Language
ಗರ್ಭಾಶಯ 101: ಕಾರ್ಯಗಳು, ಸಾಮಾನ್ಯ ಕಾಯಿಲೆಗಳು ಮತ್ತು ಅಗತ್ಯ ಡಯಾಗ್ನಾಸ್ಟಿಕ್ ಟೆಸ್ಟ್ ಗಳು
Table of Contents
- ಗರ್ಭಾಶಯ ಎಂದರೇನು?
- ಗರ್ಭಾಶಯದ ಕಾರ್ಯಗಳು
- ಋತುಸ್ರಾವದ ಸಮಯದಲ್ಲಿ ಗರ್ಭಾಶಯಕ್ಕೆ ಏನಾಗುತ್ತದೆ?
- ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಾಶಯಕ್ಕೆ ಏನಾಗುತ್ತದೆ?
- ಗರ್ಭಾಶಯದ ರಚನೆ
- ಗರ್ಭಾಶಯದ ರಚನೆಯು ಮೂರು ಮುಖ್ಯ ಪ್ರದೇಶಗಳನ್ನು ಒಳಗೊಂಡಿದೆ:
- ಗರ್ಭಾಶಯವು ದೇಹದಲ್ಲಿ ಎಲ್ಲಿ ಇದೆ?
- ಗರ್ಭಾಶಯವು ಯಾವುದರಿಂದ ರಚಿತವಾಗಿದೆ?
- ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಾಶಯದ ಗಾತ್ರ ಎಷ್ಟಿರುತ್ತದೆ?
- ಗರ್ಭಾಶಯದ ಸ್ಥಾನಗಳು ಯಾವುವು?
- ಗರ್ಭಾಶಯಕ್ಕೆ ಸಂಬಂಧಿಸಿದ ಸಾಮಾನ್ಯ ಕಾಯಿಲೆಗಳು
- ಗರ್ಭಾಶಯದ ಸಮಸ್ಯೆಗಳ ರೋಗಲಕ್ಷಣಗಳನ್ನು ಗಮನಿಸಿ
- ಗರ್ಭಾಶಯದ ಅಸಹಜತೆಗಳ ಪ್ರಕಾರಗಳು ಯಾವುವು?
- ಗರ್ಭಾಶಯದ ಆರೋಗ್ಯಕ್ಕಾಗಿ ಅಗತ್ಯ ರೋಗನಿರ್ಣಯ ಪರೀಕ್ಷೆಗಳು
- ಗರ್ಭಾಶಯದ ಸ್ಥಿತಿಗಳಿಗೆ ಯಾವ ಚಿಕಿತ್ಸೆಗಳನ್ನು ಬಳಸಲಾಗುತ್ತದೆ?
- ಗರ್ಭಾಶಯದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು?
- ಕೊನೆಯ ಮಾತು
- ಗರ್ಭಾಶಯ ಮತ್ತು ಸಂಬಂಧಿತ ರೋಗಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಗರ್ಭಾಶಯ ಎಂದರೇನು?
ಗರ್ಭಾಶಯ, ಇದನ್ನು ಗರ್ಭಕೋಶ ಎಂದೂ ಕರೆಯಲಾಗುತ್ತದೆ. ಇದು ಮಹಿಳೆಯ ಪೆಲ್ವಿಸ್ ಅಥವಾ ಸೊಂಟದ ಭಾಗದಲ್ಲಿ ಇರುವ ಟೊಳ್ಳಾದ, ಪಿಯರ್ ಆಕಾರದ ಅಂಗವಾಗಿದೆ. ಸಂತಾನೋತ್ಪತ್ತಿ ವ್ಯವಸ್ಥೆಯ ಕೇಂದ್ರ ಭಾಗದಲ್ಲಿರುವ ಗರ್ಭಾಶಯವು, ಫಲವತ್ತಾದ ಮೊಟ್ಟೆಯು ಬಂದು ಸೇರಿಕೊಂಡು ಗರ್ಭಾವಸ್ಥೆಯ ಸಮಯದಲ್ಲಿ ಬೆಳೆಯುವ ಸ್ಥಳವಾಗಿದೆ. ಗರ್ಭಾವಸ್ಥೆ ಸಂಭವಿಸದಿದ್ದರೆ, ಗರ್ಭಾಶಯವು ಪ್ರತೀ ತಿಂಗಳು ತನ್ನ ಒಳಗಿನ ಅಂಶಗಳನ್ನು ಅಥವಾ ಲೈನಿಂಗ್ ಅನ್ನು ಋತುಸ್ರಾವದ ಸಮಯದಲ್ಲಿ ಹೊರ ಚೆಲ್ಲುತ್ತದೆ. ಗರ್ಭಾಶಯವು ಅತ್ಯಂತ ದೃಢವಾಗಿದ್ದು, ಬೆಳೆಯುತ್ತಿರುವ ಭ್ರೂಣವು ಬೆಳೆಯುವಾಗ ವಿಸ್ತರಣೆ ಹೊಂದುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹೆರಿಗೆಯ ಸಮಯದಲ್ಲಿ ಮಗುವನ್ನು ಹೊರತಳ್ಳಲು ಶಕ್ತಿಯುತವಾಗಿ ಸಂಕುಚಿತಗೊಳ್ಳುತ್ತದೆ.
ಗರ್ಭಾಶಯದ ಕಾರ್ಯಗಳು
ಗರ್ಭಾಶಯದ ಪ್ರಾಥಮಿಕ ಕಾರ್ಯವು ಸಂತಾನೋತ್ಪತ್ತಿ ಪ್ರಕ್ರಿಯೆಗಳನ್ನು ನಡೆಸುವುದು, ಇದರಲ್ಲಿ ಈ ಕೆಳಗಿನ ಪ್ರಕ್ರಿಯೆಗಳು ಒಳಗೊಂಡಿವೆ:
· ಗರ್ಭಾವಸ್ಥೆ ಸಂಭವಿಸದಿದ್ದರೆ ಗರ್ಭಾಶಯದ ಲೈನಿಂಗ್ ಅನ್ನು (ಎಂಡೊಮೆಟ್ರಿಯಂ) ಪ್ರತೀ ತಿಂಗಳು ಚೆಲ್ಲುವುದು.
· ಬೆಳೆಯುತ್ತಿರುವ ಭ್ರೂಣಕ್ಕೆ ತಕ್ಕಂತೆ ವಿಸ್ತರಣೆ ಹೊಂದುವುದು.
