Do you have any queries ?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ಬಾಸೊಫಿಲ್‌ಗಳು ಎಂದರೇನು, ಸಾಮಾನ್ಯ ಮಟ್ಟ ಎಷ್ಟಿರಬೇಕು, ಅದರ ಕಾರ್ಯಗಳು ಏನೇನು?

Last Updated On: Feb 13 2026

Table of Contents


ಬಾಸೊಫಿಲ್‌ಗಳು ಎಂದರೆ ಬಹುತೇಕರಿಗೆ ತಕ್ಷಣ ಅರ್ಥವಾಗಲಿಕ್ಕಿಲ್ಲ. ಬಾಸೊಫಿಲ್ ಗಳು ಎಂದರೆ ಬಿಳಿರಕ್ತಕಣಗಳ ಒಂದು ವಿಧ. ಒಟ್ಟು ಬಿಳಿ ರಕ್ತ ಕಣಗಳಲ್ಲಿ ಇವು ಶೇ.3ಕ್ಕಿಂತ ಕಡಿಮೆ ಭಾಗವನ್ನು ಒಳಗೊಂಡಿರುತ್ತವೆ. ಬಾಸೊಫಿಲ್ ಮಟ್ಟದಲ್ಲಿ ಏರಿಕೆ ಅಥವಾ ಕಡಿಮೆಯಾದರೆ ಉರಿಯೂತ, ಹೈಪರ್‌ಥೈರಾಯಿಡಿಸಂ ಅಥವಾ ಇತರ ವೈದ್ಯಕೀಯ ಸಮಸ್ಯೆ ಉಂಟಾಗಬಹುದು. ಕೆಲವು ಆರೋಗ್ಯ ಸಮಸ್ಯೆಗಳ ರೋಗನಿರ್ಣಯಕ್ಕೆ ವೈದ್ಯರು ಬಾಸೊಫಿಲ್ ಮಟ್ಟ ಎಷ್ಟಿದೆ ಎಂದು ತಿಳಿಯಲು ಪರೀಕ್ಷೆಯನ್ನು ನಡೆಸಬಹುದಾಗಿದೆ.

ಬಾಸೊಫಿಲ್ಗಳು ಎಂದರೇನು?

ಬಾಸೊಫಿಲ್‌ಗಳು ರೋಗನಿರೋಧಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಬಿಳಿ ರಕ್ತ ಕಣಗಳಾಗಿವೆ. ಇವು ಅಲರ್ಜಿಗಳು, ಉರಿಯೂತ ಮತ್ತು ಪರಾವಲಂಬಿಗಳ ವಿರುದ್ಧ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಬಾಸೊಫಿಲ್‌ಗಳು ಮೂಳೆ ಮಜ್ಜೆಯಲ್ಲಿ ಉತ್ಪಾದನೆಯಾಗುತ್ತವೆ ಮತ್ತು ದೇಹಕ್ಕೆ ಅಗತ್ಯವಿರುವಾಗ ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತವೆ. ಇವು ಚರ್ಮ, ಶ್ವಾಸಕೋಶಗಳು ಮತ್ತು ಕರುಳುಗಳಂತಹ ದೇಹದಾದ್ಯಂತ ಇರುವ ವಿವಿಧ ಅಂಗಾಂಶಗಳಲ್ಲಿಯೂ ಕಂಡುಬರುತ್ತವೆ. ಬಾಸೊಫಿಲ್‌ಗಳು ಅಲರ್ಜಿನ್‌ಗೆ ಒಡ್ಡಿಕೊಂಡಾಗ, ಹಿಸ್ಟಮೈನ್ ಮತ್ತು ಇತರ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ.

ಬಾಸೊಫಿಲ್ಗಳ ಕಾರ್ಯಗಳು ಯಾವುವು?

ಬಾಸೊಫಿಲ್‌ಗಳ ಹಲವಾರು ಮುಖ್ಯ ಕಾರ್ಯಗಳಿವೆ, ಅವುಗಳೆಂದರೆ:

·       ಅಲರ್ಜಿ ಸಮಸ್ಯೆಗಳನ್ನು ನಿರ್ವಹಿಸುವುದು: ಬಾಸೊಫಿಲ್‌ಗಳು ಹಿಸ್ಟಮೈನ್ ಎಂಬ ರಾಸಾಯನಿಕವನ್ನು ಒಳಗೊಂಡಿರುತ್ತವೆ, ಇದು ಅಲರ್ಜಿ ಪ್ರತಿಕ್ರಿಯೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

·       ಉರಿಯೂತವನ್ನು ಉಂಟು ಮಾಡುವುದು: ಬಾಸೊಫಿಲ್‌ಗಳು ಉರಿಯೂತವನ್ನು ಉಂಟು ಮಾಡುವ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು.

·       ಪರಾವಲಂಬಿಗಳ ವಿರುದ್ಧ ರಕ್ಷಣೆ: ಬಾಸೊಫಿಲ್‌ಗಳು ಪರಾವಲಂಬಿಗಳನ್ನು ಕೊಲ್ಲುವ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು ಅಥವಾ ಇತರ ರೋಗನಿರೋಧಕ ಕಣಗಳಿಗೆ ಪರಾವಲಂಬಿಗಳನ್ನು ಕೊಲ್ಲಲು ಸುಲಭವಾಗುವಂತೆ ಮಾಡಬಹುದು.

