Do you have any queries?

or Call us now at 9982-782-555

basket icon
Basket
(0 items)
back-arrow-image Search Health Packages, Tests & More

Language

ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕ: ವಾರದಿಂದ ವಾರಕ್ಕೆ ಏನೇನು ಬದಲಾವಣೆ ನಿರೀಕ್ಷಿಸಬಹುದು

Last Updated On: Jan 13 2026

Table of Contents


ಮೂರನೇ ತ್ರೈಮಾಸಿಕ ಎಂದರೇನು?

ಮೂರನೇ ತ್ರೈಮಾಸಿಕವು ಗರ್ಭಾವಸ್ಥೆಯ ಅಂತಿಮ ಹಂತವಾಗಿದೆ. ಮೂರನೇ ತ್ರೈಮಾಸಿಕವು 28ನೇ ವಾರದಿಂದ ಹೆರಿಗೆಯವರೆಗೆ, ಅಂದರೆ ಸಾಮಾನ್ಯವಾಗಿ 40ನೇ ವಾರದವರೆಗೆ ಇರುತ್ತದೆ. ಈ ಅವಧಿಯಲ್ಲಿ, ನಿಮ್ಮ ಮಗು ವೇಗವಾಗಿ ಬೆಳೆಯುತ್ತದೆ ಮತ್ತು ಅಭಿವೃದ್ಧಿಗೊಳ್ಳುತ್ತದೆ, ತೂಕವನ್ನು ಹೆಚ್ಚಾಗುತ್ತದೆ ಮತ್ತು ಪ್ರಮುಖ ಅಂಗಗಳ ಕಾರ್ಯವನ್ನು ಸಂಸ್ಕರಿಸುತ್ತದೆ. ನಿಮ್ಮ ದೇಹವು ಹೆರಿಗೆಗೆ ತಯಾರಾಗುವಾಗ ನೀವು ದೈಹಿಕ ಅಸ್ವಸ್ಥತೆ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಅನುಭವಿಸಬಹುದು. ಆದರೆ, ಸರಿಯಾದ ಕಾಳಜಿ ಮತ್ತು ನೆರವಿನೊಂದಿಗೆ ಈ ಹಂತವನ್ನು ನೀವು ಆತ್ಮವಿಶ್ವಾಸದಿಂದ ನಿಭಾಯಿಸಬಹುದು ಮತ್ತು ನಿಮ್ಮ ಪುಟ್ಟ ಕಂದನನ್ನು ಭೇಟಿಯಾಗಲು ಎದುರುನೋಡಬಹುದು.

ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕ ಯಾವಾಗ ಆರಂಭವಾಗುತ್ತದೆ?

ಮೂರನೇ ತ್ರೈಮಾಸಿಕವು ಅಧಿಕೃತವಾಗಿ 28ನೇ ವಾರದಿಂದ ಆರಂಭವಾಗುತ್ತದೆ ಮತ್ತು ನಿಮ್ಮ ಮಗು ಜನಿಸುವವರೆಗೆ, ಸಾಮಾನ್ಯವಾಗಿ 40 ವಾರಗಳವರೆಗೆ ಮುಂದುವರಿಯುತ್ತದೆ. ಆದರೆ, ಪ್ರತಿಯೊಂದು ಗರ್ಭಾವಸ್ಥೆಯೂ ವಿಶಿಷ್ಟವಾಗಿರುತ್ತದೆ ಮತ್ತು ಹೆರಿಗೆಯು 37 ರಿಂದ 42 ವಾರಗಳ ನಡುವೆ ಯಾವುದೇ ಸಮಯದಲ್ಲಿ ಸಂಭವಿಸಬಹುದು ಎಂಬುದನ್ನು ಗಮನಿಸುವುದು ಮುಖ್ಯ. ಹೆಚ್ಚಿನ ವೈದ್ಯರು 39 ರಿಂದ 40 ವಾರಗಳ ನಡುವಿನ ಗರ್ಭಾವಸ್ಥೆಯನ್ನು ಪೂರ್ಣಾವಧಿಯೆಂದು ಪರಿಗಣಿಸುತ್ತಾರೆ. ಮೂರನೇ ತ್ರೈಮಾಸಿಕದ ವಾರಗಳಿಗೆ ಪ್ರವೇಶಿಸಿದಾಗ, ನಿಮ್ಮ ಗರ್ಭಾವಸ್ಥೆಯ ಕುರಿತು ಹೆಚ್ಚು ಕಾಳಜಿ ತೋರಬೇಕಾಗುತ್ತದೆ. ಸಾಮಾನ್ಯವಾಗಿ 36ನೇ ವಾರದವರೆಗೆ ಪ್ರತಿ ಎರಡು ವಾರಗಳಿಗೊಮ್ಮೆ ತಪಾಸಣೆಗಳು ಮತ್ತು ನಂತರ ಹೆರಿಗೆಯವರೆಗೆ ಪ್ರತಿ ವಾರ ತಪಾಸಣೆಗಳು ನಡೆಯುತ್ತವೆ.

ಮೂರನೇ ತ್ರೈಮಾಸಿಕದಲ್ಲಿ ಗರ್ಭಾವಸ್ಥೆಯ ಕಾಳಜಿ ಎಂದರೇನು?

ಮೂರನೇ ತ್ರೈಮಾಸಿಕದಲ್ಲಿ, ಗರ್ಭಾವಸ್ಥೆಯ ಕುರಿತು ಹೆಚ್ಚು ಕಾಳಜಿ ತೋರಬೇಕು. ನೀವು ಮತ್ತು ನಿಮ್ಮ ಮಗುವಿನ ಆರೋಗ್ಯ ಮತ್ತು ಕ್ಷೇಮವನ್ನು ತಪಾಸಣೆ ಮಾಡಲು ಹೆಚ್ಚು ಗಮನ ಹರಿಸಲಾಗುತ್ತದೆ. ಈ ಹಂತದಲ್ಲಿ ನೀವು ಏನನ್ನು ಮಾಡಬೇಕು ಎಂಬುದು ಈ ಕೆಳಗಿದೆ:

·       28 ರಿಂದ 36 ವಾರಗಳವರೆಗೆ ಪ್ರತಿ ಎರಡು ವಾರಗಳಿಗೊಮ್ಮೆ ತಪಾಸಣೆಗಳು, ನಂತರ ಹೆರಿಗೆಯವರೆಗೆ ಪ್ರತಿ ವಾರ ತಪಾಸಣೆ.

·       ನಿಮ್ಮ ರಕ್ತದೊತ್ತಡ, ತೂಕ ಮತ್ತು ಫಂಡಲ್ ಎತ್ತರವನ್ನು (ಪ್ಯುಬಿಕ್ ಬೋನ್ ನಿಂದ ಗರ್ಭಾಶಯದ ಮೇಲ್ಭಾಗದವರೆಗಿನ ದೂರ) ಅಳೆಯುವುದು.

·       ನಿಮ್ಮ ಮಗುವಿನ ಹೃದಯ ಬಡಿತ ಮತ್ತು ಚಲನೆಯನ್ನು ಮೇಲ್ವಿಚಾರಣೆ ಮಾಡುವುದು.

