Language
ಮುಟ್ಟಿನ ಸಮಯದಲ್ಲಿನ ರಕ್ತ ಹೆಪ್ಪು ಗಟ್ಟುವಿಕೆ ಏನನ್ನು ಸೂಚಿಸುತ್ತದೆ?
Table of Contents
- ಕಾರಣಗಳು ಮತ್ತು ವೈದ್ಯರನ್ನು ಯಾವಾಗ ಭೇಟಿಯಾಗಬೇಕು ಎಂಬ ಸಂಪೂರ್ಣ ವಿವರ
- ಸಾಮಾನ್ಯ ವರ್ಸಸ್ ಅಸಾಮಾನ್ಯ ಹೆಪ್ಪು ಗಟ್ಟಿಗಳು
- ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪು ಗಟ್ಟುವುದು ಸಾಮಾನ್ಯವೇ?
- ಮುಟ್ಟಿನ ರಕ್ತದ ಹೆಪ್ಪು ಗಟ್ಟಿಗಳಿಗೆ ಕಾರಣಗಳೇನು?
- ಋತುಸ್ರಾವದ ಹೆಪ್ಪು ಗಟ್ಟಿಗಳ ಬಗ್ಗೆ ಯಾವಾಗ ಚಿಂತಿಸಬೇಕು?
- ಋತುಸ್ರಾವದ ಸಮಯದಲ್ಲಿ ಕಾಣಿಸಿಕೊಳ್ಳುವ ದೊಡ್ಡ ರಕ್ತ ಹೆಪ್ಪು ಗಟ್ಟಿಗಳ ಅರ್ಥವೇನು?
- ಋತುಸ್ರಾವದ ಹೆಪ್ಪು ಗಟ್ಟಿಗಳಿಗೆ ಆಧಾರವಾಗಿರುವ ಕಾರಣಗಳೇನು?
- ಗರ್ಭಾಶಯದ ಪಾಲಿಪ್‌ಗಳು ಅಥವಾ ಫೈಬ್ರಾಯಿಡ್‌ಗಳು
- ಎಂಡೋಮೆಟ್ರಿಯಾಸಿಸ್
- ಅಡೆನೊಮಿಯಾಸಿಸ್
- ಹಾರ್ಮೋನ್ ಅಸಮತೋಲನ
- ಗರ್ಭಪಾತ
- ಗರ್ಭಾಶಯದ ವಿಸ್ತರಣೆ
- ರಕ್ತಸ್ರಾವದ ಕಾಯಿಲೆಗಳು
- ವೈದ್ಯರನ್ನು ಯಾವಾಗ ಭೇಟಿಯಾಗಬೇಕು?
- ಋತುಸ್ರಾವದ ರಕ್ತ ಹೆಪ್ಪುಗಟ್ಟಿಗಳಿಂದ ಉಂಟಾಗುವ ತೊಡಕುಗಳೇನು?
- ಋತುಸ್ರಾವದ ಹೆಪ್ಪು ಗಟ್ಟಿಗಳ ಕಾರಣವನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ?
- ಋತುಸ್ರಾವದ ಹೆಪ್ಪು ಗಟ್ಟಿಗಳಿಗೆ ಚಿಕಿತ್ಸೆ ಹೇಗೆ ನೀಡಲಾಗುತ್ತದೆ?
