Language
ಸೇಬಿನಲ್ಲಿ ಎಷ್ಟು ಕ್ಯಾಲರಿಗಳಿರುತ್ತವೆ? ರಕ್ತದ ಸಕ್ಕರೆ ಮಟ್ಟ ಮತ್ತು ಹೃದಯದ ಆರೋಗ್ಯಕ್ಕೆ ಸೇಬಿನಿಂದಾಗುವ ಪ್ರಯೋಜನಗಳು
Table of Contents
ಸೇಬು ಮತ್ತು ಅದರ ಕ್ಯಾಲರಿಗಳ ಬಗ್ಗೆ ಒಂದು ನೋಟ
ಸೇಬುಗಳು ವಿಶ್ವದಾದ್ಯಂತ ತುಂಬಾ ಜನಪ್ರಿಯವಾದ ಮತ್ತು ಹೆಚ್ಚು ತಿನ್ನಲ್ಪಡುವ ಹಣ್ಣುಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ, ಅವು ರುಚಿಕರವಾಗಿದ್ದು, ಬಹುಮುಖ ಗುಣ ಹೊಂದಿದ್ದು. ವಿಶೇಷವೆಂದರೆ ಸೇಬು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತವೆ. ವೈಜ್ಞಾನಿಕವಾಗಿ ಮಾಲಸ್ ಡೊಮೆಸ್ಟಿಕಾ ಎಂದು ಕರೆಯಲ್ಪಡುವ ಸೇಬುಗಳು ಮಧ್ಯ ಏಷ್ಯಾದಲ್ಲಿ ಹುಟ್ಟಿಕೊಂಡವು. ಇಂದು, ಇವು ವಿಶ್ವದಾದ್ಯಂತ ಹಲವಾರು ವಿಧಗಳಲ್ಲಿ ಲಭ್ಯವಿವೆ.
ಒಂದು ಮಧ್ಯಮ ಗಾತ್ರದ ಸೇಬು ಸಾಮಾನ್ಯವಾಗಿ 94 ರಿಂದ 100 ಕ್ಯಾಲರಿಗಳನ್ನು ಹೊಂದಿರುತ್ತದೆ. ಇದು ಸೇಬಿನ ಗಾತ್ರ ಮತ್ತು ಸಿಪ್ಪೆ ತಿನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಸೇಬುಗಳು ಹೆಚ್ಚಿನ ನಾರಿನಂಶ (ಫೈಬರ್) ಮತ್ತು ನೀರಿನಂಶವನ್ನು ಹೊಂದಿದ್ದು, ಹಾಗಾಗಿ ಇದೊಂದು ತೃಪ್ತಿಕರ ಮತ್ತು ಪೌಷ್ಟಿಕ ಆಹಾರವಾಗಿದೆ. ಸೇಬು ತಿನ್ನುವುದರಿಂದ ಜೀರ್ಣಕ್ರಿಯೆ ಮತ್ತು ಹೃದಯ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ, ನಿಯಮಿತವಾಗಿ ಸೇಬು ತಿನ್ನುವುದರಿಂದ ತೂಕ ನಿರ್ವಹಣೆ ಮಾಡಬಹುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಒಂದು ಸೇಬಿನಲ್ಲಿ ಎಷ್ಟು ಕ್ಯಾಲರಿಗಳಿವೆ?