·       ಪ್ರೀಕ್ಲಾಂಪ್ಸಿಯಾ ಅಥವಾ ಮೂತ್ರನಾಳದ ಸೋಂಕುಗಳ ಚಿಹ್ನೆಗಳಿಗಾಗಿ ಮೂತ್ರ ಪರೀಕ್ಷೆಗಳು. ಪ್ರೋಟೀನ್ ಮತ್ತು ಗ್ಲೂಕೋಸ್ ಮಟ್ಟಗಳಿಗಾಗಿ ತಪಾಸಣೆ.

·       ಕೆಟ್ಟ ಬ್ಯಾಕ್ಟೀರಿಯಾಗಳಿಗಾಗಿ ಪರೀಕ್ಷಿಸಲು 36ನೇ ವಾರದ ಸುಮಾರಿಗೆ ಗ್ರೂಪ್ ಬಿ ಸ್ಟ್ರೆಪ್ಟೋಕಾಕಸ್ (ಜಿಬಿಎಸ್) ಪರೀಕ್ಷೆಯನ್ನು ನಡೆಸಬೇಕು.

·       ಹೆಚ್ಚಿನ ಅಪಾಯದ ಗರ್ಭಾವಸ್ಥೆಯನ್ನು ಹೊಂದಿದ್ದರೆ ಅಥವಾ ನಿಮ್ಮ ಮಗು ತಡವಾಗಿದ್ದರೆ, ಒತ್ತಡರಹಿತ ಪರೀಕ್ಷೆಗಳು ಅಥವಾ ಬಯೋಫಿಸಿಕಲ್ ಪ್ರೊಫೈಲ್‌ಗಳಂತಹ ಹೆಚ್ಚುವರಿ ಪರೀಕ್ಷೆಗಳು ನಡೆಸಬೇಕು.

ಮೂರನೇ ತ್ರೈಮಾಸಿಕದ ಸಾಮಾನ್ಯ ಲಕ್ಷಣಗಳು ಯಾವುವು?

ನಿಮ್ಮ ದೇಹವು ನಿಮ್ಮ ಬೆಳೆಯುತ್ತಿರುವ ಮಗುವಿಗೆ ಸ್ಥಳಾವಕಾಶ ಮಾಡಿಕೊಡುವಾಗ, ನೀವು ವಿವಿಧ ಮೂರನೇ ತ್ರೈಮಾಸಿಕ ಲಕ್ಷಣಗಳನ್ನು ಅನುಭವಿಸಬಹುದು, ಅವುಗಳೆಂದರೆ:

·       ಬ್ರಾಕ್ಸ್‌ ಟನ್ ಹಿಕ್ಸ್ ಸಂಕೋಚನಗಳು (ಅಭ್ಯಾಸ ಸಂಕೋಚನಗಳು)

·       ಗರ್ಭಾಶಯವು ಡಯಾಫ್ರಾಮ್‌ ಗೆ ಒತ್ತಡ ಹಾಕುವುದರಿಂದ ಉಸಿರಾಟದ ತೊಂದರೆ.

·       ಮೂತ್ರಾಶಯದ ಮೇಲಿನ ಒತ್ತಡದಿಂದ ಆಗಾಗ್ಗೆ ಮೂತ್ರ ವಿಸರ್ಜನೆ.

·       ಕಾಲುಗಳು, ಕಾಲಿನ ಗಂಟು ಮತ್ತು ಕೈಗಳಲ್ಲಿ ಊತ. (ಎಡಿಮಾ)

·       ಸ್ನಾಯುಬಂಧನಗಳು ಆಗುವುದರಿಂದ ಮತ್ತು ಭಂಗಿಯ ಬದಲಾವಣೆಯಿಂದ ಬೆನ್ನುನೋವು ಮತ್ತು ಪೆಲ್ವಿಕ್ ನೋವು.

·       ಹಾರ್ಮೋನ್ ಬದಲಾವಣೆಗಳಿಂದ ಮತ್ತು ಕುಗ್ಗಿದ ಹೊಟ್ಟೆಯಿಂದ ಎದೆಗಂಟು ಮತ್ತು ಜೀರ್ಣಕ್ರಿಯೆಯ ಸಮಸ್ಯೆ.

·       ಅಸ್ವಸ್ಥತೆ ಮತ್ತು ಹೆರಿಗೆಯ ಬಗ್ಗೆ ಆತಂಕದಿಂದ ನಿದ್ರೆ ಬರದಿರುವುದು.

ಯಾವುದೇ ಮೂರನೇ ತ್ರೈಮಾಸಿಕ ಲಕ್ಷಣಗಳು ಅಸಾಮಾನ್ಯವಾಗಿದ್ದರೆ ಅಥವಾ ಆತಂಕವುಂಟುಮಾಡಿದರೆ, ನಿಮ್ಮ ವೈದ್ಯರನ್ನು ತಕ್ಷಣ ಸಂಪರ್ಕಿಸಿ.

ಮೂರನೇ ತ್ರೈಮಾಸಿಕದಲ್ಲಿ ನಾವು ತಮ್ಮನ್ನು ತಾವು ಹೇಗೆ ಕಾಳಜಿ ವಹಿಸಿಕೊಳ್ಳಬೇಕು?

ಮೂರನೇ ತ್ರೈಮಾಸಿಕದಲ್ಲಿ ಸ್ವಯಂ ಕಾಳಜಿಯು ನೀವು ಮತ್ತು ನಿಮ್ಮ ಮಗುವಿನ ಆರೋಗ್ಯ ಮತ್ತು ಕ್ಷೇಮವನ್ನು ಪಾಲಿಸಲು ನಿರ್ಣಾಯಕವಾಗಿದೆ. ಅದಕ್ಕಾಗಿ ಕೆಲವು ಸಲಹೆಗಳು:

·       ನಿಮ್ಮ ಮಗುವಿನ ಬೆಳವಣಿಗೆ ಮತ್ತು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಮತೋಲಿತ, ಪೌಷ್ಟಿಕ ಆಹಾರವನ್ನು ಸೇವಿಸಿ.

·       ದಿನವಿಡೀ ಸಾಕಷ್ಟು ನೀರನ್ನು ಕುಡಿಯುವ ಮೂಲಕ ಹೈಡ್ರೇಟೆಡ್ ಆಗಿರಿ.

·       ನಡಿಗೆ ಅಥವಾ ಗರ್ಭಾವಸ್ಥೆಯ ಯೋಗದಂತಹ ಸುರಕ್ಷಿತ, ಸಾಧಾರಣ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಅದು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಮತ್ತು ಹೆರಿಗೆಗೆ ತಯಾರಾಗಲು ಸಹಾಯ ಮಾಡುತ್ತದೆ (ವೈದ್ಯರು ಬೇರೆ ರೀತಿಯ ಸಲಹೆ ನೀಡದಿದ್ದರೆ).

·       ಬೆಳೆಯುತ್ತಿರುವ ಹೊಟ್ಟೆಯನ್ನು ಬೆಂಬಲಿಸಲು ಮತ್ತು ಒತ್ತಡದ ಬಿಂದುಗಳನ್ನು ಕಡಿಮೆ ಮಾಡಲು ದಿಂಬುಗಳನ್ನು ಬಳಸಿ, ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಪಡೆಯಿರಿ.

·       ನಿಮ್ಮ ಆರೋಗ್ಯ ಮತ್ತು ನಿಮ್ಮ ಮಗುವಿನ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ನಿಗದಿತ ಗರ್ಭಾವಸ್ಥೆಯ ತಪಾಸಣೆಗಳಿಗೆ ಹಾಜರಾಗಿರಿ.

·       ಆತಂಕವನ್ನು ನಿರ್ವಹಿಸಲು ಮತ್ತು ವಿಶ್ರಾಂತಿಯನ್ನು ಹೊಂದಲು ಆಳವಾದ ಉಸಿರಾಟ, ಧ್ಯಾನ ಅಥವಾ ಗರ್ಭಾವಸ್ಥೆಯ ಮಸಾಜ್‌ನಂತಹ ಒತ್ತಡ-ಕಡಿಮೆಗೊಳಿಸುವ ತಂತ್ರಗಳನ್ನು ಅಭ್ಯಾಸ ಮಾಡಿ.

ಮೂರನೇ ತ್ರೈಮಾಸಿಕದಲ್ಲಿ ನಮ್ಮ ಭಾವನೆಗಳಿಗೆ ಏನಾಗುತ್ತದೆ?

ಮೂರನೇ ತ್ರೈಮಾಸಿಕವು ಭಾವನಾತ್ಮಕ ರೋಲರ್‌ ಕೋಸ್ಟರ್ ಆಗಿರಬಹುದು. ಉತ್ಸಾಹ ಮತ್ತು ಸಂತೋಷದಿಂದ ಹಿಡಿದು ಆತಂಕ ಮತ್ತು ಭಯದವರೆಗಿನ ಎಲ್ಲಾ ಭಾವನೆಗಳು ಬರಬಹುದು. ಆಗ ನೀವು ಏನನ್ನು ಅನುಭವಿಸಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

·       ಹಾರ್ಮೋನ್ ಬದಲಾವಣೆಗಳಿಂದ ಮತ್ತು ಗರ್ಭಾವಸ್ಥೆಯ ಕೊನೆಯ ದಿನಗಳ ದೈಹಿಕ ಬೇಡಿಕೆಗಳಿಂದ ಮನಸ್ಥಿತಿಯ ಏರಿಳಿತಗಳು ಜಾಸ್ತಿ.

·       ಹೆರಿಗೆ ಮತ್ತು ಪೋಷಕತ್ವದ ಜವಾಬ್ದಾರಿಗಳ ಬಗ್ಗೆ ಉತ್ಸಾಹ ಮತ್ತು ಆತಂಕದ ಮಿಶ್ರಣ.

·       ದೈಹಿಕ ಅಸ್ವಸ್ಥತೆ ಮತ್ತು ನಿದ್ರೆಯ ಕೊರತೆಯಿಂದ ಕಿರಿಕಿರಿ ಅಥವಾ ತಾಳ್ಮೆಯ ಕೊರತೆ.

·       ಮಗುವಿನ ಆಗಮನಕ್ಕಾಗಿ ಕಾಯುವಾಗ ತಾಳ್ಮೆಯಿಲ್ಲದ ಭಾವನೆ.

·       ಮನೆಯನ್ನು ಮಗುವಿಗೆ ತಯಾರು ಮಾಡಲು ಆಸಕ್ತಿ, ಗೂಡುಕಟ್ಟುವಿಕೆಯ ಸಹಜ ಒತ್ತಡ.

ಮೂರನೇ ತ್ರೈಮಾಸಿಕದಲ್ಲಿ ನಮ್ಮ ಮಗು ಹೇಗೆ ಬೆಳೆಯುತ್ತದೆ?

ಮೂರನೇ ತ್ರೈಮಾಸಿಕದಲ್ಲಿ, ನಿಮ್ಮ ಮಗು ಗರ್ಭಾಶಯದ ಹೊರಗಿನ ಜೀವನಕ್ಕೆ ತಯಾರಾಗಲು ವೇಗವಾಗಿ ಬೆಳೆಯುತ್ತದೆ ಮತ್ತು ಅಭಿವೃದ್ಧಿಗೊಳ್ಳುತ್ತದೆ. ಮೂರನೇ ತ್ರೈಮಾಸಿಕದಲ್ಲಿ ಭ್ರೂಣದ ಬೆಳವಣಿಗೆಯ ಕೆಲವು ಪ್ರಮುಖ ಮೈಲಿಗಲ್ಲುಗಳು ಹೀಗಿವೆ:

·       ವೇಗವಾದ ತೂಕ ಹೆಚ್ಚಳ, ಮೂರನೇ ತ್ರೈಮಾಸಿಕದ ಆರಂಭದಲ್ಲಿ ಸುಮಾರು 2.5 ಪೌಂಡ್‌ಗಳಿಂದ ಜನನದ ಸಮಯದಲ್ಲಿ 6-9 ಪೌಂಡ್‌ಗಳವರೆಗೆ ಬೆಳವಣಿಗೆ.

·       ನಿಮ್ಮ ಮಗುವಿಗೆ ಉಸಿರಾಡಲು, ದೇಹದ ತಾಪಮಾನವನ್ನು ನಿಯಂತ್ರಿಸಲು ಮತ್ತು ಉದ್ದೀಪನೆಗೆ ಪ್ರತಿಕ್ರಿಯಿಸಲು ಸಾಧ್ಯವಾಗುವಂತೆ ಶ್ವಾಸಕೋಶ, ಮೆದುಳು ಮತ್ತು ನರಮಂಡಲದ ಪಕ್ವತೆ.

·       ಇಂದ್ರಿಯಗಳ ಬೆಳವಣಿಗೆ. ಇದರಲ್ಲಿ ಕಾಣುವ, ಕೇಳುವ ಮತ್ತು ರುಚಿಯ ಸಾಮರ್ಥ್ಯ ಸೇರಿರುತ್ತದೆ.

·       ಕೊಬ್ಬಿನ ಶೇಖರಣೆ, ನಿಮ್ಮ ಮಗುವಿಗೆ ಹೆಚ್ಚು ದುಂಡಗಿನ ನೋಟವನ್ನು ನೀಡುತ್ತದೆ.

·       ಹೆರಿಗೆಗೆ ತಯಾರಾಗಲು ಮಗುವಿನ ತಲೆಯು ಪೆಲ್ವಿಸ್ ಭಾಗದ ಕಡೆ ತಿರುಗುವುದು (ಲೈಟೆನಿಂಗ್).

·       ಜೀರ್ಣಕ್ರಿಯೆಯ ವ್ಯವಸ್ಥೆಯ ಸೂಕ್ಷ್ಮ ಸಂಸ್ಕರಣೆ, ನಿಮ್ಮ ಮಗುವಿಗೆ ಕೆಲವು ಪೋಷಕಾಂಶಗಳನ್ನು ಸಂಸ್ಕರಿಸಲು ಅನುವು ಮಾಡಿಕೊಡುತ್ತದೆ.