· ಹೆರಿಗೆಯ ಸಮಯದಲ್ಲಿ ಸಂಕುಚಿತಗೊಂಡು ಮಗುವಿನ ಜನನವನ್ನು ಸುಗಮಗೊಳಿಸುವುದು.
· ಪ್ರೊಸ್ಟಗ್ಲಾಂಡಿನ್‌ಗಳು ಮತ್ತು ಪ್ರೊಲ್ಯಾಕ್ಟಿನ್‌ನಂತಹ ಹಾರ್ಮೋನ್‌ಗಳನ್ನು ಸ್ರವಿಸುವುದು.
ಗರ್ಭಾಶಯವು ಮೂತ್ರಾಶಯ ಮತ್ತು ಗುದನಾಳದಂತಹ ಇತರ ಪೆಲ್ವಿಕ್ ಅಂಗಗಳ ಸ್ಥಾನವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.
ಋತುಸ್ರಾವದ ಸಮಯದಲ್ಲಿ ಗರ್ಭಾಶಯಕ್ಕೆ ಏನಾಗುತ್ತದೆ?
ಪ್ರತೀ ತಿಂಗಳು, ಹಾರ್ಮೋನ್ ಬದಲಾವಣೆಗಳು ಗರ್ಭಾಶಯವನ್ನು ಸಂಭಾವನೀಯ ಗರ್ಭಾವಸ್ಥೆಗೆ ತಯಾರಾಗಲು ಒಳಗಿನ ಎಂಡೊಮೆಟ್ರಿಯಂ ಅನ್ನು ದಪ್ಪವಾಗಿಸುತ್ತವೆ. ಫಲೀಕರಣ ಸಂಭವಿಸದಿದ್ದರೆ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಕಡಿಮೆಯಾಗುತ್ತವೆ, ಗರ್ಭಾಶಯವು ಈ ಒಳಗಿನ ಅಂಶವನ್ನು ಹೊರ ಚೆಲ್ಲಲು ಸಂಕೇತ ನೀಡುತ್ತದೆ. ಎಂಡೊಮೆಟ್ರಿಯಂ ಒಡೆದು ಯೋನಿಯ ಮೂಲಕ ಋತುಸ್ರಾವದ ರಕ್ತವಾಗಿ, ಸ್ವಲ್ಪ ಪ್ರಮಾಣದ ಅಂಗಾಂಶದೊಂದಿಗೆ ಹೊರಹಾಕಲ್ಪಡುತ್ತದೆ. ಈ ಪ್ರಕ್ರಿಯೆಯನ್ನು ಋತುಸ್ರಾವ ಅಥವಾ ಮುಟ್ಟು ಎಂದು ಕರೆಯಲಾಗುತ್ತದೆ, ಇದು ಸಾಮಾನ್ಯವಾಗಿ 3-7 ದಿನಗಳವರೆಗೆ ಇರುತ್ತದೆ ಮತ್ತು ಆರೋಗ್ಯಕರ ಋತುಚಕ್ರ ಸಂದರ್ಭಗಳಲ್ಲಿ ಪ್ರತೀ 21-35 ದಿನಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ.
ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಾಶಯಕ್ಕೆ ಏನಾಗುತ್ತದೆ?
ಮೊಟ್ಟೆಯು ಫಲವತ್ತಾದಾಗ, ಇದು ಗರ್ಭಾಶಯದ ಒಡಲಿನಲ್ಲಿ ಇಂಪ್ಲಾಂಟ್ ಆಗುತ್ತದೆ, ಇದು ಬದಲಾವಣೆಗಳ ಸರಣಿಯನ್ನು ಉಂಟುಮಾಡುತ್ತದೆ. ಗರ್ಭಾಶಯವು ಬೆಳೆಯುತ್ತಿರುವ ಭ್ರೂಣಕ್ಕೆ ತಕ್ಕಂತೆ ವಿಸ್ತರಣೆ ಹೊಂದಲು ಆರಂಭಿಸುತ್ತದೆ, ಇದು ದಪ್ಪವಾದ ಎಂಡೊಮೆಟ್ರಿಯಂನಿಂದ ಪೋಷಣೆಯನ್ನು ಪಡೆಯುತ್ತದೆ. ಗರ್ಭಾವಸ್ಥೆ ಮುಂದುವರೆದಂತೆ, ಗರ್ಭಾಶಯವು ಗಣನೀಯವಾಗಿ ವಿಸ್ತರಿಸುತ್ತದೆ, ಮೂರನೇ ತ್ರೈಮಾಸಿಕದ ವೇಳೆಗೆ ಕಲ್ಲಂಗಡಿಯ ಗಾತ್ರವನ್ನು ತಲುಪುತ್ತದೆ. ಸ್ನಾಯುವಿನ ಗೋಡೆಗಳು ಬೆಳೆಯುತ್ತಿರುವ ಮಗುವನ್ನು ಬೆಂಬಲಿಸಲು ಬಲಗೊಳ್ಳುತ್ತವೆ. ಹೆರಿಗೆಯ ಸಮಯದಲ್ಲಿ, ತೀವ್ರವಾದ ಗರ್ಭಾಶಯದ ಸಂಕೋಚನಗಳು ಗರ್ಭಾಶಯದ ಮುಚ್ಚಿಕೆಯನ್ನು ತೆರೆಯಲು ಮತ್ತು ಮಗುವನ್ನು ಜನನ ಕಾಲುವೆಯ ಮೂಲಕ ಹೊರತಳ್ಳಲು ಸಹಾಯ ಮಾಡುತ್ತವೆ.
ಗರ್ಭಾಶಯದ ರಚನೆ
ಗರ್ಭಾಶಯದ ರಚನೆಯು ಮೂರು ಮುಖ್ಯ ಪ್ರದೇಶಗಳನ್ನು ಒಳಗೊಂಡಿದೆ:
· ಫಂಡಸ್: ಗರ್ಭಾಶಯದ ಗುಂಡಗಿನ ಮೇಲಿನ ಭಾಗ.
· ಕಾರ್ಪಸ್ (ದೇಹ): ಫಲವತ್ತಾದ ಮೊಟ್ಟೆಯು ಇಂಪ್ಲಾಂಟ್ ಆಗುವ ಮುಖ್ಯ ತ್ರಿಕೋನಾಕಾರದ ಭಾಗ.
· ಸರ್ವಿಕ್ಸ್: ಯೋನಿಯೊಂದಿಗೆ ಸಂಪರ್ಕವಾಗುವ ಕಿರಿದಾದ, ಸಿಲಿಂಡರಾಕಾರದ ಕೆಳಗಿನ ಭಾಗ.