ಬಾಸೊಫಿಲ್ಗಳು ಯಾವ ಕಿಣ್ವಗಳನ್ನು (ಎಂಜೈಮ್) ಬಿಡುಗಡೆ ಮಾಡುತ್ತವೆ?

ಬಾಸೊಫಿಲ್‌ಗಳು ಎರಡು ಕಿಣ್ವಗಳನ್ನು ಬಿಡುಗಡೆ ಮಾಡುತ್ತವೆ, ಅವುಗಳೆಂದರೆ: ಹಿಸ್ಟಮೈನ್ ಮತ್ತು ಹೆಪಾರಿನ್.

ಹಿಸ್ಟಮೈನ್: ಇದು ರಕ್ತನಾಳ ವಿಕಾಸಕವಾಗಿದ್ದು, ರಕ್ತನಾಳಗಳನ್ನು ವಿಶಾಲಗೊಳಿಸುತ್ತದೆ. ಇದು ಸೋಂಕಿನ ಸ್ಥಳಕ್ಕೆ ಅಥವಾ ಅಲರ್ಜಿ ಉಂಟಾದ ಸ್ಥಳಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಇದರಿಂದ ರೋಗನಿರೋಧಕ ಕಣಗಳು ಮತ್ತು ಇತರ ಗುಣಪಡಿಸುವ ಅಂಶಗಳು ಆ ಪ್ರದೇಶ ಸೇರಲು ಸಹಾಯವಾಗುತ್ತದೆ. ಹಿಸ್ಟಮೈನ್ ರಕ್ತನಾಳಗಳ ಸೋರಿಕೆಯನ್ನು ಉಂಟು ಮಾಡಿ, ಅದರಿಂದ ದ್ರವ ಮತ್ತು ರೋಗನಿರೋಧಕ ಕಣಗಳು ರಕ್ತಪ್ರವಾಹದಿಂದ ಸುತ್ತಮುತ್ತಲಿನ ಅಂಗಾಂಶಗಳಿಗೆ ಸೋರಿಕೊಳ್ಳುವಂತೆ ಮಾಡುತ್ತವೆ. ಇದು ಸೋಂಕಿನ ವಿರುದ್ಧ ಹೋರಾಡಲು ಮತ್ತು ಶೀಘ್ರ ಗುಣಪಡಿಸುವಿಕೆ ಸಾಧ್ಯವಾಗಲು ಸಹಾಯ ಮಾಡುತ್ತದೆ.

ಹೆಪಾರಿನ್: ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಆಂಟಿಕೊಆಗ್ಯುಲಂಟ್ ಆಗಿದ್ದು, ರಕ್ತನಾಳಗಳನ್ನು ತಡೆಯುವ ರಕ್ತ ಹೆಪ್ಪುಗಟ್ಟುವಿಕೆಯಿಂದ ಅಂಗಾಂಶಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಹೆಪಾರಿನ್ ಬ್ಯಾಕ್ಟೀರಿಯಾ ಮತ್ತು ಇತರ ರೋಗಕಾರಕಗಳನ್ನು ರಕ್ತನಾಳಗಳಲ್ಲಿ ಸಿಕ್ಕಿಸುವ ಮೂಲಕ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಬಾಸೊಫಿಲ್ಗಳು ಎಲ್ಲಿ ಕಂಡುಬರುತ್ತವೆ?

ಬಾಸೊಫಿಲ್‌ಗಳು ಅಲರ್ಜಿ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದ ಅಂಗಾಂಶಗಳಾದ ಚರ್ಮ ಮತ್ತು ಶ್ವಾಸಕೋಶಗಳಲ್ಲಿ ವಿಶೇಷವಾಗಿ ಸಮೃದ್ಧವಾಗಿರುತ್ತವೆ. ಇವು ಮೂಳೆ ಮಜ್ಜೆಯಲ್ಲಿ ಉತ್ಪಾದನೆಯಾಗುತ್ತವೆ ಮತ್ತು ಪಕ್ವವಾದ ನಂತರ ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತವೆ, ಇದರಿಂದ ದೇಹದಾದ್ಯಂತ ಸಂಚರಿಸುತ್ತವೆ.

ಬಾಸೊಫಿಲ್ಗಳು ಹೇಗೆ ಕಾಣುತ್ತವೆ?