- ಕೊನೆಯ ಮಾತು
ಕಾರಣಗಳು ಮತ್ತು ವೈದ್ಯರನ್ನು ಯಾವಾಗ ಭೇಟಿಯಾಗಬೇಕು ಎಂಬ ಸಂಪೂರ್ಣ ವಿವರ
ಮುಟ್ಟಿನ ಸಮಯದಲ್ಲಿ ಅಥವಾ ಋತುಸ್ರಾವದ ಸಮಯದಲ್ಲಿ ರಕ್ತ ಹೆಪ್ಪು ಗಟ್ಟುವುದು ಸಾಮಾನ್ಯವಾಗಿ ಕಂಡುಬರುವ ಒಂದು ಸಂಗತಿಯಾಗಿದೆ. ಆದರೆ ಈ ಸಂಗತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ ಎನ್ನುವುದು ಗಮನಾರ್ಹ. ಈ ಸಮಯದಲ್ಲಿ ಬ್ಲಡ್ ಕ್ಲಾಟ್ ಗಳು ಅಥವಾ ರಕ್ತದ ಹೆಪ್ಪು ಗಟ್ಟಿಗಳು ಕಾಣಿಸಿಕೊಳ್ಳುವುದು ಸಾಧಾರಣ ವಿಷಯವಾದರೂ, ದೊಡ್ಡ ಗಾತ್ರದ ಹೆಪ್ಪು ಗಟ್ಟಿಗಳು ಅಥವಾ ಹೆಪ್ಪು ಗಟ್ಟಿಗಳು ಆಗಾಗ್ಗೆ ಕಾಣಿಸಿಕೊಂಡರೆ ಅದು ಆರೋಗ್ಯ ಸಮಸ್ಯೆಯನ್ನು ಸೂಚಿಸಬಹುದು. ಸಾಮಾನ್ಯ ಮತ್ತು ಅಸಾಮಾನ್ಯ ಮುಟ್ಟಿನ ಹೆಪ್ಪು ಗಟ್ಟಿಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಆರೋಗ್ಯ ಪಾಲನೆಗೆ ಬಹಳ ಮುಖ್ಯವಾಗಿದೆ. ಈ ಬರಹವು ಮುಟ್ಟಿನ ರಕ್ತದ ಹೆಪ್ಪು ಗಟ್ಟಿಗಳ ಅರ್ಥ, ಕಾರಣಗಳು ಮತ್ತು ವೈದ್ಯರನ್ನು ಭೇಟಿಯಾಗಬೇಕಾದ ಸಂದರ್ಭಗಳ ಕುರಿತು ವಿವರವಾಗಿ ತಿಳಿಸುತ್ತದೆ.
ಸಾಮಾನ್ಯ ವರ್ಸಸ್ ಅಸಾಮಾನ್ಯ ಹೆಪ್ಪು ಗಟ್ಟಿಗಳು
ಸಾಮಾನ್ಯವಾದ ಮುಟ್ಟಿನ ಹೆಪ್ಪು ಗಟ್ಟಿಗಳು ಸಾಮಾನ್ಯವಾಗಿ ಸಣ್ಣದಾಗಿರುತ್ತವೆ (ಮುತ್ತಿನ ಗಾತ್ರದಿಂದ ಹಿಡಿದು ಮುತ್ತಿನ ಕಾಲು ಭಾಗದ ಗಾತ್ರದವರೆಗೆ) ಮತ್ತು ತೀವ್ರ ಋತುಸ್ರಾವದ ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ರಕ್ತ ಹೆಪ್ಪುಗಟ್ಟುವಿಕೆಯು ರಕ್ತಸ್ರಾವವನ್ನು ತಡೆಗಟ್ಟುವ ದೇಹದ ಸಹಜ ಪ್ರಕ್ರಿಯೆಯ ಭಾಗವಾಗಿವೆ. ಆದರೆ, ಕಾಲು ಭಾಗಕ್ಕಿಂತ ದೊಡ್ಡ ಹೆಪ್ಪು ಗಟ್ಟಿಗಳು, ಆಗಾಗ್ಗೆ ಕಾಣಿಸಿಕೊಳ್ಳುವ ಗಟ್ಟಿಗಳು, ಅತಿಯಾದ ರಕ್ತಸ್ರಾವ, ಪೆಲ್ವಿಕ್ ನೋವು ಅಥವಾ ಅನಿಯಮಿತ ಋತುಚಕ್ರಗಳು ಆರೋಗ್ಯ ಸಮಸ್ಯೆ ಇರುವುದರ ಸಂಕೇತವಾಗಿರಬಹುದು.
ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪು ಗಟ್ಟುವುದು ಸಾಮಾನ್ಯವೇ?