"ಒಂದು ಸೇಬಿನಲ್ಲಿ ಎಷ್ಟು ಕ್ಯಾಲರಿಗಳಿವೆ?" ಎಂದು ನೀವು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಸೇಬಿನ ಗಾತ್ರ ಮತ್ತು ಅಧರ ಸಿಪ್ಪೆಯನ್ನು ತಿನ್ನುತ್ತೀರೋ ಬಿಡುತ್ತೀರೋ ಅನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಆ ಕುರಿತ ವಿವರ ಇಲ್ಲಿದೆ:
· ಸಿಪ್ಪೆ ಜೊತೆಗಿನ ಮಧ್ಯಮ ಗಾತ್ರದ ಸೇಬು: ಸುಮಾರು 94.6 ಕ್ಯಾಲರಿಗಳು
· 200 ಗ್ರಾಂ ತೂಕದ ಮಧ್ಯಮ ಗಾತ್ರದ ಸೇಬು: ಸುಮಾರು 100 ಕ್ಯಾಲರಿಗಳು
· 3 ಇಂಚು ವ್ಯಾಸದ, ಸಿಪ್ಪೆ ಜೊತೆಗಿನ ಸೇಬು: ಸುಮಾರು 95 ಕ್ಯಾಲರಿಗಳು
ಆದ್ದರಿಂದ, "ಒಂದು ಸೇಬಿನ ಕ್ಯಾಲರಿಗಳು" ಎಂದಾಗ, ಮಧ್ಯಮ ಗಾತ್ರದ ಸೇಬು ಸಾಮಾನ್ಯವಾಗಿ 100 ಕ್ಯಾಲರಿಗಳಿಗಿಂತ ಕಡಿಮೆ ಕ್ಯಾಲರಿಗಳನ್ನು ಹೊಂದಿದೆ.
ಸೇಬಿನ ಪೌಷ್ಟಿಕಾಂಶದ ಮಾಹಿತಿ
ರುಚಿಕರವಾದ ಸೇಬು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು ಅದ್ಭುತವಾಗಿವೆ. ಒಂದು ಮಧ್ಯಮ ಗಾತ್ರದ ಸೇಬಿನ ಪೌಷ್ಟಿಕಾಂಶದ ವಿವರ ಹೀಗಿದೆ:
· ಕ್ಯಾಲರಿಗಳು: 94.6-100
· ನೀರು: 156 ಗ್ರಾಂ
· ಪ್ರೋಟೀನ್: 0.43-0.5 ಗ್ರಾಂ
· ಕಾರ್ಬೋಹೈಡ್ರೇಟ್: 25.1-25 ಗ್ರಾಂ
· ಸಕ್ಕರೆ: 18.9-19 ಗ್ರಾಂ
· ನಾರಿನಂಶ: 4.37-4 ಗ್ರಾಂ (ಸಿಪ್ಪೆ ಜೊತೆಗೆ), 2 ಗ್ರಾಂ (ಸಿಪ್ಪೆ ಇಲ್ಲದೆ)
· ಕೊಬ್ಬು: 0.3 ಗ್ರಾಂ
· ವಿಟಮಿನ್ ಸಿ: ದೈನಂದಿನ ಮೌಲ್ಯದ (ಡಿವಿ) ಸುಮಾರು ಶೇ.10
· ಪೊಟ್ಯಾಸಿಯಮ್: ಡಿವಿಯ ಸುಮಾರು ಶೇ.5
· ವಿಟಮಿನ್ ಕೆ: ಡಿವಿಯ ಸುಮಾರು ಶೇ.4
ಈ ಪೌಷ್ಟಿಕಾಂಶಗಳು ಒಟ್ಟಿಗೆ ಕೆಲಸ ಮಾಡಿ, ಸೇಬಿನ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.
ಸೇಬಿನ ಆರೋಗ್ಯ ಪ್ರಯೋಜನಗಳು
ಹೆಚ್ಚಿನ ನಾರಿನಂಶ
ಸೇಬು ತಿನ್ನುವ ಪ್ರಮುಖ ಪ್ರಯೋಜನವೆಂದರೆ ಅದರ ಹೆಚ್ಚಿನ ನಾರಿನಂಶ, ವಿಶೇಷವಾಗಿ ಸಿಪ್ಪೆ ಜೊತೆ ತಿಂದರೆ ಹೆಚ್ಚು ನಾರಿನಂಶವಿದೆ. ಸೇಬುಗಳು ಪೆಕ್ಟಿನ್ ನಂತಹ ಕರಗುವ ನಾರಿನಂಶವನ್ನು ಹೊಂದಿವೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ತೃಪ್ತಿಯ ಭಾವನೆಯನ್ನು ಒದಗಿಸುತ್ತದೆ ಮತ್ತು ತೂಕ ನಿರ್ವಹಣೆಗೆ ನೆರವು ನೀಡುತ್ತದೆ. ಸೇಬಿನಲ್ಲಿರುವ ನಾರಿನಂಶವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದ್ದು, ಇದು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯಕವಾಗಿದೆ.
ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
ಸೇಬಿನಲ್ಲಿರುವ ನಾರಿನಂಶ ಮತ್ತು ಪಾಲಿಫಿನಾಲ್‌ಗಳು ಹೃದಯ ಆರೋಗ್ಯಕ್ಕೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತವೆ. ಈ ಸಂಯುಕ್ತಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳು ಮತ್ತು ಹೃದಯಕ್ಕೆ ಹಾನಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತವೆ. ಜೀವಕೋಶಗಳ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ, ಸೇಬಿನ ಪೌಷ್ಟಿಕಾಂಶಗಳು ಒಟ್ಟಾರೆ ಹೃದಯ ಆರೋಗ್ಯವನ್ನು ಸುಧಾರಿಸುತ್ತವೆ.
ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಸೇಬುಗಳ ಗ್ಲೈಸೆಮಿಕ್ ಸೂಚ್ಯಂಕ 29 ರಿಂದ 44 ರವರೆಗೆ ಇರುವುದರಿಂದ, ಇವು ಇತರ ಆಹಾರಗಳಿಗೆ ಹೋಲಿಸಿದರೆ ರಕ್ತದ ಸಕ್ಕರೆ ಮಟ್ಟದಲ್ಲಿ ತೀವ್ರ ಏರಿಳಿತವನ್ನು ಉಂಟುಮಾಡುವುದಿಲ್ಲ. ಸೇಬಿನಲ್ಲಿರುವ ನಾರಿನಂಶ ಮತ್ತು ಪಾಲಿಫಿನಾಲ್‌ಗಳು ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಮತ್ತು ಟೈಪ್ 2 ಡಯಾಬಿಟೀಸ್‌ನಿಂದ ರಕ್ಷಣೆ ನೀಡಲು ಸಹಾಯ ಮಾಡುತ್ತವೆ.
ತೂಕ ಕಡಿಮೆ ಮಾಡಲು ಸಹಾಯ ಮಾಡಬಹುದು
ಸೇಬುಗಳ ಹೆಚ್ಚಿನ ನಾರಿನಂಶ ಮತ್ತು ನೀರಿನಂಶ ಹೊಂದಿದ್ದು, ಈ ಅಂಶಗಳು ಇದನ್ನು ತೃಪ್ತಿಕರ ಆಹಾರವಾಗಿ ಮಾಡಿವೆ. ಇದು ತೂಕ ಕಡಿಮೆ ಮಾಡಲು ಬಯಸುವವರಿಗೆ ಉಪಯುಕ್ತವಾಗಿದೆ. ಕ್ಯಾಲರಿ ನಿಯಂತ್ರಿತ ಆಹಾರದ ಭಾಗವಾಗಿ ಸೇಬು ತಿನ್ನುವುದರಿಂದ ತೂಕ ಕಡಿಮೆಯಾಗುವುದನ್ನು ಅಧ್ಯಯನಗಳು ತೋರಿಸಿವೆ.