ಬಾಸೊಫಿಲ್‌ಗಳು ಸುಮಾರು 12-15 ಮೈಕ್ರೊಮೀಟರ್‌ಗಳ ವ್ಯಾಸವಿರುವ ಗೋಳಾಕಾರದ ಬಿಳಿ ರಕ್ತ ಕಣಗಳಾಗಿವೆ. ಇವು ಒಂದೋ ಅನಿಯಮಿತ ಆಕಾರದ ನ್ಯೂಕ್ಲಿಯಸ್ ಮತ್ತು ಸೈಟೋಪ್ಲಾಸಂನಲ್ಲಿ ತುಂಬಿರುವ ನೇರಳೆ-ಕಪ್ಪು ಗ್ರಾನ್ಯೂಲ್‌ಗಳನ್ನು ಹೊಂದಿರುತ್ತವೆ. ಈ ಗ್ರಾನ್ಯೂಲ್‌ಗಳು ಹಿಸ್ಟಮೈನ್, ಹೆಪಾರಿನ್ ಮತ್ತು ಇತರ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಇವುಗಳನ್ನು ಬಾಸೊಫಿಲ್‌ಗಳು ಅಲರ್ಜಿಗಳು, ಪರಾವಲಂಬಿಗಳು ಮತ್ತು ಇತರ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಿಡುಗಡೆ ಮಾಡುತ್ತವೆ.

ಮೈಕ್ರೋಸ್ಕೋಪ್‌ ನಡಿಯಲ್ಲಿ, ಬಾಸೊಫಿಲ್‌ಗಳು ಗಾಢವಾಗಿ ಕಾಣುವ, ಗ್ರಾನ್ಯುಲರ್ ರೂಪವನ್ನು ಹೊಂದಿರುತ್ತವೆ. ಗ್ರಾನ್ಯೂಲ್‌ಗಳು ಸಾಮಾನ್ಯವಾಗಿ ನ್ಯೂಕ್ಲಿಯಸ್‌ ಅನ್ನು ಮರೆಮಾಚುತ್ತವೆ, ಆದರೆ ಕಣದ ಕೇಂದ್ರದಲ್ಲಿ ಒಂದು ಸಣ್ಣ, ತಿಳಿಯಾದ ಬಣ್ಣದ ಪ್ರದೇಶವಾಗಿ ನ್ಯೂಕ್ಲಿಯಸ್ ಕಾಣಿಸಬಹುದಾಗಿದೆ.

ನನ್ನ ದೇಹದಲ್ಲಿ ಎಷ್ಟು ಬಾಸೊಫಿಲ್ಗಳಿವೆ?

ಆರೋಗ್ಯವಂತ ವಯಸ್ಕರಲ್ಲಿ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ ಸುಮಾರು 0-300 ಬಾಸೊಫಿಲ್‌ಗಳಿರುತ್ತವೆ. ಇದರರ್ಥ, ನಿಮ್ಮ ದೇಹದಲ್ಲಿ ಸುಮಾರು 0.01-0.15 ಬಾಸೊಫಿಲ್‌ಗಳಿರುತ್ತವೆ. ಆದರೆ, ನಿಮ್ಮ ದೇಹದ ಬಾಸೊಫಿಲ್‌ಗಳ ಸಂಖ್ಯೆಯು ವಯಸ್ಸು, ಲಿಂಗ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ.

ಬಾಸೊಫಿಲ್ಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸ್ಥಿತಿಗಳು ಯಾವುವು?

ಕೆಳಗಿನವು ಬಾಸೊಫಿಲ್‌ಗಳ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ಸ್ಥಿತಿಗಳಾಗಿವೆ:

·       ಅಲರ್ಜಿಕ್ ರೋಗಗಳು:

ಅಸ್ತಮಾ, ಹೇ ಫೀವರ್ ಮತ್ತು ಎಕ್ಜಿಮಾದಂತಹ ಕೆಲವು ಅಲರ್ಜಿಕ್ ರೋಗಗಳ ಉಂಟಾಗುವಿಕೆ ಮತ್ತು ಹೆಚ್ಚಾಗುವಿಕೆಯಲ್ಲಿ ಬಾಸೊಫಿಲ್‌ಗಳು ಒಳಗೊಂಡಿರುತ್ತವೆ.

·       ಆಟೋಇಮ್ಯೂನ್ ರೋಗಗಳು:

 ಮಲ್ಟಿಪಲ್ ಸ್ಕ್ಲೆರೋಸಿಸ್ ಮತ್ತು ರುಮಾಟಾಯಿಡ್ ಆರ್ಥರೈಟಿಸ್‌ನಂತಹ ಆಟೋಇಮ್ಯೂನ್ ರೋಗಗಳ ಉಂಟಾಗುವಿಕೆ ಮತ್ತು ಪ್ರಗತಿಯಲ್ಲಿ ಬಾಸೊಫಿಲ್‌ಗಳು ಪ್ರಮುಖ ಪಾತ್ರವನ್ನು ವಹಿಸಬಹುದು. ಆಟೋಇಮ್ಯೂನ್ ರೋಗಗಳಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯು ತನ್ನದೇ ಅಂಗಾಂಶಗಳು ಮತ್ತು ಅಂಗಗಳ ಮೇಲೆ ದಾಳಿ ಮಾಡುತ್ತದೆ. ಬಾಸೊಫಿಲ್‌ಗಳು ಉರಿಯೂತ ಮತ್ತು ಅಂಗಾಂಶ ಹಾನಿಯನ್ನು ಉತ್ತೇಜಿಸುವ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು.