ಮೂರನೇ ತ್ರೈಮಾಸಿಕದ ಕೊನೆಯಲ್ಲಿ, ನಿಮ್ಮ ಮಗು ಸಂಪೂರ್ಣವಾಗಿ ಬೆಳೆದಿರುತ್ತದೆ ಮತ್ತು ಜಗತ್ತಿಗೆ ಪ್ರವೇಶಿಸಲು ಸಿದ್ಧವಾಗಿರುತ್ತದೆ.

ಮೂರನೇ ತ್ರೈಮಾಸಿಕದಲ್ಲಿ ಯಾವ ತೊಡಕುಗಳು ಸಂಭವಿಸಬಹುದು?

ಹೆಚ್ಚಿನ ಗರ್ಭಾವಸ್ಥೆಗಳು ಸರಾಗವಾಗಿ ಮುಂದುವರಿಯುತ್ತವೆಯಾದರೂ, ಮೂರನೇ ತ್ರೈಮಾಸಿಕದಲ್ಲಿ ಉಂಟಾಗಬಹುದಾದ ಸಂಭಾವನೀಯ ತೊಡಕುಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಆ ತೊಡಕುಗಳೆಂದರೆ:

·       ಪ್ರೀಕ್ಲಾಂಪ್ಸಿಯಾ (ಹೆಚ್ಚಿನ ರಕ್ತದೊತ್ತಡ ಮತ್ತು ಅಂಗದ ಹಾನಿ).

·       ಗರ್ಭಾವಸ್ಥೆಯ ಮಧುಮೇಹ.

·       ಅಕಾಲಿಕ ಹೆರಿಗೆ (37 ವಾರಗಳ ಮೊದಲು ಹೆರಿಗೆ).

·       ಪ್ಲಾಸೆಂಟಾ ಪ್ರಿವಿಯಾ (ಗರ್ಭಾಶಯದ ಮುಚ್ಚಿಕೆಯನ್ನು ಒಳಗೊಂಡಿರುವ ಪ್ಲಾಸೆಂಟಾ).

·       ಗರ್ಭಾಶಯದೊಳಗೆ ಬೆಳವಣಿಗೆಯ ನಿರ್ಬಂಧ (ಮಗು ನಿರೀಕ್ಷಿತವಾಗಿ ಬೆಳೆಯದಿರುವುದು).

·       ಸ್ಟಿಲ್‌ಬರ್ಥ್ (ಅಪರೂಪವಾದರೂ ಸಂಭವನೀಯ).

ನೀವು ಯಾವುದೇ ಅಸಹಜ ಲಕ್ಷಣಗಳನ್ನು ಅನುಭವಿಸಿದರೆ ಅಥವಾ ಆತಂಕಗಳಿದ್ದರೆ, ನಿಮ್ಮ ವೈದ್ಯರನ್ನು ತಕ್ಷಣ ಸಂಪರ್ಕಿಸಿ.

ಮೂರನೇ ತ್ರೈಮಾಸಿಕದಲ್ಲಿ ನಮ್ಮ ಮಗುವಿಗೆ ಏನಾಗುತ್ತದೆ?

ನಿಮ್ಮ ಮಗು ಮೂರನೇ ತ್ರೈಮಾಸಿಕದಲ್ಲಿ ಬೆಳೆಯುತ್ತಿರುವಾಗ ಮತ್ತು ಅಭಿವೃದ್ಧಿಗೊಳ್ಳುವಾಗ, ನೀವು ಕೆಲವು ರೋಮಾಂಚಕ ಬದಲಾವಣೆಗಳನ್ನು ಗಮನಿಸಬಹುದು:

·       ಹೆಚ್ಚಿದ ಭ್ರೂಣದ ಚಲನೆ, ನಿಮ್ಮ ಮಗುವಿನ ಕಿಕ್‌ ಗಳು ಮತ್ತು ಒದೆಗಳು ಬಲವಾಗಿ ಮತ್ತು ಆಗಾಗ್ಗೆ ಆಗುತ್ತವೆ.

·       ಚಟುವಟಿಕೆ ಮತ್ತು ವಿಶ್ರಾಂತಿಯ ಅವಧಿಗಳೊಂದಿಗೆ ನಿಗದಿತ ನಿದ್ರಾ ಅವಧಿ.

·       ಸುಧಾರಿತ ಸಮನ್ವಯ ಮತ್ತು ಹಿಡಿಯುವ, ಚೀಪುವ ಮತ್ತು ಕಣ್ಣು ಮಿಟುಕಿಸುವ ಸಾಮರ್ಥ್ಯ.

·       ಮಗುವಿನ ತಲೆಯು ಪೆಲ್ವಿಸ್ ಭಾಗಕ್ಕೆ ತಿರುಗುವುದು (ಲೈಟೆನಿಂಗ್), ಇದು ಎದೆಗಂಟಿನಿಂದ ಮತ್ತು ಉಸಿರಾಟದ ತೊಂದರೆಯಿಂದ ಸ್ವಲ್ಪ ರಿಲೀಫ್ ನೀಡಬಹುದು. ಆದರೆ ಪೆಲ್ವಿಕ್ ಒತ್ತಡ ಮತ್ತು ಮೂತ್ರ ವಿಸರ್ಜನೆಯ ಒತ್ತಡವನ್ನು ಹೆಚ್ಚಿಸಬಹುದು.

·       ಹಿಕಪ್ ಗಳು ಉಂಟಾಗುತ್ತವೆ. ಇದನ್ನು ನೀವು ನಿಮ್ಮ ಹೊಟ್ಟೆಯಲ್ಲಿ ರಿದಮಿಕ್, ಜರ್ಕ್ ನಂತಹ ಚಲನೆಗಳಾಗಿ ಅನುಭವಿಸಬಹುದು.

·       ಸಂಗೀತ, ಬೆಳಕು ಮತ್ತು ಸ್ಪರ್ಶದಂತಹ ಬಾಹ್ಯ ಉದ್ದೀಪನೆಗಳಿಗೆ ಪ್ರತಿಕ್ರಿಯಾತ್ಮಕತೆ.

ನಮ್ಮ ವೈದ್ಯ ಅಥವಾ ದಾದಿಯಿಂದ ಏನನ್ನು ನಿರೀಕ್ಷಿಸಬಹುದು?

ಮೂರನೇ ತ್ರೈಮಾಸಿಕದಲ್ಲಿ, ನಿಮ್ಮ ವೈದ್ಯರು ನಿಯಮಿತ ಗರ್ಭಾವಸ್ಥೆಯ ಭೇಟಿಗಳ ಮೂಲಕ ನಿಮ್ಮ ಆರೋಗ್ಯ ಮತ್ತು ನಿಮ್ಮ ಮಗುವಿನ ಬೆಳವಣಿಗೆಯನ್ನು ಬಿಗಿಯಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಈ ಹಂತದಲ್ಲಿ ನೀವು ಏನನ್ನು ನಿರೀಕ್ಷಿಸಬಹುದು:

·       ನಿಮ್ಮ ಮಗುವಿನ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಲು ಫಂಡಲ್ ಎತ್ತರವನ್ನು ಅಳೆಯುವುದು.