ಗರ್ಭಾಶಯದ ಗೋಡೆಯು ಮೂರು ಪದರಗಳನ್ನು ಒಳಗೊಂಡಿದೆ:
· ಎಂಡೊಮೆಟ್ರಿಯಂ: ಒಳಗಿನ ಮ್ಯುಕೋಸಲ್ ಲೈನಿಂಗ್, ಇದು ಪ್ರತಿ ತಿಂಗಳು ದಪ್ಪವಾಗುತ್ತದೆ ಮತ್ತು ಹೊರ ಚೆಲ್ಲುತ್ತದೆ.
· ಮಯೊಮೆಟ್ರಿಯಂ: ಸಂಕೋಚನಗಳಿಗೆ ಕಾರಣವಾಗುವ ದಪ್ಪ ಸ್ನಾಯುವಿನ ಮಧ್ಯದ ಪದರ.
· ಪೆರಿಮೆಟ್ರಿಯಂ: ಗರ್ಭಾಶಯ ಮತ್ತು ಕೆಲವು ವಿಶಾಲ ಸ್ನಾಯುಬಂಧನಗಳನ್ನು ಆವರಿಸುವ ತೆಳುವಾದ ಬಾಹ್ಯ ಸೀರಸ್ ಪದರ.
ಎರಡು ಫಾಲೋಪಿಯನ್ ಟ್ಯೂಬ್‌ಗಳು ಗರ್ಭಾಶಯದ ಮೇಲಿನಿಂದ ಒಂದೊಂದು ಬದಿಯಲ್ಲಿರುವ ಅಂಡಾಶಯಗಳಿಗೆ ವಿಸ್ತರಣೆ ಹೊಂದುತ್ತವೆ.
ಗರ್ಭಾಶಯವು ದೇಹದಲ್ಲಿ ಎಲ್ಲಿ ಇದೆ?
ಗರ್ಭಾಶಯವು ಸೊಂಟದ ಭಾಗದ ಕೇಂದ್ರದಲ್ಲಿ, ಮೂತ್ರಾಶಯದ ಹಿಂಭಾಗದಲ್ಲಿ ಮತ್ತು ಗುದನಾಳದ ಮುಂಭಾಗದಲ್ಲಿ ಇದೆ. ಇದನ್ನು ಪೆಲ್ವಿಕ್ ನ ಬದಿಯ ಗೋಡೆಗಳಿಗೆ, ಸ್ಯಾಕ್ರಮ್ ಗೆ ಮತ್ತು ಪೆಲ್ವಿಸ್ ಫ್ಲೋರ್ ಗೆ ಜೋಡಿಸುವ ಸ್ನಾಯುಬಂಧನಗಳು ಮತ್ತು ಸಂಯೋಜಕ ಅಂಗಾಂಶಗಳಿಂದ ಜಾಗದಲ್ಲಿ ಇಡಲಾಗುತ್ತದೆ.
ಗರ್ಭಾಶಯವು ಯಾವುದರಿಂದ ರಚಿತವಾಗಿದೆ?
ಗರ್ಭಾಶಯವು ಮುಖ್ಯವಾಗಿ ಸುಗಮ ಸ್ನಾಯು ಅಂಗಾಂಶದಿಂದ (ಮಯೊಮೆಟ್ರಿಯಂ) ರಚಿತವಾಗಿದ್ದು, ಇದು ವಿಸ್ತರಿಸಲು ಮತ್ತು ಸಂಕುಚಿತಗೊಳ್ಳಲು ಅನುವು ಮಾಡಿಕೊಡುತ್ತದೆ. ಒಳಗಿನ ಕುಹರವು ಎಂಡೊಮೆಟ್ರಿಯಂ ಎಂಬ ವಿಶೇಷ ಶ್ಲೇಷ್ಮದ ಪೊರೆಯಿಂದ ಆವೃತವಾಗಿದ್ದು, ಇದು ಋತುಚಕ್ರದ ಉದ್ದಕ್ಕೂ ಹಾರ್ಮೋನ್ ಬದಲಾವಣೆಗಳಿಗೆ ಪ್ರತಿಕ್ರಿಯಿಸುತ್ತದೆ. ಬಾಹ್ಯ ಪೆರಿಮೆಟ್ರಿಯಂ ಎಂಬ ತೆಳುವಾದ ಸೀರಸ್ ಪೊರೆಯು ಗರ್ಭಾಶಯ ಮತ್ತು ವಿಶಾಲ ಸ್ನಾಯುಬಂಧನಗಳ ಕೆಲವು ಭಾಗವನ್ನು ಆವರಿಸುತ್ತದೆ.
ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಾಶಯದ ಗಾತ್ರ ಎಷ್ಟಿರುತ್ತದೆ?
ಗರ್ಭಾವಸ್ಥೆಯ ಸಮಯದಲ್ಲಿ, ಗರ್ಭಾಶಯದ ಗಾತ್ರದಲ್ಲಿ ಅದ್ಭುತ ರೂಪಾಂತರ ಆಗಿರುತ್ತದೆ. ಗರ್ಭಾವಸ್ಥೆಗೆ ಮೊದಲಿನ ಪಿಯರ್ ಆಕಾರದ ಗಾತ್ರದಿಂದ, ಮೂರನೇ ತ್ರೈಮಾಸಿಕದ ವೇಳೆಗೆ ಗರ್ಭಾಶಯವು ಕಲ್ಲಂಗಡಿಯ ಗಾತ್ರಕ್ಕೆ ದೊಡ್ಡದಾಗುತ್ತದೆ. ಈ ಕ್ರಮೇಣ ಬೆಳವಣಿಗೆಯು ಬೆಳೆಯುತ್ತಿರುವ ಭ್ರೂಣ, ಪ್ಲಾಸೆಂಟಾ ಮತ್ತು ಆಮ್ನಿಯೋಟಿಕ್ ದ್ರವವನ್ನು ಹೊಂದುತ್ತದೆ. 20 ವಾರಗಳಿಗೆ, ಗರ್ಭಾಶಯವು ಹೊಕ್ಕಳಿನ ಮಟ್ಟವನ್ನು ತಲುಪುತ್ತದೆ, ಮತ್ತು 36 ವಾರಗಳಿಗೆ, ಇದು ಪಕ್ಕೆಲುಬಿನ ಕೆಳಗಿನ ಭಾಗದವರೆಗೆ ವಿಸ್ತರಿಸುತ್ತದೆ.