·       ಪರಾವಲಂಬಿ ಸೋಂಕುಗಳು:

ಮಲೇರಿಯಾ ಮತ್ತು ಷಿಸ್ಟೊಸೊಮಿಯಾಸಿಸ್‌ನಂತಹ ಪರಾವಲಂಬಿ ಸೋಂಕುಗಳ ವಿರುದ್ಧ ರಕ್ಷಣೆಯಲ್ಲಿ ಬಾಸೊಫಿಲ್‌ಗಳು ಒಳಗೊಂಡಿರುತ್ತವೆ. ದೇಹವು ಪರಾವಲಂಬಿಯಿಂದ ಸೋಂಕಿಗೊಳಗಾದಾಗ, ಬಾಸೊಫಿಲ್‌ಗಳು ಪರಾವಲಂಬಿಯನ್ನು ಕೊಲ್ಲುವ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು ಅಥವಾ ಇತರ ರೋಗನಿರೋಧಕ ಕಣಗಳಿಗೆ ಕೊಲ್ಲಲು ಸುಲಭವಾಗುವಂತೆ ಮಾಡಬಹುದು.

·      ಕ್ಯಾನ್ಸರ್:

ಬಾಸೊಫಿಲ್‌ಗಳು ಕ್ಯಾನ್ಸರ್ ಗೆಡ್ಡೆ ಕಣಗಳನ್ನು ಗುರುತಿಸಲು ಮತ್ತು ನಾಶಪಡಿಸಲು ಸಹಾಯ ಮಾಡಬಹುದು. ಆದರೆ, ಕೆಲವು ಸಂದರ್ಭಗಳಲ್ಲಿ, ಬಾಸೊಫಿಲ್‌ಗಳು ಕ್ಯಾನ್ಸರ್‌ನ ಬೆಳವಣಿಗೆ ಮತ್ತು ಹರಡುವಿಕೆಗೆ ಕೊಡುಗೆ ನೀಡಬಹುದು. ಉದಾಹರಣೆಗೆ, ಬಾಸೊಫಿಲ್‌ಗಳು ಆಂಜಿಯೋಜೆನೆಸಿಸ್‌ನ ಬೆಳವಣಿಗೆಯನ್ನು ಉತ್ತೇಜಿಸುವ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು, ಇದು ಗೆಡ್ಡೆಗಳ ಬೆಳವಣಿಗೆ ಮತ್ತು ಹರಡುವಿಕೆಗೆ ಸಹಾಯ ಮಾಡುತ್ತದೆ.

ಬಾಸೊಫಿಲ್ ಕಡಿಮೆಯಾಗುವ ಸಾಮಾನ್ಯ ಲಕ್ಷಣಗಳು ಯಾವುವು?

ಬಾಸೊಫಿಲ್ ಕಡಿಮೆಯಾಗುವ ಲಕ್ಷಣಗಳು ಅದಕ್ಕೆ ಕಾರಣವಾಗಿರುವ ಕಾಯಿಲೆಗಳನ್ನು ಅವಲಂಬಿಸಿ ವಿಭಿನ್ನವಾಗಿರುತ್ತವೆ. ಆದರೆ, ಬಾಸೊಫಿಲ್ ಕಡಿಮೆಯಾಗುವ ಕೆಲವು ಸಾಮಾನ್ಯ ಲಕ್ಷಣಗಳು ಈ ಕೆಳಗಿನಂತಿವೆ:

• ಆಯಾಸ
 • ಜ್ವರ
 • ತುರಿಕೆ
 • ಚರ್ಮದ ದದ್ದುಗಳು
 • ಗುಳ್ಳೆಗಳು
 • ಊದಿಕೊಂಡ ಕೀಲುಗಳು
 • ಉಸಿರಾಟದ ತೊಂದರೆ
 • ಹೊಟ್ಟೆಯ ನೋವು
 • ನುಂಗಲು ತೊಂದರೆ

ಬಾಸೊಫಿಲ್ ಸಮಸ್ಯೆ ಇರುವ ಜನರು ಈ ಕೆಳಗಿನವುಗಳನ್ನೂ ಅನುಭವಿಸಬಹುದು:

·       ತೂಕ ಇಳಿಕೆ

·       ರಾತ್ರಿಯ ಬೆವರು

·       ಸುಲಭವಾಗಿ ಗಾಯಗೊಳ್ಳುವುದು

·       ಅತಿಯಾದ ರಕ್ತಸ್ರಾವ

·       ಪದೇ ಪದೇ ಸೋಂಕುಗಳು

ನನ್ನ ಬಾಸೊಫಿಲ್ ಕಣಗಳ ಆರೋಗ್ಯವನ್ನು ಪರಿಶೀಲಿಸಲು ಸಾಮಾನ್ಯ ಪರೀಕ್ಷೆಗಳು ಯಾವುವು?