·       ಡಾಪ್ಲರ್ ಅಥವಾ ಅಲ್ಟ್ರಾಸೌಂಡ್ ಬಳಸಿಕೊಂಡು ನಿಮ್ಮ ಮಗುವಿನ ಹೃದಯ ಬಡಿತ ಮತ್ತು ಸ್ಥಾನವನ್ನು ಪರಿಶೀಲಿಸುವುದು.

·       ನಿಮ್ಮ ರಕ್ತದೊತ್ತಡ ಮತ್ತು ತೂಕ ಹೆಚ್ಚಳವನ್ನು ಮೇಲ್ವಿಚಾರಣೆ ಮಾಡುವುದು.

·       ಪ್ರೀಕ್ಲಾಂಪ್ಸಿಯಾ ಅಥವಾ ಮೂತ್ರನಾಳದ ಸೋಂಕುಗಳ ಚಿಹ್ನೆಗಳಿಗಾಗಿ ಮೂತ್ರವನ್ನು ಪರೀಕ್ಷಿಸುವುದು.

·       ನಿಮ್ಮ ಹೆರಿಗೆಯ ಆದ್ಯತೆಗಳನ್ನು ಚರ್ಚಿಸುವುದು ಮತ್ತು ಹೆರಿಗೆ ಯೋಜನೆಯನ್ನು ರಚಿಸುವುದು.

·       ಹೆರಿಗೆಯ ಲಕ್ಷಣಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಆಸ್ಪತ್ರೆಗೆ ಯಾವಾಗ ಹೋಗಬೇಕೆಂದು ತಿಳಿಸುವುದು.

·       ಮೂರನೇ ತ್ರೈಮಾಸಿಕದ ಗರ್ಭಾವಸ್ಥೆಯ ಮುನ್ನೆಚ್ಚರಿಕೆಗಳ ಬಗ್ಗೆ ಮಾರ್ಗದರ್ಶನ ನೀಡುವುದು, ಉದಾಹರಣೆಗೆ ಕೆಲವು ಆಹಾರಗಳು ಮತ್ತು ಚಟುವಟಿಕೆಗಳನ್ನು ತಪ್ಪಿಸುವುದು.

·       ಡಿಲೇಶನ್ ಮತ್ತು ಎಫೇಸ್‌ಮೆಂಟ್‌ಗಾಗಿ ನಿಮ್ಮ ಗರ್ಭಾಶಯದ ಮುಚ್ಚಿಕೆಯನ್ನು ಪರಿಶೀಲಿಸಲು ಸರ್ವಿಕಲ್ ಪರೀಕ್ಷೆಯನ್ನು ನಡೆಸುವುದು.

·       ಹೆಚ್ಚಿನ ಅಪಾಯದ ಗರ್ಭಾವಸ್ಥೆಯನ್ನು ಹೊಂದಿದ್ದರೆ ಅಥವಾ ನಿಮ್ಮ ಮಗು ತಡವಾಗಿದ್ದರೆ ಹೆಚ್ಚುವರಿ ಪರೀಕ್ಷೆಗಳು ಅಥವಾ ಮೇಲ್ವಿಚಾರಣೆಯನ್ನು ನಿಗದಿಪಡಿಸುವುದು.

ಮೂರನೇ ತ್ರೈಮಾಸಿಕದಲ್ಲಿ ನಾವು ಹೇಗೆ ಆರೋಗ್ಯ ಪಾಲಿಸಬಹುದು?

ಮೂರನೇ ತ್ರೈಮಾಸಿಕದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ನಿಮ್ಮ ಕ್ಷೇಮ ಮತ್ತು ನಿಮ್ಮ ಮಗುವಿನ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಕೆಲವು ಸಲಹೆಗಳು ಇಲ್ಲಿವೆ:

·       ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೋಟೀನ್‌ ಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾದ ಸಮತೋಲಿತ, ಪೌಷ್ಟಿಕ ಆಹಾರವನ್ನು ತಿನ್ನಿರಿ.

·       ನೀರು, ಗಿಡಮೂಲಿಕೆ ಚಹಾ ಮತ್ತು ಕೆಫೀನ್-ಮುಕ್ತ ಪಾನೀಯಗಳನ್ನು ಕುಡಿಯುವ ಮೂಲಕ ಹೈಡ್ರೇಟೆಡ್ ಆಗಿರಿ.

·       ಫಿಟ್‌ನೆಸ್ ಕಾಪಾಡಿಕೊಳ್ಳಲು ಮತ್ತು ಹೆರಿಗೆಗೆ ತಯಾರಾಗಲು ನಡಿಗೆ, ಈಜು ಅಥವಾ ಗರ್ಭಾವಸ್ಥೆಯ ಯೋಗದಂತಹ ಸುರಕ್ಷಿತ, ಸಾಧಾರಣ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. (ವೈದ್ಯರು ಬೇರೆ ರೀತಿಯಲ್ಲಿ ಸಲಹೆ ನೀಡಿರದಿದ್ದರೆ)

·       ರಾತ್ರಿಯಲ್ಲಿ ಕನಿಷ್ಠ 7-9 ಗಂಟೆಗಳ ನಿದ್ರೆಯನ್ನು ಗುರಿಯಾಗಿಟ್ಟು ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಪಡೆಯಿರಿ.

·       ಮದ್ಯ, ತಂಬಾಕು ಮತ್ತು ಕಾನೂನುಬಾಹಿರ ಔಷಧಿಗಳಂತಹ ಹಾನಿಕಾರಕ ವಸ್ತುಗಳನ್ನು ತಪ್ಪಿಸಿ.

·       ದೀರ್ಘವಾದ ಉಸಿರಾಟ, ಧ್ಯಾನ ಅಥವಾ ಗರ್ಭಾವಸ್ಥೆಯ ಮಸಾಜ್‌ ನಂತಹ ವಿಶ್ರಾಂತಿ ತಂತ್ರಗಳ ಮೂಲಕ ಒತ್ತಡವನ್ನು ನಿರ್ವಹಿಸಿ.

·       ಎಲ್ಲಾ ನಿಗದಿತ ಗರ್ಭಾವಸ್ಥೆಯ ತಪಾಸಣೆಗಳಿಗೆ ಹಾಜರಾಗಿರಿ ಮತ್ತು ಯಾವುದೇ ಪೂರ್ವ-ಅಸ್ತಿತ್ವದಲ್ಲಿರುವ ಅಥವಾ ಗರ್ಭಾವಸ್ಥೆ-ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಲು ನಿಮ್ಮ ವೈದ್ಯರ ಶಿಫಾರಸುಗಳನ್ನು ಅನುಸರಿಸಿ.

ಹೆರಿಗೆಯ ಲಕ್ಷಣಗಳು ಯಾವುವು?

