟ್ರೋಪೊಲೀಸ್ ಹೆಲ್ತ್ ಕೇರ್‌ನಲ್ಲಿ ನಾವು ಆರೋಗ್ಯಕರ ಜೀವನಶೈಲಿ ಆಯ್ಕೆಗಳನ್ನು ಮಾಡಲು ಜನರಿಗೆ ಜ್ಞಾನವನ್ನು ನೀಡುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ. ಭಾರತದಾದ್ಯಂತ ಇರುವ ನಮ್ಮ ಸುಧಾರಿತ ಡಯಾಗ್ನಾಸ್ಟಿಕ್ ಪ್ರಯೋಗಾಲಯಗಳ ಜಾಲ ಮತ್ತು ತಜ್ಞ ಫ್ಲೆಬೊಟೊಮಿಸ್ಟ್ ಗಳ ತಂಡವು ನಿಖರವಾದ ಪೆಥಾಲಜಿ ಪರೀಕ್ಷೆ ಮತ್ತು ವೈಯಕ್ತಿಕ ಆರೈಕೆ ಒದಗಿಸಲು ಬದ್ಧವಾಗಿದೆ. ನಿಮಗೆ ರಕ್ತ ಪರೀಕ್ಷೆ ಅಥವಾ ವಿಶೇಷ ಆರೋಗ್ಯ ತಪಾಸಣೆಗಳ ಅಗತ್ಯವಿದ್ದರೂ, ಮೆಟ್ರೋಪೊಲೀಸ್ ನ ಮೇಲೆ ಭರವಸೆ ಇಡಬಹುದು. ಯಾಕೆಂದರೆ ಇದು ವಿಶ್ವಾಸಾರ್ಹ ಫಲಿತಾಂಶಗಳನ್ನು ಒದಗಿಸುತ್ತದೆ ಮತ್ತು ನಿಮ್ಮ ಯೋಗಕ್ಷೇಮ ಕಾಪಾಡಲು ನೆರವಾಗುತ್ತದೆ.
ರೋಟಿಯ ಕ್ಯಾಲರಿಗಳು ಮತ್ತು ಪೌಷ್ಟಿಕತೆಯ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಒಂದು ರೋಟಿಯಲ್ಲಿ ಎಷ್ಟು ಕ್ಯಾಲರಿಗಳಿವೆ?
ಒಂದು ಮಧ್ಯಮ ಗಾತ್ರದ ಸಂಪೂರ್ಣ ಗೋಧಿಯ ರೋಟಿ (ಸುಮಾರು 40 ಗ್ರಾಂ) ಸುಮಾರು 120 ಕ್ಯಾಲರಿಗಳನ್ನು ಹೊಂದಿರುತ್ತದೆ.
1 ರೋಟಿಯ ಕ್ಯಾಲರಿಗಳನ್ನು ಹೇಗೆ ಬರ್ನ್ ಮಾಡುವುದು?
ಒಂದು ಮಧ್ಯಮ ಗಾತ್ರದ ರೋಟಿಯಲ್ಲಿ ಕಂಡುಬರುವ 120 ಕ್ಯಾಲರಿಗಳನ್ನು ಸುಡಲು, 25-30 ನಿಮಿಷಗಳ ಕಾಲ ವೇಗವಾಗಿ ನಡೆಯುವುದು ಅಥವಾ 12-15 ನಿಮಿಷಗಳ ಕಾಲ ಜಾಗಿಂಗ್ ಮಾಡುವಂತಹ ಚಟುವಟಿಕೆಗಳಲ್ಲಿ ತೊಡಗಬಹುದು. ಇದು ನಿಮ್ಮ ತೂಕ ಮತ್ತು ನಡಿಗೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ.
ತೂಕ ಕಡಿಮೆಗೊಳಿಸಲು ದಿನಕ್ಕೆ 1 ರೋಟಿ ಒಳ್ಳೆಯದೇ?