ಹೌದು, ಋತುಸ್ರಾವದ ಸಮಯದಲ್ಲಿ ಸಣ್ಣ ರಕ್ತದ ಗಟ್ಟಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಇವು ಗರ್ಭಾಶಯದಲ್ಲಿ ರಕ್ತ ಸಂಗ್ರಹವಾದಾಗ ಸಹಜವಾಗಿ ಗಟ್ಟಿಯಾಗುವ ಪ್ರಕ್ರಿಯೆಯಿಂದ ಉಂಟಾಗುತ್ತವೆ. ಇವು ಸಾಮಾನ್ಯವಾಗಿ ಕಡುಗೆಂಪು ಅಥವಾ ಕಂದು ಬಣ್ಣದಲ್ಲಿರುತ್ತವೆ ಮತ್ತು ಶೌಚಾಲಯದಲ್ಲಿ ಅಥವಾ ಪ್ಯಾಡ್ ಗಳ ಮೇಲೆ ಕಾಣಬಹುದು.
ಮುಟ್ಟಿನ ರಕ್ತದ ಹೆಪ್ಪು ಗಟ್ಟಿಗಳಿಗೆ ಕಾರಣಗಳೇನು?
ಋತುಸ್ರಾವದ ಸಂದರ್ಭದಲ್ಲಿ ರಕ್ತ ಹೆಪ್ಪು ಗಟ್ಟುವುದು ದೇಹದ ಸಹಜ ರಕ್ತ ಗಟ್ಟಿಕಟ್ಟುವ ಪ್ರಕ್ರಿಯೆಯಿಂದ ಉಂಟಾಗುತ್ತವೆ. ಋತುಸ್ರಾವದ ಸಮಯದಲ್ಲಿ ಗರ್ಭಾಶಯದ ಒಳಪದರ ಕಿತ್ತು ಬರುವಾಗ, ಸಣ್ಣ ರಕ್ತನಾಳಗಳು ರಕ್ತಸ್ರಾವವನ್ನು ಉಂಟುಮಾಡುತ್ತವೆ. ಪ್ಲಾಸ್ಮಾ ಮತ್ತು ಪ್ಲೇಟ್ ಲೆಟ್ ಗಳು ಒಟ್ಟಾಗಿ ಕೆಲಸ ಮಾಡಿ ರಕ್ತದ ಹೆಪ್ಪು ಗಟ್ಟಿಗಳನ್ನು ರೂಪಿಸುತ್ತವೆ. ವಿಶೇಷವಾಗಿ ಋತುಸ್ರಾವದ ಹರಿವು ಜಾಸ್ತಿ ಇದ್ದಾಗ ಮತ್ತು ರಕ್ತವು ದೇಹದಿಂದ ಹೊರಹೋಗುವ ಮೊದಲು ಗಟ್ಟಿಯಾಗಲು ಸಮಯ ಸಿಗುವಾಗ ಉಂಟಾಗುತ್ತದೆ. ಋತುಸ್ರಾವದ ಸಮಯದಲ್ಲಿ ರಕ್ತ ಹೆಪ್ಪು ಗಟ್ಟುವಿಕೆಗೆ ಕಾರಣವಾಗುವ ಕೆಲವು ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:
· ಗರ್ಭಾಶಯದ ಅಸಾಮಾನ್ಯತೆಗಳು (ಉದಾಹರಣೆಗೆ, ಫೈಬ್ರಾಯಿಡ್ ಗಳು, ಪಾಲಿಪ್ ಗಳು)
· ಕೆಲವು ಔಷಧಿಗಳು
· ಋತುಸ್ರಾವದಲ್ಲಿ ಭಾರೀ ರಕ್ತಸ್ರಾವ
ಋತುಸ್ರಾವದ ಹೆಪ್ಪು ಗಟ್ಟಿಗಳ ಬಗ್ಗೆ ಯಾವಾಗ ಚಿಂತಿಸಬೇಕು?