ಆಂಟಿಆಕ್ಸಿಡೆಂಟ್ಗಳಿಂದ ತುಂಬಿದೆ
ಸೇಬುಗಳು ಕ್ವೆರ್ಸೆಟಿನ್, ಕ್ಯಾಟೆಚಿನ್, ಫ್ಲೋರಿಡ್ಜಿನ್ ಮತ್ತು ಕ್ಲೋರೊಜೆನಿಕ್ ಆಸಿಡ್ ನಂತಹ ಆಂಟಿಆಕ್ಸಿಡೆಂಟ್‌ಗಳ ಉತ್ತಮ ಮೂಲವಾಗಿವೆ. ಈ ಶಕ್ತಿಯುತ ಸಂಯುಕ್ತಗಳು ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತವೆ. ಇದು ಕ್ಯಾನ್ಸರ್, ಹೃದಯ ರೋಗ ಮತ್ತು ಟೈಪ್ 2 ಡಯಾಬಿಟೀಸ್‌ನಂತಹ ದೀರ್ಘಕಾಲಿಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡಬಹುದು
ಸೇಬಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳು ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಈ ಸಂಯುಕ್ತಗಳು ಗೆಡ್ಡೆಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ತಡೆಯಲು ಸಹಾಯ ಮಾಡಬಹುದು. ಇದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುವ ಅಗತ್ಯವಿದ್ದರೂ ಸೇಬಿನ ಆಂಟಿಆಕ್ಸಿಡೆಂಟ್‌ಗಳು ಖಂಡಿತವಾಗಿಯೂ ಉತ್ತಮ ಪ್ರಯೋಜನ ಒದಗಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಸೇಬುಗಳು ವಿಟಮಿನ್ ಸಿಯ ಒಳ್ಳೆಯ ಮೂಲವಾಗಿದ್ದು, ಇದು ರೋಗನಿರೋಧಕ ವ್ಯವಸ್ಥೆಗೆ ನೆರವಾಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಇವೆರಡೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮುಖ್ಯವಾಗಿವೆ. "ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು" ಎಂಬ ಮಾತಿನಂತೆ, ಸೇಬು ತಿನ್ನುವುದರಿಂದ ದೇಹದ ನೈಸರ್ಗಿಕ ರಕ್ಷಣೆಯನ್ನು ಕಾಪಾಡಿಕೊಳ್ಳಬಹುದು.
ಮೂಳೆ ಆರೋಗ್ಯ
ಮೂಳೆ ಆರೋಗ್ಯದ ಬಗ್ಗೆ ಯೋಚಿಸಿದಾಗ ಸೇಬು ಮೊದಲಿಗೆ ಮನಸ್ಸಿಗೆ ಬರದಿದ್ದರೂ, ಇವು ಮೂಳೆಗಳನ್ನು ಬಲಪಡಿಸುವ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಸೇಬುಗಳು ಬೋರಾನ್ ಖನಿಜವನ್ನು ಹೊಂದಿದ್ದು, ಇದು ಮೂಳೆಗಳನ್ನು ಬಲವಾಗಿರುವಂತೆ ನೋಡಲು ಸಹಾಯ ಮಾಡುತ್ತದೆ. ಜೊತೆಗೆ, ಆಂಟಿಆಕ್ಸಿಡೆಂಟ್‌ಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ಒಟ್ಟಾರೆ ಮೂಳೆ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.
ಜೀರ್ಣಕ್ರಿಯೆ ಆರೋಗ್ಯ
ಸೇಬಿನಲ್ಲಿರುವ ನಾರಿನಂಶವು ಜೀರ್ಣಕ್ರಿಯೆ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಭೇದಿ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಇದರ ಜೊತೆಗೆ, ಈ ನಾರಿನಂಶವು ಪ್ರಿಬಯಾಟಿಕ್ ಆಗಿ ಕೆಲಸ ಮಾಡಿ, ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಆಹಾರವನ್ನು ಒದಗಿಸುತ್ತದೆ ಮತ್ತು ಆರೋಗ್ಯಕರ ಮೈಕ್ರೋಬಯೋಮ್ ಉಂಟಾಗುವಂತೆ ನೋಡಿಕೊಳ್ಳುತ್ತದೆ.
ಸೇಬು ತಿನ್ನುವುದರಿಂದ ಯಾವುದೇ ದುಷ್ಪರಿಣಾಮಗಳಿವೆಯೇ?
ಹೆಚ್ಚಿನ ಜನರಿಗೆ, ಸೇಬು ಸುರಕ್ಷಿತ ಮತ್ತು ಆರೋಗ್ಯಕರ ಆಹಾರವಾಗಿದ್ದು, ಸಾಮಾನ್ಯವಾಗಿ ಯಾವುದೇ ಗಂಭೀರ ದುಷ್ಪರಿಣಾಮಗಳಿಲ್ಲ. ಆದರೆ, ಕೆಲವು ವಿಷಯಗಳನ್ನು ಗಮನದಲ್ಲಿಡಬೇಕು:
· ಅಲರ್ಜಿಗಳು: ಕೆಲವರಿಗೆ ಸೇಬಿನಿಂದ ಅಲರ್ಜಿಯಾಗಬಹುದು. ಆದರೆ ಇದು ಅಪರೂಪ. ಒಂದು ವೇಳೆ ನಿಮಗೆ ಸೇಬಿನ ಅಲರ್ಜಿ ಇರಬಹುದೆಂದು ಶಂಕೆಯಾದರೆ, ವೈದ್ಯರನ್ನು ಸಂಪರ್ಕಿಸಿ.