ಗರ್ಭಾಶಯದ ಸ್ಥಾನಗಳು ಯಾವುವು?
ಗರ್ಭಾಶಯವು ಪ್ರತಿಯೊಬ್ಬ ಮಹಿಳೆಯಲ್ಲಿ ಭಿನ್ನವಾಗಿ ಇರಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಇದು ಮೂತ್ರಾಶಯದ (ಆಂಟಿವರ್ಟೆಡ್) ಕಡೆಗೆ ಸ್ವಲ್ಪ ಮುಂದಕ್ಕೆ ಇರುತ್ತದೆ. ಕೆಲವೊಮ್ಮೆ, ಇದು ಸ್ವಲ್ಪ ಮೇಲಕ್ಕೆ ಮತ್ತು ಕೆಳಗೆ (ಮಿಡ್‌ಲೈನ್) ಇರಬಹುದು ಅಥವಾ ಗುದನಾಳದ ಕಡೆಗೆ ಸ್ವಲ್ಪ ಹಿಂದಕ್ಕೆ (ರೆಟ್ರೊವರ್ಟೆಡ್) ಇರಬಹುದು. ಈ ವ್ಯತ್ಯಾಸಗಳು ಸಾಮಾನ್ಯವಾಗಿ ಸೂಕ್ಷ್ಮವಾಗಿರುತ್ತವೆ ಮತ್ತು ಗರ್ಭಾಶಯದ ಕಾರ್ಯಕ್ಕೆ ಪರಿಣಾಮ ಬೀರುವುದಿಲ್ಲ.
ಗರ್ಭಾಶಯಕ್ಕೆ ಸಂಬಂಧಿಸಿದ ಸಾಮಾನ್ಯ ಕಾಯಿಲೆಗಳು
ಗರ್ಭಾಶಯದ ಮೇಲೆ ಪರಿಣಾಮ ಬೀರುವ ಹಲವಾರು ಸಮಸ್ಯೆಗಳಲ್ಲಿ ಅಸಾಮಾನ್ಯ ರಕ್ತಸ್ರಾವ, ನೋವು ಮತ್ತು ಫಲವತ್ತತೆಯ ಸಮಸ್ಯೆಗಳಂತಹ ಲಕ್ಷಣಗಳು ಕಾಣಿಸಬಹುದು. ಕೆಲವು ಸಾಮಾನ್ಯ ಗರ್ಭಾಶಯ ಸಂಬಂಧಿ ಕಾಯಿಲೆಗಳು ಹೀಗಿವೆ:
1. ಯುಟೆರಿನ್ ಫೈಬ್ರಾಯ್ಡ್ ಗಳು
ಗರ್ಭಾಶಯದ ಫೈಬ್ರಾಯ್ಡ್ ಗಳು ಗರ್ಭಾಶಯದ ಗೋಡೆಯಲ್ಲಿ ಬೆಳೆಯುವ ಕ್ಯಾನ್ಸರ್ ರಹಿತ ಗೆಡ್ಡೆಗಳಾಗಿವೆ. ಇವು ಚಿಕ್ಕ ಬೀಜದಿಂದ ದೊಡ್ಡ ಗಾತ್ರದ ಗೆಡ್ಡೆಗಳವರೆಗೆ ಗಾತ್ರದಲ್ಲಿ ಬದಲಾಗಬಹುದು, ಇದರಿಂದ ಗರ್ಭಾಶಯದ ಆಕಾರ ವಿರೂಪಗೊಳ್ಳಬಹುದು. ರೋಗಲಕ್ಷಣಗಳು ಭಾರೀ ಋತುಸ್ರಾವ ರಕ್ತಸ್ರಾವ, ಪೆಲ್ವಿಕ್ ನೋವು, ಆಗಾಗ ಮೂತ್ರವಿಸರ್ಜನೆ ಮತ್ತು ಫಲವತ್ತತೆಯ ಸಮಸ್ಯೆಗಳು ಕಾಡಬಹುದು. ಚಿಕಿತ್ಸೆಯ ಆಯ್ಕೆಗಳು ಫೈಬ್ರಾಯ್ಡ್ ಗಳ ಗಾತ್ರ, ಸ್ಥಳ ಮತ್ತು ರೋಗಲಕ್ಷಣಗಳನ್ನು ಅವಲಂಬಿಸಿರುತ್ತವೆ.
2. ಎಂಡೋಮೆಟ್ರಿಯೋಸಿಸ್
ಎಂಡೋಮೆಟ್ರಿಯೋಸಿಸ್ ಎಂದರೆ ಗರ್ಭಾಶಯದ ಒಳಪದರದಂತಹ ಅಂಗಾಂಶವು ಗರ್ಭಾಶಯದ ಹೊರಗೆ, ಸಾಮಾನ್ಯವಾಗಿ ಅಂಡಾಶಯಗಳು, ಫೆಲೋಪಿಯನ್ ಟ್ಯೂಬ್ ಗಳು ಮತ್ತು ಇತರ ಪೆಲ್ವಿಕ್ ರಚನೆಗಳಲ್ಲಿ ಬೆಳೆಯುವುದು. ಈ ತಪ್ಪಾಗಿ ಬೆಳೆದ ಅಂಗಾಂಶವು ಹಾರ್ಮೋನ್ ಬದಲಾವಣೆಗೆ ಪ್ರತಿಕ್ರಿಯಿಸುತ್ತದೆ, ಇದರಿಂದ ನೋವು, ಉರಿಯೂತ ಮತ್ತು ಅಂಗಾಂಶ ಗಾಯ ಉಂಟಾಗುತ್ತದೆ. ಇದು ನೋವಿನ ಋತುಸ್ರಾವ, ದೀರ್ಘಕಾಲದ ಪೆಲ್ವಿಕ್ ನೋವು, ಸಂಭೋಗದ ಸಮಯದಲ್ಲಿ ನೋವು ಮತ್ತು ಫಲವತ್ತತೆಯ ಸಮಸ್ಯೆಗಳಿಗೆ ಕಾರಣವಾಗಬಹುದು.
3. ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್)
ಪಿಸಿಓಎಸ್ ಒಂದು ಹಾರ್ಮೋನ್ ಸಂಬಂಧಿತ ಕಾಯಿಲೆಯಾಗಿದ್ದು, ಇದರಲ್ಲಿ ಅನಿಯಮಿತ ಋತುಸ್ರಾವ, ಹೆಚ್ಚಿನ ಆಂಡ್ರೊಜೆನ್ ಮಟ್ಟಗಳು ಮತ್ತು ಅಂಡಾಶಯದಲ್ಲಿ ಚಿಕ್ಕ ಚಿಕ್ಕ ಸಿಸ್ಟ್ ಗಳು ಕಾಣಿಸಿಕೊಳ್ಳುತ್ತವೆ. ಈ ಅಸಮತೋಲನವು ಅಂಡೋತ್ಪತ್ತಿಯನ್ನು (ಓವುಲೇಷನ್) ತಡೆಯುತ್ತದೆ ಮತ್ತು ಮೊಡವೆ, ತೂಕ ಹೆಚ್ಚಳ, ಹೆಚ್ಚಿನ ಕೂದಲು ಬೆಳವಣಿಗೆ ಮತ್ತು ಫಲವತ್ತತೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪಿಸಿಓಎಸ್ ಇನ್ಸುಲಿನ್ ಪ್ರತಿರೋಧ ಮತ್ತು ಡಯಾಬಿಟೀಸ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
4. ಗರ್ಭಾಶಯದ ಕ್ಯಾನ್ಸರ್
ಗರ್ಭಾಶಯದ ಕ್ಯಾನ್ಸರ್, ಇದನ್ನು ಎಂಡೋಮೆಟ್ರಿಯಲ್ ಕ್ಯಾನ್ಸರ್ ಎಂದೂ ಕರೆಯಲಾಗುತ್ತದೆ. ಈ ಕ್ಯಾನ್ಸರ್ ಗರ್ಭಾಶಯದ ಒಳಪದರದಲ್ಲಿ (ಎಂಡೋಮೆಟ್ರಿಯಮ್) ಪ್ರಾರಂಭವಾಗುತ್ತದೆ. ಇದು ಅತ್ಯಂತ ಸಾಮಾನ್ಯವಾದ ಸ್ತ್ರೀರೋಗ ಸಂಬಂಧಿತ ಕ್ಯಾನ್ಸರ್ ಆಗಿದ್ದು, ಸಾಮಾನ್ಯವಾಗಿ ಋತುಬಂಧದ ನಂತರದ ಮಹಿಳೆಯರನ್ನು ಬಾಧಿಸುತ್ತದೆ. ಅಸಾಮಾನ್ಯ ಯೋನಿಯ ರಕ್ತಸ್ರಾವವು ಇದರ ಸಾಮಾನ್ಯ ರೋಗಲಕ್ಷಣವಾಗಿದೆ. ಇತರ ಚಿಹ್ನೆಗಳೆಂದರೆ ಪೆಲ್ವಿಕ್ ನೋವು, ಅನಿರೀಕ್ಷಿತ ತೂಕ ಕಡಿಮೆಯಾಗುವಿಕೆ ಮತ್ತು ಕಷ್ಟಕರವಾದ ಅಥವಾ ನೋವಿನಿಂದ ಕೂಡಿದ ಮೂತ್ರವಿಸರ್ಜನೆ. ಆರಂಭಿಕ ಗುರುತಿಸುವಿಕೆ ಮತ್ತು ಚಿಕಿತ್ಸೆಯು ಉತ್ತಮ ಫಲಿತಾಂಶಕ್ಕೆ ಮುಖ್ಯವಾಗಿದೆ.
ಗರ್ಭಾಶಯದ ಸಮಸ್ಯೆಗಳ ರೋಗಲಕ್ಷಣಗಳನ್ನು ಗಮನಿಸಿ
ಪ್ರತಿಯೊಂದು ಸಮಸ್ಯೆಗೂ ತನ್ನದೇ ಆದ ರೋಗಲಕ್ಷಣಗಳಿದ್ದರೂ, ಗರ್ಭಾಶಯದ ರೋಗಗಳ ಕೆಲವು ಸಾಮಾನ್ಯ ಎಚ್ಚರಿಕೆಯ ಲಕ್ಷಣಗಳಿವೆ:
· ಋತುಸ್ರಾವದ ಮಧ್ಯೆ ಅಥವಾ ಋತುಬಂಧದ ನಂತರ ಅಸಾಮಾನ್ಯ ಯೋನಿಯ ರಕ್ತಸ್ರಾವ
· ಅತಿಯಾದ ಭಾರೀ ಅಥವಾ ದೀರ್ಘಕಾಲದ ಋತುಸ್ರಾವ ರಕ್ತಸ್ರಾವ
· ಕಾಲಾಂತರದಲ್ಲಿ ಮುಂದುವರಿಯುವ ಅಥವಾ ತೀವ್ರವಾಗುವ ಶ್ರೋಣಿಯ ನೋವು ಅಥವಾ ಒತ್ತಡ
· ಸಂಭೋಗ ಅಥವಾ ಮೂತ್ರವಿಸರ್ಜನೆಯ ಸಮಯದಲ್ಲಿ ನೋವು
· ಗರ್ಭಧಾರಣೆಯಲ್ಲಿ ಕಷ್ಟ
· ಅಸಹಜ ಯೋನಿಯ ಸ್ರಾವ
ಈ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.
ಗರ್ಭಾಶಯದ ಅಸಹಜತೆಗಳ ಪ್ರಕಾರಗಳು ಯಾವುವು?