ನೀವು ಈ ಕೆಳಗಿನ ಲಕ್ಷಣಗಳನ್ನು ಅನುಭವಿಸಿದರೆ ಋತುಸ್ರಾವದ ರಕ್ತದ ಹೆಪ್ಪು ಗಟ್ಟಿಗಳ ಬಗ್ಗೆ ಚಿಂತಿಸಬೇಕು:
1. ದೊಡ್ಡ ಗಟ್ಟಿಗಳು (ಕಾಲು ಭಾಗಕ್ಕಿಂತ ದೊಡ್ಡದು)
2. ಋತುಸ್ರಾವದ ಉದ್ದಕ್ಕೂ ಆಗಾಗ್ಗೆ ಹೆಪ್ಪು ಗಟ್ಟಿಗಳು ಕಾಣಿಸಿಕೊಳ್ಳುವುದು
3. ಪ್ರತಿ ಗಂಟೆಗೆ ಪ್ಯಾಡ್ ಅಥವಾ ಟ್ಯಾಂಪಾನ್ ಒದ್ದೆಯಾಗುವಷ್ಟು ಭಾರೀ ರಕ್ತಸ್ರಾವ
4. ಪೆಲ್ವಿಕ್ ನೋವು ಅಥವಾ ಅಸ್ವಸ್ಥತೆ
ಋತುಸ್ರಾವದ ಸಮಯದಲ್ಲಿ ಕಾಣಿಸಿಕೊಳ್ಳುವ ದೊಡ್ಡ ರಕ್ತ ಹೆಪ್ಪು ಗಟ್ಟಿಗಳ ಅರ್ಥವೇನು?
ಋತುಸ್ರಾವದ ಸಮಯದಲ್ಲಿ ಕಾಣಿಸಿಕೊಳ್ಳುವ ದೊಡ್ಡ ಹೆಪ್ಪು ಗಟ್ಟಿಗಳು ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು. ಋತುಸ್ರಾವದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ದೊಡ್ಡ ಹೆಪ್ಪು ಗಟ್ಟಿಗಳಿಗೆ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ:
· ಗರ್ಭಾಶಯದ ಫೈಬ್ರಾಯಿಡ್ ಗಳು ಅಥವಾ ಪಾಲಿಪ್‌ಗಳು
· ಎಂಡೋಮೆಟ್ರಿಯಾಸಿಸ್
· ಅಡೆನೊಮಿಯಾಸಿಸ್
· ಹಾರ್ಮೋನ್ ಅಸಮತೋಲನ
· ಗರ್ಭಪಾತ (ಆರಂಭಿಕ ಗರ್ಭಾವಸ್ಥೆಯಲ್ಲಿ)
ಋತುಸ್ರಾವದ ಹೆಪ್ಪು ಗಟ್ಟಿಗಳಿಗೆ ಆಧಾರವಾಗಿರುವ ಕಾರಣಗಳೇನು?
ಹಲವಾರು ಆರೋಗ್ಯ ಸಮಸ್ಯೆಗಳು ಅಸಾಮಾನ್ಯ ಋತುಸ್ರಾವ ರಕ್ತ ಹೆಪ್ಪು ಗಟ್ಟಿಗಳ ರಚನೆಗೆ ಕಾರಣವಾಗಬಹುದು, ಆ ಕೆಲವು ಸಮಸ್ಯೆಗಳನ್ನು ಈ ಕೆಳಗೆ ನೀಡಲಾಗಿದೆ:
ಗರ್ಭಾಶಯದ ಪಾಲಿಪ್‌ಗಳು ಅಥವಾ ಫೈಬ್ರಾಯಿಡ್‌ಗಳು
ಗರ್ಭಾಶಯದ ಪಾಲಿಪ್‌ಗಳು ಮತ್ತು ಫೈಬ್ರಾಯಿಡ್‌ಗಳು ಗರ್ಭಾಶಯದಲ್ಲಿ ಬೆಳೆಯುವ ಕ್ಯಾನ್ಸರ್ ರಹಿತ ಅಂಶಗಳಾಗಿವೆ. ಈ ಅಂಶಗಳು ಗರ್ಭಾಶಯದ ಒಳಪದರದ ಕಿತ್ತು ಕೊಳ್ಳುವಿಕೆಯನ್ನು ತಡೆಯಬಹುದು, ಇದರಿಂದ ಭಾರೀ ಋತುಸ್ರಾವ ರಕ್ತಸ್ರಾವ ಮತ್ತು ಋತುಸ್ರಾವದ ಸಮಯದಲ್ಲಿ ದೊಡ್ಡ ಹೆಪ್ಪು ಗಟ್ಟಿಗಳು ಉಂಟಾಗುತ್ತವೆ.