ನಿಮ್ಮ ಬಾಸೊಫಿಲ್ ಕಣಗಳ ಆರೋಗ್ಯವನ್ನು ಪರಿಶೀಲಿಸಲು ಈ ಕೆಳಗಿನ ಕೆಲವು ಸಾಮಾನ್ಯ ಪರೀಕ್ಷೆಗಳಿವೆ:

ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ)

ಸಿಬಿಸಿ ಎಂಬುದು ವಾಡಿಕೆಯ ರಕ್ತ ಪರೀಕ್ಷೆಯಾಗಿದ್ದು, ಬಾಸೊಫಿಲ್‌ಗಳನ್ನು ಒಳಗೊಂಡಂತೆ ವಿವಿಧ ರೀತಿಯ ರಕ್ತ ಕಣಗಳ ಸಂಖ್ಯೆಯನ್ನು ಅಳೆಯುತ್ತದೆ. ಹೆಚ್ಚಿನ ಅಥವಾ ಕಡಿಮೆ ಬಾಸೊಫಿಲ್ ಪ್ರಮಾಣವು ಬಾಸೊಫಿಲ್ ಸಮಸ್ಯೆಯನ್ನು ಸೂಚಿಸಬಹುದು.
 ಸಿಬಿಸಿಯನ್ನು ನಿರ್ವಹಿಸಲು, ತೋಳಿನ ರಕ್ತನಾಳದಿಂದ ಸಣ್ಣ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಆನಂತರ ರಕ್ತವನ್ನು ವಿವಿಧ ರೀತಿಯ ರಕ್ತ ಕಣಗಳನ್ನು ಎಣಿಕೆ ಮಾಡುವ ಯಂತ್ರದಲ್ಲಿ ಇಡಲಾಗುತ್ತದೆ.

ಬಾಸೊಫಿಲ್ ಆಕ್ಟಿವೇಷನ್ ಟೆಸ್ಟ್ (ಬಿಎಟಿ)

ಬಿಎಟಿ ಎಂಬುದು ಬಾಸೊಫಿಲ್‌ಗಳಿಂದ ಅಲರ್ಜಿಗೆ ಪ್ರತಿಕ್ರಿಯೆಯಾಗಿ ಬಿಡುಗಡೆಯಾಗುವ ಹಿಸ್ಟಮೈನ್ ಮತ್ತು ಇತರ ರಾಸಾಯನಿಕಗಳ ಮಟ್ಟವನ್ನು ಅಳೆಯುವ ಪರೀಕ್ಷೆ. ಈ ಪರೀಕ್ಷೆಯು ಅಲರ್ಜಿಕ್ ರೋಗಗಳ ರೋಗನಿರ್ಣಯಕ್ಕೆ ಮತ್ತು ಅಲರ್ಜಿ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ತಿಳಿಯಲು ಮಾಡಲು ಸಹಾಯ ಮಾಡುತ್ತದೆ.

ಬಿಎಟಿಯನ್ನು ನಿರ್ವಹಿಸಲು, ತೋಳಿನ ರಕ್ತನಾಳದಿಂದ ಸಣ್ಣ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಆನಂತರ ರಕ್ತವನ್ನು ವಿವಿಧ ಅಲರ್ಜಿಕಾರಕಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಬಾಸೊಫಿಲ್‌ಗಳಿಂದ ಬಿಡುಗಡೆಯಾದ ಹಿಸ್ಟಮೈನ್ ಮತ್ತು ಇತರ ರಾಸಾಯನಿಕಗಳ ಮಟ್ಟವನ್ನು ಆನಂತರ ಅಳೆಯಲಾಗುತ್ತದೆ.

ಬೋನ್ ಮ್ಯಾರೋ ಬಯಾಪ್ಸಿ

ಮೂಳೆ ಮಜ್ಜೆಯ ಬಯಾಪ್ಸಿಯು ಸೊಂಟದ ಮೂಳೆಯಿಂದ ಸಣ್ಣ ಪ್ರಮಾಣದ ಮೂಳೆ ಮಜ್ಜೆಯನ್ನು ತೆಗೆದುಕೊಳ್ಳುವ ಕಾರ್ಯವಿಧಾನವಾಗಿದೆ. ಈ ಮಾದರಿಯನ್ನು ಆನಂತರ ಮೈಕ್ರೋಸ್ಕೋಪ್‌ನಡಿಯಲ್ಲಿ ಬಾಸೊಫಿಲ್‌ಗಳನ್ನು ಒಳಗೊಂಡಂತೆ ರಕ್ತ ಕಣಗಳಲ್ಲಿನ ಅಸಾಮಾನ್ಯತೆಗಳಿಗಾಗಿ ಪರಿಶೀಲಿಸಲಾಗುತ್ತದೆ.

ಮೂಳೆ ಮಜ್ಜೆಯ ಬಯಾಪ್ಸಿಯನ್ನು ನಿರ್ವಹಿಸಲು, ಸೊಂಟದ ಮೂಳೆಗೆ ಒಂದು ಸೂಜಿಯನ್ನು ಚುಚ್ಚಲಾಗುತ್ತದೆ. ಸಣ್ಣ ಪ್ರಮಾಣದ ಮೂಳೆ ಮಜ್ಜೆಯನ್ನು ತೆಗೆದುಕೊಂಡು ಸ್ಲೈಡ್‌ನಲ್ಲಿ ಇಡಲಾಗುತ್ತದೆ. ಆ ಸ್ಲೈಡ್‌ ಅನ್ನು ಆನಂತರ ಪೆಥಾಲಜಿಸ್ಟ್ ಗಳು ಮೈಕ್ರೋಸ್ಕೋಪ್‌ನಡಿಯಲ್ಲಿ ಇಟ್ಟು ಪರಿಶೀಲಿಸುತ್ತಾರೆ.