ಮೇಲೆ ತಿಳಿಸಿದ ರೋಗಗಳ ಹೊರತಾಗಿ, ಗರ್ಭಾಶಯದಲ್ಲಿ ರಚನಾತ್ಮಕ ಅಸಹಜತೆಗಳೂ ಇರಬಹುದು:
· ಹುಟ್ಟಿನಿಂದಲೇ ಬರುವ ಅಸಹಜತೆಗಳು: ಜನ್ಮದಿಂದಲೇ ಇರುವ ಗರ್ಭಾಶಯದ ವಿರೂಪಗಳು, ಉದಾಹರಣೆಗೆ ಸೆಪ್ಟೇಟ್, ಬೈಕಾರ್ನಿಯೇಟ್, ಅಥವಾ ಯುನಿಕಾರ್ನಿಯೇಟ್ ಗರ್ಭಾಶಯ
· ಪಾಲಿಪ್ಸ್: ಗರ್ಭಾಶಯದ ಒಳಗಿನ ಗೋಡೆಗೆ ಜೋಡಣೆಯಾದ ಬೆರಳಿನಂತಹ ಬೆಳವಣಿಗೆಗಳು
· ಅಡೆನೊಮಿಯೋಸಿಸ್: ಎಂಡೋಮೆಟ್ರಿಯಲ್ ಅಂಗಾಂಶವು ಗರ್ಭಾಶಯದ ಸ್ನಾಯು ಗೋಡೆಯೊಳಗೆ ಬೆಳೆದು, ಗಾತ್ರದಲ್ಲಿ ಹೆಚ್ಚಳ ಮತ್ತು ನೋವಿಗೆ ಕಾರಣವಾಗುತ್ತದೆ
· ಎಂಡೋಮೆಟ್ರಿಯಲ್ ಹೈಪರ್‌ಪ್ಲಾಸಿಯಾ: ಅತಿಯಾದ ಈಸ್ಟ್ರೊಜೆನ್‌ನಿಂದ ಗರ್ಭಾಶಯದ ಒಳಪದರ ದಪ್ಪವಾಗುವಿಕೆ
ಈ ಅಸಹಜತೆಗಳು ಫಲವತ್ತತೆ, ಗರ್ಭಧಾರಣೆಯ ಫಲಿತಾಂಶಗಳು ಮತ್ತು ಒಟ್ಟಾರೆ ಗರ್ಭಾಶಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಗರ್ಭಾಶಯದ ಆರೋಗ್ಯಕ್ಕಾಗಿ ಅಗತ್ಯ ರೋಗನಿರ್ಣಯ ಪರೀಕ್ಷೆಗಳು
ನಿಯಮಿತ ಸ್ತ್ರೀರೋಗ ತಪಾಸಣೆಗಳು ಮತ್ತು ಸ್ಕ್ರೀನಿಂಗ್ ಪರೀಕ್ಷೆಗಳು ಗರ್ಭಾಶಯದ ರೋಗಗಳನ್ನು ಆರಂಭಿಕ ಹಂತದಲ್ಲಿ ಕಂಡುಹಿಡಿಯಲು ಮುಖ್ಯವಾಗಿವೆ. ಕೆಲವು ಅಗತ್ಯ ಗರ್ಭಾಶಯ ರೋಗನಿರ್ಣಯ ಪರೀಕ್ಷೆಗಳು ಹೀಗಿವೆ:
· ಪೆಲ್ವಿಕ್ ತಪಾಸಣೆ: ಗರ್ಭಾಶಯದ ಗಾತ್ರ, ಆಕಾರ ಮತ್ತು ಯಾವುದೇ ಅಸಹಜತೆಗಳನ್ನು ಮೌಲ್ಯಮಾಪನ ಮಾಡುತ್ತದೆ
· ಅಲ್ಟ್ರಾಸೌಂಡ್: ಧ್ವನಿ ತರಂಗಗಳನ್ನು ಬಳಸಿ ಗರ್ಭಾಶಯವನ್ನು ದೃಶ್ಯೀಕರಿಸುತ್ತದೆ ಮತ್ತು ಫೈಬ್ರಾಯ್ಡ್ ಗಳು, ಪಾಲಿಪ್ಸ್ ಅಥವಾ ಇತರ ಬೆಳವಣಿಗೆಗಳನ್ನು ಕಂಡುಹಿಡಿಯುತ್ತದೆ
· ಹಿಸ್ಟೆರೊಸ್ಕೋಪಿ: ಗರ್ಭಾಶಯದ ಕುಹರವನ್ನು ಪರೀಕ್ಷಿಸಲು ಗರ್ಭಕಂಠದ ಮೂಲಕ ತೆಳುವಾದ, ಬೆಳಕಿನ ಸ್ಕೋಪ್ ಅನ್ನು ಒಳಸೇರಿಸುವುದು
· ಎಂಡೋಮೆಟ್ರಿಯಲ್ ಬಯಾಪ್ಸಿ: ಕ್ಯಾನ್ಸರ್ ಅಥವಾ ಕ್ಯಾನ್ಸರ್ ಗೆ ಪೂರ್ವಭಾವಿಯಾದ ಬದಲಾವಣೆಗಳನ್ನು ಪರಿಶೀಲಿಸಲು ಗರ್ಭಾಶಯದ ಒಳಪದರದಿಂದ ಒಂದು ಚಿಕ್ಕ ಅಂಗಾಂಶದ ಮಾದರಿಯನ್ನು ತೆಗೆದುಕೊಳ್ಳುವುದು
· ಎಂಆರ್‌ಐ: ಗರ್ಭಾಶಯ ಮತ್ತು ಸುತ್ತಮುತ್ತಲಿನ ರಚನೆಗಳ ವಿವರವಾದ ಚಿತ್ರಗಳನ್ನು ಒದಗಿಸುತ್ತದೆ
ನಿಮ್ಮ ರೋಗಲಕ್ಷಣಗಳು, ವಯಸ್ಸು ಮತ್ತು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ವೈದ್ಯರು ಸೂಕ್ತ ಪರೀಕ್ಷೆಗಳನ್ನು ಶಿಫಾರಸು ಮಾಡುತ್ತಾರೆ.
ಗರ್ಭಾಶಯದ ಸ್ಥಿತಿಗಳಿಗೆ ಯಾವ ಚಿಕಿತ್ಸೆಗಳನ್ನು ಬಳಸಲಾಗುತ್ತದೆ?