ಎಂಡೋಮೆಟ್ರಿಯಾಸಿಸ್
ಎಂಡೋಮೆಟ್ರಿಯಾಸಿಸ್ ಎಂಬುದು ಗರ್ಭಾಶಯದ ಒಳಪದರದಂತಹ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯುವ ಸ್ಥಿತಿಯಾಗಿದೆ. ಈ ಅಸಾಮಾನ್ಯ ಬೆಳವಣಿಗೆಯು ಭಾರೀ ಋತುಸ್ರಾವ, ಪೆಲ್ವಿಕ್ ನೋವು ಮತ್ತು ಋತುಸ್ರಾವದ ಹೆಪ್ಪು ಗಟ್ಟಿಗಳ ರಚನೆಗೆ ಕಾರಣವಾಗಬಹುದು.
ಅಡೆನೊಮಿಯಾಸಿಸ್
ಅಡೆನೊಮಿಯಾಸಿಸ್ ಎಂಬುದು ಗರ್ಭಾಶಯದ ಒಳಪದರವು ಗರ್ಭಾಶಯದ ಸ್ನಾಯು ಗೋಡೆಯಲ್ಲಿ ಬೆಳೆಯುವ ಒಂದು ಸ್ಥಿತಿಯಾಗಿದೆ. ಈ ಸ್ಥಿತಿಯು ಭಾರೀ ಋತುಸ್ರಾವ ರಕ್ತಸ್ರಾವ, ನೋವು ಮತ್ತು ಋತುಸ್ರಾವದ ಸಮಯದಲ್ಲಿ ದೊಡ್ಡ ಹೆಪ್ಪು ಗಟ್ಟಿಗಳಿಗೆ ಕಾರಣವಾಗಬಹುದು.
ಹಾರ್ಮೋನ್ ಅಸಮತೋಲನ
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಅಥವಾ ಥೈರಾಯಿಡ್ ಕಾಯಿಲೆಗಳಿಂದ ಉಂಟಾಗುವ ಹಾರ್ಮೋನ್ ಅಸಮತೋಲನವು ಸಾಮಾನ್ಯ ಋತುಚಕ್ರದ ಮೇಲೆ ಪರಿಣಾಮ ಬೀರಬಹುದು. ಈ ಅಸಮತೋಲನವು ಭಾರೀ ರಕ್ತಸ್ರಾವ ಮತ್ತು ಋತುಸ್ರಾವದ ಹೆಪ್ಪು ಗಟ್ಟಿಗಳ ರಚನೆಗೆ ಕಾರಣವಾಗಬಹುದು.
ಗರ್ಭಪಾತ
ಕೆಲವು ಸಂದರ್ಭಗಳಲ್ಲಿ, ಋತುಸ್ರಾವದ ಸಮಯದಲ್ಲಿ ದೊಡ್ಡ ಹೆಪ್ಪು ಗಟ್ಟಿಗಳು ಆರಂಭಿಕ ಗರ್ಭಪಾತದ ಸಂಕೇತವಾಗಿರಬಹುದು. ನೀವು ಗರ್ಭಿಣಿ ಎಂಬ ಅನುಮಾನ ನಿಮಗಿದ್ದೆ ಮತ್ತು ಭಾರೀ ರಕ್ತಸ್ರಾವದೊಂದಿಗೆ ಹೆಪ್ಪು ಗಟ್ಟಿಗಳು ಕಾಣಿಸಿದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.