· ಜೀರ್ಣಕ್ರಿಯೆಯ ಅಸ್ವಸ್ಥತೆ: ಸೇಬಿನ ಹೆಚ್ಚಿನ ನಾರಿನಂಶವು ಕೆಲವರಿಗೆ ಉಬ್ಬರ, ವಾಯು ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡಬಹುದು, ವಿಶೇಷವಾಗಿ ನಾರಿನಂಶವುಳ್ಳ ಆಹಾರಕ್ಕೆ ಒಗ್ಗದವರಿಗೆ. ಇದನ್ನು ತಪ್ಪಿಸಲು, ಸೇಬನ್ನು ಕ್ರಮೇಣ ಆಹಾರದಲ್ಲಿ ಸೇರಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ.
ಕೊನೆಯ ಮಾತು
ಕಡಿಮೆ ಕ್ಯಾಲರಿ ಇರುವುದರಿಂದ ಹಿಡಿದು, ಆಕರ್ಷಕ ನಾರಿನಂಶ ಮತ್ತು ಆಂಟಿಆಕ್ಸಿಡೆಂಟ್ ಒದಗಿಸುವವರೆಗೆ ಸೇಬುಗಳು ಸಮತೋಲಿತ ಆಹಾರಕ್ಕೆ ಅಮೂಲ್ಯವಾದ ಸೇರ್ಪಡೆಯಾಗಿವೆ. ಸೇಬಿನ ಪೌಷ್ಟಿಕಾಂಶದ ಮಾಹಿತಿಯನ್ನು ಅರಿತುಕೊಂಡು, ಅದರ ಕ್ಯಾಲರಿಗಳು, ವಿಟಮಿನ್‌ಗಳು, ಮತ್ತು ಖನಿಜಗಳ ಬಗ್ಗೆ ತಿಳಿದುಕೊಂಡು, ಈ ರುಚಿಕರ ಹಣ್ಣನ್ನು ನಿಮ್ಮ ಆಹಾರ ಮತ್ತು ತಿಂಡಿಗಳಲ್ಲಿ ಸೇರಿಸಿಕೊಳ್ಳುವ ಆಯ್ಕೆಗಳನ್ನು ಮಾಡಬಹುದು.
ನಿಮ್ಮ ಆಹಾರದ ಅಗತ್ಯಗಳಿಗೆ ಸೇಬು ಹೇಗೆ ಸರಿಹೊಂದುತ್ತದೆ ಎಂಬುದರ ಕುರಿತು ಮಾರ್ಗದರ್ಶನ ಬೇಕಾದರೆ, ಮೆಟ್ರೋಪೊಲಿಸ್ ಹೆಲ್ತ್ ಕೇರ್ ತಂಡವನ್ನು ಸಂಪರ್ಕಿಸಿ. ಮನೆಯಿಂದಲೇ ಮಾದರಿ ಸಂಗ್ರಹಣೆ ಸೇರಿದಂತೆ ವಿವಿಧ ರೋಗನಿರ್ಣಯ ಸೇವೆಗಳನ್ನು ಮತ್ತು ಆರೋಗ್ಯ ತಪಾಸಣೆಗಳನ್ನು ಒದಗಿಸುವ ಈ ಸಂಸ್ಥೆಯು, ನಿಮ್ಮ ಆರೋಗ್ಯ ಪಾಲನೆ ಕುರಿತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಮಧ್ಯಮ ಗಾತ್ರದ ಸೇಬಿನಲ್ಲಿ ಎಷ್ಟು ಕ್ಯಾಲರಿಗಳಿವೆ?