ಗರ್ಭಾಶಯದ ರೋಗಗಳಿಗೆ ಚಿಕಿತ್ಸೆಯು ನಿರ್ದಿಷ್ಟ ಸಮಸ್ಯೆ, ತೀವ್ರತೆ, ಮಹಿಳೆಯ ವಯಸ್ಸು ಮತ್ತು ಸಂತಾನೋತ್ಪತ್ತಿ ಗುರಿಗಳನ್ನು ಅವಲಂಬಿಸಿರುತ್ತದೆ. ಆಯ್ಕೆಗಳು ಹೀಗಿರಬಹುದು:
· ಔಷಧಿಗಳು: ರೋಗಲಕ್ಷಣಗಳನ್ನು ನಿರ್ವಹಿಸಲು ಹಾರ್ಮೋನ್ ಚಿಕಿತ್ಸೆಗಳು, ನೋವು ನಿವಾರಕಗಳು ಅಥವಾ ಆಂಟಿಬಯಾಟಿಕ್‌ಗಳು
· ಕನಿಷ್ಠ ಆಕ್ರಮಣಕಾರಿ ಕಾರ್ಯವಿಧಾನಗಳು: ಗರ್ಭಾಶಯದ ಆರ್ಟರಿ ಎಂಬಲೈಸೇಶನ್, ಎಂಡೋಮೆಟ್ರಿಯಲ್ ಅಬ್ಲೇಷನ್ ಅಥವಾ ಫೈಬ್ರಾಯ್ಡ್ ಗಳು ಅಥವಾ ಪಾಲಿಪ್ಸ್ ಗಳ ಹಿಸ್ಟೆರೊಸ್ಕೋಪಿಕ್ ರಿಮೂವಲ್
· ಶಸ್ತ್ರಚಿಕಿತ್ಸೆ: ಫೈಬ್ರಾಯ್ಡ್ ಗಳನ್ನು ತೆಗೆದುಹಾಕಲು ಮಯೊಮೆಕ್ಟೊಮಿ, ತೀವ್ರ ಪ್ರಕರಣಗಳಿಗೆ ಹಿಸ್ಟೆರೆಕ್ಟೊಮಿ (ಗರ್ಭಾಶಯದ ತೆಗೆದುಹಾಕುವಿಕೆ) ಅಥವಾ ಎಂಡೋಮೆಟ್ರಿಯೋಸಿಸ್ ಗಾಯಗಳ ತೆಗೆದುಹಾಕುವಿಕೆ
· ಫಲವತ್ತತೆ ಚಿಕಿತ್ಸೆಗಳು: ಪಿಸಿಓಎಸ್ ಅಥವಾ ಇತರ ಫಲವತ್ತತೆ ಸಮಸ್ಯೆಗಳಿರುವ ಮಹಿಳೆಯರಿಗೆ ಅಂಡೋತ್ಪತ್ತಿಗೆ ಪ್ರೇರಣೆ, ಒಳಗರ್ಭಾಶಯ ಗರ್ಭದಾನ (ಐಯುಐ) ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್)
ನಿಮ್ಮ ವೈದ್ಯರು ನಿಮ್ಮ ಅಗತ್ಯಗಳು ಮತ್ತು ಆದ್ಯತೆಗಳಿಗೆ ತಕ್ಕಂತೆ ನಿಮ್ಮ ಜೊತೆ ಮಾತುಕತೆ ನಡೆಸಿ ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು ರೂಪಿಸಬಹುದು.
ಗರ್ಭಾಶಯದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು?
ಕೆಲವು ಗರ್ಭಾಶಯದ ಕಾಯಿಲೆಗಳನ್ನು ತಡೆಯಲಾಗದಿದ್ದರೂ, ಒಟ್ಟಾರೆ ಗರ್ಭಾಶಯದ ಆರೋಗ್ಯವನ್ನು ಪಾಲಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು, ಅವುಗಳೆಂದರೆ:
· ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ
· ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ
· ಧೂಮಪಾನವನ್ನು ತ್ಯಜಿಸಿ, ಏಕೆಂದರೆ ಇದು ಗರ್ಭಕಂಠ ಮತ್ತು ಗರ್ಭಾಶಯದ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ
· ನಿಯಮಿತ ಸ್ತ್ರೀರೋಗ ತಪಾಸಣೆಗಳು ಮತ್ತು ಸ್ಕ್ರೀನಿಂಗ್‌ಗಳನ್ನು ಮಾಡುತ್ತಿರಿ
· ಅಸಾಮಾನ್ಯ ರಕ್ತಸ್ರಾವ ಅಥವಾ ಪೆಲ್ವಿಕ್ ನೋವಿನಂತಹ ಯಾವುದೇ ಅಸಾಮಾನ್ಯ ರೋಗಲಕ್ಷಣಗಳನ್ನು ಕಂಡರೆ ತಕ್ಷಣವೇ ವೈದ್ಯರಿಗೆ ತಿಳಿಸಿ
· ಋತುಸ್ರಾವವನ್ನು ನಿಯಂತ್ರಿಸಲು ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಾರ್ಮೋನ್ ಗರ್ಭನಿರೋಧಕ ಆಯ್ಕೆಗಳನ್ನು ಪರಿಗಣಿಸಿ
ಗರ್ಭಾಶಯದ ಆರೋಗ್ಯಕ್ಕೆ ಆದ್ಯತೆ ನೀಡುವುದರಿಂದ, ಸಂಭಾವ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಕಂಡುಹಿಡಿಯಬಹುದು ಮತ್ತು ಉತ್ತಮ ಫಲಿತಾಂಶಗಳನ್ನು ಹೊಂದಬಹುದು.
ಕೊನೆಯ ಮಾತು
ಗರ್ಭಾಶಯವು ಸ್ತ್ರೀ ಸಂತಾನೋತ್ಪತ್ತಿ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಒಂದು ಗಮನಾರ್ಹ ಅಂಗವಾಗಿದೆ. ಇದರ ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದು, ಸಾಮಾನ್ಯ ರೋಗಗಳ ಚಿಹ್ನೆಗಳನ್ನು ಗುರುತಿಸುವುದು ಮತ್ತು ಅಗತ್ಯ ರೋಗನಿರ್ಣಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರಿಂದ, ಮಹಿಳೆಯರು ಗರ್ಭಾಶಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಗರ್ಭಾಶಯದ ಆರೋಗ್ಯದ ಬಗ್ಗೆ ಯಾವುದೇ ಅನುಮಾನಗಳಿದ್ದರೆ ಅಥವಾ ತಪಾಸಣೆಗೆ ಸಮಯವಾಗಿದ್ದರೆ, ನಿಮ್ಮ ವೈದ್ಯರೊಂದಿಗೆ ಭೇಟಿಯನ್ನು ತಕ್ಷಣವೇ ನಿಗದಿಪಡಿಸಲು ಹಿಂಜರಿಯಬೇಡಿ.