ಗರ್ಭಾಶಯದ ವಿಸ್ತರಣೆ
ಫೈಬ್ರಾಯಿಡ್‌ಗಳು ಅಥವಾ ಅಡೆನೊಮಿಯಾಸಿಸ್ ನಿಂದ ಉಂಟಾಗುವ ಗರ್ಭಾಶಯದ ವಿಸ್ತರಣೆಯು ಭಾರೀ ಋತುಸ್ರಾವ ರಕ್ತಸ್ರಾವ ಮತ್ತು ಋತುಸ್ರಾವದ ಸಮಯದಲ್ಲಿ ದೊಡ್ಡ ಹೆಪ್ಪು ಗಟ್ಟಿಗಳ ರಚನೆಗೆ ಕಾರಣವಾಗಬಹುದು.
ರಕ್ತಸ್ರಾವದ ಕಾಯಿಲೆಗಳು
ವಾನ್ ವಿಲ್ಲೆಬ್ರಾಂಡ್ ಡಿಸೀಸ್ ಅಥವಾ ಇತರ ರಕ್ತ ಗಟ್ಟಿಕಟ್ಟುವಿಕೆಯ ಕಾಯಿಲೆಗಳಂತಹ ರಕ್ತಸ್ರಾವದ ಕಾಯಿಲೆಗಳು ದೇಹದ ರಕ್ತ ಗಟ್ಟಿಕಟ್ಟುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಭಾರೀ ಋತುಸ್ರಾವ ರಕ್ತಸ್ರಾವ ಮತ್ತು ಋತುಸ್ರಾವದಲ್ಲಿ ರಕ್ತ ಹೆಪ್ಪು ಗಟ್ಟುವಿಕೆ ಉಂಟಾಗಬಹುದು.
ವೈದ್ಯರನ್ನು ಯಾವಾಗ ಭೇಟಿಯಾಗಬೇಕು?
ನೀವು ಈ ಕೆಳಗಿನ ಲಕ್ಷಣಗಳನ್ನು ಗಮನಿಸಿದರೆ, ವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯ:
· ಋತುಸ್ರಾವದ ಸಮಯದಲ್ಲಿ ದೊಡ್ಡ ಹೆಪ್ಪು ಗಟ್ಟಿಗಳು (ಕಾಲು ಭಾಗಕ್ಕಿಂತ ದೊಡ್ಡದು)
· ಪ್ರತಿ ಗಂಟೆಗೆ ಪ್ಯಾಡ್ ಅಥವಾ ಟ್ಯಾಂಪಾನ್ ಒದ್ದೆಯಾಗುವಷ್ಟು ಭಾರೀ ರಕ್ತಸ್ರಾವ
· ನಿರಂತರ ಪೆಲ್ವಿಕ್ ನೋವು ಅಥವಾ ಅಸ್ವಸ್ಥತೆ
· ಅನಿಯಮಿತ ಋತುಚಕ್ರಗಳು
· ಅಸಾಮಾನ್ಯ ಯೋನಿ ಸ್ರಾವ
ಋತುಸ್ರಾವದ ರಕ್ತ ಹೆಪ್ಪುಗಟ್ಟಿಗಳಿಂದ ಉಂಟಾಗುವ ತೊಡಕುಗಳೇನು?
ಅಸಾಮಾನ್ಯ ಋತುಸ್ರಾವದ ಹೆಪ್ಪು ಗಟ್ಟಿಗಳಿಂದ ಉಂಟಾಗಬಹುದಾದ ತೊಡಕುಗಳ ಪಟ್ಟಿ ಈ ಕೆಳಗಿನಂತಿದೆ:
· ಭಾರೀ ರಕ್ತಸ್ರಾವದಿಂದ ರಕ್ತಹೀನತೆ
· ದೀರ್ಘಕಾಲದ ಪೆಲ್ವಿಕ್ ನೋವು
· ಗುಣಮಟ್ಟದ ಜೀವನದಲ್ಲಿ ಏರುಪೇರು
ಋತುಸ್ರಾವದ ಹೆಪ್ಪು ಗಟ್ಟಿಗಳ ಕಾರಣವನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ?