ಮಧ್ಯಮ ಗಾತ್ರದ ಸೇಬು ಸಾಮಾನ್ಯವಾಗಿ 94.6 ರಿಂದ 100 ಕ್ಯಾಲರಿಗಳನ್ನು ಹೊಂದಿರುತ್ತದೆ. ಕಡಿಮೆ ಕ್ಯಾಲರಿ ಹೊಂದಿರುವುದರ ಜೊತೆಗೆ, ಸೇಬು ನಾರಿನಂಶ, ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸುತ್ತವೆ. ಇವು ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ನೆರವು ಒದಗಿಸುತ್ತದೆ.
ಒಂದು ಸೇಬಿನಲ್ಲಿ ಎಷ್ಟು ಕ್ಯಾಲರಿಗಳಿವೆ?
ಒಂದು ಸೇಬಿನ ಕ್ಯಾಲರಿಗಳು ಅದರ ಗಾತ್ರವನ್ನು ಅವಲಂಬಿಸಿರುತ್ತವೆ. ಆದರೆ ಮಧ್ಯಮ ಗಾತ್ರದ ಸೇಬು 94 ರಿಂದ 100 ಕ್ಯಾಲರಿಗಳನ್ನು ಒದಗಿಸುತ್ತದೆ. ಕ್ಯಾಲರಿಗಳ ಹೊರತಾಗಿ ನೋಡುವುದಾದರೆ ಸೇಬು ತಿನ್ನುವುದರಿಂದ ಜೀರ್ಣಕ್ರಿಯೆ, ಹೃದಯ ಆರೋಗ್ಯ ಕಾಪಾಡಬಹುದು ಮತ್ತು ಅಗತ್ಯ ಪೌಷ್ಟಿಕಾಂಶಗಳು ದೊರೆಯುತ್ತವೆ.
ತೂಕ ಕಡಿಮೆ ಮಾಡಲು ಎರಡು ಸೇಬು ತಿನ್ನಬಹುದೇ?
ತೂಕ ಕಡಿಮೆ ಮಾಡುವ ಯೋಜನೆಯ ಭಾಗವಾಗಿ ಎರಡು ಸೇಬು ತಿನ್ನುವುದು ತಿನ್ನಬಹುದು, ಏಕೆಂದರೆ ಇವು ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು, ಇದರ ಹೆಚ್ಚಿನ ನಾರಿನಂಶವು ತೃಪ್ತಿಯ ಭಾವನೆಯನ್ನು ಒದಗಿಸುತ್ತದೆ. ಆದರೆ, ತೂಕ ಕಡಿಮೆ ಮಾಡಲು ಕ್ಯಾಲರಿ ಕೊರತೆಯಾಗುವಂತೆ ನೋಡಿಕೊಳ್ಳುವುದು ಮುಖ್ಯವಾದ್ದರಿಂದ, ಸೇಬಿನ ಕ್ಯಾಲರಿಗಳನ್ನು ನಿಮ್ಮ ಒಟ್ಟಾರೆ ದೈನಂದಿನ ಆಹಾರದಲ್ಲಿ ಲೆಕ್ಕ ಹಾಕಿ ತಿನ್ನಿರಿ.
ದಿನಕ್ಕೆ ಎಷ್ಟು ಸೇಬು ತಿನ್ನಬಹುದು?
ದಿನಕ್ಕೆ ಎಷ್ಟು ಸೇಬು ತಿನ್ನಬಹುದು ಎಂಬುದು ನಿಮ್ಮ ವೈಯಕ್ತಿಕ ಕ್ಯಾಲರಿ ಅಗತ್ಯಗಳು ಮತ್ತು ಆಹಾರದ ಸೇವನೆಯನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಹೆಚ್ಚಿನ ಡಯಟ್ ಪ್ಲಾನ್ ಗಳಿಗೆ ದಿನಕ್ಕೆ 1-2 ಮಧ್ಯಮ ಗಾತ್ರದ ಸೇಬುಗಳು ಸೇರಿಸುವುದು ಆರೋಗ್ಯಕರ.
ಸೇಬುಗಳಲ್ಲಿ ಸಕ್ಕರೆ ಅಂಶ ಹೆಚ್ಚಿವೆಯೇ?