ನೀವು ಮೂರನೇ ತ್ರೈಮಾಸಿಕದ ಕೊನೆಯನ್ನು ಸಮೀಪಿಸುವಾಗ, ಹೆರಿಗೆಯ ಲಕ್ಷಣಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಅವುಗಳೆಂದರೆ:

·       ನಿಯಮಿತ, ನೋವಿನ ಸಂಕೋಚನಗಳು, ಇವು ನಿಧಾನಕ್ಕೆ ಹೆಚ್ಚುತ್ತವೆ, ಪದೇ ಪದೇ ಉಂಟಾಗುತ್ತವೆ ಮತ್ತು ತೀವ್ರವಾಗುತ್ತವೆ.

·       ಒಡನೆಯೇ ಹರಿಯುವ ದ್ರವ ಕಾಣಿಸಿಕೊಂಡರೆ, ಇದು ನಿಮ್ಮ ನೀರು ಒಡೆದಿರುವುದನ್ನು ಸೂಚಿಸುತ್ತದೆ. (ರಪ್ಚರ್ ಆಫ್ ಮೆಂಬ್ರೇನ್)

·       ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಮುಚ್ಚಿಕೆಯನ್ನು ಮುಚ್ಚಿಡುವ ಶ್ಲೇಷ್ಮದ ಗಟ್ಟಿಯಾಗಿರುವ ರಕ್ತಮಿಶ್ರಿತ ಶ್ಲೇಷ್ಮದ ಗಟ್ಟಿ ಕಾಣಿಸಬಹುದು.

·       ಮಂದ, ನಿರಂತರ ಬೆನ್ನುನೋವು ಅಥವಾ ಪೆಲ್ವಿಕ್ ಮೇಲೆ ಒತ್ತಡ.

·       ದೇಹವು ಹೆರಿಗೆಗೆ ತಯಾರಾಗುವಾಗ ಭೇದಿ ಅಥವಾ ವಾಕರಿಕೆ.

·       ಗರ್ಭಾಶಯದ ಮುಚ್ಚಿಕೆಯ ಬದಲಾವಣೆಗಳು, ಡಿಲೇಶನ್ ಮತ್ತು ಎಫೇಸ್‌ಮೆಂಟ್‌ನಂತಹವು ಕಾಣಿಸಿಕೊಂಡರೆ ನಿಮ್ಮ ವೈದ್ಯರು ಯೋನಿಯ ಪರೀಕ್ಷೆಯ ಮೂಲಕ ಮೌಲ್ಯಮಾಪನ ಮಾಡಬಹುದು.

ನೀವು ಈ ಲಕ್ಷಣಗಳನ್ನು ಅನುಭವಿಸಿದರೆ ಅಥವಾ ಹೆರಿಗೆಯ ಆರಂಭದ ಬಗ್ಗೆ ಆತಂಕಗಳಿದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಮೂರನೇ ತ್ರೈಮಾಸಿಕದಲ್ಲಿ ಇನ್ನೇನು ಪರಿಗಣಿಸಬೇಕು?

ನಿಮ್ಮ ಆರೋಗ್ಯ ಮತ್ತು ನಿಮ್ಮ ಮಗುವಿನ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸುವುದರ ಜೊತೆಗೆ, ಮೂರನೇ ತ್ರೈಮಾಸಿಕದಲ್ಲಿ ಹಲವಾರು ಪ್ರಾಯೋಗಿಕವಾಗಿ ಗಮನಿಬೇಕಾದ ಅಂಶಗಳು ಈ ಕೆಳಗಿನಂತಿವೆ:

·       ನಿಮ್ಮ ಹೆರಿಗೆ ಯೋಜನೆ ಮತ್ತು ಮಗುವಿನ ಕಾಳಜಿಯ ವ್ಯವಸ್ಥೆಗಳನ್ನು ಅಂತಿಮಗೊಳಿಸುವುದು.

·       ನೀವು ಮತ್ತು ನಿಮ್ಮ ಮಗುವಿಗೆ ಅಗತ್ಯವಾದ ವಸ್ತುಗಳೊಂದಿಗೆ ಆಸ್ಪತ್ರೆಯ ಚೀಲವನ್ನು ಸಿದ್ಧಪಡಿಸುವುದು.

·       ಹೆರಿಗೆ ಶಿಕ್ಷಣ ತರಗತಿಗಳಿಗೆ ಹಾಜರಾಗುವುದು.

·       ನಿಮ್ಮ ಮಗುವಿನ ಆಗಮನಕ್ಕಾಗಿ ಮನೆಯನ್ನು ತಯಾರು ಮಾಡುವುದು.

·       ಹೆರಿಗೆಯ ನಂತರದ ಬೆಂಬಲಕ್ಕಾಗಿ ಯೋಜನೆ ಮಾಡುವುದು.

·       ಯಾವುದೇ ಆತಂಕಗಳು ಅಥವಾ ಪ್ರಶ್ನೆಗಳನ್ನು ನಿಮ್ಮ ವೈದ್ಯರೊಂದಿಗೆ ಚರ್ಚಿಸುವುದು.

ಈ ಅಂಶಗಳನ್ನು ಮುಂಚಿತವಾಗಿ ಪರಿಹರಿಸುವ ಮೂಲಕ, ನೀವು ಹೆರಿಗೆ ಮತ್ತು ಡೆಲಿವರಿಯನ್ನು ಸಮೀಪಿಸುವಾಗ ಹೆಚ್ಚು ತಯಾರಾಗಿರಬಹುದು ಮತ್ತು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಬಹುದು.

ಅವಳಿಜವಳಿ ಗರ್ಭ ಹೊಂದಿರುವವರಿಗೆ ಮೂರನೇ ತ್ರೈಮಾಸಿಕ ಸಲಹೆಗಳು

ನೀವು ಅವಳಿಜವಳಿಗಳನ್ನು ನಿರೀಕ್ಷಿಸುತ್ತಿದ್ದರೆ, ನಿಮ್ಮ ಮೂರನೇ ತ್ರೈಮಾಸಿಕದ ಅನುಭವವು ಸ್ವಲ್ಪ ಭಿನ್ನವಾಗಿರಬಹುದು. ಅಂಥ ಗರ್ಭಿಣಿಯರು ಗಮನದಲ್ಲಿಡಬೇಕಾದ ಕೆಲವು ಪ್ರಮುಖ ಅಂಶಗಳು:

·       ಆಗಾಗ್ಗೆ ಗರ್ಭಾವಸ್ಥೆಯ ಭೇಟಿಗಳು ಮತ್ತು ಮೇಲ್ವಿಚಾರಣೆಯನ್ನು ನಿರೀಕ್ಷಿಸಬಹುದು.

·       ಕೊಂಚ ಮೊದಲೇ ಡೆಲಿವರಿ ಆಗುವ ಸಾಧ್ಯತೆಗೆ ತಯಾರಾಗಿರಿ (ಸಾಮಾನ್ಯವಾಗಿ 37 ವಾರಗಳ ಮೊದಲು).

·       ಅವಳಿಜವಳಿಗಳನ್ನು ಹೊತ್ತಿರುವುದರಿಂದ ಆಯಾಸ ಹೆಚ್ಚಾಗಬಹುದಾದ ಕಾರಣ, ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಿರಿ.