ಅಸಾಮಾನ್ಯ ಋತುಸ್ರಾವ ಹೆಪ್ಪು ಗಟ್ಟಿಗಳಿಗೆ ಕಾರಣವನ್ನು ಗುರುತಿಸಲು, ನಿಮ್ಮ ವೈದ್ಯರು ಅಥವಾ ಆರೋಗ್ಯ ಸೇವಾ ಪೂರೈಕೆದಾರರು ಈ ಕೆಳಗಿನವುಗಳನ್ನು ಮಾಡಬಹುದು:
1. ನಿಮ್ಮ ವೈದ್ಯಕೀಯ ಇತಿಹಾಸ ಮತ್ತು ಋತುಚಕ್ರದ ಮಾದರಿಗಳನ್ನು ಪರಿಶೀಲಿಸುವುದು
2. ಪೆಲ್ವಿಕ್ ಪರೀಕ್ಷೆ ಸೇರಿದಂತೆ ದೈಹಿಕ ತಪಾಸಣೆ ನಡೆಸುವುದು
3. ರೋಗನಿರ್ಣಯ ಪರೀಕ್ಷೆಗಳನ್ನು ಆದೇಶಿಸುವುದು, ಉದಾಹರಣೆಗೆ:
· ಅಲ್ಟ್ರಾಸೌಂಡ್
· ಎಂ ಆರ್ ಐ
· ಎಂಡೋಮೆಟ್ರಿಯಲ್ ಬಯಾಪ್ಸಿ
ಈ ಪರೀಕ್ಷೆಗಳು ಫೈಬ್ರಾಯಿಡ್ ಗಳು, ಎಂಡೋಮೆಟ್ರಿಯಾಸಿಸ್ ಅಥವಾ ಹಾರ್ಮೋನ್ ಅಸಮತೋಲನದಂತಹ ಸಮಸ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ.
ಋತುಸ್ರಾವದ ಹೆಪ್ಪು ಗಟ್ಟಿಗಳಿಗೆ ಚಿಕಿತ್ಸೆ ಹೇಗೆ ನೀಡಲಾಗುತ್ತದೆ?
ಅಸಾಮಾನ್ಯ ಋತುಸ್ರಾವ ಹೆಪ್ಪು ಗಟ್ಟಿಗಳಿಗೆ ಅದಕ್ಕೆ ಕಾರಣವಾಗಿರುವ ಅಂಶವನ್ನು ಅವಲಂಬಿಸಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸಾ ಆಯ್ಕೆಗಳು ಈ ಕೆಳಗಿನಂತಿವೆ:
1. ಹಾರ್ಮೋನ್ ಗರ್ಭನಿರೋಧಕಗಳು: ಋತುಚಕ್ರಗಳನ್ನು ನಿಯಂತ್ರಿಸಲು ಮತ್ತು ಭಾರೀ ರಕ್ತಸ್ರಾವವನ್ನು ಕಡಿಮೆ ಮಾಡಲು
2. ಔಷಧಿಗಳು: ಭಾರೀ ರಕ್ತಸ್ರಾವ ಮತ್ತು ನೋವನ್ನು ನಿರ್ವಹಿಸಲು ಟ್ರಾನೆಕ್ಸಾಮಿಕ್ ಆಸಿಡ್ ಅಥವಾ ನಾನ್ ಸ್ಟೀರಾಯ್ಡಲ್ ಆಂಟಿ-ಇನ್‌ಫ್ಲಮೇಟರಿ ಔಷಧಿಗಳು (ಎನ್ಎಸ್ಎಐಡಿಗಳು)
3. ಶಸ್ತ್ರಚಿಕಿತ್ಸಾ ವಿಧಾನಗಳು: ಗರ್ಭಾಶಯದ ಫೈಬ್ರಾಯಿಡ್‌ಗಳು, ಪಾಲಿಪ್‌ಗಳು ಅಥವಾ ಎಂಡೋಮೆಟ್ರಿಯಾಸಿಸ್‌ನ ಸಂದರ್ಭದಲ್ಲಿ ಎಂಡೋಮೆಟ್ರಿಯಲ್ ಅಂಗಾಂಶವನ್ನು ತೆಗೆದುಹಾಕಲು