ದಿನಕ್ಕೆ ಒಂದು ರೋಟಿಯನ್ನು ತಿನ್ನುವುದು ತೂಕ ಕಡಿಮೆಗೊಳಿಸುವ ಆಹಾರದ ಭಾಗವಾಗಿರಬಹುದು. ಇದನ್ನು ಕ್ಯಾಲರಿ -ನಿಯಂತ್ರಿತ ಆಹಾರ ಯೋಜನೆಯ ಭಾಗವಾಗಿ ಬಳಸಬಹುದು. ಗೋಧಿಯ ರೋಟಿಗಳಲ್ಲಿರುವ ಫೈಬರ್ ಮತ್ತು ಪ್ರೋಟೀನ್ ನಿಮ್ಮನ್ನು ತೃಪ್ತಿಕರವಾಗಿರಿಸಲು ಸಹಾಯ ಮಾಡುತ್ತದೆ.
ದಿನಕ್ಕೆ 15 ಚಪಾತಿಗಳನ್ನು ತಿನ್ನಬಹುದೇ?
ದಿನಕ್ಕೆ 15 ರೋಟಿಗಳನ್ನು ತಿನ್ನುವುದು ಬಹುತೇಕ ವಯಸ್ಕರಿಗೆ ಅತಿಯಾಗಿರಬಹುದು ಮತ್ತು ಕ್ಯಾಲರಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಸಂಭಾವ್ಯವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು. ನಿಮ್ಮ ವೈಯಕ್ತಿಕ ಕ್ಯಾಲರಿ ಅಗತ್ಯಗಳನ್ನು ಅವಲಂಬಿಸಿ, ಪ್ರತಿ ಊಟಕ್ಕೆ 2-4 ರೋಟಿಗಳಿಗೆ ಸೀಮಿತಗೊಳಿಸುವುದು ಉತ್ತಮ.
ತೂಕ ಕಡಿಮೆಗೊಳಿಸಲು ರೋಟಿಯು ಅಕ್ಕಿಗಿಂತ ಒಳ್ಳೆಯದೇ?
ರೋಟಿ ವರ್ಸಸ್ ಅಕ್ಕಿ ವಿಚಾರದಲ್ಲಿ ನೋಡುವುದಾದರೆ ಕ್ಯಾಲರಿಗಳ ವಿಷಯದಲ್ಲಿ, ಗೋಧಿಯ ರೋಟಿಗಳು ಸಾಮಾನ್ಯವಾಗಿ ಬಿಳಿಯ ಅಕ್ಕಿಗಿಂತ ತೂಕ ಕಡಿಮೆಗೊಳಿಸಲು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ರೋಟಿಗಳು ಸಾಮಾನ್ಯವಾಗಿ ಹೆಚ್ಚು ಫೈಬರ್ ಮತ್ತು ಪ್ರೋಟೀನ್ ಒದಗಿಸುತ್ತದೆ. ಇದು ತೃಪ್ತಿಯನ್ನು ಹೆಚ್ಚಿಸಲು ಮತ್ತು ರಕ್ತದ ಸಕ್ಕರೆ ನಿಯಂತ್ರಣವನ್ನು ಮಾಡಲು ಸಹಾಯ ಮಾಡುತ್ತದೆ.
ಡಯಾಬಿಟಿಸ್ ಇರುವವರು ರೋಟಿಯನ್ನು ದಿನನಿತ್ಯ ತಿನ್ನಬಹುದೇ?
ಹೌದು, ಡಯಾಬಿಟಿಸ್ ಇರುವವರು ಗೋಧಿ ರೋಟಿಯ ಗಾತ್ರದ ಆಧಾರದ ಮೇಲೆ ರೋಟಿಗಳನ್ನು ದಿನನಿತ್ಯ ತಿನ್ನಬಹುದು. ಗೋಧಿಯಲ್ಲಿರುವ ಫೈಬರ್ ಮತ್ತು ಕಾಂಪ್ಲೆಕ್ಸ್ ಕಾರ್ಬ್ ಗಳು ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
ತುಪ್ಪ ಸೇರಿಸುವುದರಿಂದ ರೋಟಿಯ ಕ್ಯಾಲರಿಗಳು ಹೆಚ್ಚಾಗುತ್ತವೆಯೇ?