·       ಅಕಾಲಿಕ ಹೆರಿಗೆಯ ಲಕ್ಷಣಗಳಿಗೆ ಜಾಗರೂಕರಾಗಿರಿ.

·       ಆರಂಭದಿಂದಲೇ ನಿಮ್ಮ ವೈದ್ಯರೊಂದಿಗೆ ಡೆಲಿವರಿ ಆಯ್ಕೆಗಳನ್ನು (ಯೋನಿಯ ಮೂಲಕ vs. ಸೀಸೇರಿಯನ್) ಚರ್ಚಿಸಿ.

ಸರಿಯಾದ ಕಾಳಜಿ ಮತ್ತು ಬೆಂಬಲದೊಂದಿಗೆ, ನೀವು ಅವಳಿಜವಳಿ ಗರ್ಭಾವಸ್ಥೆಯ ವಿಶಿಷ್ಟ ಸವಾಲುಗಳನ್ನು ನಿಭಾಯಿಸಬಹುದು ಮತ್ತು ನಿಮ್ಮ ಸಂಭ್ರಮವನ್ನು ಸ್ವಾಗತಿಸಲು ಎದುರುನೋಡಬಹುದು.

ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ನಾವು ಯಾವಾಗ ನಮ್ಮ ವೈದ್ಯರನ್ನು ಸಂಪರ್ಕಿಸಬೇಕು?

ಮೂರನೇ ತ್ರೈಮಾಸಿಕದಲ್ಲಿ, ನಿಮ್ಮ ಆರೋಗ್ಯ ಅಥವಾ ನಿಮ್ಮ ಮಗುವಿನ ಕ್ಷೇಮದ ಸಮಸ್ಯೆಯನ್ನು ಸೂಚಿಸಬಹುದಾದ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳಿಗೆ ಎಚ್ಚರಿಕೆಯಿಂದಿರುವುದು ನಿರ್ಣಾಯಕವಾಗಿದೆ. ಈ ಕೆಳಗಿನವುಗಳನ್ನು ಅನುಭವಿಸಿದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ:

·       ತೀವ್ರ ತಲೆನೋವು, ಮಸುಕಾದ ದೃಷ್ಟಿ ಅಥವಾ ಮುಖ, ಕೈಗಳು ಅಥವಾ ಕಾಲುಗಳಲ್ಲಿ ಒಡನೆಯೇ ಊತ (ಪ್ರೀಕ್ಲಾಂಪ್ಸಿಯಾದ ಚಿಹ್ನೆಗಳು).

·       ಯೋನಿಯ ರಕ್ತಸ್ರಾವ ಅಥವಾ ವಾಟರೀ ಡಿಸ್ಚಾರ್ಜ್.

·       37 ವಾರಗಳ ಮೊದಲು ನಿಯಮಿತ, ನೋವಿನ ಸಂಕೋಚನಗಳು (ಅಕಾಲಿಕ ಹೆರಿಗೆಯ ಚಿಹ್ನೆಗಳು).

·       ಭ್ರೂಣದ ಚಲನೆಯಲ್ಲಿ ಗಣನೀಯ ಕಡಿಮೆಯಾಗುವಿಕೆ.

·       ಜ್ವರ, ಶೀತವಾಯು, ಅಥವಾ ಸೋಂಕಿನ ಇತರ ಚಿಹ್ನೆಗಳು.

·       ತೀವ್ರವಾದ ಕಿಬ್ಬೊಟ್ಟೆಯ ನೋವು ಅಥವಾ ಸೆಳೆತ.

·       ಯಾವುದೇ ಇತರ ಲಕ್ಷಣಗಳು ಅಸಾಮಾನ್ಯವಾಗಿದ್ದರೆ ಅಥವಾ ಆತಂಕವನ್ನುಂಟುಮಾಡಿದರೆ.

ನಿಮ್ಮ ವೈದ್ಯರು ಆರೋಗ್ಯಕರ ಗರ್ಭಾವಸ್ಥೆ ಮತ್ತು ಸುರಕ್ಷಿತ ಡೆಲಿವರಿಯನ್ನು ಮಾಡುವಲ್ಲಿ ನಿಮ್ಮ ಜೊತೆ ಇರುತ್ತಾರೆ. ನಿಮ್ಮ ಮೂರನೇ ತ್ರೈಮಾಸಿಕದ ಉದ್ದಕ್ಕೂ ಯಾವುದೇ ಪ್ರಶ್ನೆಗಳು ಅಥವಾ ಆತಂಕಗಳಿದ್ದರೆ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

ಗರ್ಭಾವಸ್ಥೆಯ ಸಮಯದಲ್ಲಿ ವಿಶ್ವಾಸಾರ್ಹ ಮತ್ತು ನಿಖರವಾದ ರೋಗನಿರ್ಣಯ ಸೇವೆಗಳ ಮಹತ್ವವನ್ನು ಮೆಟ್ರೋಪೊಲಿಸ್ ಹೆಲ್ತ್‌ ಕೇರ್‌ ಅರ್ಥಮಾಡಿದೆ. ನಮ್ಮ ತಜ್ಞ ಪೆಥಾಲಜಿಸ್ಟ್‌ ಗಳು ಮತ್ತು ತಂತ್ರಜ್ಞರ ತಂಡವು ನಿಮ್ಮ ಆರೋಗ್ಯ ಮತ್ತು ನಿಮ್ಮ ಮಗುವಿನ ಕ್ಷೇಮದ ಬಗ್ಗೆ ತಿಳಿದುಕೊಳ್ಳಲು ಅಗತ್ಯವಾದ ಮಾಹಿತಿಯನ್ನು ಒದಗಿಸಲು ಬದ್ಧವಾಗಿದೆ. ದಿನನಿತ್ಯದ ಮೂರನೇ ತ್ರೈಮಾಸಿಕ ಪರೀಕ್ಷೆಗಳಿಂದ ಹಿಡಿದು ವಿಶೇಷ ಸ್ಕ್ರೀನಿಂಗ್‌ಗಳವರೆಗೆ, ನಿಮ್ಮ ಗರ್ಭಾವಸ್ಥೆಯ ಪಯಣಕ್ಕೆ ನೆರವಾಗುವ ಸಮಗ್ರ ಶ್ರೇಣಿಯ ಸೇವೆಗಳನ್ನು ನಾವು ಒದಗಿಸುತ್ತೇವೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

27 ವಾರಗಳಲ್ಲಿ ನನ್ನ ಮಗು ಸಂಪೂರ್ಣವಾಗಿ ಬೆಳೆದಿರುತ್ತದೆಯೇ?

27 ವಾರಗಳಲ್ಲಿ, ನಿಮ್ಮ ಮಗು ಇನ್ನೂ ಸಂಪೂರ್ಣವಾಗಿ ಬೆಳೆದಿರುವುದಿಲ್ಲ. ಹೆಚ್ಚಿನ ಪ್ರಮುಖ ಅಂಗಗಳು ರೂಪಗೊಂಡಿದ್ದರೂ, ಅವು ಮೂರನೇ ತ್ರೈಮಾಸಿಕದ ಉದ್ದಕ್ಕೂ ಪಕ್ವಗೊಳ್ಳುವುದನ್ನು ಮುಂದುವರಿಸುತ್ತವೆ. ವಿಶೇಷವಾಗಿ, ನಿಮ್ಮ ಮಗುವಿನ ಶ್ವಾಸಕೋಶ, ಮೆದುಳು ಮತ್ತು ನರಮಂಡಲವು ಗರ್ಭಾವಸ್ಥೆಯ ಅಂತಿಮ ವಾರಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತವೆ.