4. ಜೀವನಶೈಲಿ ಬದಲಾವಣೆಗಳು: ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಒತ್ತಡವನ್ನು ನಿರ್ವಹಿಸುವುದು ಸಮಸ್ಯೆ ಉಪಶಮನ ಮಾಡಲು ಸಹಾಯ ಮಾಡಬಹುದು
ನಿಮ್ಮ ಆರೋಗ್ಯ ಸೇವಾ ಪೂರೈಕೆದಾರರು ನಿಮ್ಮ ನಿರ್ದಿಷ್ಟ ಸಮಸ್ಯೆ ಮತ್ತು ಅಗತ್ಯಗಳ ಆಧಾರದ ಮೇಲೆ ವೈಯಕ್ತೀಕರಿಸಿದ ಚಿಕಿತ್ಸಾ ಯೋಜನೆಯನ್ನು ರೂಪಿಸಲು ನಿಮ್ಮೊಂದಿಗೆ ಕೆಲಸ ಮಾಡುತ್ತಾರೆ.
ಕೊನೆಯ ಮಾತು
ಋತುಸ್ರಾವದ ಸಮಯದಲ್ಲಿನ ಸಣ್ಣ ರಕ್ತ ಹೆಪ್ಪು ಗಟ್ಟಿಗಳು ಸಾಮಾನ್ಯವಾದರೂ ದೊಡ್ಡ ಅಥವಾ ಆಗಾಗ್ಗೆ ಕಾಣಿಸಿಕೊಳ್ಳುವ ಹೆಪ್ಪು ಗಟ್ಟಿಗಳು ಆರೋಗ್ಯ ಸಮಸ್ಯೆ ಇರುವುದರ ಸಂಕೇತವಾಗಿರಬಹುದು. ನೀವು ಅಸಾಮಾನ್ಯ ಋತುಸ್ರಾವದ ಹೆಪ್ಪು ಗಟ್ಟಿಗಳನ್ನು ಗಮನಿಸಿದರೆ, ಭಾರೀ ರಕ್ತಸ್ರಾವ ಅಥವಾ ನಿರಂತರ ಪೆಲ್ವಿಕ್ ನೋವನ್ನು ಅನುಭವಿಸಿದರೆ, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸೇವಾ ಪೂರೈಕೆದಾರರನ್ನು ಭೇಟಿಯಾಗುವುದು ಬಹಳ ಮುಖ್ಯ. ಮೆಟ್ರೋಪೊಲೀಸ್ ಹೆಲ್ತ್ ಕೇರ್ ಮನೆಯಿಂದಲೇ ಸ್ಯಾಂಪಲ್ ಸಂಗ್ರಹ ಸೇವೆ ಸೇರಿದಂತೆ ಸಮಗ್ರ ಡಯಾಗ್ನಾಸ್ಟಿಕ್ ಸೇವೆಗಳನ್ನು ಒದಗಿಸುತ್ತದೆ. ಈ ಸಂಸ್ಥೆಯು ನಿಮ್ಮ ಋತುಸ್ರಾವದ ಹೆಪ್ಪು ಗಟ್ಟಿಗಳ ಕಾರಣವನ್ನು ಗುರುತಿಸಲು ಮತ್ತು ನಿಮಗೆ ಅಗತ್ಯವಿರುವ ಚಿಕಿತ್ಸೆಯನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂತಾನೋತ್ಪತ್ತಿ ಆರೋಗ್ಯಕ್ಕೆ ಆದ್ಯತೆ ನೀಡುವುದರಿಂದ ಮತ್ತು ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದರಿಂದ, ನೀವು ನಿಮ್ಮ ಸಮಸ್ಯೆಗಳನ್ನು ಸೂಕ್ತವಾಗಿ ನಿರ್ವಹಿಸಬಹುದು ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು.