ಬಾಸೊಫಿಲ್ಗಳ ಸಾಮಾನ್ಯ ರೇಂಜ್ ಎಷ್ಟು?

ವಯಸ್ಕರಲ್ಲಿ ಬಾಸೊಫಿಲ್‌ಗಳ ಸಾಮಾನ್ಯ ಶ್ರೇಣಿಯು ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 0-300 ಬಾಸೊಫಿಲ್‌ಗಳಾಗಿರುತ್ತದೆ. ಆದರೆ, ಪರೀಕ್ಷೆಯನ್ನು ನಡೆಸುವ ಲ್ಯಾಬೊರೇಟರಿಯನ್ನು ಅವಲಂಬಿಸಿ ಬಾಸೊಫಿಲ್‌ನ ಸಾಮಾನ್ಯ ಶ್ರೇಣಿಯು ಸ್ವಲ್ಪ ವ್ಯತ್ಯಾಸವಾಗಬಹುದು.

ನಿಮ್ಮ ಬಾಸೊಫಿಲ್ ಮಟ್ಟವು ಸಾಮಾನ್ಯ ಶ್ರೇಣಿಯಿಂದ ಹೊರಗಿರುವುದಾದರೆ, ಇದು ಬಾಸೊಫಿಲ್ ಸಮಸ್ಯೆಯನ್ನು ಸೂಚಿಸಬಹುದು. ಅಲರ್ಜಿಕ್ ರೋಗಗಳು, ಆಟೋಇಮ್ಯೂನ್ ರೋಗಗಳು, ಪರಾವಲಂಬಿ ಸೋಂಕುಗಳು ಅಥವಾ ಕ್ಯಾನ್ಸರ್‌ ಸಮಸ್ಯೆಯಿಂದ ಬಾಸೊಫಿಲ್ ಮಟ್ಟವು (ಬಾಸೊಫಿಲಿಯಾ) ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕೆಲವು ಔಷಧಿಗಳು, ಒತ್ತಡ ಅಥವಾ ಗರ್ಭಾವಸ್ಥೆಯಿಂದಾಗಿ ಬಾಸೊಫಿಲ್ ಮಟ್ಟವು (ಬಾಸೊಪೀನಿಯಾ) ಕಡಿಮೆಯಾಗಬಹುದು.

ಬಾಸೊಫಿಲ್ ಮಟ್ಟವು ತುಂಬಾ ಹೆಚ್ಚಾಗಲು ಕಾರಣವೇನು?

ಬಾಸೊಫಿಲ್ ಮಟ್ಟವು ಹೆಚ್ಚಾದರೆ ಅಧನ್ನು ಬಾಸೊಫಿಲಿಯಾ ಎಂದೂ ಕರೆಯಲಾಗುತ್ತದೆ, ಇದು ವಿವಿಧ ಅಂಶಗಳಿಂದ ಆಗಿರಬಹುದು, ಅವುಗಳೆಂದರೆ:

·       ಆಸ್ತಮಾ ಮತ್ತು ಎಕ್ಜಿಮಾದಂತಹ ಅಲರ್ಜಿಕ್ ರೋಗಗಳು

·       ಮಲ್ಟಿಪಲ್ ಸ್ಕ್ಲೆರೋಸಿಸ್ ಮತ್ತು ರುಮಾಟಾಯಿಡ್ ಆರ್ಥರೈಟಿಸ್‌ನಂತಹ ಆಟೋಇಮ್ಯೂನ್ ರೋಗಗಳು

·       ಮಲೇರಿಯಾದಂತಹ ಪರಾವಲಂಬಿ ಸೋಂಕುಗಳು

·       ಲ್ಯುಕೇಮಿಯಾದಂತಹ ಕ್ಯಾನ್ಸರ್

·       ಕಾರ್ಟಿಕೊಸ್ಟೀರಾಯಿಡ್‌ಗಳು ಮತ್ತು ಆಂಟಿಬಯೋಟಿಕ್‌ಗಳಂತಹ ಔಷಧಿಗಳು

·       ಒತ್ತಡ

·       ಗರ್ಭಾವಸ್ಥೆ

ಬಾಸೊಫಿಲ್ ಮಟ್ಟವು ತುಂಬಾ ಕಡಿಮೆಯಾಗಲು ಕಾರಣವೇನು?