ಮೂರನೇ ತ್ರೈಮಾಸಿಕವು 27 ಅಥವಾ 28 ವಾರಗಳಿಂದ ಆರಂಭವಾಗುತ್ತದೆಯೇ?

ಮೂರನೇ ತ್ರೈಮಾಸಿಕವು ಸಾಮಾನ್ಯವಾಗಿ 28ನೇ ವಾರದಿಂದ ಆರಂಭವಾಗುತ್ತದೆ ಎಂದು ಪರಿಗಣಿಸಲಾಗುತ್ತದೆ, ಆದರೆ ಕೆಲವು ವೈದ್ಯರು 27ನೇ ವಾರವನ್ನು ಈ ಅಂತಿಮ ಹಂತದ ಆರಂಭವೆಂದು ಉಲ್ಲೇಖಿಸಬಹುದು. ಪ್ರಮುಖ ಆರೋಗ್ಯ ಸಂಸ್ಥೆಗಳು ಮೂರನೇ ತ್ರೈಮಾಸಿಕವು ಅಧಿಕೃತವಾಗಿ 28ನೇ ವಾರದಿಂದ ಆರಂಭವಾಗುತ್ತದೆ ಎಂದು ಹೇಳುತ್ತವೆ.

ಮೂರನೇ ತ್ರೈಮಾಸಿಕದಲ್ಲಿ ಏನನ್ನು ತಪ್ಪಿಸಬೇಕು?

ಮೂರನೇ ತ್ರೈಮಾಸಿಕದಲ್ಲಿ, ನೀವು ಅಥವಾ ನಿಮ್ಮ ಮಗುವಿಗೆ ಅಪಾಯವನ್ನುಂಟುಮಾಡಬಹುದಾದ ಕೆಲವು ಆಹಾರಗಳು ಮತ್ತು ಚಟುವಟಿಕೆಗಳನ್ನು ತಪ್ಪಿಸುವುದು ಅತ್ಯಗತ್ಯ. ಇವುಗಳು ಕಚ್ಚಾ ಅಥವಾ ಅರೆಬೆಂದ ಮಾಂಸ, ಹೆಚ್ಚಿನ ಪಾದರಸವಿರುವ ಮೀನು, ಪಾಶ್ಚರೀಕರಿಸದ ಡೈರಿ ಉತ್ಪನ್ನಗಳು, ಮದ್ಯ, ಧೂಮಪಾನ ಮತ್ತು ಕೆಲವು ಔಷಧಿಗಳನ್ನು ಒಳಗೊಂಡಿರುತ್ತವೆ. ಮೂರನೇ ತ್ರೈಮಾಸಿಕದ ಗರ್ಭಾವಸ್ಥೆಯ ಮುನ್ನೆಚ್ಚರಿಕೆಗಳ ಸಂಪೂರ್ಣ ಪಟ್ಟಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕ ಯಾವಾಗ ಆರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ?

ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕವು 28ನೇ ವಾರದಿಂದ ಆರಂಭವಾಗುತ್ತದೆ ಮತ್ತು ನಿಮ್ಮ ಮಗು ಜನಿಸುವವರೆಗೆ, ಸಾಮಾನ್ಯವಾಗಿ 40ನೇ ವಾರದವರೆಗೆ ಮುಂದುವರಿಯುತ್ತದೆ. ಆದರೆ, ಗರ್ಭಾವಸ್ಥೆಗಳು 37 ರಿಂದ 42 ವಾರಗಳವರೆಗೆ ಇರಬಹುದು, ಆದ್ದರಿಂದ ನಿಮ್ಮ ನಿಖರವಾದ ಡೆಲಿವರಿ ದಿನಾಂಕವು ಬದಲಾಗಬಹುದು.

ಮೂರನೇ ತ್ರೈಮಾಸಿಕದಲ್ಲಿ ನಾನು ಹೇಗೆ ಉತ್ತಮವಾಗಿ ನಿದ್ದೆ ಮಾಡಬಹುದು?

ಮೂರನೇ ತ್ರೈಮಾಸಿಕದಲ್ಲಿ ನಿದ್ರೆಯನ್ನು ಸುಧಾರಿಸಲು, ಬೆಂಬಲಕ್ಕಾಗಿ ದಿಂಬುಗಳನ್ನು ಬಳಸಿ, ಎಡಗಡೆಯಲ್ಲಿ ಮಲಗಿರಿ, ಸ್ಥಿರವಾದ ಮಲಗುವ ಸಮಯದ ದಿನಚರಿಯನ್ನು ಕಾಪಾಡಿಕೊಳ್ಳಿ ಮತ್ತು ಮಲಗುವ ಮೊದಲು ಕೆಫೀನ್ ಮತ್ತು ಜಾಸ್ತಿ ಊಟವನ್ನು ತಪ್ಪಿಸಿ.

ಮೂರನೇ ತ್ರೈಮಾಸಿಕದಲ್ಲಿ ಯಾವ ಪರೀಕ್ಷೆಗಳನ್ನು ಮಾಡಲಾಗುತ್ತದೆ?

ಸಾಮಾನ್ಯ ಮೂರನೇ ತ್ರೈಮಾಸಿಕ ಪರೀಕ್ಷೆಗಳು ಗ್ರೂಪ್ ಬಿ ಸ್ಟ್ರೆಪ್ ಸ್ಕ್ರೀನಿಂಗ್, ಭ್ರೂಣದ ಬೆಳವಣಿಗೆ ಮತ್ತು ಸ್ಥಾನವನ್ನು ಮೇಲ್ವಿಚಾರಣೆ ಮಾಡಲು ಅಲ್ಟ್ರಾಸೌಂಡ್‌ಗಳು ಮತ್ತು ನಿಮ್ಮ ಮಗುವಿನ ಕ್ಷೇಮವನ್ನು ಮೌಲ್ಯಮಾಪನ ಮಾಡಲು ಒತ್ತಡರಹಿತ ಪರೀಕ್ಷೆಗಳನ್ನು ಒಳಗೊಂಡಿರುತ್ತವೆ. ನಿಮ್ಮ ನಿರ್ದಿಷ್ಟ ಅಗತ್ಯಗಳ ಆಧಾರದ ಮೇಲೆ ನಿಮ್ಮ ವೈದ್ಯರು ಹೆಚ್ಚುವರಿ ಪರೀಕ್ಷೆಗಳನ್ನು ಶಿಫಾರಸು ಮಾಡಬಹುದು.

Talk to our health advisor

Book Now

LEAVE A REPLY

Your email address will not be published. Required fields are marked *

Popular Tests

Choose from our frequently booked blood tests

TruHealth Packages

View More

Choose from our wide range of TruHealth Package and Health Checkups

View More