ಮೆಟ್ರೊಪೊಲಿಸ್ ಹೆಲ್ತ್ ಕೇರ್ ನಲ್ಲಿ, ನಾವು ಮಹಿಳೆಯರ ಆರೋಗ್ಯವನ್ನು ಪಾಲಿಸಲು ಬೇಕಾದ ಸಮಗ್ರ, ರೋಗಿ ಕೇಂದ್ರಿತ ರೋಗನಿರ್ಣಯ ಸೇವೆಗಳನ್ನು ಒದಗಿಸಲು ಬದ್ಧರಾಗಿದ್ದೇವೆ. ನಮ್ಮ ಅನುಭವಿ ಫ್ಲೆಬೊಟೊಮಿಸ್ಟ್ ಗಳ ತಂಡವು ಗರ್ಭಾಶಯದ ರೋಗನಿರ್ಣಯ ಪರೀಕ್ಷೆಗಳಿಗಾಗಿ ಮನೆಯಲ್ಲೇ ಸ್ಯಾಂಪಲ್ ಸಂಗ್ರಹಣಾ ಸೌಲಭ್ಯವನ್ನು ಒದಗಿಸುತ್ತದೆ. ನಿಮ್ಮ ಸೌಕರ್ಯ ಮತ್ತು ಗೌಪ್ಯತೆಯನ್ನು ಕಾಪಾಡುತ್ತದೆ. ನಮ್ಮ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ತ್ವರಿತ ಫಲಿತಾಂಶ ಒದಗಿಸುವ ಸೌಲಭ್ಯದೊಂದಿಗೆ ನಿಮ್ಮ ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು ನಾವು ನಿಖರವಾದ, ವಿಶ್ವಾಸಾರ್ಹ ಫಲಿತಾಂಶಗಳನ್ನು ಒದಗಿಸುತ್ತೇವೆ.
ಗರ್ಭಾಶಯ ಮತ್ತು ಸಂಬಂಧಿತ ರೋಗಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ನಿಮ್ಮ ಗರ್ಭಾಶಯ ಎಷ್ಟು ದೊಡ್ಡದು?
ಗರ್ಭವಿಲ್ಲದ ಗರ್ಭಾಶಯವು ಮುಚ್ಚಿದ ಮುಷ್ಟಿಯ ಗಾತ್ರದಷ್ಟಿರುತ್ತದೆ, ಸರಿಸುಮಾರು 3-4 ಇಂಚು ಉದ್ದ ಮತ್ತು 2-3 ಇಂಚು ಅಗಲವಿರುತ್ತದೆ. ಆದರೆ, ಗರ್ಭಾವಸ್ಥೆಯ ಸಮಯದಲ್ಲಿ, ಗರ್ಭಾಶಯವು ಬೆಳೆಯುತ್ತಿರುವ ಭ್ರೂಣಕ್ಕೆ ಒಗ್ಗಿಕೊಳ್ಳಲು ತನ್ನ ಮೂಲ ಗಾತ್ರಕ್ಕಿಂತ 500 ಪಟ್ಟು ವಿಸ್ತರಿಸಬಹುದು.
ನಿಮ್ಮ ಗರ್ಭಾಶಯವನ್ನು ತೆಗೆದುಹಾಕುವುದನ್ನು ಏನೆಂದು ಕರೆಯಲಾಗುತ್ತದೆ?
ಗರ್ಭಾಶಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದನ್ನು ಹಿಸ್ಟೆರೆಕ್ಟೊಮಿ ಎಂದು ಕರೆಯಲಾಗುತ್ತದೆ. ತೀವ್ರವಾದ ಗರ್ಭಾಶಯದ ಫೈಬ್ರಾಯ್ಡ್ ಗಳು, ಎಂಡೋಮೆಟ್ರಿಯೋಸಿಸ್, ಗರ್ಭಾಶಯದ ಹೊರಳಿಕೆ ಅಥವಾ ಕ್ಯಾನ್ಸರ್ ಪ್ರಕರಣಗಳಿಗೆ ಈ ಕಾರ್ಯವಿಧಾನವನ್ನು ಶಿಫಾರಸು ಮಾಡಬಹುದು.
ಗರ್ಭಾಶಯದ ಪ್ರಾಥಮಿಕ ಕಾರ್ಯ ಯಾವುದು?
ಗರ್ಭಾಶಯದ ಮುಖ್ಯ ಕಾರ್ಯವೆಂದರೆ ಗರ್ಭಾವಸ್ಥೆಯ ಸಮಯದಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ಆಶ್ರಯಿಸುವುದು ಮತ್ತು ಪೋಷಿಸುವುದು. ಗರ್ಭಧಾರಣೆ ಸಂಭವಿಸಿದಾಗ, ಗರ್ಭಾಶಯವು ಭ್ರೂಣಕ್ಕೆ ಸ್ಥಾನವನ್ನು ಒದಗಿಸುತ್ತದೆ, ಬೆಳೆಯಲು ಮತ್ತು ಜನನದವರೆಗೆ ಬೆಳೆಯಲು ಒಂದು ಸೂಕ್ತವಾದ ಪೋಷಕ ವಾತಾವರಣವನ್ನು ಒದಗಿಸುತ್ತದೆ.
ಗರ್ಭಾಶಯದ ರೋಗಗಳು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದೇ?
ಹೌದು, ಫೈಬ್ರಾಯ್ಡ್ ಗಳು, ಎಂಡೋಮೆಟ್ರಿಯೋಸಿಸ್, ಪಿಸಿಓಎಸ್ ಮತ್ತು ಗರ್ಭಾಶಯದ ಅಸಹಜತೆಗಳಂತಹ ಕೆಲವು ಗರ್ಭಾಶಯದ ರೋಗಗಳು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಈ ಸಮಸ್ಯೆಗಳು ಅಂಡೋತ್ಪತ್ತಿ, ಗರ್ಭದಾನ ಅಥವಾ ಗರ್ಭಾಶಯದಲ್ಲಿ ಭ್ರೂಣದ ಜನನವನ್ನು ತಡೆಯಬಹುದು, ಇದರಿಂದ ಗರ್ಭಧಾರಣೆಯು ಕಷ್ಟವಾಗಬಹುದು.
ನನ್ನ ಗರ್ಭಾಶಯವನ್ನು ಆರೋಗ್ಯಕರವಾಗಿರಿಸಲು ನಾನು ಏನು ಮಾಡಬಹುದು?
ಗರ್ಭಾಶಯವನ್ನು ಆರೋಗ್ಯಕರವಾಗಿರಿಸಲು, ನಿಯಮಿತ ಸ್ತ್ರೀರೋಗ ತಪಾಸಣೆಗಳಿಗೆ ಆದ್ಯತೆ ನೀಡಿ, ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ ಮತ್ತು ಧೂಮಪಾನವನ್ನು ತಪ್ಪಿಸಿ. ಅಸಾಮಾನ್ಯ ರಕ್ತಸ್ರಾವ ಅಥವಾ ಪೆಲ್ವಿಕ್ ನೋವಿನಂತಹ ಯಾವುದೇ ಅಸಾಮಾನ್ಯ ರೋಗಲಕ್ಷಣಗಳು ಕಂಡರೆ ತಕ್ಷಣವೇ ವೈದ್ಯರಿಗೆ ತಿಳಿಸಿ.