ಸೇಬುಗಳು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದರೂ, ಇವು ಹೆಚ್ಚು ಸಕ್ಕರೆ ಅಂಶವುಳ್ಳ ಆಹಾರವೆಂದು ಪರಿಗಣಿಸಲಾಗುವುದಿಲ್ಲ. ಒಂದು ಮಧ್ಯಮ ಗಾತ್ರದ ಸೇಬು ಸುಮಾರು 19 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ, ಆದರೆ ನಾರಿನಂಶ ಮತ್ತು ಇತರ ಪೌಷ್ಟಿಕಾಂಶಗಳು ಸಕ್ಕರೆಯನ್ನು ರಕ್ತದಲ್ಲಿ ನಿಧಾನವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಇದರಿಂದಾಗಿ, ಸೇಬುಗಳು ಇತರ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿವೆ.
ಯಾವ ಸೇಬಿನಲ್ಲಿ ಕಡಿಮೆ ಸಕ್ಕರೆ ಇದೆ?
ಸೇಬಿನ ವಿಧಗಳಿಗೆ ಅನುಗುಣವಾಗಿ ಸಕ್ಕರೆಯ ಪ್ರಮಾಣವು ಸ್ವಲ್ಪ ಬದಲಾಗುತ್ತದೆ. ಗ್ರ್ಯಾನಿ ಸ್ಮಿತ್, ಫುಜಿ ಮತ್ತು ಪಿಂಕ್ ಲೇಡಿ ಸೇಬುಗಳು ತುಲನಾತ್ಮಕವಾಗಿ ಕಡಿಮೆ ಸಕ್ಕರೆಯನ್ನು ಹೊಂದಿರುವ ಸೇಬಿನ ವಿಧಗಳಾಗಿವೆ. ಆದರೆ, ಸೇಬಿನ ವಿಧಗಳ ನಡುವಿನ ಸಕ್ಕರೆಯ ವ್ಯತ್ಯಾಸವು ಸಾಮಾನ್ಯವಾಗಿ ಕಡಿಮೆಯಾಗಿದ್ದು, ಎಲ್ಲಾ ಸೇಬುಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು.
ಸೇಬು ತೂಕ ಕಡಿಮೆ ಮಾಡಲು ಸಹಾಯ ಮಾಡಬಹುದೇ?
ಹೌದು, ಸೇಬು ತೂಕ ಕಡಿಮೆ ಮಾಡುವ ಯೋಜನೆಗೆ ಸಹಾಯಕವಾಗಬಹುದು. ಇವುಗಳ ಹೆಚ್ಚಿನ ನಾರಿನಂಶ ಮತ್ತು ನೀರಿನಂಶವು ಇದನ್ನು ತೃಪ್ತಿಕರ ತಿಂಡಿಯಾಗಿ ಮಾಡುತ್ತದೆ. ಇದು ಹಸಿವನ್ನು ಕಡಿಮೆ ಮಾಡಿ ಒಟ್ಟಾರೆ ಕ್ಯಾಲರಿ ಸೇವನೆಯನ್ನು ತಗ್ಗಿಸುತ್ತದೆ. ಜೊತೆಗೆ, ಸೇಬನ್ನು ಕಡಿಯುವ ಮತ್ತು ಅಗಿಯುವ ಕ್ರಿಯೆಯು ಬಾಯಿಗೆ ಒಳ್ಳೆಯದು ಮತ್ತು ಇದರಿಂದ ಹೆಚ್ಚಿನ ಕ್ಯಾಲರಿಯ ಆಹಾರ ಸೇವಿಸುವ ಆಸೆಯನ್ನು ಕಡಿಮೆ ಮಾಡಬಹುದು.
ಸೇಬು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದೇ?
ಸೇಬಿನಲ್ಲಿರುವ ನಾರಿನಂಶ ಮತ್ತು ಪಾಲಿಫಿನಾಲ್‌ಗಳು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ವಿಶೇಷವಾಗಿ, ಕರಗುವ ನಾರಿನಂಶವು ಕರುಳಿನಲ್ಲಿ ಕೊಲೆಸ್ಟ್ರಾಲ್‌ನ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ರಕ್ತದಲ್ಲಿ ಎಲ್.ಡಿ.ಎಲ್ (ಬ್ಯಾಡ್) ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.