ಬಾಸೊಫಿಲ್ ಮಟ್ಟವು ಕಡಿಮೆಯಾದರೆ ಅದನ್ನು ಬಾಸೊಪೀನಿಯಾ ಎಂದೂ ಕರೆಯಲಾಗುತ್ತದೆ, ಇದು ವಿವಿಧ ಅಂಶಗಳಿಂದಾಗಿರಬಹುದು, ಆ ಅಂಶಗಳೆಂದರೆ:

·       ಔಷಧಿಗಳು: ಕಾರ್ಟಿಕೊಸ್ಟೀರಾಯಿಡ್‌ಗಳು ಮತ್ತು ಕೆಲವು ಆಂಟಿಬಯೋಟಿಕ್‌ಗಳಂತಹ ಕೆಲವು ಔಷಧಿಗಳು ರಕ್ತದಲ್ಲಿ ಬಾಸೊಫಿಲ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.

·       ಕ್ಯಾನ್ಸರ್: ಲ್ಯುಕೇಮಿಯಾ ಮತ್ತು ಲಿಂಫೋಮಾದಂತಹ ಕೆಲವು ರೀತಿಯ ಕ್ಯಾನ್ಸರ್‌ಗಳು ಬಾಸೊಫಿಲ್ ಮಟ್ಟ ಕಡಿಮೆ ಮಾಡಲು ಕಾರಣವಾಗಬಹುದು.

ಬಾಸೊಫಿಲ್ ಸಮಸ್ಯೆಗಳಿಗೆ ಸಾಮಾನ್ಯ ಚಿಕಿತ್ಸೆಗಳು ಯಾವುವು?

ಬಾಸೊಫಿಲ್ ಸಮಸ್ಯೆಗಳಿಗೆ ಕಾರಣಗಳನ್ನು ಆಧಾರವಾಗಿ ಚಿಕಿತ್ಸೆ ನೀಡಲಾಗುತ್ತದೆ. ಕೆಲವು ಸಾಮಾನ್ಯ ಚಿಕಿತ್ಸೆಗಳು ಹೀಗಿವೆ:

·       ಅಲರ್ಜಿಕ್ ರೋಗಗಳು: ಆಂಟಿಹಿಸ್ಟಮೈನ್‌ಗಳು, ಕಾರ್ಟಿಕೊಸ್ಟೀರಾಯಿಡ್‌ಗಳು ಮತ್ತು ಇತರ ಅಲರ್ಜಿ ಔಷಧಿಗಳನ್ನು ಅಲರ್ಜಿಕ್ ರೋಗಗಳ ಚಿಕಿತ್ಸೆಗೆ ಬಳಸಬಹುದು.

·       ಆಟೋಇಮ್ಯೂನ್ ರೋಗಗಳು: ಇಮ್ಯುನೋಸಪ್ರೆಸಿವ್ ಔಷಧಿಗಳು ಮತ್ತು ಬಯೋಲಾಜಿಕ್ಸ್‌ ಅನ್ನು ಆಟೋಇಮ್ಯೂನ್ ರೋಗಗಳ ಚಿಕಿತ್ಸೆಗೆ ಬಳಸಬಹುದು.

·       ಪರಾವಲಂಬಿ ಸೋಂಕುಗಳು: ಆಂಟಿಪರಾಸಿಟಿಕ್ ಔಷಧಿಗಳನ್ನು ಪರಾವಲಂಬಿ ಸೋಂಕುಗಳ ಚಿಕಿತ್ಸೆಗೆ ಬಳಸಬಹುದು.

·       ಕ್ಯಾನ್ಸರ್: ಕೀಮೋಥೆರಪಿ, ರೇಡಿಯೇಷನ್ ಥೆರಪಿ ಮತ್ತು ಶಸ್ತ್ರಚಿಕಿತ್ಸೆಯನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸಬಹುದು.

ನನ್ನ ಬಾಸೊಫಿಲ್ಗಳನ್ನು ಆರೋಗ್ಯಕರ ಮಟ್ಟದಲ್ಲಿಡಲು ಪಾಲಿಸಬಹುದಾದ ಲೈಫ್ ಸ್ಟೈಲ್ ಸಲಹೆಗಳು ಯಾವುವು?

ನಿಮ್ಮ ಬಾಸೊಫಿಲ್‌ಗಳನ್ನು ಆರೋಗ್ಯವಾಗಿಡಲು ಪಾಲಿಸಬಹುದಾದ ಕೆಲವು ಸರಳ ಜೀವನಶೈಲಿ ಸಲಹೆಗಳು ಇಲ್ಲಿವೆ:

·       ಆರೋಗ್ಯಕರ ಆಹಾರವನ್ನು ಸೇವಿಸಿ

·       ನಿಯಮಿತ ವ್ಯಾಯಾಮ ಮಾಡಿ

·       ಒತ್ತಡವನ್ನು ನಿರ್ವಹಿಸಿ

·       ಸಾಕಷ್ಟು ನಿದ್ದೆ ಮಾಡಿ

·       ಅಲರ್ಜಿನ್‌ಗಳನ್ನು ತಪ್ಪಿಸಿ

ಮಾಸ್ಟ್ ಸೆಲ್ ಗಳು ಮತ್ತು ಬಾಸೊಫಿಲ್ ಕಣಗಳ ನಡುವಿನ ವ್ಯತ್ಯಾಸವೇನು?