ಹೌದು, ರೋಟಿಗಳಿಗೆ ತುಪ್ಪವನ್ನು ಸೇರಿಸುವುದರಿಂದ ಕ್ಯಾಲರಿ ಸಂಖ್ಯೆಯು ಹೆಚ್ಚಾಗುತ್ತದೆ. ಒಂದು ಚಮಚ (5 ಗ್ರಾಂ) ತುಪ್ಪವು ಸುಮಾರು 45 ಕ್ಯಾಲರಿಗಳನ್ನು ಹೊಂದಿರುತ್ತದೆ, ಆದ್ದರಿಂದ ನೀವು ಕ್ಯಾಲರಿ ಸೇವನೆಯನ್ನು ಗಮನಿಸುತ್ತಿದ್ದರೆ ಇದನ್ನು ಕಡಿಮೆಯಾಗಿ ಬಳಸುವುದು ಮುಖ್ಯ.
2 ರೋಟಿಗಳು ತುಂಬಾ ಹೆಚ್ಚಾಗುತ್ತದೆಯೇ?
ಒಂದು ಊಟದಲ್ಲಿ ಎರಡು ಮಧ್ಯಮ ಗಾತ್ರದ ರೋಟಿಗಳನ್ನು ತಿನ್ನುವುದು ಹೆಚ್ಚಿನ ಆರೋಗ್ಯಕರ ವಯಸ್ಕರಿಗೆ ಸಾಮಾನ್ಯವಾಗಿ ತುಂಬಾ ಹೆಚ್ಚೆಂದು ಪರಿಗಣಿಸಲಾಗುವುದಿಲ್ಲ. ಆದರೆ, ರೋಟಿಯ ಸೇವನೆಯನ್ನು ತರಕಾರಿಗಳು, ಸೊಂಪಾದ ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳಂತಹ ಇತರ ಪೌಷ್ಟಿಕ-ಸಾಂದ್ರ ಆಹಾರಗಳೊಂದಿಗೆ ಸಮತೋಲನಗೊಳಿಸುವುದು ಬಹಳ ಮುಖ್ಯ.
ಯಾವ ರೋಟಿಯಲ್ಲಿ ಕಡಿಮೆ ಕ್ಯಾಲರಿಗಳಿವೆ?
ಓಟ್ಸ್, ರಾಗಿ, ಅಥವಾ ಕಡಲೆಹಿಟ್ಟಿನಂತಹ ಪರ್ಯಾಯ ಹಿಟ್ಟಿನಿಂದ ತಯಾರಾದ ರೋಟಿಗಳು ಸಾಮಾನ್ಯ ಸಂಪೂರ್ಣ ಗೋಧಿಯ ರೋಟಿಗಳಿಗಿಂತ ಸ್ವಲ್ಪ ಕಡಿಮೆ ಕ್ಯಾಲರಿಗಳನ್ನು ಹೊಂದಿರುತ್ತವೆ. ತಯಾರಿಕೆಯ ಸಮಯದಲ್ಲಿ ಕಡಿಮೆ ಎಣ್ಣೆ ಅಥವಾ ತುಪ್ಪವನ್ನು ಬಳಸುವುದರಿಂದ ಕ್ಯಾಲರಿ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೂಕ ಕಡಿಮೆಗೊಳಿಸಲು ರೋಟಿಯನ್ನು ಬಿಟ್ಟುಬಿಡಬಹುದೇ?
ಹೌದು, ತೂಕ ಕಡಿಮೆಗೊಳಿಸಲು ತುಂಬಾ ಕಡಿಮೆ ಕ್ಯಾಲರಿ ಆಹಾರವನ್ನು ಅನುಸರಿಸುತ್ತಿದ್ದರೆ ರೋಟಿಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡಬಹುದು. ಆದರೆ, ರೋಟಿಗಳಲ್ಲಿ ಕಂಡುಬರುವ ಪೋಷಕಾಂಶಗಳನ್ನು ಇತರ ಆರೋಗ್ಯಕರ ಆಹಾರ ಮೂಲಗಳಿಂದ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ, ಇದರಿಂದ ಆರೋಗ್ಯ ಸಮಸ್ಯೆ ಗಳನ್ನು ತಪ್ಪಿಸಬಹುದು.