ಮಾಸ್ಟ್ ಕಣಗಳು ಮತ್ತು ಬಾಸೊಫಿಲ್ ಕಣಗಳು ಗ್ರಾನ್ಯುಲೋಸೈಟ್‌ಗಳಾಗಿವೆ, ಇವು ಕಿಣ್ವಗಳು ಮತ್ತು ಇತರ ರಾಸಾಯನಿಕಗಳಿಂದ ತುಂಬಿರುವ ಗ್ರಾನ್ಯೂಲ್‌ ಗಳನ್ನು ಒಳಗೊಂಡಿರುವ ಬಿಳಿ ರಕ್ತ ಕಣಗಳಾಗಿವೆ.

 ಮಾಸ್ಟ್ ಕಣಗಳು: ಇವು ಅಂಗಾಂಶ-ನಿವಾಸಿ ಕಣಗಳಾಗಿದ್ದು, ದೇಹದಾದ್ಯಂತ ನಿರ್ದಿಷ್ಟ ಅಂಗಾಂಶಗಳಲ್ಲಿ ಕಂಡುಬರುತ್ತವೆ. ಇವು ಚರ್ಮ ಮತ್ತು ಶ್ವಾಸನಾಳದ ಒಳಗಿನಂತಹ ಪರಿಸರಕ್ಕೆ ಒಡ್ಡಿಕೊಂಡಿರುವ ಅಂಗಾಂಶಗಳಲ್ಲಿ ವಿಶೇಷವಾಗಿ ಸಮೃದ್ಧವಾಗಿರುತ್ತವೆ. ಮಾಸ್ಟ್ ಕಣಗಳು ರಕ್ತನಾಳಗಳು ಮತ್ತು ನರಗಳ ಬಳಿಯೂ ಕಂಡುಬರುತ್ತವೆ.

ಬಾಸೊಫಿಲ್ ಕಣಗಳು: ಇವು ಸಂಚರಿಸುವ ಕಣಗಳಾಗಿದ್ದು, ರಕ್ತಪ್ರವಾಹದಲ್ಲಿ ಕಂಡುಬರುತ್ತವೆ. ಇವು ಮಾಸ್ಟ್ ಕಣಗಳಿಗಿಂತ ಸಾಮಾನ್ಯವಾಗಿ ಕಡಿಮೆ ಇದ್ದರೂ, ಉರಿಯೂತ ಅಥವಾ ಸೋಂಕಿತ ಅಂಗಾಂಶಗಳಿಗೆ ಕಾರಣವಾಗಬಹುದು.

ಕೊನೆಯ ಮಾತು

ನಿಮ್ಮ ಬಾಸೊಫಿಲ್ ಮಟ್ಟವನ್ನು ಕೇವಲ ರಕ್ತ ಪರೀಕ್ಷೆಯ ಮೂಲಕ ಮಾತ್ರ ನಿರ್ಧರಿಸಬಹುದು. ಈ ಪರೀಕ್ಷೆಯನ್ನು ಸಾಮಾನ್ಯವಾಗಿ ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಎಂದು ಕರೆಯಲಾಗುವ ವಾಡಿಕೆಯ ರಕ್ತ ಪರೀಕ್ಷೆಯ ಒಂದು ಘಟಕವಾಗಿ ಮಾಡಲಾಗುತ್ತದೆ. ಬಾಸೊಫಿಲ್ ಮಟ್ಟವು ಸಾಮಾನ್ಯ ಶ್ರೇಣಿಯಿಂದ ಹೊರಗಿರುವುದಾದರೆ, ಬಾಸೊಫಿಲಿಕ್ ಸಮಸ್ಯೆ ಉಂಟಾಗಿರಬಹುದು.

ವಿಶ್ವಾಸಾರ್ಹ ಫಲಿತಾಂಶಗಳನ್ನು ಪಡೆಯಲು ಮೆಟ್ರೋಪೊಲಿಸ್ ಹೆಲ್ತ್‌ ಕೇರ್‌ ನಂತಹ ಖ್ಯಾತ ಡಯಾಗ್ನಾಸ್ಟಿಕ್ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆಯನ್ನು ನಡೆಸುವುದು ಅತ್ಯಗತ್ಯ. ಎಲ್ಲಾ ಡಯಾಗ್ನಾಸ್ಟಿಕ್ ಅಗತ್ಯಗಳಿಗೆ ನಾವು ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ಭಾರತದಾದ್ಯಂತ ಶಾಖೆಗಳನ್ನು ಹೊಂದಿದ್ದೇವೆ. ಜೊತೆಗೆ, ನಮ್ಮ ವೈದ್ಯಕೀಯ ಸಿಬ್ಬಂದಿಗಳು ಕೌಶಲ್ಯಪೂರ್ಣರಾಗಿದ್ದಾರೆ, ಜ್ಞಾನವಂತರಾಗಿದ್ದಾರೆ ಮತ್ತು ಪರಿಣತರಾಗಿದ್ದಾರೆ. ಅನುಕೂಲಕರ ಬಾಸೊಫಿಲ್ ಪರೀಕ್ಷೆಗಾಗಿ, ಈಗಲೇ ನಮ್ಮನ್ನು ಸಂಪರ್ಕಿಸಿ.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More